MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ವಿರಾಟ್ ಕೊಹ್ಲಿ ಜೊತೆ ಗಂಭೀರ್ ಮಾತೇ ಆಡಲಿಲ್ಲ! ಕೊಹ್ಲಿ-ಗಂಭೀರ್ ಕೋಲ್ಡ್ ವಾರ್ ಮತ್ತೆ ಶುರು?

ವಿರಾಟ್ ಕೊಹ್ಲಿ ಜೊತೆ ಗಂಭೀರ್ ಮಾತೇ ಆಡಲಿಲ್ಲ! ಕೊಹ್ಲಿ-ಗಂಭೀರ್ ಕೋಲ್ಡ್ ವಾರ್ ಮತ್ತೆ ಶುರು?

ಬರ್ಮಿಂಗ್‌ಹ್ಯಾಮ್‌: ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ಹಾಗೂ ಹೆಡ್‌ ಕೋಚ್ ಗೌತಮ್ ಗಂಭೀರ್ ನಡುವೆ ಮತ್ತೆ ಮನಸ್ತಾಪ ಶುರುವಾಗಿದೆಯೇ ಎನ್ನುವ ಚರ್ಚೆ ಕಾಡಲಾರಂಭಿಸಿದೆ. ಭಾರತ-ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ನಡೆದ ಘಟನೆ ಚರ್ಚೆಗೆ ಗ್ರಾಸವಾಗಿದೆ.

1 Min read
Author : Naveen Kodase
Published : Jul 15 2026, 10:50 AM IST
Share this Photo Gallery
  • FB
  • TW
  • Linkdin
  • Whatsapp
16
ಕೊಹ್ಲಿ ಗಂಭೀರ್ ನಡುವೆ ಮತ್ತೆ ಮನಸ್ತಾಪ?
Image Credit : Getty

ಕೊಹ್ಲಿ-ಗಂಭೀರ್ ನಡುವೆ ಮತ್ತೆ ಮನಸ್ತಾಪ?

ಭಾರತ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ತಾರಾ ಬ್ಯಾಟರ್ ವಿರಾಟ್ ಕೊಹ್ಲಿ ನಡುವಿನ ಸಂಬಂಧ ಮತ್ತಷ್ಟು ಹಳಸಿದೆ ಎನ್ನಲಾಗುತ್ತಿದೆ. ಮಂಗಳವಾರ ಇಂಗ್ಲೆಂಡ್‌ ವಿರುದ್ಧ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಇವರಿಬ್ಬರು ಪರಸ್ಪರ ಮಾತುಕತೆ ನಡೆಸದೇ ಇರುವುದು ಚರ್ಚೆಗೆ ಗ್ರಾಸವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಕೊಹ್ಲಿ ಜತೆ ಮಾತನಾಡದ ಗಂಭೀರ್
Image Credit : ANI

ಕೊಹ್ಲಿ ಜತೆ ಮಾತನಾಡದ ಗಂಭೀರ್

ವರದಿಗಳ ಪ್ರಕಾರ, ಅಭ್ಯಾಸದ ವೇಳೆ ತಂಡದ ಇತರ ಸದಸ್ಯರೊಂದಿಗೆ ಗಂಭೀರ್ ಸಾಕಷ್ಟು ಸಮಯ ಚರ್ಚೆಯಲ್ಲಿ ತೊಡಗಿದ್ದರು. ನಾಯಕ ಗಿಲ್‌, ರೋಹಿತ್‌ ಶರ್ಮಾ ಹಾಗೂ ಇತರ ಪ್ರಮುಖರ ಜೊತೆ ಅವರು ಮಾತುಕತೆ ನಡೆಸಿದ್ದಾರೆ. ಆದರೆ ಕೊಹ್ಲಿ ಅಭ್ಯಾಸ ನಡೆಸುತ್ತಿದ್ದರೂ ಅವರ ಬಳಿ ಗಂಭೀರ್‌ ತೆರಳಲಿಲ್ಲ.

Related Articles

Related image1
ಟಿ20 ಸೋಲಿನ ಕಹಿ ಮರೆತ ಭಾರತ; ಮೊದಲ ಏಕದಿನದಲ್ಲಿ ಇಂಗ್ಲೆಂಡ್‌ಗೆ ತಿರುಗೇಟು ಕೊಟ್ಟ ಟೀಂ ಇಂಡಿಯಾ
Related image2
ಇಂಗ್ಲೆಂಡ್ ವಿರುದ್ಧ ರೋಹಿತ್-ಕೊಹ್ಲಿ ವೈಫಲ್ಯ; ಕಮ್‌ಬ್ಯಾಕ್ ಪಂದ್ಯದಲ್ಲಿ ರೋ-ಕೋ ಜೋಡಿ ಫೇಲ್
36
ಬ್ಯಾಟಿಂಗ್ ಕೋಚ್ ಸೀತಾಂಶು ಜತೆ ಕೊಹ್ಲಿ ಪ್ರಾಕ್ಟೀಸ್
Image Credit : Getty

ಬ್ಯಾಟಿಂಗ್ ಕೋಚ್ ಸೀತಾಂಶು ಜತೆ ಕೊಹ್ಲಿ ಪ್ರಾಕ್ಟೀಸ್

ಕೊಹ್ಲಿ ತಮ್ಮ ಬ್ಯಾಟಿಂಗ್ ಅವಧಿಯನ್ನು ಸೀತಾಂಶು ಕೊಟಕ್ ಅವರೊಂದಿಗೆ ಪೂರ್ಣಗೊಳಿಸಿದರು. ಈ ಹಿಂದೆ ಕೂಡಾ ಗಂಭೀರ್‌-ಕೊಹ್ಲಿ ಪಂದ್ಯದ ವೇಳೆ ಮಾತುಕತೆ ನಡೆಸುವುದನ್ನು ತಪ್ಪಿಸಿಕೊಂಡ ಬಗ್ಗೆ ವರದಿಯಾಗಿದ್ದವು.

46
ಮೊದಲ ಪಂದ್ಯದಲ್ಲಿ ರೋ-ಕೋ ಜೋಡಿ ಫೇಲ್
Image Credit : AFP

ಮೊದಲ ಪಂದ್ಯದಲ್ಲಿ ರೋ-ಕೋ ಜೋಡಿ ಫೇಲ್

ಇನ್ನು ಇಂಗ್ಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಜೋಡಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ 21 ಎಸೆತಗಳನ್ನು ಎದುರಿಸಿ 11 ರನ್ ಗಳಿಸಿ ಸ್ಯಾಮ್ ಕರ್ರನ್‌ಗೆ ವಿಕೆಟ್ ಒಪ್ಪಿಸಿದರೆ, ವಿರಾಟ್ ಕೊಹ್ಲಿ ಕೇವಲ ಐದು ರನ್ ಗಳಿಸಿ ಜೋಫ್ರಾ ಆರ್ಚರ್‌ಗೆ ವಿಕೆಟ್ ಒಪ್ಪಿಸಿದರು.

56
ಐಪಿಎಲ್‌ ಬಳಿಕ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಕೊಹ್ಲಿ:
Image Credit : Asianet News

ಐಪಿಎಲ್‌ ಬಳಿಕ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಕೊಹ್ಲಿ:

ಇನ್ನು ವಿರಾಟ್ ಕೊಹ್ಲಿ 2026ರ ಐಪಿಎಲ್ ಟೂರ್ನಿಯ ವೇಳೆಯಲ್ಲಿ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಹೀಗಾಗಿ ಆಫ್ಘಾನಿಸ್ತಾನ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಅಲಭ್ಯರಾಗಿದ್ದರು. ಇದೀಗ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರು ಟಿ20 ಸರಣಿಯಲ್ಲಿ ಮುಖಭಂಗ ಅನುಭವಿಸಿರುವ ಭಾರತ ತಂಡಕ್ಕೆ ಹಿರಿಯರ ಆಗಮನ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

66
2027ರ ಏಕದಿನ ವಿಶ್ವಕಪ್ ಆಡ್ತಾರಾ ರೋ-ಕೋ ಜೋಡಿ? ಗಿಲ್ ಹೇಳಿದ್ದೇನು?
Image Credit : X

2027ರ ಏಕದಿನ ವಿಶ್ವಕಪ್ ಆಡ್ತಾರಾ ರೋ-ಕೋ ಜೋಡಿ? ಗಿಲ್ ಹೇಳಿದ್ದೇನು?

ಅನುಭವಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ, 2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಾರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಶುಭ್‌ಮನ್ ಗಿಲ್, '2027ರ ಏಕದಿನ ವಿಶ್ವಕಪ್‌ನಲ್ಲಿ ಯಾವ ಕಾಂಬಿನೇಷನ್‌ನಲ್ಲಿ ಕಣಕ್ಕಿಳಿದರೆ ಉತ್ತಮ ಎನ್ನುವುದರ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಯಾವ ಆಟಗಾರರು ತಂಡಕ್ಕೆ ನೆರವಾಗುತ್ತಾರೆ?, ಯಾವ ಬೌಲರ್, ಯಾವ ಆಲ್ರೌಂಡರ್ ಹಾಗೂ ಸ್ಪಿನ್ನರ್ ತಂಡದಲ್ಲಿರಬೇಕು ಈ ವಿಚಾರದ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಟೀಮ್ ಇಂಡಿಯಾ
ವಿರಾಟ್ ಕೊಹ್ಲಿ
ಗೌತಮ್ ಗಂಭೀರ್

Latest Videos
Recommended Stories
Recommended image1
ಇಂಗ್ಲೆಂಡ್ ವಿರುದ್ಧ ರೋಹಿತ್-ಕೊಹ್ಲಿ ವೈಫಲ್ಯ; ಕಮ್‌ಬ್ಯಾಕ್ ಪಂದ್ಯದಲ್ಲಿ ರೋ-ಕೋ ಜೋಡಿ ಫೇಲ್
Recommended image2
ಟಿ20 ಸೋಲಿನ ಕಹಿ ಮರೆತ ಭಾರತ; ಮೊದಲ ಏಕದಿನದಲ್ಲಿ ಇಂಗ್ಲೆಂಡ್‌ಗೆ ತಿರುಗೇಟು ಕೊಟ್ಟ ಟೀಂ ಇಂಡಿಯಾ
Recommended image3
ಟಿ20 ಸೋಲಿನಿಂದ ಪಾಠ ಕಲಿಯಿತಾ ಬಿಸಿಸಿಐ? ಸೂರ್ಯಕುಮಾರ್‌ಗೆ ಟೀಂ ಬಾಗಿಲು ಓಪನ್ ಜೊತೆಗೆ 1 ಕಂಡೀಷನ್
Related Stories
Recommended image1
ಟಿ20 ಸೋಲಿನ ಕಹಿ ಮರೆತ ಭಾರತ; ಮೊದಲ ಏಕದಿನದಲ್ಲಿ ಇಂಗ್ಲೆಂಡ್‌ಗೆ ತಿರುಗೇಟು ಕೊಟ್ಟ ಟೀಂ ಇಂಡಿಯಾ
Recommended image2
ಇಂಗ್ಲೆಂಡ್ ವಿರುದ್ಧ ರೋಹಿತ್-ಕೊಹ್ಲಿ ವೈಫಲ್ಯ; ಕಮ್‌ಬ್ಯಾಕ್ ಪಂದ್ಯದಲ್ಲಿ ರೋ-ಕೋ ಜೋಡಿ ಫೇಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved