LIVE NOW
Published : Oct 08, 2026, 06:58 AM ISTUpdated : Oct 08, 2026, 09:21 AM IST

India Latest News Live: Nana Patekar - 3 ರಾಷ್ಟ್ರ ಪ್ರಶಸ್ತಿ ಪಡೆದ ಸಾಧಕ; 2026ರಲ್ಲಿ ಸುಬೇದಾರ್ ಚಿತ್ರದಲ್ಲೂ ನಟಿಸಿರುವ ನಟ ನಾನಾ ಪಾಟೇಕರ್

ಸಾರಾಂಶ

ನವದೆಹಲಿ: ಚೆಕ್ ಬೌನ್ಸ್ ಪ್ರಕರಣದ ವಿಚಾರಣೆ ವೇಳೆ ನಟ ರಾಜಪಾಲ್ ಯಾದವ್ ಅವರನ್ನು ವ್ಯಂಗ್ಯಭರಿತವಾಗಿ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ’ಒಳ್ಳೆಯ ಸಿನಿಮಾ ಮಾಡಿ, ಜನರನ್ನು ರಂಜಿಸಿ ಮತ್ತು ನಿಮ್ಮ ವರ್ಚಸ್ಸನ್ನು ಮರುಸ್ಥಾಪಿಸಿ. ಅದರಿಂದ ಹಣ ಗಳಿಸಿ ಸಾಲ ಕಟ್ಟಿ’ ಎಂಬ ಸಲಹೆ ನೀಡಿದೆ.2010ರಲ್ಲಿ ‘ಅತಾ ಪತಾ ಲಾಪತಾ’ ಸಿನಿಮಾ ನಿರ್ಮಾಣಕ್ಕಾಗಿ ಪಡೆದ ಸಾಲಕ್ಕೆ ಸಂಬಂಧಿಸಿದ ಚೆಕ್ ಬೌನ್ಸ್ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್‌, ಸಾಲ ಮರುಪಾವತಿಸದ ರಾಜಪಾಲ್ ಅವರ ನಡವಳಿಕೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿತು. ಅಲ್ಲದೆ, ಅಕ್ಟೋಬರ್ 13ರೊಳಗೆ 2 ಕೋಟಿ ರು. ಪಾವತಿಸುವಂತೆ ಗಡುವು ವಿಧಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ರಾಜಪಾಲ್, 1.15 ಕೋಟಿ ರು.ಗಳನ್ನು ಕಟ್ಟಿದ್ದಾಗಿ ಹೇಳಿದರು. ಅಲ್ಲದೆ, ‘13 ವರ್ಷದಲ್ಲಿ ನಾನು 200-250 ಸಿನಿಮಾದಲ್ಲಿ ನಟಿಸಿದೆ. 200-250 ಕೋಟಿ ರು. ಹಾನಿ ಮಾಡಿಕೊಂಡೆ. ಅತಾ ಪತಾ ಲಾ ಪತಾ ಚಿತ್ರ ನಿರ್ಮಾಣದಿಂದ 17 ಕೋಟಿ ರು. ಕಳೆದುಕೊಂಡೆ. ನನ್ನನ್ನು ನೀವು ಎಲ್ಲಿ ಬೇಕಾದರೂ ಹಾಕಿರಿ.. ಹೋಗುವೆ’ ಎಂದರು.

ಇದಕ್ಕೆ ಪೀಠ ಪ್ರತಿಕ್ರಿಯಿಸಿ, ‘ನಿಮ್ಮ ಸಿನಿಮಾ ‘ಅತಾ ಪತಾ ಲಾ ಪತಾ’ದಂತೆ ಹಣವೂ ನಾಪತ್ತೆಯಾಗಿದೆ’ ಎಂದು ತಮಾಷೆ ಮಾಡಿ ‘ಜೈಲಿಗೆ ಹೋಗುವ ಬದಲು ಉತ್ತಮ ಸಿನಿಮಾಗಳನ್ನು ಮಾಡಿ ಹಣ ಮರುಪಾವತಿಸಲು ಗಮನಹರಿಸಿ’ ಎಂದು ತಿಳಿಸಿತು.

09:21 AM (IST) Oct 08

Nana Patekar - 3 ರಾಷ್ಟ್ರ ಪ್ರಶಸ್ತಿ ಪಡೆದ ಸಾಧಕ; 2026ರಲ್ಲಿ ಸುಬೇದಾರ್ ಚಿತ್ರದಲ್ಲೂ ನಟಿಸಿರುವ ನಟ ನಾನಾ ಪಾಟೇಕರ್

ಬಾಲಿವುಡ್‌ನ ಖ್ಯಾತ ನಟ ನಾನಾ ಪಾಟೇಕರ್ ಅವರು ಇಂದು, 08 ಅಕ್ಟೋಬರ್ 2026ರಂದು ಗೋವಾದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಇಂದು ಬೆಳಗ್ಗೆ 5:20ಕ್ಕೆ ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತಕ್ಕೊಳಗಾಗಿದ್ದು, ಸತತ 45 ನಿಮಿಷಗಳ ಕಾಲ ಸಿಪಿಆರ್‌ (CPR) ನೀಡಿದರೂ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ.

Read Full Story

09:01 AM (IST) Oct 08

ಥ್ಯಾಂಕ್ಯೂ, ಗುಡ್‌ಬೈ ಮೆಸ್ಸಿ...! ದಿಗ್ಗಜ ಫುಟ್ಬಾಲಿಗನ ವಿದಾಯದ ಪಂದ್ಯದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಆಟಗಾರರು, ಕೋಚ್‌

21 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಫುಟ್ಬಾಲ್ ವೃತ್ತಿಜೀವನಕ್ಕೆ ಲಿಯೋನಲ್ ಮೆಸ್ಸಿ ಬೆನಿನ್ ವಿರುದ್ಧದ ಪಂದ್ಯದೊಂದಿಗೆ ವಿದಾಯ ಹೇಳಿದ್ದಾರೆ. ಬ್ಯೂನಸ್ ಐರಿಸ್‌ನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ 85,000 ಅಭಿಮಾನಿಗಳು, ಸಹ ಆಟಗಾರರು ಮತ್ತು ಕೋಚ್ ಕಣ್ಣೀರಿನೊಂದಿಗೆ ದಿಗ್ಗಜನಿಗೆ ಗೌರವ ಸಲ್ಲಿಸಿದರು. ಪಂದ್ಯದ 10ನೇ ನಿಮಿಷದಲ್ಲಿ ಆಟ ಸ್ಥಗಿತಗೊಳಿಸಿ ಮೆಸ್ಸಿಗೆ ವಿಶೇಷ ನಮನ ಸಲ್ಲಿಸಲಾಯಿತು.
Read Full Story

08:46 AM (IST) Oct 08

Actor Nana patekar dies at 75 - ಈ ಚಿತ್ರದಲ್ಲಿ ನಟ ನಟಿ ಅಲ್ಲ, ಪೋಷಕ ನಟರಾಗಿ ರಾಷ್ಟ್ರ ಪ್ರಶಸ್ತಿ ಗೆದ್ದಿದ್ದರು ನಾನಾ!

ನಾನಾ ಪಾಟೇಕರ್ ನಿಧನ: ಹಿರಿಯ ನಟ, ನಟ ಸಾಮ್ರಾಟ ನಾನಾ ಪಾಟೇಕರ್ ನಿಧನರಾಗಿದ್ದಾರೆ. ಅವರಿಗೆ 75 ವಯಸ್ಸಾಗಿತ್ತು. ಗೋವಾದ ಡೋನಾ ಪೌಲಾದಲ್ಲಿರುವ ತಮ್ಮ ಮನೆಯಲ್ಲಿ ಅವರಿಗೆ ಹೃದಯಾಘಾತವಾಗಿ ನಿಧನರಾಗಿದ್ದಾರೆ. ಅವರ ಅಕಾಲಿಕ ಮರಣ ಭಾರತೀಯ ಚಿತ್ರರಂಗಕ್ಕೆ ಆಘಾತವುಂಟು ಮಾಡಿದೆ.

Read Full Story

08:46 AM (IST) Oct 08

NANA PATEKAR DEATH - ನಮ್ಮನ್ನಗಲಿದ ನಟ ನಾನಾ ಪಾಟೇಕರ್; ಕನ್ನಡದ 'ಯಕ್ಷ' ಸಿನಿಮಾದಲ್ಲಿ ದಕ್ಷ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದರು

ಹಿರಿಯ ನಟ ನಾನಾ ಪಾಟೇಕರ್ (75) ಅವರು ಇಂದು ಬೆಳಗ್ಗೆ 5:20ಕ್ಕೆ ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ. ಸತತ 45 ನಿಮಿಷಗಳ ಕಾಲ ಸಿಪಿಆರ್‌ (CPR) ನೀಡಿದರೂ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ಮಣಿಪಾಲ್ ಆಸ್ಪತ್ರೆಯ ಮೂಲಗಳು ತಿಳಿಸಿವೆ.

Read Full Story

07:50 AM (IST) Oct 08

Nana Patekar - ಬಾಲಿವುಡ್ ನಟ ನಾನಾ ಪಾಟೇಕರ್ ನಿಧನ, ಗೋವಾದ ನಿವಾಸದಲ್ಲಿ ಕೊನೆಯುಸಿರು

Veteran actor Nana Patekar passed away at 5:20 AM today: ಗೋವಾದಲ್ಲಿರುವ ತಮ್ಮ ನಿವಾಸದಲ್ಲಿ ಅವರಿಗೆ ತೀವ್ರ ಹೃದಯಾಘಾತವಾಗಿದೆ. ಇದರಿಂದಾಗಿ ಅವರು ಕೊನೆಯುಸಿರೆಳೆದಿದ್ದಾರೆ.

Read Full Story

More Trending News