MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಪಾತಾಳಕ್ಕೆ ಕುಸಿದ ಬಾಬಾ ರಾಮ್‌ದೇವ್‌ ಪತಂಜಲಿ, ಒಂದೇ ದಿನ ಶೇ. 15ರಷ್ಟು ಮಹಾಕುಸಿತ!

ಪಾತಾಳಕ್ಕೆ ಕುಸಿದ ಬಾಬಾ ರಾಮ್‌ದೇವ್‌ ಪತಂಜಲಿ, ಒಂದೇ ದಿನ ಶೇ. 15ರಷ್ಟು ಮಹಾಕುಸಿತ!

ಬಾಬಾ ರಾಮ್‌ದೇವ್ ಅವರ ಪತಂಜಲಿ ಫುಡ್ಸ್ ಷೇರುಗಳು ಶೇ. 20ರಷ್ಟು ಕುಸಿದು 52 ವಾರಗಳ ಕನಿಷ್ಠ ಮಟ್ಟ ತಲುಪಿವೆ. ಇತ್ತೀಚೆಗೆ ಕಂಪನಿಯು ಉತ್ತಮ ಲಾಭ ಗಳಿಸಿದ್ದರೂ, ಈ ಹಠಾತ್ ಕುಸಿತವು ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದೆ. ಷೇರು ಕುಸಿತಕ್ಕೆ ಯಾವುದೇ ನಿರ್ದಿಷ್ಟ ಕಾರಣವಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

2 Min read
Author : Santosh Naik
Published : Jul 15 2026, 09:02 PM IST
Share this Photo Gallery
  • FB
  • TW
  • Linkdin
  • Whatsapp
16
ಬಾಬಾ ರಾಮ್‌ದೇವ್‌ ಮಾಲೀಕತ್ವದ ಸಂಸ್ಥೆ
Image Credit : X

ಬಾಬಾ ರಾಮ್‌ದೇವ್‌ ಮಾಲೀಕತ್ವದ ಸಂಸ್ಥೆ

ಯೋಗ ಗುರು ಬಾಬಾ ರಾಮ್‌ದೇವ್ ಅವರ ಒಡೆತನಕ್ಕೆ ಸೇರಿದ ಪ್ರಮುಖ ಎಫ್‌ಎಂಸಿಜಿ ಸಂಸ್ಥೆ 'ಪತಂಜಲಿ ಫುಡ್ಸ್' (Patanjali Foods) ಷೇರುಗಳು ಇಂದು ಮಾರುಕಟ್ಟೆಯಲ್ಲಿ ಪಾತಾಳಕ್ಕೆ ಕುಸಿದಿದೆ. ಇಂದಿನ ವಹಿವಾಟಿನ ಅವಧಿಯಲ್ಲಿ ಕಂಪನಿಯ ಷೇರು ಮೌಲ್ಯವು ಬರೋಬ್ಬರಿ ಶೇಕಡಾ 20 ರಷ್ಟು ಕುಸಿತ ಕಾಣುವ ಮೂಲಕ 52 ವಾರಗಳ ಅತ್ಯಂತ ಕನಿಷ್ಠ ಮಟ್ಟಕ್ಕೆ ತಲುಪಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಈ ಕಂಪನಿಯ ಷೇರು ಮೌಲ್ಯವು ಸುಮಾರು ಅರ್ಧದಷ್ಟು ಕರಗಿರುವುದು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
52 ವಾರಗಳ ಕನಿಷ್ಠ ಮಟ್ಟಕ್ಕೆ ಕುಸಿದ ಷೇರು ಮೌಲ್ಯ
Image Credit : X

52 ವಾರಗಳ ಕನಿಷ್ಠ ಮಟ್ಟಕ್ಕೆ ಕುಸಿದ ಷೇರು ಮೌಲ್ಯ

ಇಂದಿನ ವಹಿವಾಟಿನಲ್ಲಿ ಬಾಬಾ ರಾಮ್‌ದೇವ್ ಅವರ ಪತಂಜಲಿ ಫುಡ್ಸ್ ಲಿಮಿಟೆಡ್ ಷೇರುಗಳು ರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ (NSE) ಶೇ. 20 ರಷ್ಟು ಕುಸಿದು ರೂ. 328.20 ರ ಕನಿಷ್ಠ ಮಟ್ಟವನ್ನು ತಲುಪಿದವು. ದಿನದ ಅಂತ್ಯದ ವೇಳೆಗೆ 347.50 ರೂಪಾಯಿಗೆ ವಹಿವಾಟು ಮುಗಿಸಿದೆ. ಮುಂಬೈ ಷೇರು ಮಾರುಕಟ್ಟೆಯಲ್ಲಿ (BSE) ಕಳೆದ ವಹಿವಾಟಿನ ದಿನ ರೂ. 407.65 ಕ್ಕೆ ಸ್ಥಿರವಾಗಿದ್ದ ಈ ಷೇರು, ಇಂದು ಆರಂಭದಲ್ಲೇ ರೂ. 408 ರಲ್ಲಿ ತೆರೆದುಕೊಂಡಿತು. ಆದರೆ ದಿನದ ವಹಿವಾಟಿನಲ್ಲಿ ತೀವ್ರ ಕುಸಿತ ಕಂಡು ರೂ. 328.05 ರ ಕನಿಷ್ಠ ಮಟ್ಟಕ್ಕೆ ತಲುಪಿತು. ಕಳೆದ ವರ್ಷದ ಜುಲೈ 22 ರಂದು ಈ ಷೇರು ರೂ. 653.35 ರ ಗರಿಷ್ಠ ಮಟ್ಟವನ್ನು ತಲುಪಿತ್ತು. ಆದರೆ ಇಂದಿನ ಕುಸಿತದೊಂದಿಗೆ ಹೂಡಿಕೆದಾರರ ಸಂಪತ್ತು ಸುಮಾರು ಅರ್ಧದಷ್ಟು ಕರಗಿದಂತಾಗಿದೆ.

Related Articles

Related image1
ಚಳಿಗಾಲಕ್ಕಾಗಿಯೇ ವಿಶೇಷ ಬ್ರೇಕ್‌ಫಾಸ್ಟ್‌ ರೆಸಿಪಿ ತಿಳಿಸಿದ ಬಾಬಾ ರಾಮ್‌ದೇವ್‌, ಇದರಿಂದ ಇದೆ ಸಾಕಷ್ಟು ಪ್ರಯೋಜನ!
Related image2
ಬಾಬಾ ರಾಮ್‌ದೇವ್‌ ಕ್ಷಮೆ ಒಪ್ಪಿಕೊಳ್ಳಲು ನಿರಾಕರಿಸಿದ ಸುಪ್ರೀಂ, ಮತ್ತೊಂದು ಸಮನ್ಸ್‌ ಜಾರಿ!
36
ತೀವ್ರ ಕುಸಿತಕ್ಕೆ ಪತಂಜಲಿ ಸಂಸ್ಥೆ ನೀಡಿದ ಸ್ಪಷ್ಟನೆ
Image Credit : X

ತೀವ್ರ ಕುಸಿತಕ್ಕೆ ಪತಂಜಲಿ ಸಂಸ್ಥೆ ನೀಡಿದ ಸ್ಪಷ್ಟನೆ

ಷೇರು ಮೌಲ್ಯದಲ್ಲಿ ಉಂಟಾದ ಈ ಭಾರಿ ಕುಸಿತದ ಬಗ್ಗೆ ಮಾರುಕಟ್ಟೆ ನಿಯಂತ್ರಕರಿಗೆ ಸ್ಪಷ್ಟನೆ ನೀಡಿರುವ ಪತಂಜಲಿ ಫುಡ್ಸ್, "ಷೇರುಗಳ ಬೆಲೆಯಲ್ಲಿ ಹಠಾತ್ ಕುಸಿತ ಉಂಟುಮಾಡುವಂತಹ ಯಾವುದೇ ಪ್ರಮುಖ ಘಟನೆ, ಮಾಹಿತಿ ಅಥವಾ ಹೊಸ ಬೆಳವಣಿಗೆಗಳು ಕಂಪನಿಯಲ್ಲಿ ನಡೆದಿಲ್ಲ. ಕಂಪನಿಯು ತನ್ನ ಸುಸ್ಥಿರ ಬೆಳವಣಿಗೆಯ ಹಾದಿಯ ಮೇಲೆ ಸಂಪೂರ್ಣ ಗಮನ ನೆಟ್ಟಿದ್ದು, ತನ್ನ ವ್ಯಾಪಾರ ಗುರಿಗಳನ್ನು ಮುಟ್ಟಲು ಸಾಮಾನ್ಯ ದಿನಗಳಂತೆ ವ್ಯವಹಾರವನ್ನು ಮುಂದುವರಿಸಿದೆ," ಎಂದು ಹೇಳಿದೆ.

46
ಮುಂದಿನ ದಿನಗಳಲ್ಲಿ ಷೇರು ಮೌಲ್ಯ ಎತ್ತ ಸಾಗಲಿದೆ?
Image Credit : X

ಮುಂದಿನ ದಿನಗಳಲ್ಲಿ ಷೇರು ಮೌಲ್ಯ ಎತ್ತ ಸಾಗಲಿದೆ?

ಮಧ್ಯಾಹ್ನ 2.50 ರ ಸುಮಾರಿಗೆ ಬಿಎಸ್‌ಇನಲ್ಲಿ ಪತಂಜಲಿ ಫುಡ್ಸ್ ಷೇರು ಶೇ. 13.33 ರಷ್ಟು ಕುಸಿತದೊಂದಿಗೆ ರೂ. 353.30 ಹಂತದಲ್ಲಿ ವಹಿವಾಟು ನಡೆಸುತ್ತಿತ್ತು. ಕಳೆದ ಒಂದು ತಿಂಗಳಲ್ಲಿ ಈ ಷೇರು ಶೇ. 19 ರಷ್ಟು ಮತ್ತು 2026 ರ ಈ ವರ್ಷದಲ್ಲಿ ಇದುವರೆಗೆ ಶೇ. 37 ರಷ್ಟು ನಷ್ಟ ಕಂಡಿದೆ. ಮಾರುಕಟ್ಟೆ ತಜ್ಞರ ಪ್ರಕಾರ, ಮುಂದಿನ ದಿನಗಳಲ್ಲಿ ರೂ. 330 ರಿಂದ ರೂ. 325 ರ ವಲಯವು ಪ್ರಮುಖ ಸಪೋರ್ಟ್ ಲೆವೆಲ್ ಆಗಿ ಕೆಲಸ ಮಾಡಲಿದೆ. ಒಂದು ವೇಳೆ ಈ ಮಟ್ಟವೂ ಮುರಿದರೆ ಅಲ್ಪಾವಧಿಯಲ್ಲಿ ಷೇರು ರೂ. 310 ರವರೆಗೆ ಕುಸಿಯಬಹುದು. ಅದೇ ರೀತಿ ಚೇತರಿಕೆ ಕಂಡರೆ ತಕ್ಷಣಕ್ಕೆ ರೂ. 380 ರಿಂದ ರೂ. 385 ರ ಹಂತವು ರೆಸಿಸ್ಟೆನ್ಸ್ ಆಗಿ ಕೆಲಸ ಮಾಡಲಿದೆ.

56
ಕಂಪನಿಯ ಇತ್ತೀಚಿನ ಬಲವಾದ ಗಳಿಕೆ ವಿವರ
Image Credit : X

ಕಂಪನಿಯ ಇತ್ತೀಚಿನ ಬಲವಾದ ಗಳಿಕೆ ವಿವರ

ಇತ್ತೀಚೆಗಷ್ಟೇ ಮೇ ತಿಂಗಳಲ್ಲಿ ಪತಂಜಲಿ ಫುಡ್ಸ್ ಪ್ರಕಟಿಸಿದ ಹಣಕಾಸು ವರ್ಷ 2026 ರ ಜನವರಿ-ಮಾರ್ಚ್ ತ್ರೈಮಾಸಿಕ ವರದಿಯ ಪ್ರಕಾರ, ಕಂಪನಿಯ ನಿವ್ವಳ ಲಾಭದಲ್ಲಿ ವಾರ್ಷಿಕ ಆಧಾರದ ಮೇಲೆ ಶೇಕಡಾ 46 ರಷ್ಟು ಭಾರಿ ಏರಿಕೆ ಕಂಡುಬಂದಿದೆ. ಮುಖ್ಯವಾಗಿ ಖಾದ್ಯ ತೈಲ ಮತ್ತು ಎಫ್‌ಎಂಸಿಜಿ (FMCG) ವ್ಯವಹಾರದಲ್ಲಿ ಕಂಡುಬಂದ ಅದ್ಭುತ ಪ್ರಗತಿಯೇ ಇದಕ್ಕೆ ಕಾರಣವಾಗಿದೆ. ಆದರೆ, ಕಚ್ಚಾ ವಸ್ತುಗಳ ಬೆಲೆ ಏರಿಕೆ ಮತ್ತು ಪ್ಯಾಕೇಜಿಂಗ್ ವೆಚ್ಚ ಹೆಚ್ಚಳವು ಕಂಪನಿಯ ಲಾಭದ ಮಿತಿಯ ಮೇಲೆ ಸ್ವಲ್ಪಮಟ್ಟಿನ ಪರಿಣಾಮ ಬೀರಿದೆ.

66
ಮುನ್ನಡೆ ಸಾಧಿಸಿದ ಒಟ್ಟಾರೆ ಲಾಭದ ಪ್ರಮಾಣ
Image Credit : X

ಮುನ್ನಡೆ ಸಾಧಿಸಿದ ಒಟ್ಟಾರೆ ಲಾಭದ ಪ್ರಮಾಣ

ಕಚ್ಚಾ ವಸ್ತುಗಳ ದುಬಾರಿ ವೆಚ್ಚದ ಸವಾಲುಗಳ ನಡುವೆಯೂ, ಪತಂಜಲಿ ಫುಡ್ಸ್ ಸಂಸ್ಥೆಯ ಒಟ್ಟಾರೆ ಲಾಭವು ಗಣನೀಯವಾಗಿ ಹೆಚ್ಚಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ (ಜನವರಿ-ಮಾರ್ಚ್ ತ್ರೈಮಾಸಿಕ) ಸುಮಾರು ರೂ. 359 ಕೋಟಿಯಾಗಿದ್ದ ಕಂಪನಿಯ ನಿವ್ವಳ ಲಾಭವು ಪ್ರಸಕ್ತ ಸಾಲಿನಲ್ಲಿ ರೂ. 524 ಕೋಟಿಗೆ ಏರಿಕೆಯಾಗಿದೆ. ಲಾಭದಲ್ಲಿ ಇಷ್ಟೊಂದು ಉತ್ತಮ ಪ್ರಗತಿ ದಾಖಲಿಸಿದ್ದರೂ, ಮಾರುಕಟ್ಟೆಯ ಸದ್ಯದ ಏರಿಳಿತಗಳಿಂದಾಗಿ ಷೇರುಗಳು ದಿಢೀರ್ ಕುಸಿತದ ಹಾದಿ ಹಿಡಿದಿರುವುದು ಹೂಡಿಕೆದಾರರಲ್ಲಿ ತಳಮಳ ಸೃಷ್ಟಿಸಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ವ್ಯವಹಾರ
ವ್ಯಾಪಾರ ಸುದ್ದಿ
ಷೇರು ಮಾರುಕಟ್ಟೆ
ಷೇರು ಮಾರುಕಟ್ಟೆ
ಭಾರತ ಸುದ್ದಿ

Latest Videos
Recommended Stories
Recommended image1
ಬೆಂಗಳೂರಿನಿಂದಲೇ ಶುರು, ಇನ್ಮುಂದೆ ಇನ್ಸ್‌ಟಾಮಾರ್ಟ್‌ನಲ್ಲೇ ಬುಕ್‌ ಮಾಡಬಹುದು ಗ್ಯಾಸ್‌ ಸಿಲಿಂಡರ್‌!
Recommended image2
ಯಾವ ಸ್ಕೂಲ್‌ನಲ್ಲಿ ಓದ್ತಿದ್ದಾರೆ ಮುಕೇಶ್‌ ಅಂಬಾನಿ ಮೊಮ್ಮಗ? ಶಾಲೆಯ ಫೀಸ್‌ ಕೇಳಿದ್ರೆ ಹೌಹಾರೋದು ಗ್ಯಾರಂಟಿ
Recommended image3
ರೈತರೇ ಭೂಮಿಯ ಕಳೆ ತೆಗೆಯಲು ಇನ್ನು ಬೇರೆ ಮಾರ್ಗ ಬಳಸಿ, ಪ್ರಖ್ಯಾತ Paraquat Dichloride ಶೀಘ್ರದಲ್ಲೇ ಬ್ಯಾನ್‌!
Related Stories
Recommended image1
ಚಳಿಗಾಲಕ್ಕಾಗಿಯೇ ವಿಶೇಷ ಬ್ರೇಕ್‌ಫಾಸ್ಟ್‌ ರೆಸಿಪಿ ತಿಳಿಸಿದ ಬಾಬಾ ರಾಮ್‌ದೇವ್‌, ಇದರಿಂದ ಇದೆ ಸಾಕಷ್ಟು ಪ್ರಯೋಜನ!
Recommended image2
ಬಾಬಾ ರಾಮ್‌ದೇವ್‌ ಕ್ಷಮೆ ಒಪ್ಪಿಕೊಳ್ಳಲು ನಿರಾಕರಿಸಿದ ಸುಪ್ರೀಂ, ಮತ್ತೊಂದು ಸಮನ್ಸ್‌ ಜಾರಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved