Published : May 25, 2026, 05:15 AM ISTUpdated : May 25, 2026, 10:15 PM IST

India Latest News Live: ಅಬ್ಬಬ್ಬಾ ಲಾಟ್ರಿ ಹೊಡೆದ್ರು ರಶ್ಮಿಕಾ - ನ್ಯಾಷನಲ್ ಕ್ರಶ್ ಬಗ್ಗೆ ಹೀಗಾ ಹೇಳೋದು ಬ್ಲ್ಯಾಕ್ ಪ್ಯಾಂಥರ್ ಸ್ಟಾರ್?

ಸಾರಾಂಶ

ನವದೆಹಲಿ: ತಮ್ಮ ಸಮುದಾಯಕ್ಕೆ ಯಾವುದೇ ತೊಂದರೆ ಎದುರಾದಲ್ಲಿ ಆ ಬಗ್ಗೆ ಕಾಂಗ್ರೆಸ್‌ನ ಮುಸ್ಲಿಂ ನಾಯಕರು ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತಬೇಕು ಎಂದು ಪಕ್ಷದ ಹಿರಿಯ ನಾಯಕ ರಾಹುಲ್‌ ಗಾಂಧಿ ಕರೆ ನೀಡಿದ್ದಾರೆ.

ಇಲ್ಲಿ ಪಕ್ಷದ ಅಲ್ಪಸಂಖ್ಯಾತ ವಿಭಾಗದ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ರಾಹುಲ್‌, ‘ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾದರೆ ಆಗ ನಿರ್ದಿಷ್ಟವಾಗಿ ಮುಸ್ಲಿಮರಿಗೇ ಅನ್ಯಾಯವಾಗಿದೆ ಎನ್ನಬೇಕೇ ಹೊರತೂ ಒಟ್ಟಾರೆ ಅಲ್ಪಸಂಖ್ಯಾತರಿಗೆ ಅನ್ಯಾಯ ಎನ್ನಲು ಹೋಗಬಾರದು. ಕಾಂಗ್ರೆಸ್‌ ಪಕ್ಷ ಎಂದಿಗೂ ಮುಸ್ಲಿಂ ಪದ ಬಳಕೆಗೆ ಹಿಂಜರಿಯಬಾರದು. ಜೊತೆಗೆ ಪಕ್ಷದಲ್ಲಿ ಮುಸ್ಲಿಮರ ಪಾಲುದಾರಿಕೆ ಹೆಚ್ಚಿಸಲು ಯಾವುದಾದರೂ ಹೊಸ ವೇದಿಕೆ ತೆರೆಯಬೇಕು’ ಎಂದೂ ಕರೆ ನೀಡಿದ್ದಾರೆ.

ಸದ್ಯದ ದೇಶದ ಆರ್ಥಿಕ ಪರಿಸ್ಥಿತಿ ನೋಡಿದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೆಚ್ಚು ದಿನ ಬಾಳದು ಎಂದು ಲೋಕಸಭೆಯಲ್ಲಿನ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಭವಿಷ್ಯ ನುಡಿದಿದ್ದಾರೆ.

‘ಮುಂದಿನ ಕೆಲ ತಿಂಗಳಲ್ಲಿ ದೇಶದ ರಾಜಕೀಯದಲ್ಲಿ ಬದಲಾವಣೆ ಆಗಲಿದೆ. ಆರ್ಥಿಕ ಸಂಕಷ್ಟ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ. ರಾಜಕೀಯದ ಮುಖ್ಯ ಚರ್ಚಾ ವಿಷಯ ಹಿಂದೂ- ಮುಸ್ಲಿಂ ಬದಲಾಗಿ ಶ್ರೀಮಂತ- ಬಡವ ಎಂಬುದಾಗಿ ಬದಲಾಗಲಿದೆ’ ಎಂದು ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಮೋದಿ ಸರ್ಕಾರ ಪತನಗೊಳ್ಳಲಿದೆ ಎಂದು ಹೇಳಿದ್ದಾರೆ.

10:15 PM (IST) May 25

ಅಬ್ಬಬ್ಬಾ ಲಾಟ್ರಿ ಹೊಡೆದ್ರು ರಶ್ಮಿಕಾ - ನ್ಯಾಷನಲ್ ಕ್ರಶ್ ಬಗ್ಗೆ ಹೀಗಾ ಹೇಳೋದು ಬ್ಲ್ಯಾಕ್ ಪ್ಯಾಂಥರ್ ಸ್ಟಾರ್?

ರಶ್ಮಿಕಾ ಮಂದಣ್ಣ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡ್ತಿದ್ದಾರೆ. ಜಪಾನ್‌ನ ಟೋಕಿಯೋದಲ್ಲಿ ಶನಿವಾರ ರಾತ್ರಿ ನಡೆದ 10ನೇ ಕ್ರಂಚಿರೋಲ್ ಆನಿಮೆ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಹಾಲಿವುಡ್ ನಟ ವಿನ್‌ಸ್ಟನ್ ಡ್ಯೂಕ್ ಜೊತೆ ರಶ್ಮಿಕಾ ವೇದಿಕೆ ಹಂಚಿಕೊಂಡಿದ್ದಾರೆ.

Read Full Story

09:38 PM (IST) May 25

Troll - ರಾಮ್ ಚರಣ್ ಎಡವಟ್ಟಿಗೆ 'ಯಶ್' ಎಳೆದುತಂದಿದ್ದು ಯಾಕೆ? 'RRR' ಸ್ಟಾರ್ ನಟನೀಗ ಫುಲ್ ರೋಸ್ಟ್!

ಚರಣ್​ ಕ್ಷಮೆ ಕೇಳಿದ ಮೇಲೆ ಅದಕ್ಕೆ ಉತ್ತರ ಭಾರತದ ಫ್ಯಾನ್ಸ್ ಓಕೆ ಯಶ್ ಬಾಸ್ ಅಂತ ಕಾಮೆಂಟ್ ಮಾಡ್ತಾ ಇದ್ದಾರೆ. ಅಷ್ಟಕ್ಕೂ ಚರಣ್​ನ ಯಶ್ ಅಂತಿರೋದ್ಯಾಕೆ ಗೊತ್ತಾ,.? ಅದರ ಹಿಂದೆನೂ ಭಾರೀ ದೊಡ್ಡದೊಂದು ಕಥೆ ಇದೆ… ಏನದು ನೋಡಿ..

Read Full Story

09:27 PM (IST) May 25

ದಿನಕ್ಕೆ 2 ಪಿಜ್ಜಾ, 3 ಬ್ರೌನಿ ತಿಂತಿದ್ರು ಈ ಬಾಲಿವುಡ್ ನಟಿ - ಇದ್ದಕ್ಕಿದ್ದ ಹಾಗೆ 45 ಕೆಜಿ ತೂಕ ಇಳಿಸಿದ್ದು ಹೇಗೆ?

ಕೇದಾರ್‌ನಾಥ್‌ ಸಿನಿಮಾಕ್ಕಾಗಿ 45 ಕೆಜಿ ತೂಕ ಇಳಿಸಿಕೊಳ್ಳುವ ಮುನ್ನ ತಮ್ಮ ಆಹಾರ ಪದ್ಧತಿ ಹೇಗಿತ್ತು ಎಂದು ಸಾರಾ ಅಲಿ ಖಾನ್‌ ವಿವರಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿ ವಿದ್ಯಾರ್ಥಿಯಾಗಿದ್ದಾಗ ಪಿಜ್ಜಾ, ಬ್ರೌನಿಗಳನ್ನು ಮನಸ್ಸಿಗೆ ಬಂದಂತೆ ತಿನ್ನುತ್ತಿದ್ದ ದಿನಗಳನ್ನು ಅವರು ನೆನಪಿಸಿಕೊಂಡಿದ್ದಾರೆ.

Read Full Story

08:54 PM (IST) May 25

ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ನಿಯಮದಲ್ಲಿ ಭಾರಿ ಬದಲಾವಣೆ - ಇನ್ಮುಂದೆ ಈ ಗ್ರಾಹಕರಿಗೆ ಸಿಗಲ್ಲ ಸಿಲಿಂಡರ್!

ಜಾಗತಿಕ ಇಂಧನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು  ಪಿಎನ್‌ಜಿ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಎಲ್‌ಪಿಜಿ ಸಿಲಿಂಡರ್ ವಿತರಣೆಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಿದೆ. ಸ್ಟ್ರೇಟ್ ಆಫ್ ಹಾರ್ಮುಜ್ ದಿಗ್ಬಂಧನದಿಂದ ಉಂಟಾಗಿರುವ ಗ್ಯಾಸ್ ಕೊರತೆಯನ್ನು ನಿಭಾಯಿಸಲು ಈ ನಿರ್ಧಾರ ಮಾಡಲಾಗಿದೆ.

Read Full Story

08:41 PM (IST) May 25

Ranveer Singh Ban - 'ಕಾಂತಾರ' ದೈವಕ್ಕೆ ಅಪಮಾನ ಮಾಡಿದ್ದೇ ಶಾಪವಾಯ್ತಾ? ಅದಕ್ಕೇ Top Star ಆಗಿರುವಾಗಲೇ ಬ್ಯಾನ್!?

ರಣವೀರ್ ಕೆರಿಯರ್ ಸಂಕಷ್ಟಕ್ಕೆ ಸಿಲುಕುತ್ತಿದ್ದಂತೆ, "ಅಂದು ದೈವಕ್ಕೆ ಅವಮಾನ ಮಾಡಿದ್ದಕ್ಕೆ ಈಗ ನಿನಗೆ ದೈವವೇ ಶಿಕ್ಷೆ ನೀಡುತ್ತಿದೆ. ಕಾಂತಾರ ದೈವದ ಶಾಪ ತಟ್ಟಿದೆ" ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್‌ಗಳ ಸುರಿಮಳೆಯಾಗುತ್ತಿದೆ. ದೈವದ ಶಕ್ತಿಯನ್ನು ಹಗುರವಾಗಿ ಕಂಡರೆ ಅದರ ಪರಿಣಾಮ ಹೀಗೆ ಇರುತ್ತದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

Read Full Story

08:22 PM (IST) May 25

ಗಿಣಿಶಾಸ್ತ್ರ ಹೇಳಿದೆ ಭವಿಷ್ಯ, ಕ್ವಾಲಿಫೈಯರ್‌-1 ಗೆಲ್ಲೋದು ಇದೇ ಟೀಮ್‌!

ಆರ್‌ಸಿಬಿ ಮತ್ತು ಗುಜರಾತ್ ಟೈಟನ್ಸ್ ನಡುವಿನ ಕ್ವಾಲಿಫೈಯರ್-1 ಪಂದ್ಯದ ಕುರಿತು ಗಿಣಿಶಾಸ್ತ್ರದ ಭವಿಷ್ಯವೊಂದು ವೈರಲ್ ಆಗಿದೆ. ಈ ಹಿಂದೆ ಆರ್‌ಸಿಬಿ ಗೆಲುವನ್ನು ನಿಖರವಾಗಿ ಭವಿಷ್ಯ ನುಡಿದಿದ್ದ ಗಿಣಿ, ಈ ಪಂದ್ಯದಲ್ಲೂ ಆರ್‌ಸಿಬಿ ಗೆದ್ದು ಫೈನಲ್‌ಗೆ ಏರಲಿದೆ ಎಂದು ಹೇಳಿದೆ. 

Read Full Story

07:35 PM (IST) May 25

ಸಿಎಂ ಕುರ್ಚಿ ನೋಡಿದ್ದೇ ತಡ ಆ ಸಿನಿಮಾ ನೆನಪಾಯ್ತು - ಸರ್ಜಾ ಬಳಿ ದಳಪತಿ ವಿಜಯ್ ಹೀಗಾ ಹೇಳೋದು!

ದಳಪತಿ ವಿಜಯ್ ಸಿಎಂ ಆದ ಬೆನ್ನಲ್ಲೇ, ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಇಂಟರೆಸ್ಟಿಂಗ್ ಹೇಳಿಕೆ ನೀಡಿದ್ದಾರೆ. ರಾಜಕೀಯಕ್ಕೆ ಬರಲು ನನ್ನ ಬಳಿ ಹಣವಿಲ್ಲ, ಹಣವಿಲ್ಲದೆ ರಾಜಕೀಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Read Full Story

06:40 PM (IST) May 25

Shocking - ನಟಿ ಸೌಂದರ್ಯ ನಿಧನರಾದ ದಿನ ಆ ನಟನಿಗೆ ಚಪ್ಪಲಿಯಲ್ಲಿ ಹೊಡೆದರು.. ಇಂದು ಈ ನಟ ಎಲ್ಲಿದ್ದಾರೆ?

ಆದರೆ ತಮಗೆ ಚಪ್ಪಲಿಯಿಂದ ಹೊಡೆದ ಆ 'ಸ್ಟಾರ್ ನಟ' ಯಾರು ಎಂಬುವುದನ್ನು ಈ ನಟ ಬಹಿರಂಗ ಪಡಿಸಿಲ್ಲ. ಆದರೆ 'ಅವರು ಒಳ್ಳೆಯವರೇ, ನನಗೆ ಮೊದಲೂ ಸಹಾಯ ಮಾಡಿದ್ದಾರೆ. ಆದರೆ ಅಂದು ಏಕೆ ಹಾಗೆ ಮಾಡಿದರೋ ಗೊತ್ತಿಲ್ಲ…' ಎಂದಿದ್ದಾರೆ..

Read Full Story

06:21 PM (IST) May 25

ಅಂದಿನ ಸ್ನೇಹವೇ ಬೇರೆ.. - ಹೃತಿಕ್ ಜೊತೆಗಿನ ಅಪರೂಪದ ಫೋಟೋ ಹಂಚಿಕೊಂಡಿದ್ಯಾಕೆ ಅಮೀಶಾ ಪಟೇಲ್?

ನಟಿ ಅಮೀಶಾ ಪಟೇಲ್ ತಮ್ಮ ಹಳೆಯ ದಿನಗಳ ನೆನಪಿನ ಬುತ್ತಿ ಬಿಚ್ಚಿಟ್ಟಿದ್ದಾರೆ. ತಮ್ಮ ಮೊದಲ ಸಿನಿಮಾ 'ಕಹೋ ನಾ ಪ್ಯಾರ್ ಹೈ' ದಿನಗಳಿಗೆ ಜಾರಿದ ಅವರು, ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಅಪರೂಪದ ಫೋಟೋ ಶೇರ್ ಮಾಡಿದ್ದಾರೆ.

Read Full Story

05:58 PM (IST) May 25

'ನಾನು ನಟ ಸೂರ್ಯರನ್ನು ಭೇಟಿ ಮಾಡೋದಿದ್ರೆ..' - ನಟಿಯ ಹಳೆಯ ಮಾತು ಈಗ ವೈರಲ್!

'ಕಾತಲ್' ಶೂಟಿಂಗ್ ವೇಳೆ ಸೂರ್ಯ ಅವರನ್ನು ಭೇಟಿಯಾಗಲು ಆಗಲಿಲ್ಲ. ಆದರೆ, ಮುಂದೆ ಭೇಟಿಯಾದರೆ ಅವರ ಜೊತೆ ನಟಿಸುವುದಕ್ಕಾಗಿಯೇ ಭೇಟಿಯಾಗುತ್ತೇನೆ ಎಂದು ಅಂದುಕೊಂಡಿದ್ದೆ ಎಂದು ನಟಿ ಅನಘಾ ರವಿ ಹೇಳಿಕೊಂಡಿದ್ದಾರೆ.

Read Full Story

05:48 PM (IST) May 25

RCB ಸಕ್ಸಸ್ ಸೀಕ್ರೆಟ್ ಬಿಚ್ಚಿಟ್ಟ IPL ಡೇಟಾ - ಟೀಮ್ ಚೇಂಜ್ ಮಾಡದೇ ಅಂಕಪಟ್ಟಿಯ ‘ಕಿಂಗ್’ ಆದ ಬೆಂಗಳೂರು!

ಐಪಿಎಲ್ 2026ರಲ್ಲಿ, ಕಡಿಮೆ ಆಟಗಾರರನ್ನು ಬಳಸಿ ಸ್ಥಿರತೆ ಕಾಯ್ದುಕೊಂಡ ಆರ್‌ಸಿಬಿ ಮತ್ತು ಗುಜರಾತ್ ಟೈಟನ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿವೆ. ಅತಿ ಹೆಚ್ಚು ಆಟಗಾರರನ್ನು ಪ್ರಯೋಗಿಸಿದ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಅಂಕಪಟ್ಟಿಯ ಕೊನೆಯ ಸ್ಥಾನಗಳಿಗೆ ಕುಸಿದಿವೆ.

Read Full Story

05:40 PM (IST) May 25

ಬಿಗ್ ಬಾಸ್ 8 ಲೋಗೋದಲ್ಲಿದ್ದ ಒಂದು ಪದ ನೋಡಿ ಅಭಿಮಾನಿಗಳು ಶಾಕ್ - ಏನಿದರ ಅರ್ಥ?

ಮಲಯಾಳಂ ಬಿಗ್ ಬಾಸ್ ಸೀಸನ್ 8ರ ಲೋಗೋ ರಿಲೀಸ್ ಆಗಿದ್ದು, ಅದರಲ್ಲಿರುವ ಗ್ರೀಕ್ ಪದದ ರಹಸ್ಯವನ್ನು ಅಭಿಮಾನಿಗಳು ಪತ್ತೆ ಹಚ್ಚಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.

Read Full Story

05:28 PM (IST) May 25

Yash - ಟಾಕ್ಸಿಕ್‌ಗೂ ಮೊದಲೇ ರಾಮಾಯಣ; ದೀಪಾವಳಿಗೆ 'ರಾವಣ'ನಾಗಿ ಡಿಸೆಂಬರ್‌ಗೆ 'ರಾಯ'ನಾಗಲಿರುವ ಯಶ್!

ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ರಿಲೀಸ್ ಯಾವಾಗ ಖಂಡಿತ ಗೊತ್ತಿಲ್ಲ. ಆದರೆ ಟಾಕ್ಸಿಕ್​ಗೂ ಮುನ್ನ ರಾಮಾಯಣ ಬರೋದಂತೂ ಫಿಕ್ಸ್ ಆಗಿದೆ. ದೀಪಾವಳಿಗೆ ರಿಲೀಸ್ ಆಗಬೇಕಿದ್ದ ರಾಮಾಯಣ ಅದಕ್ಕೂ ಮುನ್ನ ಥಿಯೇಟರ್ ಅಂಗಳಕ್ಕೆ ಬರ್ತಾ ಇದೆ.

Read Full Story

05:06 PM (IST) May 25

Mental Health - ಲೈಫ್‌ ಬೇಡ, ಜಿಗುಪ್ಸೆ ಬಂತು, ಜೀವನವೇ ಸಾಕು ಎನಿಸ್ತಿದ್ಯಾ? ಹಾಗಿದ್ರೆ ನೀವು ಹೀಗೆ ಮಾಡ್ಬೇಕು!

Top 10 tips to maintain your mental health: ಇಂದು ಎಲ್ಲರೂ ಧಾವಂತದ ಬದುಕಿನಲ್ಲಿ ಓಡುತ್ತಿದ್ದಾರೆ. ಕೆಲಸದ ಒತ್ತಡ, ಒಂಟಿತನ, ಅನಾರೋಗ್ಯ, ಶಿಸ್ತಿಲ್ಲದ ಜೀವನಶೈಲಿ ಅನೇಕರನ್ನು ಡಿಪ್ರೆಶನ್‌ಗೆ ತಳ್ಳಿ ಹಾಕುತ್ತಿವೆ. ಜೀವನವೇ ಸಾಕು, ಜೀವನದ ಮೇಲೆ ಜಿಗುಪ್ಸೆ ಬಂದಿದೆ ಎಂದು ಕೆಲವರು ಹೇಳುತ್ತಾರೆ. 

Read Full Story

04:58 PM (IST) May 25

ಸತತ ಎರಡನೇ ಬಾರಿಗೆ ಲೀಗ್‌ನಲ್ಲೇ ಹೊರಬಿದ್ದ ಕೆಕೆಆರ್ ಬಗ್ಗೆ ಮನಬಿಚ್ಚಿ ಮಾತಾಡಿದ ಅಜಿಂಕ್ಯ ರಹಾನೆ!

ಐಪಿಎಲ್ 2026ರಿಂದ ಕೆಕೆಆರ್ ಹೊರಬಿದ್ದ ನಂತರ, ತಂಡದ ಕಳಪೆ ಪ್ರದರ್ಶನ ಮತ್ತು ತಮ್ಮ ನಾಯಕತ್ವದ ಬಗ್ಗೆ ಎದ್ದ ಟೀಕೆಗಳಿಗೆ ನಾಯಕ ಅಜಿಂಕ್ಯ ರಹಾನೆ ಪ್ರತಿಕ್ರಿಯಿಸಿದ್ದಾರೆ. ಸಂಕಷ್ಟದ ಸಮಯದಲ್ಲಿ ಓಡಿಹೋಗದೆ, ನಾಯಕನಾಗಿ ಗಟ್ಟಿಯಾಗಿ ನಿಲ್ಲುವುದು ಮುಖ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಸೀಸನ್‌ನಲ್ಲಿ ಕೆಕೆಆರ್ 14 ಪಂದ್ಯಗಳಿಂದ 13 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿ ಮುಗಿಸಿತು.
Read Full Story

04:50 PM (IST) May 25

8 ವರ್ಷಗಳಿಂದ ಕೆಲಸವಿಲ್ಲ, ದೇವರೇ ನನ್ನನ್ನು ಕರೆದುಕೋ - ಕಣ್ಣೀರು ಹಾಕಿದ ಖ್ಯಾತ ಟಿವಿ ನಟಿ!

ಟಿವಿ ಲೋಕದ ಹಿರಿಯ ನಟಿ ಅನಿತಾ ಕನ್ವಲ್ ಇತ್ತೀಚೆಗೆ ತಮ್ಮ ವೃತ್ತಿಜೀವನ ಮತ್ತು ವೈಯಕ್ತಿಕ ಸಂಕಷ್ಟಗಳ ಬಗ್ಗೆ ಆಘಾತಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಬದುಕಲು ಇನ್ನು ಯಾವುದೇ ಉದ್ದೇಶ ಉಳಿದಿಲ್ಲ ಎನಿಸುತ್ತಿದೆ ಎಂದು ಅನಿತಾ ಭಾವುಕರಾಗಿದ್ದಾರೆ.

Read Full Story

04:22 PM (IST) May 25

ರಾಜ್ಯದಲ್ಲಿ SIRಗೆ ವಿರೋಧ - ಬಂಗಾಳದಿಂದ ಕರ್ನಾಟಕ ನುಗ್ಗುತ್ತಿರುವ ನುಸುಳುಕೋರರು- ಶಾಕಿಂಗ್​ ವಿಡಿಯೋ ವೈರಲ್​

ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಿಂದ ಹೊರಬಿದ್ದ ಬಾಂಗ್ಲಾ ನುಸುಳುಕೋರರು ಈಗ ಕರ್ನಾಟಕದತ್ತ ಮುಖಮಾಡುತ್ತಿದ್ದಾರೆ ಎಂಬ ಆತಂಕ ವ್ಯಕ್ತವಾಗಿದೆ. ನಕಲಿ ಆಧಾರ್ ಕಾರ್ಡ್ ಬಳಸಿ ವಲಸಿಗರು ರಾಜ್ಯ ಪ್ರವೇಶಿಸುತ್ತಿದ್ದು, ಇದು ರಾಜ್ಯದ ಭದ್ರತೆಗೆ ದೊಡ್ಡ ಅಪಾಯವನ್ನುಂಟುಮಾಡಬಹುದು ಎಂದು ಹಿಂದೂಪರ ಸಂಘಟನೆಗಳು ಎಚ್ಚರಿಸಿವೆ.
Read Full Story

04:14 PM (IST) May 25

ಕೊಹ್ಲಿ-ಹೆಡ್ ನಡುವೆ ಕಿರಿಕ್; ಟ್ರ್ಯಾವಿಸ್ ಹೆಡ್ ಪತ್ನಿ ಮೇಲೆ ಸೈಬರ್ ದಾಳಿ ನಡೆಸಿದ ಭಾರತೀಯ ಫ್ಯಾನ್

ಐಪಿಎಲ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಮತ್ತು ಟ್ರಾವಿಸ್ ಹೆಡ್ ನಡುವೆ ನಡೆದ ಜಗಳದ ನಂತರ, ಹೆಡ್ ಅವರ ಪತ್ನಿ ಜೆಸ್ಸಿಕಾ ಮೇಲೆ ಕೊಹ್ಲಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ನಿಂದನೆ ಮಾಡಿದ್ದಾರೆ. ಈ ಹಿಂದೆ 2023ರ ವಿಶ್ವಕಪ್ ಫೈನಲ್ ನಂತರವೂ ಜೆಸ್ಸಿಕಾ ಇದೇ ರೀತಿಯ ಸೈಬರ್ ದಾಳಿಯನ್ನು ಎದುರಿಸಿದ್ದರು, ಇದು ಭಾರತೀಯ ಕ್ರಿಕೆಟ್‌ಗೆ ಮುಜುಗರ ತಂದಿದೆ.
Read Full Story

04:08 PM (IST) May 25

AI Shock - ಎಐ ಎಂಬ ಹೊಸ ದುಶ್ಯಾಸನ, ನಟಿಯರ ಸೆರಗಿಗೆ ಕೈ ಹಾಕ್ತಿರೋ AI ಬೇತಾಳ; ಆಗ ರಶ್ಮಿಕಾ, ಈಗ ರುಕ್ಮಿಣಿ!

ಸದ್ಯಕ್ಕಂತೂ ಸೈಬಲ್ ಠಾಣೆಗೆ ದೂರು ನೀಡಿ ರುಕ್ಮಿಣಿ ಕಿರಾತಕರಿಗೆ ಪಾಠ ಕಲಿಸೋದಕ್ಕೆ ಸಿದ್ದವಾಗಿದ್ದಾರೆ. ಹಲವು ನಟಿಮಣಿಯರು ಈ ಬಗ್ಗೆ ಧಿಟ್ಟ ಧ್ವನಿ ಎತ್ತಿದ್ದಾರೆ. ಅಷ್ಟಾಗಿಯೂ ಈ ಎಐ ದುಶ್ಯಾಸನನ ಅವಾಂತರ ಹೆಚ್ತಾನೆ ಇದೆ. ಈ ದುಶ್ಯಾಸನನ್ನ ಸಂಹರಿಸೋದು ಯಾರು ಅನ್ನೋದೇ ಸದ್ಯ ಎಲ್ಲರನ್ನೂ ಕಾಡ್ತಾ ಇರೋ ಪ್ರಶ್ನೆ..!

Read Full Story

03:43 PM (IST) May 25

ಭಾರತದಲ್ಲಿ ಮನೆ ಮುಂದೆ ಗೇಟ್‌, ಕಾಂಪೌಂಡ್‌ಗಾಗಿ ಜಗಳ; ಅಮೆರಿಕದಲ್ಲಿ ಗೇಟ್‌, ಕಾಂಪೌಂಡ್‌ ಹಾಕೋದೇ ಇಲ್ಲ; ಯಾಕೆ?

Why American Houses Don't Have Gates: ಭಾರತದಲ್ಲಿ ಸ್ವಲ್ಪ ಜಾಗ ಸಿಕ್ರೂ, ಗೇಟ್‌ ಹಾಕಿ ಇದು ನನ್ನ ಜಾಗ ಅಂತಾರೆ. ಆದರೆ ಅಮೆರಿಕದಲ್ಲಿ ಮಾತ್ರ ಎಲ್ಲಿಯೂ ಕಾಂಪೌಂಡ್‌ ಇರೋದಿಲ್ಲ, ಗೇಟ್‌ ಇರೋದಿಲ್ಲ. ಅಮೆರಿಕದಲ್ಲಿ ಮನೆಯ ರಸ್ತೆಯಿಂದ ನೇರವಾಗಿ ಹುಲ್ಲು ಕಾಣುತ್ತದೆ. ಇದಕ್ಕೂ ಕೂಡ ಕಾರಣ ಇದೆ.

Read Full Story

03:14 PM (IST) May 25

ಭಾರತದಲ್ಲಿ ಸುಮ್‌ ಸುಮ್ನೆ ವೆಹಿಕಲ್ ಹಾರ್ನ್‌ ಮಾಡ್ತಾರೆ; ಅಮೆರಿಕದಲ್ಲಿ ಹಾರ್ನ್‌ ಮಾಡೋದೇ ಇಲ್ಲ! ಯಾಕೆ?

What is a car horn called in America: ಭಾರತದಲ್ಲಿ ಗಾಡಿಯಿದೆ ಎಂದು ಹಾರ್ನ್‌ ಮಾಡೋದುಂಟು. ಯಾರನ್ನೋ ಕರೆಯಲು ಕೂಡ ಹಾರ್ನ್‌ ಮಾಡ್ತಾರೆ. ಆದರೆ ಅಮೆರಿಕದಲ್ಲಿ ಆ ರೀತಿ ಹಾರ್ನ್‌ ಮಾಡೋದು ತುಂಬ ಅಪರೂಪ. ಇದಕ್ಕೂ ಕಾರಣ ಇದೆ.

Read Full Story

03:08 PM (IST) May 25

'ಮೂವರಿಗೆ ಚಪ್ಪಲಿಯಲ್ಲಿ ಬಾರಿಸೋ ಟೈಮ್ ಬಂದಿದೆ' - ಐಪಿಎಲ್‌ನಿಂದ ಹೊರಬಿದ್ದ ಬೆನ್ನಲ್ಲೇ 3 ಆಟಗಾರರ ಮೇಲೆ ಕಿಡಿಕಾರಿದ ಯುವರಾಜ್ ಸಿಂಗ್

ಐಪಿಎಲ್ 2026ರಲ್ಲಿ ಕಳಪೆ ಪ್ರದರ್ಶನ ನೀಡಿ ಪ್ಲೇ ಆಫ್‌ನಿಂದ ಹೊರಬಿದ್ದ ಪಂಜಾಬ್ ಕಿಂಗ್ಸ್ ತಂಡದ ಮೂವರು ಆಟಗಾರರ ಮೇಲೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಆಟಗಾರರು ಹಂಚಿಕೊಂಡ ಫೋಟೋಗೆ 'ನಿಮಗೆಲ್ಲಾ ಚಪ್ಪಲಿಯಲ್ಲಿ ಬಾರಿಸುವ ಟೈಮ್ ಬಂದಿದೆ' ಎಂದು ಯುವಿ ಕಮೆಂಟ್ ಮಾಡಿದ್ದು, ಇದು ವೈರಲ್ ಆಗಿದೆ.
Read Full Story

02:48 PM (IST) May 25

ಕೆಲ್ಸನೇ ಇಲ್ಲದಿದ್ರೂ ಕೋಟ್ಯಧಿಪತಿ ಆಗ್ಬೇಕಾ? ವಿಜಯ್​ರ ಈ ಘೋಷಣೆ ರಾಜ್ಯದಲ್ಲೂ ಮಾಡಿ- ಓಪನ್​ ಸವಾಲು

ತಮಿಳುನಾಡಿನಲ್ಲಿ ಭ್ರಷ್ಟಾಚಾರದ ಸುಳಿವು ನೀಡಿದವರಿಗೆ 1 ಲಕ್ಷ ರೂ. ಬಹುಮಾನ ನೀಡುವ ನಟ ವಿಜಯ್ ಅವರ ಘೋಷಣೆಯೊಂದು ಕರ್ನಾಟಕದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಯೋಜನೆಯನ್ನು ಕರ್ನಾಟಕ ಸರ್ಕಾರ ಜಾರಿಗೆ ತಂದರೆ, ಇಲ್ಲಿನ ವ್ಯಾಪಕ ಭ್ರಷ್ಟಾಚಾರದಿಂದಾಗಿ ಪ್ರತಿಯೊಬ್ಬರೂ ಕೋಟ್ಯಧಿಪತಿಯಾಗಬಹುದು ಎಂದು ನೆಟ್ಟಿಗರು ಅಭಿಪ್ರಾಯಪಡುತ್ತಿದ್ದಾರೆ.

Read Full Story

02:38 PM (IST) May 25

ತ್ರಿಶಾ ಜೊತೆ ಸೂರ್ಯ ಅಲ್ಲ, ವಿಜಯ್ ನಟಿಸಬೇಕಿತ್ತು; ಆದ್ರೆ ದಳಪತಿ ಕೈತಪ್ಪಿ ಆ ಸ್ಟಾರ್ ಪಾಲಾಗಿದ್ದು ಹೇಗೆ?

'ಕರುಪ್ಪು' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಕ್ಷರಶಃ ಧೂಳೆಬ್ಬಿಸಿದೆ. ಈಗಾಗಲೇ 200 ಕೋಟಿ ರೂಪಾಯಿ ಬಾಚಿಕೊಂಡಿರುವ ಈ ಸಿನಿಮಾ ಸೂರ್ಯ ಅವರ ವೃತ್ತಿಜೀವನಕ್ಕೆ ದೊಡ್ಡ ಮೈಲಿಗಲ್ಲಾಗಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಸೂರ್ಯ ಗೆಲುವಿನ ನಗೆ ಬೀರಿದ್ದಾರೆ.. ಆದ್ರೆ, ಇದು ವಿಜಯ್ ಸಿನಿಮಾ ಆಗಬೇಕಾಗಿತ್ತು!

Read Full Story

02:15 PM (IST) May 25

ರೋಲ್ಸ್​ ರಾಯ್​ ಕಾರಿನ ಜೊತೆ 70ರ ಅಜ್ಜ ಫ್ರೀ - 20ರ ಸುಂದ್ರಿಯ ಭರ್ಜರಿ ಮದುವೆ- ಯುವಕರ ಹೊಟ್ಟೆಯಲ್ಲಿ ಬೆಂಕಿ

ಸೌದಿ ಅರೇಬಿಯಾದಲ್ಲಿ 70 ವರ್ಷದ ವೃದ್ಧರೊಬ್ಬರು 20 ವರ್ಷದ ಯುವತಿಯನ್ನು ಮದುವೆಯಾಗಿದ್ದಾರೆ. ಈ ಮದುವೆಗೆ ಯುವತಿಯನ್ನು ಒಪ್ಪಿಸಲು, ವರನು ರೋಲ್ಸ್ ರಾಯ್ಸ್ ಕಾರು ಮತ್ತು 5 ಕೆ.ಜಿ ಚಿನ್ನವನ್ನು ಉಡುಗೊರೆಯಾಗಿ ನೀಡಿದ್ದು, ಈ ಸುದ್ದಿ ವೈರಲ್ ಆಗಿದೆ.
Read Full Story

01:34 PM (IST) May 25

IPL 2026 - RCB vs GT ನಡುವಿನ ಮ್ಯಾಚ್ ಮಳೆಯಿಂದ ರದ್ದಾದ್ರೆ ಯಾರಿಗೆ ಲಾಭ? ಪ್ಲೇ ಆಫ್‌ಗೆ ಮೀಸಲು ದಿನವಿದೆಯಾ?

ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ ಟೂರ್ನಿಯು ನಿರ್ಣಾಯಕ ಘಟ್ಟದತ್ತ ಸಾಗುತ್ತಿದ್ದು, ಇದೀಗ ಪ್ಲೇ ಆಫ್ ಪಂದ್ಯಗಳಿಗೆ ಕ್ಷಣಗಣನೆ ಶುರುವಾಗಿದೆ. ಕ್ವಾಲಿಫೈಯರ್-1 ಪಂದ್ಯದಲ್ಲಿ ಆರ್‌ಸಿಬಿ-ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಲಿದ್ದು, ಈ ಮ್ಯಾಚ್ ರದ್ದಾದ್ರೆ ಯಾರಿಗೆ ಲಾಭ ನೋಡೋಣ ಬನ್ನಿ.

 

Read Full Story

01:04 PM (IST) May 25

ಮತ್ತೆ ಮುಂಬೈ ಸಿನಿರಂಗದ ಬಾಗಿಲು ಬಡಿದ ಸುಂದರಿ.. ಒಂದು ಕಾಲದ ಸ್ಟಾರ್, 'ದಾಮಿನಿ ನಟಿ ನೆನಪಿದೆಯಾ?

ಅಮೆರಿಕಾದಲ್ಲಿ ನೆಲೆಸಿದ್ದ ಈ ನಟಿ ಈಗ ಮುಂಬೈಗೆ ಶಿಫ್ಟ್ ಆಗಿದ್ದಾರೆ. 30 ವರ್ಷಗಳ ಸುದೀರ್ಘ ಕಾಲ ಅಮೆರಿಕದಲ್ಲಿ ಸಂಸಾರ ಹೂಡಿ, ಗೃಹಿಣಿಯಾಗಿ ಜವಾಬ್ದಾರಿ ನಿಭಾಯಿಸಿದ್ದ ಈ ನಟಿ, ಈಗ ಮತ್ತೆ ಬಣ್ಣದ ಲೋಕಕ್ಕೆ ಮರಳಲು ಇಷ್ಟಪಟ್ಟಿದ್ದಾರೆ..

Read Full Story

12:31 PM (IST) May 25

IPL 2026 Point Table - ಲೀಗ್ ಹಂತದ ಎಲ್ಲಾ 70 ಪಂದ್ಯಗಳು ಮುಕ್ತಾಯದ ಬಳಿಕ ಯಾರಿಗೆ ಯಾವ ಸ್ಥಾನ? ಪ್ಲೇ-ಆಫ್‌ ವೇಳಾಪಟ್ಟಿ ಹೀಗಿದೆ

19ನೇ ಆವೃತ್ತಿಯ ಐಪಿಎಲ್ ಲೀಗ್ ಹಂತದ ಪಂದ್ಯಗಳು ಮುಗಿದಿದ್ದು, ಹಾಲಿ ಚಾಂಪಿಯನ್ ಆರ್‌ಸಿಬಿ ಅಗ್ರಸ್ಥಾನಕ್ಕೇರಿದೆ. ಗುಜರಾತ್, ಹೈದರಾಬಾದ್, ಮತ್ತು ರಾಜಸ್ಥಾನ ತಂಡಗಳು ಪ್ಲೇ ಆಫ್‌ಗೆ ಅರ್ಹತೆ ಪಡೆದರೆ, ಕೆಕೆಆರ್ ಸೇರಿದಂತೆ ಆರು ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ.
Read Full Story

11:27 AM (IST) May 25

ವಿಶ್ವ ಸುಂದರಿ ಐಶ್ವರ್ಯಾ ರೈ ಜೊತೆ ನಟಿಸಿದ್ದ ಏಕೈಕ ಕನ್ನಡದ ಈ ನಟ ಈಗ ಫುಟ್‌ಪಾತ್‌ ಪಾಲಾದ್ರಾ?

ಸೋಲು-ಗೆಲುವು ಜೀವನದ ಭಾಗ. ಈ ನಟ ಇಂದು ಸಿನಿಮಾದಿಂದ ದೂರವಿದ್ದರೂ, ತಮ್ಮ ಕಷ್ಟದ ದಿನಗಳನ್ನು ಧೈರ್ಯದಿಂದ ಎದುರಿಸುತ್ತಿದ್ದಾರೆ. ಐಶ್ವರ್ಯಾ ರೈ ಜೊತೆ ರೊಮ್ಯಾನ್ಸ್ ಮಾಡಿದ್ದ ಈ ನಟ, ಇಂದು ಜೀವನದ ಜೊತೆ ಹೋರಾಟ ಮಾಡುತ್ತಿರುವುದು ಸಿನಿಮಾ ಕಥೆಗಿಂತಲೂ ಭಯಾನಕವಾಗಿದೆ.

Read Full Story

10:43 AM (IST) May 25

ವಿರಾಟ್ ಕೊಹ್ಲಿ ಕ್ರಿಕೆಟ್ ರಿಜಿಸ್ಟ್ರೇಷನ್ ಶೀಟ್ ವೈರಲ್..! ಕೋಚ್ ರಾಜ್‌ಕುಮಾರ್ ಶರ್ಮಾ ವಿರಾಟ್‌ಗೆ ಕೊಟ್ಟ ರೇಟಿಂಗ್ ಎಷ್ಟು ಗೊತ್ತಾ?

ವಿರಾಟ್ ಕೊಹ್ಲಿಯ 13ನೇ ವಯಸ್ಸಿನ ಕ್ರಿಕೆಟ್ ರಿಜಿಸ್ಟ್ರೇಷನ್ ಶೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ಅವರ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ, ಕೊಹ್ಲಿಯ ಬ್ಯಾಟಿಂಗ್, ಫೀಲ್ಡಿಂಗ್ ಮತ್ತು ಮನೋಧರ್ಮಕ್ಕೆ ನೀಡಿದ ಅಂಕಗಳು ಹಾಗೂ 'ಭರವಸೆಯ ಪ್ರತಿಭೆ' ಎಂದು ಬರೆದಿದ್ದ ಷರಾ ಎಲ್ಲರ ಗಮನ ಸೆಳೆದಿದೆ.
Read Full Story

08:31 AM (IST) May 25

IPL 2026 - ರಾಜಸ್ಥಾನ ರಾಯಲ್ಸ್ ಪ್ಲೇ-ಆಫ್‌ಗೆ, ಪಂಜಾಬ್‌, ಕೆಕೆಆರ್‌ ಮನೆಗೆ! ಪ್ಲೇ ಆಫ್‌ ವೇಳಾಪಟ್ಟಿ ಹೀಗಿದೆ

ನಿರ್ಣಾಯಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 30 ರನ್‌ಗಳಿಂದ ಗೆಲುವು ಸಾಧಿಸಿದ ರಾಜಸ್ಥಾನ ರಾಯಲ್ಸ್, ಐಪಿಎಲ್‌ನ 4ನೇ ತಂಡವಾಗಿ ಪ್ಲೇ-ಆಫ್‌ಗೆ ಅಧಿಕೃತ ಪ್ರವೇಶ ಪಡೆದಿದೆ. ಈ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತಾ ತಂಡಗಳ ಕನಸು ಭಗ್ನಗೊಂಡಿದ್ದು, ಮುಂಬೈ 10 ಸೋಲಿನೊಂದಿಗೆ ಅಭಿಯಾನ ಕೊನೆಗೊಳಿಸಿತು.
Read Full Story

08:27 AM (IST) May 25

ನೀತಾ ಅಂಬಾನಿಯನ್ನು ರೋಸ್ಟ್ ಮಾಡಿದ ವಿದ್ಯಾರ್ಥಿ; ಮುಖ ಮುಚ್ಚಿಕೊಂಡ ನಕ್ಕ ಮುಕೇಶ್ ಮಡದಿ

ವಿದ್ಯಾರ್ಥಿಯೊಬ್ಬ ಮುಂಬೈ ಇಂಡಿಯನ್ಸ್ ತಂಡದ ಕಳಪೆ ಪ್ರದರ್ಶನದ ಬಗ್ಗೆ ನೀತಾ ಅಂಬಾನಿಯವರನ್ನು ರೋಸ್ಟ್ ಮಾಡಿದ್ದಾನೆ. ಈ ತಮಾಷೆಯ ಘಟನೆಯ ವಿಡಿಯೋ ವೈರಲ್ ಆಗಿದ್ದು, ವಿದ್ಯಾರ್ಥಿಯ ಸಮಯಪ್ರಜ್ಞೆ ಮತ್ತು ನೀತಾ ಅಂಬಾನಿಯವರ ಪ್ರತಿಕ್ರಿಯೆ ಎಲ್ಲರ ಗಮನ ಸೆಳೆದಿದೆ.

Read Full Story

06:39 AM (IST) May 25

ಪಹಲ್ಗಾಂ ಉಗ್ರರ ಬಳಿ ಅಮೆರಿಕ ನಿರ್ಮಿತ ಕ್ಯಾಮೆರಾ ಬಂದಿದ್ದು ಹೇಗೆ? ದೆಹಲಿ ಸ್ಪೋಟಕ್ಕೆ AI ಬಳಕೆ

ಪಹಲ್ಗಾಂ ದಾಳಿಯಲ್ಲಿ ಉಗ್ರರು ಬಳಸಿದ ಅಮೆರಿಕ ನಿರ್ಮಿತ ಗೋಪ್ರೋ ಕ್ಯಾಮೆರಾಗಳು ಚೀನಾ ಮೂಲಕ ಪೂರೈಕೆಯಾಗಿರುವುದು ಎನ್‌ಐಎ ತನಿಖೆಯಿಂದ ಬೆಳಕಿಗೆ ಬಂದಿದೆ. ಇದಲ್ಲದೆ, ದೆಹಲಿ ಸ್ಫೋಟ ಪ್ರಕರಣದಲ್ಲಿ ಅಲ್‌-ಕೈದಾ ಉಗ್ರರು ಸ್ಫೋಟಕ ತಯಾರಿಸಲು ಚಾಟ್‌ಜಿಪಿಟಿಯಂತಹ ಎಐ ತಂತ್ರಜ್ಞಾನ ಬಳಸಿಕೊಂಡಿರುವುದು ಆರೋಪಪಟ್ಟಿಯಿಂದ ತಿಳಿದುಬಂದಿದೆ.
Read Full Story

05:59 AM (IST) May 25

ಶೀಘ್ರ ಭಾರತ-ಅಮೆರಿಕ ಟ್ರೇಡ್‌ ಡೀಲ್‌ - ಟ್ರಂಪ್‌ರ ತೆರಿಗೆ ಹೇರಿಕೆ ನಡೆಯ ಸಮರ್ಥಿಸಿಕೊಂಡ ಮಾರ್ಕೊ

ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಮಾತುಕತೆ ಶೀಘ್ರದಲ್ಲೇ ಫಲ ನೀಡಲಿದೆ ಎಂದು ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರುಬಿಯೋ ಹೇಳಿದ್ದಾರೆ. ಈ ಒಪ್ಪಂದವು ಎರಡೂ ದೇಶಗಳಿಗೆ ಲಾಭದಾಯಕವಾಗಲಿದೆ ಮತ್ತು ಅಧ್ಯಕ್ಷ ಟ್ರಂಪ್‌ರ ತೆರಿಗೆ ನೀತಿಯು ಜಾಗತಿಕ ವ್ಯಾಪಾರವನ್ನು ಮರುಹೊಂದಿಸುವ ಉದ್ದೇಶ ಹೊಂದಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Read Full Story

05:31 AM (IST) May 25

ಅಮೆರಿಕ- ಇರಾನ್‌ ಕದನವೋ, ಸಂಧಾನವೋ? ಒಪ್ಪಂದಕ್ಕೆ ಆತುರ ಬೇಡ, ಬನ್ನಿ - ಟ್ರಂಪ್‌ ಸೂಚನೆ

ಅಮೆರಿಕ ಮತ್ತು ಇರಾನ್‌ ನಡುವಿನ ಯುದ್ಧಸ್ಥಗಿತ ಮಾತುಕತೆ ಕಗ್ಗಂಟಾಗಿದೆ. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಒಮ್ಮೆ ಒಪ್ಪಂದ ಅಂತಿಮ ಎಂದೂ, ಮತ್ತೊಮ್ಮೆ ದಾಳಿಯ ಸುಳಿವು ನೀಡಿಯೂ ಗೊಂದಲ ಸೃಷ್ಟಿಸಿದ್ದಾರೆ. ಈ ಅನಿಶ್ಚಿತತೆಯ ನಡುವೆ, ಸಂಧಾನ ಯಶಸ್ವಿಯಾಗುವುದೇ ಅಥವಾ ಯುದ್ಧ ಮರುಕಳಿಸುವುದೇ ಎಂಬ ಕುತೂಹಲ ಹೆಚ್ಚಾಗಿದೆ.
Read Full Story

More Trending News