- Home
- Entertainment
- ಇದು ಅದಲ್ಲ.. ಧನುಷ್ 'ಓಂ' ಬಗ್ಗೆ ಎದ್ದಿದೆ ವಿವಾದ: ಶಿವಣ್ಣನ ಆ ಚಿತ್ರದ ಕಥೆಯನ್ನೇ ಬಳಸಿದ್ದಾರಾ?
ಇದು ಅದಲ್ಲ.. ಧನುಷ್ 'ಓಂ' ಬಗ್ಗೆ ಎದ್ದಿದೆ ವಿವಾದ: ಶಿವಣ್ಣನ ಆ ಚಿತ್ರದ ಕಥೆಯನ್ನೇ ಬಳಸಿದ್ದಾರಾ?
OM Movie Story: ತಮಿಳು ಸ್ಟಾರ್ ಧನುಷ್ ಮತ್ತು ಮಮ್ಮುಟ್ಟಿ ಒಟ್ಟಿಗೆ ನಟಿಸಿರುವ 'ಓಂ' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಅದರ ಕಥೆ ಬಹುತೇಕ ಗೊತ್ತಾಗಿದೆ. ಆ ಬಗ್ಗೆ ಈ ವರದಿಯಲ್ಲಿ ನೋಡೋಣ.

ಓಂ ಟ್ರೇಲರ್ ರಿಲೀಸ್
ಧನುಷ್ ಮತ್ತು ಮಮ್ಮುಟ್ಟಿ ಒಟ್ಟಿಗೆ ನಟಿಸಿರುವ 'ಓಂ' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರದ ಪ್ರಮುಖ ಪಾತ್ರಗಳು ಇರುವ ಈ ಟ್ರೇಲರ್, ಸಿನಿಮಾ ಪಕ್ಕಾ ಎಂಟರ್ಟೇನರ್ ಆಗಿರುತ್ತದೆ ಎಂದು ಭರವಸೆ ನೀಡುತ್ತದೆ. ಕಾಡಿನ ಹಿನ್ನೆಲೆಯಲ್ಲಿ ಅಧಿಕಾರ, ಸಂಘರ್ಷ, ಅಪರಾಧ, ಸೇಡು ಇವುಗಳನ್ನೊಳಗೊಂಡ ತೀವ್ರವಾದ ಆಕ್ಷನ್ ಡ್ರಾಮಾ ಇದಾಗಿರಲಿದೆ ಎಂದು ಟ್ರೇಲರ್ ತೋರಿಸುತ್ತದೆ. ರಾಜ್ಕುಮಾರ್ ಪೆರಿಯಸ್ವಾಮಿ ನಿರ್ದೇಶನದ ಈ ಚಿತ್ರ ನವೆಂಬರ್ 20ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಮೆಚ್ಚುಗೆ ಪಡೆಯುತ್ತಿರುವ ಓಂ ಟ್ರೇಲರ್
ಧನುಷ್ ಓಂ ಚಿತ್ರದಲ್ಲಿ ತಮ್ಮ ಕೆರಿಯರ್ನ ಅತ್ಯುತ್ತಮ ನಟನೆಯನ್ನು ತೋರಿದ್ದಾರೆ. ಮಮ್ಮುಟ್ಟಿ ಬರ್ಮಾ ಕಾರ್ತಿಕೇಯನ್ ಎಂಬ ಅಂಡರ್ವರ್ಲ್ಡ್ ಡಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಯಿ ಪಲ್ಲವಿ ಪಾತ್ರ ಓಂ ಚಿತ್ರದ ಮತ್ತೊಂದು ಪ್ರಮುಖ ಅಂಶ. ಸಾಯಿ ಪಲ್ಲವಿ ಸಿಬಿಐ ಅಧಿಕಾರಿ ನಿತ್ಯಾ ರೆಡ್ಡಿಯಾಗಿ ನಟಿಸಿದ್ದಾರೆ. ಸಾಯಿ ಪಲ್ಲವಿ ಅಲ್ಲದೆ, ಶ್ರೀಲೀಲಾ ಕೂಡ ಚಿತ್ರದಲ್ಲಿ ಇನ್ನೊಬ್ಬ ನಾಯಕಿಯಾಗಿ ನಟಿಸಿದ್ದಾರೆ. ಶ್ರೀಲೀಲಾ ರೋಜಾ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಓಂ ಚಿತ್ರದ ಟ್ರೇಲರ್ನಲ್ಲೇ ಅದರ ಕಥೆಯನ್ನೂ ಹೇಳಿದ್ದಾರೆ.
ಓಂ ಚಿತ್ರದ ಕಥೆ
ಅದರಂತೆ, ವಿಶೇಷ ಪಡೆಯಲ್ಲಿ ಕೆಲಸ ಮಾಡುವ ಧನುಷ್, ಐಪಿಎಸ್ ಅಧಿಕಾರಿ ಸಾಯಿ ಪಲ್ಲವಿ ಆದೇಶದ ಮೇರೆಗೆ ರಕ್ತಚಂದನ ಕಳ್ಳಸಾಗಾಣಿಕೆ ಗ್ಯಾಂಗ್ನೊಳಗೆ ಗೂಢಚಾರನಾಗಿ ನುಗ್ಗುತ್ತಾರೆ. ರಕ್ತಚಂದನ ಕಳ್ಳಸಾಗಾಣಿಕೆ ಮುಖ್ಯಸ್ಥ ಮಮ್ಮುಟ್ಟಿ ಗ್ಯಾಂಗ್ನಲ್ಲಿ ರಹಸ್ಯವಾಗಿ ಕೆಲಸ ಮಾಡುತ್ತಾ, ಅವರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಪೊಲೀಸರಿಗೆ ಕಳುಹಿಸುತ್ತಾರೆ. ಆದರೆ, ಪೊಲೀಸರ ಅಧಿಕಾರ ದುರ್ಬಳಕೆ ಮತ್ತು ಕ್ರೂರ ಕೃತ್ಯಗಳನ್ನು ಕಣ್ಣಾರೆ ಕಾಣುವ ಧನುಷ್, ಒಂದು ಹಂತದಲ್ಲಿ ಪೊಲೀಸ್ ಕಡೆಯವರ ವಿರುದ್ಧವೇ ತಿರುಗಿಬೀಳುತ್ತಾರೆ. ಬಳಿಕ ಮಮ್ಮುಟ್ಟಿ ಗ್ಯಾಂಗ್ ಜೊತೆ ಕೈಜೋಡಿಸುವ ಧನುಷ್, ಅನಿರೀಕ್ಷಿತ ತಿರುವು ನೀಡುತ್ತಾರೆ. ಆಮೇಲೆ ಏನಾಯ್ತು ಎಂಬುದೇ ಈ ಚಿತ್ರದ ಕಥಾಸಾರಾಂಶ.
ಹೋಲಿಸುತ್ತಿರುವ ನೆಟ್ಟಿಗರು
ಈ ಕಥೆ ಕೇಳಿದ್ರೆ ಎಲ್ಲೋ ನೋಡಿದ ಕಥೆ ಥರಾನೇ ಇದೆಯಲ್ಲಾ ಅಂತ ಅನ್ನಿಸಬಹುದು. ಸಿಂಬು ನಟನೆಯ 'ಪತ್ತು ತಲ' ಚಿತ್ರದ ಕಥೆಯೂ ಬಹುತೇಕ ಇದೇ. ಅದು ಮಫ್ತಿ ಎಂಬ ಕನ್ನಡ ಚಿತ್ರದ ರಿಮೇಕ್. ಶಿವರಾಜ್ಕುಮಾರ್ ನಟನೆಯ ಮಫ್ತಿ ಚಿತ್ರದ ಕಥೆ ಹಾಗೂ ಓಂ ಚಿತ್ರದ ಕಥೆ ಬಹುತೇಕ ಒಂದೇ ರೀತಿ ಇದೆ ಎಂದು ನೆಟ್ಟಿಗರು ಹೋಲಿಕೆ ಮಾಡುತ್ತಿದ್ದಾರೆ. ಇನ್ನು ಕೆಲವರು ಇದು ಪುಷ್ಪ ಶೈಲಿಯಲ್ಲಿದೆ ಎಂದೂ ಹೇಳುತ್ತಿದ್ದಾರೆ. ಸಿನಿಮಾ ರಿಲೀಸ್ ಆದ್ಮೇಲೆನೇ ಅವೆರಡೂ ಒಂದೇ ಕಥೆನಾ ಅಥವಾ ಬೇರೆ ಬೇರೆ ಸ್ಟೋರೀನಾ ಅನ್ನೋದು ಗೊತ್ತಾಗೋದು.
ಓಂ ಚಿತ್ರತಂಡ
ಧನುಷ್, ಮಮ್ಮುಟ್ಟಿ, ಸಾಯಿ ಪಲ್ಲವಿ, ಶ್ರೀಲೀಲಾ ಜೊತೆಗೆ ನಾಸಿರುದ್ದೀನ್ ಷಾ, ಇಂದ್ರನ್ಸ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಲಯಾಳಂ, ತಮಿಳು ಸಿನಿಮಾ ಪ್ರೇಕ್ಷಕರಿಗೆ ಒಟ್ಟಿಗೆ ಆಸಕ್ತಿ ಮೂಡಿಸುವಂತಹ ತಾರಾಗಣ ಈ ಚಿತ್ರದಲ್ಲಿದೆ. 'ಅಮರನ್' ಎಂಬ ಹಿಟ್ ಚಿತ್ರದ ಮೂಲಕ ಗಮನ ಸೆಳೆದ ರಾಜ್ಕುಮಾರ್ ಪೆರಿಯಸ್ವಾಮಿ ಈ ಚಿತ್ರವನ್ನು ಬರೆದು ನಿರ್ದೇಶಿಸಿದ್ದಾರೆ. ಸಾಯಿ ಅಭಿಯಂಕರ್ ಸಂಗೀತ ಮತ್ತು ಹಿನ್ನೆಲೆ ಸಂಗೀತ ಒದಗಿಸುತ್ತಿದ್ದಾರೆ. ಎಳಿಲ್ ಅರಸು ಛಾಯಾಗ್ರಹಣ ಮಾಡುತ್ತಿದ್ದಾರೆ. ಆರ್. ಕಲೈವಣನ್ ಸಂಕಲನ ಮಾಡುತ್ತಿದ್ದಾರೆ. ಯಾನಿಕ್ ಬೆನ್, ಕೆಚಾ ಕಂಬಕ್ಡಿ ಆಕ್ಷನ್ ದೃಶ್ಯಗಳಿಗೆ ನೃತ್ಯ ಸಂಯೋಜಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.













