ಖ್ಯಾತ ಚಲನಚಿತ್ರ ನಟ ನಾನಾ ಪಾಟೇಕರ್ ತಮ್ಮ 75ನೇ ವಯಸ್ಸಿನಲ್ಲಿ ಗೋವಾದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಮರಣದ ನಂತರ, ಪ್ರಧಾನಿ ಮೋದಿ ಬಗ್ಗೆ ಅವರು ಈ ಹಿಂದೆ ನೀಡಿದ್ದ ನೇರ ನುಡಿಯ ಹೇಳಿಕೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ನಟನ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ.

ಬೆಂಗಳೂರು: ಭಾರತ ಚಲನಚಿತ್ರದ ದಂತಕಥೆ, ಖ್ಯಾತ ಚಲನಚಿತ್ರ ನಟ ನಾನಾ ಪಾಟೇಕರ್ ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ನಾನಾ ಪಾಟೇಕರ್ ಅವರಿಗೆ 75 ವರ್ಷ ವಯಸ್ಸಾಗಿತ್ತು. ತಮ್ಮ ಚಲನಚಿತ್ರಗಳಲ್ಲಿ ವಿಭಿನ್ನ ಮ್ಯಾನರಿಸಂ ಹಾಗೂ ನಿಜ ಜೀವನದಲ್ಲಿ ನೇರ ನಡೆನುಡಿಗಳಿಗೆ ನಾನಾ ಪಾಟೇಕರ್ ಹೆಸರುವಾಸಿಯಾಗಿದ್ದರು. ಇದೀಗ ಅವರ ಮರಣ ನಂತರ ಮೋದಿ ಕುರಿತಂತೆ ನಾನಾ ಆಡಿರುವ ಮಾತುಗಳು ಮತ್ತೆ ಮುನ್ನೆಲೆಗೆ ಬಂದಿದೆ.

ಪ್ರಧಾನಿ ಮೋದಿ ಬಗ್ಗೆ ನಾನಾ ಪಾಟೇಕರ್ ಮಾತು:

ಆ ಸಂದರ್ಶನದಲ್ಲಿ ನಾನಾ ಪಾಟೇಕರ್ ಅವರ ಬಳಿ, ನೀವು ಮೋದಿ ಭಕ್ತರೇ ಎಂದು ನೇರವಾಗಿ ಪ್ರಶ್ನಿಸಲಾಯಿತು. ಈ ಪ್ರಶ್ನೆ ರಾಜಕೀಯವಾಗಿದ್ದರಿಂದ ಅದನ್ನು ನಾನಾ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಪ್ರತಿಕ್ರಿಯಿಸಿದರು. ಜನರು ತಮ್ಮನ್ನು ಮೋದಿ ಭಕ್ತ

ಎಂದು ಕರೆಯುತ್ತಾರೆ. ಆದರೆ ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಮಾಧ್ಯಮಗಳ ವರದಿಗಳಲ್ಲಿ ಬಂದಂತೆ ನಾನು ಯಾವುದೇ ಪಕ್ಷಕ್ಕೆ ಸೇರಿದವನಲ್ಲ. ನಾನು ಒಳ್ಳೆಯ ಕೆಲಸಗಳನ್ನು ಎಂಜಾಯ್ ಮಾಡುತ್ತೇನೆ. ನನಗೆ ಯಾವುದೇ ಸರಿ ಎಂದು ಎನಿಸುತ್ತದೆಯೋ ಅದನ್ನು ಒಳ್ಳೆಯದು ಎಂದು ಕರೆಯಲು ತಮಗೆ ಯಾವುದೇ ಸಮಸ್ಯೆಯಿಲ್ಲ ಎಂದೂ ನಾನಾ ಆ ಸಂದರ್ಶನದಲ್ಲಿ ಸ್ಪಷ್ಟವಾಗಿ ಹೇಳಿದ್ದರು.

ಯಾರೋ ಹೇಳುತ್ತಾರೆ, 'ಇಲ್ಲ, ನಾನಾ ಅವರು ಮೋದಿ ಭಕ್ತನಾಗಿದ್ದಾನೆ' ಎಂದು. ಆದರೆ ಅವರ ಹೇಳಿಕೆಗೂ ನನಗೂ ಏನು ಸಂಬಂಧ?. ನಾನು ಯಾರೊಂದಿಗೂ ಮಾತನಾಡುವುದಿಲ್ಲ. ನಾನೊಬ್ಬ ದೇಶದ ಸಾಮಾನ್ಯ ನಾಗರೀಕ. ನಾನೇನು ಮಹಾನ್ ವಿದ್ವಾಂಸನಲ್ಲ. ಆದರೆ ದೇಶದ ಬಗ್ಗೆ ನನ್ನದೇ ಆದ ತಿಳುವಳಿಕೆಯನ್ನು ಹೊಂದಿದ್ದೇನೆ. ಭಾರತದ ಸ್ಥಾನಮಾನ ಮತ್ತು ಪ್ರಧಾನ ಮಂತ್ರಿಯ ನೇತೃತ್ವದಲ್ಲಿ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ಅಭಿಪ್ರಾಯ ವ್ಯಕ್ತಪಡಿಸುವುದು ತಪ್ಪಲ್ಲ ಎಂದು ನಾನಾ ಪಾಟೇಕರ್ ಸಂದರ್ಶನದಲ್ಲಿ ಹೇಳಿದ್ದರು.

ಒಳ್ಳೆಯದನ್ನು, ಒಳ್ಳೆಯದು ಎಂದು ಕರೆಯುವುದರಲ್ಲಿ ಏನು ತಪ್ಪಿದೆ?

ಯಾರಾದರೂ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ ಎಂದು ಹೊಗಳಿದ ಮಾತ್ರಕ್ಕೆ ಅವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ್ದಾರೆ ಎಂದರ್ಥವಲ್ಲ. ಯಾರಾದರೂ ಏನನ್ನಾದರೂ ಇಷ್ಟಪಟ್ಟರೆ, ಅದನ್ನು ಹೊಗಳುತ್ತಾರೆ. ನಾನು ಮೋದಿ ಭಕ್ತ ಎನ್ನುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ನಾನು ಯಾರೊಂದಿಗೂ ವೈಯುಕ್ತಿಕವಾಗಿ ಸಂಪರ್ಕ ಹೊಂದಿಲ್ಲ. ನನಗೆ ಯಾವುದು ಸರಿ ಕಾಣುತ್ತದೋ ಅದನ್ನು ಸರಿಯೆಂದು ಕರೆಯಲು ಏನು ತಪ್ಪಿದೆ ಎಂದು ನಾನಾ ಪಾಟೇಕರ್ ಹೇಳಿದ್ದರು.

ಕಂಬನಿ ಮಿಡಿದ ಪ್ರಧಾನಿ ಮೋದಿ:

ಬಾಲಿವುಡ್ ಮೇರು ನಟ ನಾನಾ ಪಾಟೇಕರ್ ತಮ್ಮ 75ನೇ ವಯಸ್ಸಿನಲ್ಲಿ ಗೋವಾದಲ್ಲಿ ಹೃದಯಸ್ತಂಭನದಿಂದ ಕೊನೆಯುಸಿರೆಳೆದರು. ಅವರಿಗೆ ಹೃದಯಸ್ತಂಭನವಾಗುತ್ತಿದ್ದಂತೆಯೇ ಸುಮಾರು 45 ನಿಮಿಷಗಳ ಕಾಲ ಸಿಪಿಆರ್ ಮಾಡುವ ಮೂಲಕ ಪ್ರಜ್ಞೆ ಬರಿಸುವ ಕೆಲಸವನ್ನು ಮಾಡಿದರು. ಆದರೆ ಅವರ ದೇಹ ಸ್ಪಂದಿಸಲಿಲ್ಲ.

ಇನ್ನು ನಾನಾ ಪಾಟೇಕರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ. ಶ್ರೀ ನಾನಾ ಪಾಟೇಕರ್ ಅವರು ಹಿಂದಿ ಹಾಗೂ ಮರಾಠಿ ಸಿನಿಮಾಗೆ ನೀಡಿದ ಕೊಡುಗೆ ಅನನ್ಯವಾದದ್ದು. ಅವರ ನಿಧನವು ಆಳವಾದ ಶೂನ್ಯವನ್ನು ಸೃಷ್ಟಿಸಿದೆ. ಅವರ ಕುಟುಂಬ, ಸ್ನೇಹಿತರು ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಶ್ರೀ ನಾನಾ ಪಾಟೇಕರ್ ಅವರಲ್ಲಿದ್ದಂತಹ ತೀವ್ರತೆ, ವಿಶಿಷ್ಟ ವ್ಯಕ್ತಿತ್ವ ಮತ್ತು ಅಪ್ರತಿಮ ಪ್ರಭಾವಲಯವು ಕೆಲವೇ ಕೆಲವು ನಟರಲ್ಲಿ ಮಾತ್ರ ಕಂಡುಬರುತ್ತದೆ. ಅವರು ತಾವು ನಿರ್ವಹಿಸಿದ ಪ್ರತಿಯೊಂದು ಪಾತ್ರಕ್ಕೂ ಅದ್ಭುತವಾದ ವೈವಿಧ್ಯತೆ ಹಾಗೂ ಸೃಜನಶೀಲತೆಯನ್ನು ತುಂಬಿದರು ಮತ್ತು ಮುಂದಿನ ತಲೆಮಾರುಗಳೂ ನೆನಪಿನಲ್ಲಿಟ್ಟುಕೊಳ್ಳುವಂತಹ ಪಾತ್ರಗಳನ್ನು ನಮಗೆ ನೀಡಿದರು. ಅವರು ತಮ್ಮ ಮುಕ್ತ ಹಾಗೂ ನೇರ ನಿಲುವುಗಳಿಗಾಗಿಯೂ ಮೆಚ್ಚುಗೆಗೆ ಪಾತ್ರರಾಗಿದ್ದರು; ತಾವು ನಂಬಿದ್ದನ್ನು ವ್ಯಕ್ತಪಡಿಸಲು ಅವರು ಎಂದಿಗೂ ಹಿಂಜರಿಯುತ್ತಿರಲಿಲ್ಲ. ಹಿಂದಿ ಮತ್ತು ಮರಾಠಿ ಚಲನಚಿತ್ರರಂಗಕ್ಕೆ ಶ್ರೀ ನಾನಾ ಪಾಟೇಕರ್ ಅವರ ಕೊಡುಗೆ ಅಪಾರವಾಗಿತ್ತು. ಅವರ ನಿಧನವು ಆಳವಾದ ಶೂನ್ಯವನ್ನು ಸೃಷ್ಟಿಸಿದೆ. ಅವರ ಕುಟುಂಬ, ಸ್ನೇಹಿತರು ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.