MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಗಂಭೀರ್ ವಿರುದ್ಧ ತಿರುಗಿಬಿದ್ದ ಅಗರ್ಕರ್? ಭಾರತ ತಂಡದೊಳಗಿನ ಭಿನ್ನಾಭಿಪ್ರಾಯ ಬಯಲು ಮಾಡಿದ ದಿನೇಶ್ ಕಾರ್ತಿಕ್

ಗಂಭೀರ್ ವಿರುದ್ಧ ತಿರುಗಿಬಿದ್ದ ಅಗರ್ಕರ್? ಭಾರತ ತಂಡದೊಳಗಿನ ಭಿನ್ನಾಭಿಪ್ರಾಯ ಬಯಲು ಮಾಡಿದ ದಿನೇಶ್ ಕಾರ್ತಿಕ್

ನವದೆಹಲಿ: ಭಾರತ ತಂಡದ ಹೆಡ್‌ ಕೋಚ್ ಗೌತಮ್ ಗಂಭೀರ್ ಹಾಗೂ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ನಡುವೆ ಬಿರುಕು ಬಿಟ್ಟಿದ್ದು, ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂದು ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.

2 Min read
Author : Naveen Kodase
Published : Jul 15 2026, 12:26 PM IST
Share this Photo Gallery
  • FB
  • TW
  • Linkdin
  • Whatsapp
16
ಕೊಹ್ಲಿ ಗಂಬೀರ್ ಮನಸ್ತಾಪ ಬೆನ್ನಲ್ಲೇ ಹೊಸತೊಂದು ವಿವಾದ ಬೆಳಕಿಗೆ
Image Credit : Getty

ಕೊಹ್ಲಿ-ಗಂಬೀರ್ ಮನಸ್ತಾಪ ಬೆನ್ನಲ್ಲೇ ಹೊಸತೊಂದು ವಿವಾದ ಬೆಳಕಿಗೆ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ ಆರಂಭಕ್ಕೂ ಮೊದಲು ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ಮನಸ್ತಾಪ ಉಂಟಾಗಿದೆ ಎನ್ನುವ ಚರ್ಚೆ ಜೋರಾಗಿತ್ತು. ಅಭ್ಯಾಸದ ವೇಳೆ ಕೊಹ್ಲಿ ಜತೆ ಗಂಭೀರ್ ಮಾತಾಡಿರಲಿಲ್ಲ. ಇದೆಲ್ಲದರ ನಡುವೆ ಹೊಸತೊಂದು ವಿವಾದ ಬೆಳಕಿಗೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಅಗರ್ಕರ್ ಜೊತೆ ಗಂಭೀರ್‌ಗೆ ಭಿನ್ನಾಭಿಪ್ರಾಯ?
Image Credit : Getty

ಅಗರ್ಕರ್ ಜೊತೆ ಗಂಭೀರ್‌ಗೆ ಭಿನ್ನಾಭಿಪ್ರಾಯ?

ಭಾರತ ಕ್ರಿಕೆಟ್‌ ತಂಡದ ಆಟಗಾರರ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಕೂಡಾ ಮಾತನಾಡಿದ್ದು, ಇಬ್ಬರ ನಡುವಿನ ತಿಕ್ಕಾಟ ತಂಡಕ್ಕೆ ಒಳ್ಳೆಯದಲ್ಲ ಎಂದಿದ್ದಾರೆ.

Related Articles

Related image1
ಲಾರ್ಡ್ಸ್‌ನಲ್ಲಿ ಚರಿತ್ರೆ ಸೃಷ್ಟಿಸಿದ ಮಹಿಳಾ ಟೀಂ ಇಂಡಿಯಾ! ಮೂರೂವರೆ ದಿನದಲ್ಲಿ ಭಾರತಕ್ಕೆ ಶರಣಾದ ಆಂಗ್ಲರು
Related image2
ಟಿ20 ಸೋಲಿನ ಕಹಿ ಮರೆತ ಭಾರತ; ಮೊದಲ ಏಕದಿನದಲ್ಲಿ ಇಂಗ್ಲೆಂಡ್‌ಗೆ ತಿರುಗೇಟು ಕೊಟ್ಟ ಟೀಂ ಇಂಡಿಯಾ
36
ಹೊಸ ಬಾಂಬ್ ಸಿಡಿಸಿದ ದಿನೇಶ್ ಕಾರ್ತಿಕ್
Image Credit : Social Media

ಹೊಸ ಬಾಂಬ್ ಸಿಡಿಸಿದ ದಿನೇಶ್ ಕಾರ್ತಿಕ್

ಸಂದರ್ಶನದಲ್ಲಿ ಮಾತನಾಡಿದ ಕಾರ್ತಿಕ್‌, ‘ಭಾರತ ತಂಡದ ಆಡಳಿತ ಮಂಡಳಿ ಈ ಸಮಸ್ಯೆಯನ್ನು ಶೀಘ್ರವೇ ಸರಿಪಡಿಸಿಕೊಳ್ಳಬೇಕು. ದೀರ್ಘಕಾಲೀನ ಯೋಜನೆ ಹೊಂದಿರುವ ಆಯ್ಕೆಗಾರ ಹಾಗೂ ಆಡುವ ಪ್ರತಿಯೊಂದು ಪಂದ್ಯವನ್ನೂ ಗೆಲ್ಲಲೇಬೇಕು ಎಂದು ಬಯಸುವ ಕೋಚ್ ನಡುವೆ ತಿಕ್ಕಾಟ ನಡೆಯುತ್ತಿರುವುದನ್ನು ನಾನು ಕಾಣುತ್ತಿದ್ದೇನೆ. ಇದೇ ಕಾರಣಕ್ಕೆ ನಮ್ಮ ಕಣ್ಣ ಮುಂದೆಯೇ ಒಂದು ರೀತಿಯ ಗೊಂದಲ ಸೃಷ್ಟಿಯಾಗಿದೆ. ಇದು ಆಟಗಾರರಿಗೆ ಖಂಡಿತವಾಗಿಯೂ ಸೂಕ್ತವಲ್ಲ. ಭಾರತವು ಈ ಪರಿಸ್ಥಿತಿಯ ಬಗ್ಗೆ ಅರಿವು ಮೂಡಿಸಿ ಆದಷ್ಟು ಬೇಗ ಅದನ್ನು ಸರಿಪಡಿಸಿಕೊಳ್ಳಬೇಕಾದ ಅಗತ್ಯವಿದೆ’ ಎಂದು ಹೇಳಿದ್ದಾರೆ.

46
ಟೀಮ್ ಸೆಲೆಕ್ಷನ್ ವಿಚಾರದಲ್ಲಿ ನೆಟ್ಟಿಗರ ಟೀಕೆ
Image Credit : stockPhoto

ಟೀಮ್ ಸೆಲೆಕ್ಷನ್ ವಿಚಾರದಲ್ಲಿ ನೆಟ್ಟಿಗರ ಟೀಕೆ

ಭಾರತ ತಂಡವು ಇತ್ತೀಚೆಗಷ್ಟೇ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಐರ್ಲೆಂಡ್ ಎದುರು 2-0 ಹಾಗೂ ಇಂಗ್ಲೆಂಡ್ ಎದುರು 4-0 ಅಂತರದಲ್ಲಿ ಟಿ20 ಸರಣಿ ವೈಟ್‌ ವಾಷ್ ಅನುಭವಿಸಿತ್ತು. ಇದರ ಬೆನ್ನಲ್ಲೇ ಗೌತಮ್ ಗಂಭೀರ್ ಅವರ ಕೋಚಿಂಗ್ ಪ್ರದರ್ಶನದ ಬಗ್ಗೆ ತೀವ್ರ ಪ್ರಶ್ನೆಗಳು ಎದ್ದಿವೆ. ಅದರಲ್ಲೂ ಮ್ಯಾಚ್ ವಿನ್ನರ್ ಸಂಜು ಸ್ಯಾಮ್ಸನ್ ಅವರನ್ನು ಕಡೆಗಣಿಸಿ ವೈಭವ್ ಸೂರ್ಯವಂಶಿಗೆ ಇಂಗ್ಲೆಂಡ್ ಎದುರಿನ ಸರಣಿಯಲ್ಲಿ ಮಣೆ ಹಾಕಿದ್ದರ ಬಗ್ಗೆಯೂ ಸಾಕಷ್ಟು ಚರ್ಚೆ ಹಾಗೂ ಟೀಕೆಗಳು ವ್ಯಕ್ತವಾಗಿವೆ.

56
ಟೀಮ್ ಪ್ಲೇಯಿಂಗ್ ಇಲೆವನ್ ಸೆಲೆಕ್ಷನ್ ವಿಚಾರದಲ್ಲಿ ಗೊಂದಲ
Image Credit : Getty

ಟೀಮ್ ಪ್ಲೇಯಿಂಗ್ ಇಲೆವನ್ ಸೆಲೆಕ್ಷನ್ ವಿಚಾರದಲ್ಲಿ ಗೊಂದಲ

2026ರ ಐಪಿಎಲ್ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ, ತಮ್ಮ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಹೀಗಾಗಿ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರಿನ ಟಿ20 ಸರಣಿಗೆ ವೈಭವ್ ಅವರನ್ನು ಆಯ್ಕೆ ಮಾಡಲಾಗಿತ್ತು. ಇನ್ನು ಸಂಜು ಸ್ಯಾಮ್ಸನ್ ಐರ್ಲೆಂಡ್ ಎದುರಿನ ಎರಡು ಹಾಗೂ ಇಂಗ್ಲೆಂಡ್ ಎದುರಿನ ಒಂದು ವೈಫಲ್ಯಕ್ಕಾಗಿ ಅವರನ್ನು ಕೈಬಿಟ್ಟು ವೈಭವ್ ಸೂರ್ಯವಂಶಿಗೆ ಅವಕಾಶ ನೀಡಲಾಗಿತ್ತು. ಇನ್ನು ಮೂರು ಪಂದ್ಯಗಳ ಬಳಿಕ ವೈಭವ್ ಸೂರ್ಯವಂಶಿಯನ್ನು ಕೈಬಿಟ್ಟು ಐದನೇ ಟಿ20 ಪಂದ್ಯಕ್ಕೆ ಮತ್ತೆ ಸಂಜು ಸ್ಯಾಮ್ಸನ್‌ಗೆ ಮಣೆಹಾಕಲಾಗಿತ್ತು.

66
ಕಿವಿಮಾತು ಹೇಳಿದ ಡಿಕೆ
Image Credit : Getty

ಕಿವಿಮಾತು ಹೇಳಿದ ಡಿಕೆ

ಒಂದು ಕಡೆ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ದೀರ್ಘಕಾಲದ ಯೋಜನೆ ಹೊಂದಿದ್ದಾರೆ. ಆದರೆ ಕೋಚ್ ಗಂಭೀರ್ ಪ್ರತಿ ಮ್ಯಾಚ್ ಗೆಲ್ಲಬೇಕು ಎಂದು ತಂಡದಲ್ಲಿ ಬದಲಾವಣೆ ಮಾಡುತ್ತಾ ಸಾಗುತ್ತಿದ್ದಾರೆ. ಈ ಬಗ್ಗೆ ಆಯ್ಕೆ ಸಮಿತಿ ಹಾಗೂ ಕೋಚ್ ನಡುವೆ ಸಮನ್ವಯದ ಕೊರತೆ ಕಾಣುತ್ತಿದೆ. ಆದಷ್ಟು ಬೇಗ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಡಿಕೆ ಸಲಹೆ ನೀಡಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಟೀಮ್ ಇಂಡಿಯಾ
ಗೌತಮ್ ಗಂಭೀರ್
ಅಜಿತ್ ಅಗರ್ಕರ್

Latest Videos
Recommended Stories
Recommended image1
ವಿರಾಟ್ ಕೊಹ್ಲಿ ಜೊತೆ ಗಂಭೀರ್ ಮಾತೇ ಆಡಲಿಲ್ಲ! ಕೊಹ್ಲಿ-ಗಂಭೀರ್ ಕೋಲ್ಡ್ ವಾರ್ ಮತ್ತೆ ಶುರು?
Recommended image2
ಇಂಗ್ಲೆಂಡ್ ವಿರುದ್ಧ ರೋಹಿತ್-ಕೊಹ್ಲಿ ವೈಫಲ್ಯ; ಕಮ್‌ಬ್ಯಾಕ್ ಪಂದ್ಯದಲ್ಲಿ ರೋ-ಕೋ ಜೋಡಿ ಫೇಲ್
Recommended image3
ಟಿ20 ಸೋಲಿನ ಕಹಿ ಮರೆತ ಭಾರತ; ಮೊದಲ ಏಕದಿನದಲ್ಲಿ ಇಂಗ್ಲೆಂಡ್‌ಗೆ ತಿರುಗೇಟು ಕೊಟ್ಟ ಟೀಂ ಇಂಡಿಯಾ
Related Stories
Recommended image1
ಲಾರ್ಡ್ಸ್‌ನಲ್ಲಿ ಚರಿತ್ರೆ ಸೃಷ್ಟಿಸಿದ ಮಹಿಳಾ ಟೀಂ ಇಂಡಿಯಾ! ಮೂರೂವರೆ ದಿನದಲ್ಲಿ ಭಾರತಕ್ಕೆ ಶರಣಾದ ಆಂಗ್ಲರು
Recommended image2
ಟಿ20 ಸೋಲಿನ ಕಹಿ ಮರೆತ ಭಾರತ; ಮೊದಲ ಏಕದಿನದಲ್ಲಿ ಇಂಗ್ಲೆಂಡ್‌ಗೆ ತಿರುಗೇಟು ಕೊಟ್ಟ ಟೀಂ ಇಂಡಿಯಾ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved