MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಬರ್ಮಿಂಗ್‌ಹ್ಯಾಮ್‌ನಲ್ಲಿ ವಿರಾಟ್ ಕೊಹ್ಲಿ ಹೆಸರಲ್ಲಿದ್ದ ಅಪರೂಪದ ದಾಖಲೆ ಮುರಿದ ಶುಭ್‌ಮನ್ ಗಿಲ್!

ಬರ್ಮಿಂಗ್‌ಹ್ಯಾಮ್‌ನಲ್ಲಿ ವಿರಾಟ್ ಕೊಹ್ಲಿ ಹೆಸರಲ್ಲಿದ್ದ ಅಪರೂಪದ ದಾಖಲೆ ಮುರಿದ ಶುಭ್‌ಮನ್ ಗಿಲ್!

ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಕ್ಯಾಪ್ಟನ್ ಶುಭಮನ್ ಗಿಲ್ 80 ರನ್ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಬರ್ಮಿಂಗ್‌ಹ್ಯಾಮ್‌ನಲ್ಲಿ ವಿರಾಟ್ ಕೊಹ್ಲಿ ಹೆಸರಲ್ಲಿದ್ದ ದೊಡ್ಡ ದಾಖಲೆಯೊಂದನ್ನು ಮುರಿದಿದ್ದಾರೆ. ಇಂಗ್ಲೆಂಡ್ ವಿರುದ್ಧ ಮತ್ತೊಮ್ಮೆ ಅದ್ಭುತ ಇನ್ನಿಂಗ್ಸ್ ಆಡಿ ತಮ್ಮ ಛಾಪು ಮೂಡಿಸಿದ್ದಾರೆ.

2 Min read
Author : Naveen Kodase
Published : Jul 15 2026, 12:54 PM IST
Share this Photo Gallery
  • FB
  • TW
  • Linkdin
  • Whatsapp
16
ಎಜ್‌ಬಾಸ್ಟನ್ ಏಕದಿನ ಪಂದ್ಯದಲ್ಲಿ 80 ರನ್ ಚಚ್ಚಿದ ಶುಭ್‌ಮನ್ ಗಿಲ್
Image Credit : X/BCCI

ಎಜ್‌ಬಾಸ್ಟನ್ ಏಕದಿನ ಪಂದ್ಯದಲ್ಲಿ 80 ರನ್ ಚಚ್ಚಿದ ಶುಭ್‌ಮನ್ ಗಿಲ್

ಮಂಗಳವಾರ ಬರ್ಮಿಂಗ್‌ಹ್ಯಾಮ್‌ನ ಏಜ್‌ಬಾಸ್ಟನ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ. ಸಾಧಾರಣ ಗುರಿ ಬೆನ್ನತ್ತಿದ ಭಾರತ ಇನ್ನೂ 28 ಎಸೆತಗಳು ಬಾಕಿ ಇರುವಂತೆಯೇ ಆರು ವಿಕೆಟ್‌ಗಳ ಗೆಲುವು ಸಾಧಿಸಿದೆ. ಇನ್ನು ಈ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್ 75 ಎಸೆತಗಳಲ್ಲಿ 80 ರನ್ ಗಳಿಸಿ ಕ್ಯಾಪ್ಟನ್ಸ್ ಇನ್ನಿಂಗ್ಸ್ ಆಡಿದರು. ಗಿಲ್ ತಮ್ಮ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದರು. ಆದರೆ, ಸ್ನಾಯು ಸೆಳೆತದಿಂದಾಗಿ ಗಿಲ್ ರಿಟೈರ್ಡ್ ಹರ್ಟ್ ಆಗಿ ಪೆವಿಲಿಯನ್‌ಗೆ ಮರಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಇಂಗ್ಲೆಂಡ್ ನೆಲದಲ್ಲಿ ಇತಿಹಾಸ ನಿರ್ಮಿಸಿದ ಶುಭ್‌ಮನ್ ಗಿಲ್
Image Credit : X/BCCI

ಇಂಗ್ಲೆಂಡ್ ನೆಲದಲ್ಲಿ ಇತಿಹಾಸ ನಿರ್ಮಿಸಿದ ಶುಭ್‌ಮನ್ ಗಿಲ್

ಈ ಪಂದ್ಯದಲ್ಲಿ ಗಿಲ್, ಉಪನಾಯಕ ಶ್ರೇಯಸ್ ಅಯ್ಯರ್ ಜೊತೆ ಮೂರನೇ ವಿಕೆಟ್‌ಗೆ 103 ಎಸೆತಗಳಲ್ಲಿ 101 ರನ್‌ಗಳ ಜೊತೆಯಾಟವಾಡಿದರು. ಇದರಲ್ಲಿ ಶ್ರೇಯಸ್ ಅಯ್ಯರ್ 35 ರನ್ ಗಳಿಸಿದರು. ತಮ್ಮ 80 ರನ್‌ಗಳ ಇನ್ನಿಂಗ್ಸ್ ವೇಳೆ, ಗಿಲ್ ಕ್ರಿಕೆಟ್ ದಂತಕಥೆ ವಿರಾಟ್ ಕೊಹ್ಲಿ ಹೆಸರಲ್ಲಿದ್ದ ಒಂದು ದೊಡ್ಡ ದಾಖಲೆಯನ್ನು ಮುರಿದರು. ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್ ಮೈದಾನದಲ್ಲಿ ಭಾರತೀಯ ನಾಯಕನಾಗಿ ಅತಿ ಹೆಚ್ಚು, ಅಂದರೆ 510 ರನ್ ಗಳಿಸಿದ ಆಟಗಾರನಾಗಿ ಗಿಲ್ ಇತಿಹಾಸ ನಿರ್ಮಿಸಿದರು. ಮೇ 2025ರಲ್ಲಿ ಟೆಸ್ಟ್ ಕ್ಯಾಪ್ಟನ್ ಮತ್ತು ಅಕ್ಟೋಬರ್ 2025ರಲ್ಲಿ ಏಕದಿನ ಕ್ಯಾಪ್ಟನ್ ಆದ ಗಿಲ್, ಇಂಗ್ಲೆಂಡ್‌ನ ಒಂದೇ ಮೈದಾನದಲ್ಲಿ 500 ರನ್ ಗಳಿಸಿದ ಮೊದಲ ಭಾರತೀಯ ನಾಯಕ ಎನಿಸಿಕೊಂಡರು.

Related Articles

Related image1
ಟಿ20 ಸೋಲಿನ ಕಹಿ ಮರೆತ ಭಾರತ; ಮೊದಲ ಏಕದಿನದಲ್ಲಿ ಇಂಗ್ಲೆಂಡ್‌ಗೆ ತಿರುಗೇಟು ಕೊಟ್ಟ ಟೀಂ ಇಂಡಿಯಾ
Related image2
ವಿರಾಟ್ ಕೊಹ್ಲಿ ಜೊತೆ ಗಂಭೀರ್ ಮಾತೇ ಆಡಲಿಲ್ಲ! ಕೊಹ್ಲಿ-ಗಂಭೀರ್ ಕೋಲ್ಡ್ ವಾರ್ ಮತ್ತೆ ಶುರು?
36
ಇಂಗ್ಲೆಂಡ್‌ನ ಒಂದೇ ಮೈದಾನದಲ್ಲಿ 500+ ರನ್ ಬಾರಿಸಿದ ಭಾರತದ ಮೊದಲ ನಾಯಕ ಗಿಲ್
Image Credit : X/BCC

ಇಂಗ್ಲೆಂಡ್‌ನ ಒಂದೇ ಮೈದಾನದಲ್ಲಿ 500+ ರನ್ ಬಾರಿಸಿದ ಭಾರತದ ಮೊದಲ ನಾಯಕ ಗಿಲ್

ಗಿಲ್ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಎಲ್ಲಾ ಮಾದರಿಗಳಲ್ಲಿ (ಟೆಸ್ಟ್ ಮತ್ತು ಏಕದಿನ) ಕೇವಲ ಎರಡು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 255ರ ಅದ್ಭುತ ಸರಾಸರಿಯೊಂದಿಗೆ 510 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಗಿಲ್ ಎರಡು ಶತಕ ಮತ್ತು ಒಂದು ಅರ್ಧಶತಕ ಬಾರಿಸಿದ್ದಾರೆ. ಇಲ್ಲಿ ಅವರ ಅತ್ಯುತ್ತಮ ಸ್ಕೋರ್ 269 ರನ್ ಆಗಿದೆ. ಇದನ್ನು ಅವರು ಕಳೆದ ವರ್ಷ ಇಂಗ್ಲೆಂಡ್ ವಿರುದ್ಧದ ಬರ್ಮಿಂಗ್‌ಹ್ಯಾಮ್ ಟೆಸ್ಟ್‌ನಲ್ಲಿ ಬಾರಿಸಿದ್ದರು.

46
ಬರ್ಮಿಂಗ್‌ಹ್ಯಾಮ್ ಮೈದಾನದಲ್ಲಿ ಅತಿ ಹೆಚ್ಚು ಅಂತರರಾಷ್ಟ್ರೀಯ ರನ್ ಗಳಿಸಿದ ಭಾರತೀಯ ನಾಯಕರು:
Image Credit : ANI

ಬರ್ಮಿಂಗ್‌ಹ್ಯಾಮ್ ಮೈದಾನದಲ್ಲಿ ಅತಿ ಹೆಚ್ಚು ಅಂತರರಾಷ್ಟ್ರೀಯ ರನ್ ಗಳಿಸಿದ ಭಾರತೀಯ ನಾಯಕರು:

ಬರ್ಮಿಂಗ್‌ಹ್ಯಾಮ್ ಮೈದಾನದಲ್ಲಿ ಅತಿ ಹೆಚ್ಚು ಅಂತರರಾಷ್ಟ್ರೀಯ ರನ್ ಗಳಿಸಿದ ಭಾರತೀಯ ನಾಯಕರು:

1. ಶುಭಮನ್ ಗಿಲ್ - 510 ರನ್

2. ವಿರಾಟ್ ಕೊಹ್ಲಿ - 469 ರನ್

3. ಮೊಹಮ್ಮದ್ ಅಜರುದ್ದೀನ್ - 322 ರನ್

56
ವಿರಾಟ್ ಕೊಹ್ಲಿ ದಾಖಲೆ ಮುರಿದ ಗಿಲ್
Image Credit : Getty

ವಿರಾಟ್ ಕೊಹ್ಲಿ ದಾಖಲೆ ಮುರಿದ ಗಿಲ್

ಇದಕ್ಕೂ ಮೊದಲು, ಇಂಗ್ಲೆಂಡ್‌ನ ಒಂದೇ ಕ್ರೀಡಾಂಗಣದಲ್ಲಿ ಭಾರತೀಯ ನಾಯಕನೊಬ್ಬ ಗಳಿಸಿದ ಅತಿ ಹೆಚ್ಚು ರನ್‌ಗಳ ದಾಖಲೆ ವಿರಾಟ್ ಕೊಹ್ಲಿ ಹೆಸರಲ್ಲಿತ್ತು. ಕೊಹ್ಲಿ ಎಜ್‌ಬಾಸ್ಟನ್‌ನಲ್ಲಿ ಭಾರತದ ನಾಯಕರಾಗಿ 5 ಪಂದ್ಯಗಳ 6 ಇನ್ನಿಂಗ್ಸ್‌ಗಳಲ್ಲಿ 469 ರನ್ ಗಳಿಸಿದ್ದರು. ಈಗ ಗಿಲ್ 510 ರನ್‌ಗಳೊಂದಿಗೆ ಆ ದಾಖಲೆಯನ್ನು ಮುರಿದಿದ್ದಾರೆ. ಈ ಮೂಲಕ ಸುನಿಲ್ ಗವಾಸ್ಕರ್, ಮೊಹಮ್ಮದ್ ಅಜರುದ್ದೀನ್, ಎಂಎಸ್ ಧೋನಿ, ರೋಹಿತ್ ಶರ್ಮಾ, ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿ ನಂತರ ಒಂದೇ ಮೈದಾನದಲ್ಲಿ 500 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ 7ನೇ ಭಾರತೀಯ ನಾಯಕ ಎನಿಸಿಕೊಂಡಿದ್ದಾರೆ.

66
ಮೊಹಮ್ಮದ್ ಅಜರುದ್ದೀನ್ ಹೆಸರಲ್ಲಿದೆ ಅಪರೂಪದ ದಾಖಲೆ
Image Credit : x

ಮೊಹಮ್ಮದ್ ಅಜರುದ್ದೀನ್ ಹೆಸರಲ್ಲಿದೆ ಅಪರೂಪದ ದಾಖಲೆ

ಅಂದಹಾಗೆ, ಒಂದೇ ಸ್ಟೇಡಿಯಂನಲ್ಲಿ ಭಾರತೀಯ ನಾಯಕನೊಬ್ಬ ಗಳಿಸಿದ ಅತಿ ಹೆಚ್ಚು ರನ್‌ಗಳ ದಾಖಲೆ ಮೊಹಮ್ಮದ್ ಅಜರುದ್ದೀನ್ ಹೆಸರಲ್ಲಿದೆ. ಅಜರುದ್ದೀನ್ 1990-1999ರ ನಡುವೆ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಾಯಕರಾಗಿ 32 ಪಂದ್ಯಗಳಲ್ಲಿ 954 ರನ್ ಗಳಿಸಿದ್ದರು. ಗಿಲ್ ಜುಲೈ 2025ರಲ್ಲಿ ಎಜ್‌ಬಾಸ್ಟನ್‌ನಲ್ಲಿ ಭಾರತದ ನಾಯಕರಾಗಿ ತಮ್ಮ ಮೊದಲ ಪಂದ್ಯವನ್ನು ಆಡಿದ್ದರು. ಆ ಟೆಸ್ಟ್ ಪಂದ್ಯದ ಎರಡು ಇನ್ನಿಂಗ್ಸ್‌ಗಳಲ್ಲಿ ಅವರು 269 ಮತ್ತು 161 ರನ್ ಗಳಿಸಿದ್ದರು. ವಿಶ್ವ ಮಟ್ಟದಲ್ಲಿ, ಒಂದೇ ಮೈದಾನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಾಯಕನ ದಾಖಲೆ ಆಸ್ಟ್ರೇಲಿಯಾದ ಮಾಜಿ ನಾಯಕ ಅಲನ್ ಬಾರ್ಡರ್ ಹೆಸರಲ್ಲಿದೆ. ಅವರು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಾಯಕರಾಗಿ 48 ಪಂದ್ಯಗಳಲ್ಲಿ 1,670 ರನ್ ಗಳಿಸಿದ್ದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಟೀಮ್ ಇಂಡಿಯಾ
ಶುಭಮನ್ ಗಿಲ್
ವಿರಾಟ್ ಕೊಹ್ಲಿ

Latest Videos
Recommended Stories
Recommended image1
ಏಕದಿನ ಪಂದ್ಯದಲ್ಲಿ ಗಮನ ಸೆಳೆದ ಧೋನಿ ಕಿವಿ? ಕೂಲ್‌ ಕ್ಯಾಪ್ಟನ್‌ ಹಾಕಿಕೊಂಡಿದ್ದ ಡಿವೈಸ್‌ ಯಾವ್ದು?
Recommended image2
ಗಂಭೀರ್ ವಿರುದ್ಧ ತಿರುಗಿಬಿದ್ದ ಅಗರ್ಕರ್? ಭಾರತ ತಂಡದೊಳಗಿನ ಭಿನ್ನಾಭಿಪ್ರಾಯ ಬಯಲು ಮಾಡಿದ ದಿನೇಶ್ ಕಾರ್ತಿಕ್
Recommended image3
ವಿರಾಟ್ ಕೊಹ್ಲಿ ಜೊತೆ ಗಂಭೀರ್ ಮಾತೇ ಆಡಲಿಲ್ಲ! ಕೊಹ್ಲಿ-ಗಂಭೀರ್ ಕೋಲ್ಡ್ ವಾರ್ ಮತ್ತೆ ಶುರು?
Related Stories
Recommended image1
ಟಿ20 ಸೋಲಿನ ಕಹಿ ಮರೆತ ಭಾರತ; ಮೊದಲ ಏಕದಿನದಲ್ಲಿ ಇಂಗ್ಲೆಂಡ್‌ಗೆ ತಿರುಗೇಟು ಕೊಟ್ಟ ಟೀಂ ಇಂಡಿಯಾ
Recommended image2
ವಿರಾಟ್ ಕೊಹ್ಲಿ ಜೊತೆ ಗಂಭೀರ್ ಮಾತೇ ಆಡಲಿಲ್ಲ! ಕೊಹ್ಲಿ-ಗಂಭೀರ್ ಕೋಲ್ಡ್ ವಾರ್ ಮತ್ತೆ ಶುರು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved