LIVE NOW
Published : Nov 14, 2026, 07:01 AM ISTUpdated : Nov 14, 2026, 07:23 AM IST

India Latest News Live: ಪಿಎಂ ಮೋದಿ ನನ್ನ ಫೋನ್ ಟ್ಯಾಪ್ ಮಾಡಿದ್ದರ ಬಗ್ಗೆ ಸಾಕ್ಷ್ಯಗಳಿವೆ - ರಾಹುಲ್ ಗಾಂಧಿ ಆರೋಪ

ಸಾರಾಂಶ

ನವದೆಹಲಿ: ವಿವಾದಾತ್ಮಕ ಧರ್ಮಪ್ರಚಾರಕ ಝಾಕಿರ್ ನಾಯಕ್ ಅವರ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಮೇಲಿನ ನಿಷೇಧವನ್ನು ಕೇಂದ್ರ ಗೃಹ ಸಚಿವಾಲಯವು ಶುಕ್ರವಾರ ಮತ್ತೆ ಐದು ವರ್ಷಗಳ ಕಾಲ ವಿಸ್ತರಿಸಿದೆ. ಭಯೋತ್ಪಾದನೆ, ಪ್ರತ್ಯೇಕತಾವಾದದ ಸಿದ್ಧಾಂತ ಪ್ರಚಾರ, ಹಿಂಸೆ ಪ್ರಚೋದನೆ, ಕೋಮು ಸಂಘರ್ಷದ ಕಾರಣಗಳನ್ನು ಉಲ್ಲೇಖಿಸಿ ಸಚಿವಾಲಯ ನಿಷೇಧದ ಅವಧಿ ವಿಸ್ತರಿಸಿದೆ. 

ಈ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ‘ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ರಾಷ್ಟ್ರವಿರೋಧಿ ಚಟುವಟಿಕೆಗಳ ಬಗ್ಗೆ ಶೂನ್ಯ ಸಹಿಷ್ಣುತೆ ಹೊಂದಿದೆ. ಅದರ ಭಾಗವಾಗಿ ದೇಶಭ್ರಷ್ಟ ಭಯೋತ್ಪಾದಕ ಪ್ರಚಾರಕ ಡಾ. ಝಾಕಿರ್ ನಾಯಕ್ ಸಂಘಟನೆಯನ್ನು ಗೃಹ ಸಚಿವಾಲಯವು ಯುಎಪಿಎ ಅಡಿಯಲ್ಲಿ ನಿಷೇಧಿಸಿದೆ’ ಎಂದಿದ್ದಾರೆ. ಈ ಹಿಂದಿನ ನಿಷೇಧವು ನವೆಂಬರ್ 14ರಂದು ಕೊನೆಗೊಳ್ಳುತ್ತಿದ್ದು, ಇದೀಗ ಅದನ್ನು ಮತ್ತೆ ಐದು ವರ್ಷ ವಿಸ್ತರಿಸಲಾಗಿದೆ.

07:23 AM (IST) Nov 14

ಪಿಎಂ ಮೋದಿ ನನ್ನ ಫೋನ್ ಟ್ಯಾಪ್ ಮಾಡಿದ್ದರ ಬಗ್ಗೆ ಸಾಕ್ಷ್ಯಗಳಿವೆ - ರಾಹುಲ್ ಗಾಂಧಿ ಆರೋಪ

ಪ್ರಧಾನಿ ನರೇಂದ್ರ ಮೋದಿ ತಮ್ಮ ಫೋನ್ ಟ್ಯಾಪ್ ಮಾಡಿಸಿದ್ದಾರೆ ಮತ್ತು ಇದಕ್ಕೆ ಸಾಕ್ಷ್ಯಗಳಿವೆ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಇಬ್ಬರ ನಡುವೆ ಮುಖಾಮುಖಿ ಚರ್ಚೆ ನಡೆದರೆ ಮೋದಿಯವರ ರಾಜಕೀಯ ಅಂತ್ಯವಾಗಲಿದೆ ಎಂದು ಅವರು ಸವಾಲು ಹಾಕಿದ್ದಾರೆ.
Read Full Story

07:14 AM (IST) Nov 14

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ; ಕರಾವಳಿಗೆ ಬರ್ತಿದೆ ದುಷ್ಟ ಶಕ್ತಿಯ ಚಂಡಮಾರುತ

ಬಂಗಾಳಕೊಲ್ಲಿಯಲ್ಲಿ 'ಅಕ್ವನ್' ಎಂಬ ಮೂರನೇ ಚಂಡಮಾರುತ ಸೃಷ್ಟಿಯಾಗುತ್ತಿದ್ದು, ನವೆಂಬರ್ 16ರಂದು ಆಂಧ್ರ ಮತ್ತು ಒಡಿಶಾ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ. ಇದರಿಂದ ಗುಡುಗು-ಸಿಡಿಲು ಸಹಿತ ಭಾರೀ ಮಳೆಯಾಗುವ ಮುನ್ನೆಚ್ಚರಿಕೆ ನೀಡಲಾಗಿದೆ.
Read Full Story

More Trending News