- Home
- Sports
- Cricket
- 15ರ ಹುಡುಗನಿಗೆ ಈ ರೇಂಜ್‌ಗೆ ಸಂಬಳಾನ? ವೈಭವ್ ಸೂರ್ಯವಂಶಿ ಕಳೆದ 4 ಮ್ಯಾಚ್‌ಗಳಿಂದ ಗಳಿಸಿದ ದುಡ್ಡು ಎಷ್ಟು?
15ರ ಹುಡುಗನಿಗೆ ಈ ರೇಂಜ್‌ಗೆ ಸಂಬಳಾನ? ವೈಭವ್ ಸೂರ್ಯವಂಶಿ ಕಳೆದ 4 ಮ್ಯಾಚ್‌ಗಳಿಂದ ಗಳಿಸಿದ ದುಡ್ಡು ಎಷ್ಟು?
ಐಪಿಎಲ್ 2026ರಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿ ಎಲ್ಲೆಡೆ ಸುದ್ದಿಯಾಗಿದ್ದಾರೆ. ರಾಜಸ್ಥಾನ ರಾಯಲ್ಸ್ ಪರ ಆಡುತ್ತಿರುವ ಇವರು, ತಮ್ಮ ಅದ್ಭುತ ಬ್ಯಾಟಿಂಗ್‌ನಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅದರಲ್ಲೂ ಆರ್‌ಸಿಬಿ ವಿರುದ್ಧ ಆಡಿದ ಇನ್ನಿಂಗ್ಸ್ ಅವರ ವೃತ್ತಿಜೀವನಕ್ಕೆ ಹೊಸ ತಿರುವು ನೀಡಿದೆ.

ಆರ್‌ಸಿಬಿ ವಿರುದ್ಧದ ಸ್ಫೋಟಕ ಆಟ
ಐಪಿಎಲ್ 2026ರ ಪಂದ್ಯವೊಂದರಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 26 ಎಸೆತಗಳಲ್ಲಿ 78 ರನ್ ಗಳಿಸಿ ಪಂದ್ಯದ ಗತಿಯನ್ನೇ ಬದಲಿಸಿದರು. ಅವರ ಆಕ್ರಮಣಕಾರಿ ಆಟದಿಂದ ತಂಡವು ಜಯಗಳಿಸಿತು. ಈ ಒಂದೇ ಇನ್ನಿಂಗ್ಸ್‌ನಿಂದ ಅವರು ದೇಶಾದ್ಯಂತ ಮನ್ನಣೆ ಗಳಿಸಿದ್ದಾರೆ.
1.10 ಕೋಟಿ ರುಪಾಯಿಗೆ ರಾಜಸ್ಥಾನ ರಾಯಲ್ಸ್ ಪಾಲಾಗಿರುವ ವೈಭವ್
ವೈಭವ್ ಸೂರ್ಯವಂಶಿ ಅವರು ಐಪಿಎಲ್ 2026ರ ಸೀಸನ್‌ಗಾಗಿ ರಾಜಸ್ಥಾನ ರಾಯಲ್ಸ್ ತಂಡದಿಂದ 1.10 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ. ಇದು ಅವರ ಮೂಲ ಆದಾಯವಾಗಿದೆ. ಅವರು ಹೇಗೆ ಆಡಿದರೂ ಈ ಮೊತ್ತವು ಅವರಿಗೆ ಖಚಿತವಾಗಿ ಸಿಗುತ್ತದೆ.
ಪ್ರತಿ ಪಂದ್ಯ ಆಡಿದ ಬಳಿಕ ಸಿಗುವ ಸಂಬಳ
ಐಪಿಎಲ್‌ನಲ್ಲಿ ಒಂದು ತಂಡವು ಸಾಮಾನ್ಯವಾಗಿ 14 ಲೀಗ್ ಪಂದ್ಯಗಳನ್ನು ಆಡುತ್ತದೆ. ಈ ಪ್ರಕಾರ ಒಟ್ಟು ಒಪ್ಪಂದದ ಮೊತ್ತವನ್ನು ಡಿವೈಡ್ ಮಾಡಿದರೆ, ವೈಭವ್ ಪ್ರತಿ ಪಂದ್ಯಕ್ಕೆ ಸುಮಾರು 7.85 ಲಕ್ಷ ರೂಪಾಯಿ ಸಂಪಾದಿಸುತ್ತಾರೆ. ಇದು ಕೇವಲ ಒಪ್ಪಂದದ ಆಧಾರದ ಮೇಲೆ ಲೆಕ್ಕ ಹಾಕಿದ ಮೊತ್ತವಾಗಿದೆ.
ಹೆಚ್ಚುವರಿಯಾಗಿ ಸಿಗುವ ಮ್ಯಾಚ್ ಫೀ
ಒಪ್ಪಂದದ ಮೊತ್ತದ ಜೊತೆಗೆ, ಆಟಗಾರರಿಗೆ ಮ್ಯಾಚ್ ಫೀ ಕೂಡ ನೀಡಲಾಗುತ್ತದೆ. ಪ್ರಸ್ತುತ, ಪ್ರತಿ ಪಂದ್ಯಕ್ಕೆ ಇದು ಸುಮಾರು 7.50 ಲಕ್ಷ ರೂಪಾಯಿ ಇರುತ್ತದೆ. ಇದು ಪ್ರತ್ಯೇಕವಾಗಿ ಪಾವತಿಸುವ ಮೊತ್ತವಾಗಿದೆ.
ಪ್ರತಿ ಮ್ಯಾಚ್‌ನ ಒಟ್ಟು ಗಳಿಕೆ
ಒಪ್ಪಂದದ ಪಾಲು 7.85 ಲಕ್ಷ ರೂ. ಮತ್ತು ಮ್ಯಾಚ್ ಫೀ 7.50 ಲಕ್ಷ ರೂ. ಸೇರಿಸಿದರೆ, ವೈಭವ್ ಸೂರ್ಯವಂಶಿ ಪ್ರತಿ ಪಂದ್ಯಕ್ಕೆ ಸುಮಾರು 15.35 ಲಕ್ಷ ರೂ. ಸಂಪಾದಿಸುತ್ತಾರೆ.
ವೈಭವ್ ಸೂರ್ಯವಂಶಿ ಕಳೆದ ನಾಲ್ಕು ಪಂದ್ಯಗಳಿಂದ ಗಳಿಸಿದ್ದೆಷ್ಟು?
ವೈಭವ್ ಸೂರ್ಯವಂಶಿ ಕಳೆದ ನಾಲ್ಕು ಪಂದ್ಯಗಳಿಂದ ಕಾಂಟ್ರ್ಯಾಕ್ಟ್ ಹಾಗೂ ಮ್ಯಾಚ್ ಫೀ ಸೇರಿ ಸುಮಾರು 30 ಲಕ್ಷದ 70 ಸಾವಿರ ರುಪಾಯಿ ಜೇಬಿಗಿಳಿಸಿಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

