ಯುವತಿ ಬ್ಲಿಂಕಿಟ್ ಮೂಲಕ ಕೆಲ ವಸ್ತುಗಳನ್ನು ಆರ್ಡರ್ ಮಾಡಿದ್ದಾರೆ. ಇದರ ಜೊತೆಗೆ ಅತ್ಯಂತ ರಹಸ್ಯ ಫೋಟೋಗಳು ಅನ್ನೋ ಎನ್‌ವಲಪ್ ಕವರ್ ಇದೇ ಆರ್ಡರ್ ಒಳಗಿತ್ತು. ಆತಂಕದಿಂದಲೇ ಯುವತಿ ಈ ಕವರ್ ತೆರೆದಾಗ ಅಚ್ಚರಿ ಕಾದಿತ್ತು.

ಗುರುಗ್ರಾಂ (ಜು.15) ಕಾರ್ಪೋರೇಟ್ ಉದ್ಯೋಗದಲ್ಲಿದ್ದ ಯುವತಿ ಬ್ಲಿಂಕಿಟ್ ಮೂಲಕ ಕೆಲ ವಸ್ತುಗಳನ್ನು ಆರ್ಡರ್ ಮಾಡಿದೆ. ಕೆಲ ಹೊತ್ತಲ್ಲೇ ತಲುಪಿದ ಆರ್ಡರ್ ಪ್ಯಾಕ್ ತೆರೆದಾಗ ಆತಂಕ ತೀವ್ರಗೊಂಡಿತ್ತು. ತಾನು ಆರ್ಡರ್ ಮಾಡಿದ ವಸ್ತುಗಳ ಜೊತೆಗೆ ಎನ್‌ವಲಪ್ ಕವರ್ ಒಂದು ಪತ್ತೆಯಾಗಿತ್ತು. ಈ ಕವರ್ ಮೇಲೆ ಕೈಬರಹದಲ್ಲಿ ಕಾನ್ಫಿಡೆನ್ಶಿಯಲ್ ಫೋಟೋಸ್ ಎಂದು ಬರೆಯಲಾಗಿತ್ತು. ಯುವತಿ ಆತಂಕಗೊಂಡಿದ್ದಾಳೆ. ತನಗೆ ಗೊತ್ತಿಲ್ಲದಂತೆ ಹೊಟೆಲ್ ಅಥವಾ ಇತರೆಡೆ ಫೋಟೋ ಸೆರೆ ಹಿಡಿದು ಬ್ಲಾಕ್‌ಮೇಲ್ ಮಾಡುತ್ತಿದ್ದಾರಾ ಅನ್ನೋ ಆತಂಕ ಎದುರಾಗಿತ್ತು. ಆತಂಕ, ಭಯದಿಂದಲೇ ಯುವತಿ ಎನ್ವಲಪ್ ಕವರ್ ತೆರೆದಾಗ ಯುವತಿಗೆ ಅಚ್ಚರಿ ಕಾದಿತ್ತು.

ಬ್ಲಿಂಕಿಟ್ ಪಾರ್ಸೆಲ್ ತೆರೆದಾಗ...

ಗುರುಗ್ರಾಂನಲ್ಲಿ ಕಾರ್ಪೋರೇಟ್ ಉದ್ಯೋಗಿಯಾಗಿರುವ ಯುವತಿ ಇದೀಗ ತನ್ನ ಆರ್ಡರ್ ಕುರಿತ ಘಟನೆ, ಆತಂಕವನ್ನು ವಿಡಿಯೋ ಮೂಲಕ ಬಿಚ್ಚಿಟ್ಟಿದ್ದಾಳೆ. ಕೇಕ್ ಸೇರಿದಂತೆ ಕೆಲ ದಿನಸಿ ವಸ್ತುಗಳಿಗಾಗಿ ಯುವತಿ ಬ್ಲಿಂಕಿಟ್ ಆರ್ಡರ್ ಮಾಡಿದ್ದಾಳೆ. ಎಂದಿಂತೆ ಬ್ಲಿಂಕಿಟ್ ಕೆಲವೇ ನಿಮಿಷಗಳಲ್ಲಿ ಆರ್ಡರ್ ಯುವತಿಯ ಮನೆಗೆ ತಲುಪಿಸಿದೆ. ಕಾರ್ಪೋರೇಟ್ ಕೆಲಸದ ನಡುವೆ ಕೇಕ್ ತಿಂದು ಪ್ರಾಜೆಕ್ಟ್ ಮುಂದುವರಿಸಲು ನಿರ್ಧರಿಸಿದ್ದ ಯುವತಿಗೆ ತನ್ನ ಬ್ಲಿಂಕಿಟ್ ಪಾರ್ಸೆಲ್ ತೆರೆದಿದಿದ್ದಾಳೆ.

ಕಾನ್ಫಿಡೆನ್ಶಿಯಲ್ ಫೋಟೋಸ್

ದಿನಸಿ ವಸ್ತುಗಳನ್ನು ಪಾರ್ಸೆಲ್ ಕವರ್‌ನಿಂದ ಹೊರತೆಗೆದ ಯುವತಿ ಇನ್ನೇನು ವಸ್ತುಗಳನ್ನು ಜೋಡಿಸಡಲು ಹೊರಟಾಗ ಪಾರ್ಸೆಲ್ ಕವರ್ ಒಳಗೆ ಮತ್ತೇನು ಇರುವುದು ಪತ್ತೆಯಾಗಿದೆ. ಸರಿ ಎಂದು ನೋಡಿದರೆ ಒಂದು ಎನ್‌ವಲಪ್ ಕವರ್. ಸರಿ ಏನಿದು ಎಂದು ಈ ಎನ್ವಲಪ್ ಕವರ್ ಹೊರತೆದಾಗ ಆತಂಕ ಹೆಚ್ಚಾಗಿದೆ. ಕಾರಣ ಈ ಎನ್ವಲಪ್ ಕವರ್ ಮೇಲೆ ಕಾನ್ಫಿಡೆನ್ಶಿಯಲ್ ಫೋಟೋಸ್ ಎಂದು ಬರೆಯಲಾಗಿತ್ತು.

ಏನಿತ್ತು ಕವರ್‌ನಲ್ಲಿ

ಯುವತಿ ಆತಂಕಗೊಂಡಿದ್ದಾಳೆ. ಕಾರಣ ತನ್ನ ರಹಸ್ಯ ಫೋಟೋಗಳನ್ನು ತನಗೆ ಅರವಿಲ್ಲದಂತೆ ಯಾರಾದರೂ ತೆಗೆದಾರಾ? ಕಂಪನಿಯ ಪಾರ್ಟಿ, ಉದ್ಯೋಗ ಸಂಬಂಧ ತೆರಳುವಾಗ ಎಲ್ಲಾದರೂ ಗೌಪ್ಯವಾಗಿ ಫೋಟೋ ತೆಗೆದಿದ್ದಾರ? ತನ್ನ ಫೋಟೋಗಳನ್ನು ಪ್ರಿಂಟ್ ಮಾಡಿ ಕಳುಹಿಸಿ ಬ್ಲಾಕ್‌ಮೇಲ್ ಮಾಡುತ್ತಾರಾ. ಏನು ಮಾಡಲಿ ಎಂದೆಲ್ಲಾ ಒಂದು ಕ್ಷಣದಲ್ಲಿ ಯೋಚಿಸಿದ್ದಾಳೆ. ಆತಂಕದಿಂದಲೇ ಯುವತಿ ಎನ್ವಲಪ್ ಕವರ್ ಓಪನ್ ಮಾಡುವ ನಿರ್ಧಾರ ಮಾಡಿದ್ದಾಳೆ. ಕವರ್ ತೆರೆದಾಗ ಮೊದಲ ಫೋಟೋ ಹಳೇ ಹಾಗೂ ಕ್ಲೀನ್ ಮಾಡದ ಸಿಂಕ್ ಹಾಗೂ ನಲ್ಲಿ ಫೋಟೋ, ಮತ್ತೊಂದು ಶುಚಿ ಮಾಡದ ದಿನಸಿ ವಸ್ತುಗಳಿಡುವ ಜಾಗದ ಫೋಟೋ ಇತ್ತು. ಮೂರನೇ ಹಾಗೂ ಕೊನೆಯದಾಗಿ ಫೋಟೋ ಇರಲಿಲ್ಲ. ಒಂದು ಬರಹವಿತ್ತು.

ಓದಿದಾಗ ಯುವತಿ ನಿರಾಳರಾಗಿದ್ದಾಳೆ. ಕಾರಣ ಇದು ಖಾಸಗಿ ಕಂಪನಿ ಜಾಹೀರಾತು. ನಿಮ್ಮ ಮನೆ ಕ್ಲೀನ್ ಮಾಡದೆ ಅಥವಾ ಹೊಳಪು ಕಳೆದುಕೊಂಡಿದೆಯಾ, ಹಾಗಾದರೇ ನಾವು ನಿಮ್ಮ ಮನೆಯ ಸೌಂದರ್ಯ ಹೆಚ್ಚಿಸಿ ಹೊಸದಾಗಿ ಮಾಡಿಕೊಡುತ್ತೇವೆ ಎಂದಿತ್ತು. ನನ್ನ ಎದೆಬಡಿತ ಹೆಚ್ಚಿಸಿದ ಈ ಜಾಹೀರಾತು ಬೇಕಿತ್ತಾ ಎಂದು ಯುವತಿ ಪ್ರಶ್ನಿಸಿದ್ದಾಳೆ. ಬ್ಲಿಂಕಿಟ್ ಜೊತೆ ಸೇರಿ ಜಾಹೀರಾತು ನೀಡಲಾಗಿತ್ತು. ಹಲವರನ್ನು ಬೆಚ್ಚಿ ಬೀಳಿಸಿದೆ. ಯುವತಿಯ ವಿಡಿಯೋ ಇದೀಗ ವೈರಲ್ ಆಗಿದೆ.