MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಅಹಮದಾಬಾದ್ ವಿಮಾನ ದುರಂತ: 13 ತಿಂಗಳ ಬಳಿಕ ಸುಪ್ರೀಂಗೆ AAIBಯಿಂದ ಅಫಿಡವಿಟ್ ಸಲ್ಲಿಕೆ

ಅಹಮದಾಬಾದ್ ವಿಮಾನ ದುರಂತ: 13 ತಿಂಗಳ ಬಳಿಕ ಸುಪ್ರೀಂಗೆ AAIBಯಿಂದ ಅಫಿಡವಿಟ್ ಸಲ್ಲಿಕೆ

2025ರ ಅಹಮದಾಬಾದ್ ಏರ್ ಇಂಡಿಯಾ ವಿಮಾನ ಪತನದ ತನಿಖೆ ಮುಂದುವರೆದಿದ್ದು, ಕಾಕ್‌ಪಿಟ್ ಧ್ವನಿ ರೆಕಾರ್ಡಿಂಗ್ (CVR) ಅನ್ನು ಬಹಿರಂಗಪಡಿಸಲು ಸಾಧ್ಯವಿಲ್ಲವೆಂದು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

2 Min read
Author : Mahmad Rafik
Published : Jul 15 2026, 01:53 PM IST
Share this Photo Gallery
  • FB
  • TW
  • Linkdin
  • Whatsapp
16
ಏರ್ ಇಂಡಿಯಾ ವಿಮಾನ ಪತನ
Image Credit : ANI

ಏರ್ ಇಂಡಿಯಾ ವಿಮಾನ ಪತನ

2025 ಜೂನ್ 12ರಂದು ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಪತನ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ. ಕಾಕ್‌ಪಿಟ್ ಧ್ವನಿ ರೆಕಾರ್ಡಿಂಗ್ (CVR) ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
AAIB ಮಾಹಿತಿ
Image Credit : Asianet News

AAIB ಮಾಹಿತಿ

ಇದೇ ವರ್ಷ ಅಕ್ಟೋಬರ್‌ ಅಂತ್ಯದೊಳಗೆ ವಿಮಾನ ಪತನದ ಕುರಿತ ಕರಡು ಅಂತಿಮ ವರದಿ ಸಿದ್ದಪಡಿಸುವ ನಿರೀಕ್ಷೆಗಳಿವೆ ಎಂದು AAIB ಮಾಹಿತಿ ನೀಡಿದೆ. AAIB ಸಲ್ಲಿಕೆ ಮಾಡಿರುವ ಅಫಿಡವಿಟ್‌ನಲ್ಲಿ ಹಲವು ಮಾಹಿತಿಗಳನ್ನು ಒಳಗೊಂಡಿದೆ. 2025 ರ ವಿಮಾನ ಅಪಘಾತ ತನಿಖಾ ನಿಯಮಗಳ ನಿಯಮ 17(5) ರ ಅಡಿಯಲ್ಲಿ ಎಲ್ಲಾ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಆಗುವುದಿಲ್ಲ ನ್ಯಾಯಾಲಯಕ್ಕೆ AAIB ಹೇಳಿದೆ.

Related Articles

Related image1
ಬೆಂಗಳೂರಿಗೆ ಹೊರಟ ಏರ್ ಇಂಡಿಯಾ ವಿಮಾನದಲ್ಲಿ ದೋಷ, ಪ್ಯಾನ್ ಪ್ಯಾನ್ ಕರೆ ನೀಡಿದ ಪೈಲೆಟ್
Related image2
ಅಹಮದಾಬಾದ್‌ ಏರ್ ಇಂಡಿಯಾ ದುರಂತ, ಕುಳಿತ ಸ್ಥಿತಿಯಲ್ಲೇ ಏರ್ ಇಂಡಿಯಾ ಕ್ಯಾಪ್ಟನ್ ಶವ ಇತ್ತು: ಪ್ರತ್ಯಕ್ಷದರ್ಶಿ ಹೇಳಿಕೆ
36
ಅಫಿಡವಿಟ್‌ನಲ್ಲಿ ಏನೆಲ್ಲಾ ಇರುತ್ತೆ?
Image Credit : Asianet News

ಅಫಿಡವಿಟ್‌ನಲ್ಲಿ ಏನೆಲ್ಲಾ ಇರುತ್ತೆ?

  • ಕಾಕ್‌ಪಿಟ್ ಧ್ವನಿ ರೆಕಾರ್ಡಿಂಗ್ (CVR)
  • ವಿಮಾನದೊಳಗಿನ ವಿಡಿಯೋ/ಆಡಿಯೊ ರೆಕಾರ್ಡಿಂಗ್‌ಗಳು,
  • ತನಿಖೆಯ ಸಮಯದಲ್ಲಿ ಸಾಕ್ಷಿಗಳ ಹೇಳಿಕೆಗಳು
  • ಪೈಲಟ್, ವಿಮಾನಯಾನ ಸಂಸ್ಥೆ ಮತ್ತು ಇತರ ಸಿಬ್ಬಂದಿಗಳ ನಡುವಿನ ಸಂಭಾಷಣೆ
  • ವಾಯು ಸಂಚಾರ ನಿಯಂತ್ರಣ (ATC) ರೆಕಾರ್ಡಿಂಗ್‌ಗಳು
  • ಮೃತರು ಮತ್ತು ಗಾಯಗೊಂಡವರ ವೈಯಕ್ತಿಕ ಮತ್ತು ವೈದ್ಯಕೀಯ ಮಾಹಿತಿ
46
ರೆಕಾರ್ಡಿಂಗ್‌ ಏಕೆ ರಿವೀಲ್ ಮಾಡಲ್ಲ?
Image Credit : Asianet News

ರೆಕಾರ್ಡಿಂಗ್‌ ಏಕೆ ರಿವೀಲ್ ಮಾಡಲ್ಲ?

  • ತನಿಖೆಯನ್ನು ದುರ್ಬಲಗೊಳಿಸುವ ಸಾಧ್ಯತೆ
  • ಸಾಕ್ಷಿ ಅಥವಾ ವ್ಯಕ್ತಿಗಳ ಮಾಹಿತಿ ಬಹಿರಂಗಗೊಂಡ್ರೆ ಭಯದ ಆತಂಕ
  • ವಿಮಾನ ಸುರಕ್ಷತೆ

ಈ ಎಲ್ಲಾ ಅಂಶಗಳು 2025 ರ ವಿಮಾನ ಅಪಘಾತ ತನಿಖಾ ನಿಯಮಗಳ ನಿಯಮ 17(5) ರ ಅಡಿಯಲ್ಲಿ ಬರುತ್ತವೆ. ಹಾಗೆಯೇ ಈ ರೀತಿಯ ತನಿಖೆ ಭಾರತೀಯ ನಿಯಮಗಳ ಅಡಿಯಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ICAO) ಅನುಬಂಧ -13 ಮತ್ತು ಚಿಕಾಗೋ ಸಮಾವೇಶದ ಅನುಸಾರವಾಗಿಯೂ ನಡೆಸಲಾಗುತ್ತದೆ ಎಂದು AAIB ಹೇಳಿದೆ

56
ಈಗ ಅಫಿಡವಿಟ್ ಸಲ್ಲಿಕೆ ಮಾಡಿದ್ಯಾಕೆ?
Image Credit : Getty

ಈಗ ಅಫಿಡವಿಟ್ ಸಲ್ಲಿಕೆ ಮಾಡಿದ್ಯಾಕೆ?

ಅಫಿಡವಿಟ್ ಪ್ರಕಾರ, ಉಳಿದ ತನಿಖೆ ಮುಂದಿನ ಆರು ವಾರಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ತನಿಖಾ ವರದಿ ಬಳಿಕ ಎಲ್ಲಾ ವಿಷಯಗಳನ್ನು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಲಾಗುತ್ತಿದೆ. ಅಹಮದಾಬಾದ್ ವಿಮಾನ ಪತನದಲ್ಲಿ ಮೃತರಾದ ಪೈಲಟ್ ಕ್ಯಾಪ್ಟನ್ ಸುಮಿತ್ ಸಬರ್ವಾಲ್ ತಂದೆ ಪುಷ್ಪರಾಜ್, ಭಾರತೀಯ ಪೈಲಟ್‌ಗಳ ಒಕ್ಕೂಟ ಮತ್ತು ಸೇಫ್ಟಿ ಮ್ಯಾಟರ್ಸ್ ಫೌಂಡೇಶನ್ ಎಂಬ ಎನ್‌ಜಿಒ ಸಲ್ಲಿಸಿದ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ಸುಪ್ರೀಂ ಕೋರ್ಟ್‌ನಲ್ಲಿ AAIB ಅಫಿಡವಿಟ್ ಸಲ್ಲಿಸಲಾಗಿದೆ.

66
ವಿಮಾನ ಪತನದಲ್ಲಿ ಏನಾಯಿತು?
Image Credit : Getty

ವಿಮಾನ ಪತನದಲ್ಲಿ ಏನಾಯಿತು?

ಜೂನ್ 12, 2025 ರಂದು ಏರ್ ಇಂಡಿಯಾ ವಿಮಾನ AI-171 ವಿಮಾನ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಮೇಲೆ ಅಪ್ಪಳಿಸಿತ್ತು. ವಿಮಾನದಲ್ಲಿ 242 ಜನರ ಪೈಕಿ 241 ಮಂದಿ ಸಾವನ್ನಪ್ಪಿದ್ದರು. ಹಾಸ್ಟೆಲ್‌ನಲ್ಲಿದ್ದ 19 ಜನರು ಸೇರಿದಂತೆ ಒಟ್ಟು 260 ಜನರು ಸಾವನ್ನಪ್ಪಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಏರ್ ಇಂಡಿಯಾ
ವಿಮಾನ ಅಪಘಾತ
ಅಹಮದಾಬಾದ್
ಸುಪ್ರೀಂ ಕೋರ್ಟ್

Latest Videos
Recommended Stories
Recommended image1
ಪತಿ ಅಕ್ರಮ ಸಂಬಂಧ ಪತ್ತೆಗೆ ಶಾಲೆಯಲ್ಲಿ ಹಿಡನ್ ಕ್ಯಾಮೆರಾ ಇಟ್ಟ ಪತ್ನಿ, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಶಿಕ್ಷಕ
Recommended image2
ಮದ್ಯಪ್ರಿಯರಿಗೆ ಗುಡ್ ನ್ಯೂಸ್, ಕೇಂದ್ರದ ಟ್ರೇಡ್ ಡೀಲ್‌ನಿಂದ ಯುಕೆ ವಿಸ್ಕಿ ಕಡಿಮೆ ಬೆಲೆಯಲ್ಲಿ ಭಾರತದಲ್ಲಿ ಲಭ್ಯ
Recommended image3
ವಿದ್ಯಾರ್ಥಿನಿ ದೂರಿನಿಂದ ಬದಲಾಯ್ತು ಭಾರತೀಯ ರೈಲ್ವೆ IRCTC ವೆಬ್‌ಸೈಟ್, ಪ್ರತಿ ನಿಮಿಷಕ್ಕೆ 1.5 ಲಕ್ಷ ಬುಕಿಂಗ್!
Related Stories
Recommended image1
ಬೆಂಗಳೂರಿಗೆ ಹೊರಟ ಏರ್ ಇಂಡಿಯಾ ವಿಮಾನದಲ್ಲಿ ದೋಷ, ಪ್ಯಾನ್ ಪ್ಯಾನ್ ಕರೆ ನೀಡಿದ ಪೈಲೆಟ್
Recommended image2
ಅಹಮದಾಬಾದ್‌ ಏರ್ ಇಂಡಿಯಾ ದುರಂತ, ಕುಳಿತ ಸ್ಥಿತಿಯಲ್ಲೇ ಏರ್ ಇಂಡಿಯಾ ಕ್ಯಾಪ್ಟನ್ ಶವ ಇತ್ತು: ಪ್ರತ್ಯಕ್ಷದರ್ಶಿ ಹೇಳಿಕೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved