ಕಾಶಿ ವಿಶ್ವನಾಥ ಮಂದಿರದ ಆವರಣದಲ್ಲಿರುವ ಜ್ಞಾನವಾಪಿ ಮಸೀದಿ ವಿವಾದವನ್ನು ಮಾತುಕತೆ ಮೂಲಕ ಇತ್ಯರ್ಥಗೊಳಿಸಿಕೊಳ್ಳಿ ಎಂದು ಸುಪ್ರೀಂ ಕೋರ್ಟ್ ನೀಡಿದ್ದ ಸಲಹೆಯನ್ನು ಹಿಂದೂ, ಮುಸ್ಲಿಂ ಸಮುದಾಯದವರು ತಿರಸ್ಕರಿಸಿದ್ದಾರೆ. ನ್ಯಾಯಾಲಯಗಳೇ ಈ ವಿಷಯವನ್ನು ನಿರ್ಧರಿಸಬೇಕು ಎಂದು ಎರಡೂ ಕಡೆಯವರು ಕೋರಿದ್ದಾರೆ.
ಸುಪ್ರೀಂ ಕೋರ್ಟ್ ಪ್ರಕರಣಗಳ ಇತ್ಯರ್ಥಕ್ಕಾಗಿ ಆ.21-23ರ ತನಕ ವಿಶೇಷ ಲೋಕ ಅದಾಲತ್ ಆಯೋಜಿಸಿದೆ. ಅದಕ್ಕೂ ಮುಂಚಿತವಾಗಿ ‘ರಾಷ್ಟ್ರಾದ್ಯಂತ ಮಧ್ಯಸ್ಥಿಕೆ ತೀರ್ಪು ಮತ್ತು ವಿವಾದಗಳ ಸಾಮರಸ್ಯಕ್ಕಾಗಿ ಸುಪ್ರೀಂ ಕೋರ್ಟ್ ಕ್ರಮ’ ಎಂಬ ಕಾರ್ಯಕ್ರಮವನ್ನು ಕೋರ್ಟ್‌ಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಅದರಂತೆ ಮಂಗಳವಾರ ಎರಡೂ ಕಡೆಯವರು ವಾರಾಣಸಿ ನ್ಯಾಯಾಲಯದಲ್ಲಿರುವ ಮಧ್ಯಸ್ಥಿಕೆ ಕೇಂದ್ರದ ಮುಂದೆ ಹಾಜರಾದರು.
ಈ ವೇಳೆ ಮುಸ್ಲಿಂ ಸಮುದಾಯದವರು, ‘ಇದೇ ರೀತಿಯ ಹಲವಾರು ವಿಷಯಗಳು ಸುಪ್ರೀಂ ಕೋರ್ಟ್ ಮುಂದೆ ಬಾಕಿ ಉಳಿದಿವೆ. ನ್ಯಾಯಾಲಯದ ತೀರ್ಪನ್ನು ಪಾಲಿಸುತ್ತೇವೆ. ಆದರೆ ಮಧ್ಯಸ್ಥಿಕೆಯನ್ನು ಸ್ವೀಕರಿಸಲು ಸಿದ್ಧವಿಲ್ಲ’ ಎಂದರು. ಇತ್ತ ಹಿಂದೂ ಸಮುದಾಯವರು ‘ಮುಸ್ಲಿಂ ಕಡೆಯವರು ಜ್ಞಾನವಾಪಿಯಲ್ಲಿ ಅತಿಕ್ರಮಣಕಾರರು. ಜ್ಯೋತಿರ್ಲಿಂಗ ಸ್ಥಳದಲ್ಲಿ ಭವ್ಯ ಕಾಶಿ ವಿಶ್ವನಾಥ ದೇಗುಲ ನಿರ್ಮಿಸಲು ಸಾಧ್ಯವಾಗುವಂತೆ ಆವರಣ ಖಾಲಿ ಮಾಡಬೇಕು’ ಎಂದು ಕೋರಿದರು ಹಾಗೂ ಮಧ್ಯಸ್ಥಿಕೆಗೆ ನಿರಾಕರಿಸಿದರು,
11:46 PM (IST) Jul 15
ನಟ ಅಜಿತ್ ಕುಮಾರ್ ಪತ್ನಿ, ಮಾಜಿ ನಟಿ ಶಾಲಿನಿ ಅಜಿತ್ ಕುಮಾರ್ ಹಲವು ವರ್ಷಗಳ ನಂತರ ಮತ್ತೆ ಚಿತ್ರರಂಗಕ್ಕೆ ಮರಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಾರಿ ನಟಿಯಾಗಿ ಅಲ್ಲ, ಬದಲಿಗೆ ನಿರ್ಮಾಪಕಿಯಾಗಿ ಎನ್ನುವ ಸುದ್ದಿ ಹರಿದಾಡುತ್ತಿದೆ.
10:48 PM (IST) Jul 15
India Film Censorship: ಭಾರತದಲ್ಲಿ ಫಿಲ್ಮ್ ಸೆನ್ಸಾರ್‌ಶಿಪ್ ಅನ್ನೇ ತೆಗೆದುಹಾಕಬೇಕು, ಈಗಿನ ವ್ಯವಸ್ಥೆ ಸಂಪೂರ್ಣ ಹಳಸಲಾಗಿದೆ ಅಂತ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.
10:30 PM (IST) Jul 15
ಐಆರ್‌ಸಿಟಿಸಿ ತನ್ನ ವೆಬ್‌ಸೈಟ್‌ನ ಹೊಸ 'ಬೀಟಾ ಆವೃತ್ತಿ'ಯನ್ನು ಅನಾವರಣಗೊಳಿಸಿದ್ದು, ಇದು ಬಳಕೆದಾರರಿಗೆ ಸುಧಾರಿತ ಅನುಭವ ನೀಡಲಿದೆ. ಅನಗತ್ಯ ಕ್ಯಾಪ್ಚಾ ತೆಗೆದುಹಾಕುವುದು, ಸೀಟುಗಳ ಲಭ್ಯತೆಯ ಸ್ಪಷ್ಟ ಚಿತ್ರಣ, ಮತ್ತು ವೇಗದ ಚೆಕ್‌ಔಟ್ ಪ್ರಕ್ರಿಯೆಯಂತಹ ಪ್ರಮುಖ ಸುಧಾರಣೆಗಳನ್ನು ಇದು ಒಳಗೊಂಡಿದೆ.
09:35 PM (IST) Jul 15
ರಾಮ್ ಚರಣ್ ಅವರ ಮುಂದಿನ ಸಿನಿಮಾ RC17 ಬಗ್ಗೆ ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ ಇದೆ. ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ನಯನತಾರಾ ಒಂದು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
09:02 PM (IST) Jul 15
07:02 PM (IST) Jul 15
05:55 PM (IST) Jul 15
ರಣವೀರ್ ಸಿಂಗ್ ನಟನೆಯ 'ಧುರಂಧರ್' ಫ್ರಾಂಚೈಸಿಯಲ್ಲಿ ಯಾಲಿನಾ ಪಾತ್ರದ ಮೂಲಕ ಗಮನ ಸೆಳೆದ ನಟಿ ಸಾರಾ ಅರ್ಜುನ್, ಇದೀಗ ತಮ್ಮ ಲೇಟೆಸ್ಟ್ ಫೋಟೋಶೂಟ್‌ನಿಂದಾಗಿ ಮತ್ತೆ ಸುದ್ದಿಯಲ್ಲಿದ್ದಾರೆ.
05:50 PM (IST) Jul 15
05:36 PM (IST) Jul 15
ಭಾರತೀಯ ರೈಲ್ವೆಯ ಎಸಿ ಕೋಚ್‌ಗಳಲ್ಲಿ ಪ್ರಯಾಣಿಕರಿಗೆ ನೀಡುವ ಬೆಡ್‌ರೋಲ್ ಕಿಟ್‌ಗಳು ದೊಡ್ಡ ಪ್ರಮಾಣದಲ್ಲಿ ಕಳ್ಳತನವಾಗುತ್ತಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಬೆಡ್‌ರೋಲ್ ವಸ್ತುಗಳು ಕಣ್ಮರೆಯಾಗಿದ್ದು, ಇದರಿಂದ ರೈಲ್ವೆ ವ್ಯವಸ್ಥೆಗೆ ₹104 ಕೋಟಿಗೂ ಹೆಚ್ಚು ನಷ್ಟವಾಗಿದೆ.
05:31 PM (IST) Jul 15
05:20 PM (IST) Jul 15
ಕೊನೆಗೂ ಆ ಸೀಕ್ರೆಟ್ ರಿವೀಲ್ ಆಗಿದೆ! ಪ್ರಿಯಾಂಕಾ ಚೋಪ್ರಾಗೆ ತಾವು ಕಳಿಸಿದ್ದ ಮೊದಲ ಮೆಸೇಜ್ ಬಗ್ಗೆ ನಿಕ್ ಜೋನಸ್ ಅವರೇ ಹೇಳಿಕೊಂಡಿದ್ದಾರೆ. 'ಹೇ ಜೋನಸ್' ಪಾಡ್‌ಕಾಸ್ಟ್‌ನಲ್ಲಿ ಈ ವಿಚಾರ ಹಂಚಿಕೊಂಡಾಗ, ಇಬ್ಬರೂ ಮುಜುಗರದಿಂದ ನಕ್ಕಿದ್ದು ಕ್ಯೂಟ್ ಆಗಿತ್ತು.
04:47 PM (IST) Jul 15
04:23 PM (IST) Jul 15
ಬೆಂಗಳೂರು: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇಂಗ್ಲೆಂಡ್ ಎದುರಿನ ಎರಡನೇ ಪಂದ್ಯಕ್ಕೆ ಭಾರತ ತಂಡದಲ್ಲಿ ಬದಲಾವಣೆಗಳಾಗುವ ಸಾಧ್ಯತೆಯಿದೆ. ಇಲ್ಲಿದೆ ಸಂಭಾವ್ಯ ತಂಡ.
03:25 PM (IST) Jul 15
02:52 PM (IST) Jul 15
02:36 PM (IST) Jul 15
ಯುವತಿ ಬ್ಲಿಂಕಿಟ್ ಮೂಲಕ ಕೆಲ ವಸ್ತುಗಳನ್ನು ಆರ್ಡರ್ ಮಾಡಿದ್ದಾರೆ. ಇದರ ಜೊತೆಗೆ ಅತ್ಯಂತ ರಹಸ್ಯ ಫೋಟೋಗಳು ಅನ್ನೋ ಎನ್‌ವಲಪ್ ಕವರ್ ಇದೇ ಆರ್ಡರ್ ಒಳಗಿತ್ತು. ಆತಂಕದಿಂದಲೇ ಯುವತಿ ಈ ಕವರ್ ತೆರೆದಾಗ ಅಚ್ಚರಿ ಕಾದಿತ್ತು.
01:53 PM (IST) Jul 15
2025ರ ಅಹಮದಾಬಾದ್ ಏರ್ ಇಂಡಿಯಾ ವಿಮಾನ ಪತನದ ತನಿಖೆ ಮುಂದುವರೆದಿದ್ದು, ಕಾಕ್‌ಪಿಟ್ ಧ್ವನಿ ರೆಕಾರ್ಡಿಂಗ್ (CVR) ಅನ್ನು ಬಹಿರಂಗಪಡಿಸಲು ಸಾಧ್ಯವಿಲ್ಲವೆಂದು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಸುಪ್ರೀಂಕೋರ್ಟ್‌ಗೆ ತಿಳಿಸಿದೆ.
01:37 PM (IST) Jul 15
01:16 PM (IST) Jul 15
ಶಿಕ್ಷಕ ಪತಿಯ ಮೇಲೆ ಪತ್ನಿಗೆ ಅನುಮಾನಗಳು ಹೆಚ್ಚಾಗಿದೆ. ಗೊತ್ತಿಲ್ಲದೆ ಶಾಲೆಗೆ ತೆರಳಿ ಹಿಡನ್ ಕ್ಯಾಮೆರಾ ಇಟ್ಟು ಬಂದಿದ್ದಾಳೆ. ಇದರ ಅರಿವೇ ಇಲ್ಲದ ಪತಿ, ಶಾಲಾ ಟೀಚರ್ ಜೊತೆಗಿನ ರಹಸ್ಯ ಕಾರ್ಯಾಚರಣೆಗಳು ಸೆರೆಯಾಗಿದೆ.
12:54 PM (IST) Jul 15
'ಲಾಕ್ ಅಪ್ ಸೀಸನ್ 2' ರಿಯಾಲಿಟಿ ಶೋನಲ್ಲಿ ನಟಿ ಶಿಲ್ಪಾ ಶಿಂಧೆ, ಸಹ ಸ್ಪರ್ಧಿ ಶ್ರೇಯಾ ಕಾಲ್ರಾ ಜೊತೆ ಸೇರಿ ನಟಿ ಶಿವಾಂಗಿ ಜೋಶಿಯವರನ್ನು ಮಿಮಿಕ್ರಿ ಮಾಡಿದ್ದಾರೆ. ಶಿವಾಂಗಿಯವರ ಕ್ಯಾರೆಕ್ಟರ್, ವರ್ಜಿನ್ ಹೇಳಿಕೆ ಬಗ್ಗೆ ಕೊಂಕು ನುಡಿದಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
12:54 PM (IST) Jul 15
ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಕ್ಯಾಪ್ಟನ್ ಶುಭಮನ್ ಗಿಲ್ 80 ರನ್ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಬರ್ಮಿಂಗ್‌ಹ್ಯಾಮ್‌ನಲ್ಲಿ ವಿರಾಟ್ ಕೊಹ್ಲಿ ಹೆಸರಲ್ಲಿದ್ದ ದೊಡ್ಡ ದಾಖಲೆಯೊಂದನ್ನು ಮುರಿದಿದ್ದಾರೆ. ಇಂಗ್ಲೆಂಡ್ ವಿರುದ್ಧ ಮತ್ತೊಮ್ಮೆ ಅದ್ಭುತ ಇನ್ನಿಂಗ್ಸ್ ಆಡಿ ತಮ್ಮ ಛಾಪು ಮೂಡಿಸಿದ್ದಾರೆ.
12:32 PM (IST) Jul 15
12:26 PM (IST) Jul 15
ನವದೆಹಲಿ: ಭಾರತ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ಹಾಗೂ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ನಡುವೆ ಬಿರುಕು ಬಿಟ್ಟಿದ್ದು, ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂದು ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.
12:03 PM (IST) Jul 15
ಪಾಕಿಸ್ತಾನ ಅತಿಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ರಾಷ್ಟ್ರಗಳ ಪೈಕಿ ಒಂದಾಗಿದೆ. ಪಾಕಿಸ್ತಾನದಲ್ಲಿರುವ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದು, ಈ ನಗರದಲ್ಲಿ ಶೇ.80 ರಷ್ಟು ಹಿಂದೂಗಳಿದ್ದಾರೆ. ಈ ಪ್ರದೇಶಗಳಲ್ಲಿ ಹಿಂದೂ-ಮುಸ್ಲಿಂ ಸಮುದಾಯಗಳು ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸುತ್ತಾರೆ.
11:27 AM (IST) Jul 15
ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಉರಿ ಬಿಸಿಲು ತೀವ್ರಗೊಳ್ಳುತ್ತಿದೆ. ದೇಶದ ಕೆಲೆವೆಡೆ ಮಳೆಯಾಗಿದ್ದರೆ, ಬಹುತೇಕ ರಾಜ್ಯಗಳು ಮಳೆಗಾಗಿ ಪ್ರಾರ್ಥಿಸುತ್ತಿದೆ. ಇದರ ಬೆನ್ನಲ್ಲೇ ಹವಾಮಾನ ಇಲಾಖೆ 14 ರಾಜ್ಯಗಳಿಗೆ ಪ್ರವಾಹ ಪರಿಸ್ಥಿತಿ ಮಳೆ ಎಚ್ಚರಿಕೆ ನೀಡಿದೆ.
11:17 AM (IST) Jul 15
ಪ್ರತಿ ಹಾವಿನ ವಿಷವು ರಾಸಾಯನಿಕವಾಗಿ ವಿಭಿನ್ನವಾಗಿರುತ್ತದೆ ಮತ್ತು ಹಾವಿನ ದೇಹವು ತನ್ನದೇ ಜಾತಿಯ ವಿಷವನ್ನು ಮಾತ್ರ ತಟಸ್ಥಗೊಳಿಸಲು ಶಕ್ತವಾಗಿರುತ್ತದೆ. ಹಾವನ್ನು ಕಚ್ಚಿದ್ರೆ ಇನ್ನೊಂದು ಹಾವಿನ ವಿಷದ ಪರಿಣಾಮ ಬೀರುತ್ತಾ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
10:50 AM (IST) Jul 15
ಬರ್ಮಿಂಗ್‌ಹ್ಯಾಮ್: ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ಹಾಗೂ ಹೆಡ್ ಕೋಚ್ ಗೌತಮ್ ಗಂಭೀರ್ ನಡುವೆ ಮತ್ತೆ ಮನಸ್ತಾಪ ಶುರುವಾಗಿದೆಯೇ ಎನ್ನುವ ಚರ್ಚೆ ಕಾಡಲಾರಂಭಿಸಿದೆ. ಭಾರತ-ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ನಡೆದ ಘಟನೆ ಚರ್ಚೆಗೆ ಗ್ರಾಸವಾಗಿದೆ.
10:31 AM (IST) Jul 15
ತಾಜ್ ಮಹಲ್ ವೀಕ್ಷಣೆಗೆ ಬಂದಿದ್ದ ಅರ್ಜಂಟೈನ್ ಮೂಲದ ಪ್ರವಾಸಿ ಮಹಿಳೆಯೊಬ್ಬರು ಸೀರೆಯಲ್ಲಿ ತೊಂದರೆ ಅನುಭವಿಸುತ್ತಿದ್ದರು. ಇದನ್ನು ಗಮನಿಸಿದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು, ಅವರಿಗೆ ಕ್ರಮಬದ್ಧವಾಗಿ ಸೀರೆ ತೊಡಿಸಿ ಸಹಾಯ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
09:59 AM (IST) Jul 15
09:52 AM (IST) Jul 15
09:40 AM (IST) Jul 15
ಮದುವೆಯಾದ ಮೂರೇ ದಿನಕ್ಕೆ ಯುವತಿಯೊಬ್ಬಳು ತನ್ನ ಸಲಿಂಗಿ ಗೆಳತಿಯೊಂದಿಗೆ ಪರಾರಿಯಾಗಿದ್ದಾಳೆ. ನಂತರ ಪೊಲೀಸ್ ಠಾಣೆಗೆ ಬಂದು, ಆಕೆ ನನ್ನ ಹೆಂಡತಿ, ನನ್ನೊಂದಿಗೆ ಕಳುಹಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದು, ಇಬ್ಬರೂ ಈಗಾಗಲೇ ನ್ಯಾಯಾಲಯದಲ್ಲಿ ಮದುವೆಯಾಗಿರುವ ವಿಷಯ ಬಹಿರಂಗವಾಗಿದೆ.
09:36 AM (IST) Jul 15
08:13 AM (IST) Jul 15
2007ರಲ್ಲಿ ತಮ್ಮ ಬರಹಗಳ ಕಾರಣದಿಂದ ಸೃಷ್ಟಿಯಾಗಿದ್ದ ವಿರೋಧದಿಂದ ಕೋಲ್ಕತಾ ತೊರೆದಿದ್ದ ಬಾಂಗ್ಲಾದೇಶದ ಲೇಖಕಿ 20 ತಸ್ಲೀಮಾ ನಸ್ರೀನ್(Taslima Nasrin) ವರ್ಷಗಳ ಬಳಿಕ ಮತ್ತೆ ಕೋಲ್ಕತಾಗೆ ಮರಳಲು ಸಜ್ಜಾಗಿದ್ದಾರೆ. ಆಗಸ್ಟ್ 1 ರಂದು ರವೀಂದ್ರ ಸದನದಲ್ಲಿ ನಡೆಯವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
07:31 AM (IST) Jul 15
ಮಧ್ಯಪ್ರದೇಶದ ಧಾರ್ ಜಿಲ್ಲೆಯ ವಿವಾದಿತ ಭೋಜಶಾಲಾ ಸಂಕೀರ್ಣದ ಬಳಿ ಮುಸ್ಲಿಮರಿಗೆ ಶುಕ್ರವಾರದ ನಮಾಜ್‌ಗೆ ಪ್ರತ್ಯೇಕ ಸ್ಥಳ ಕಲ್ಪಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಯಾವುದೇ ರಚನಾತ್ಮಕ ಬದಲಾವಣೆ ಮಾಡದಂತೆ ಪುರಾತತ್ವ ಇಲಾಖೆಗೆ ನಿರ್ದೇಶನ ನೀಡಿದೆ.