ಬ್ರಿಟನ್‌ನ ಮಾಲ್ಮೆಸ್‌ಬರಿ ಬಳಿ ವ್ಯಕ್ತಿಯೊಬ್ಬರಿಗೆ ಲೋಹದ ಶೋಧಕದಲ್ಲಿ ಹುಡುಕುವಾಗ 3 ಸಾವಿರ ವರ್ಷಗಳಷ್ಟು ಹಳೆಯದಾದ ಮೂರು ಚಿನ್ನದ ಬಳೆಗಳು ಪತ್ತೆಯಾಗಿವೆ. ಇವುಗಳನ್ನು ಈಗ ಅಥೆಲ್ಸ್ತಾನ್ ವಸ್ತುಸಂಗ್ರಹಾಲಯದಲ್ಲಿ ಸಾರ್ವಜನಿಕ ವೀಕ್ಷಣೆಗೆ ಇಡಲಾಗಿದೆ.

ಇಂಗ್ಲೆಂಡ್: ಬ್ರಿಟನ್‌ನ ಮಾಲ್ಮೆಸ್‌ಬರಿ ಪಟ್ಟಣದ ಬಳಿ ವ್ಯಕ್ತಿಯೊಬ್ಬರು ಲೋಹದ ಶೋಧಕದೊಂದಿಗೆ ನಿಧಿ ಹುಡುಕುತ್ತಿದ್ದರು. ಈ ವೇಳೆ ಅವರಿಗೆ ಬಿಗ್‌ ಸರ್ಪ್ರೈಸ್ ಕಾದಿತ್ತು. ಉತ್ಖನ ಮಾಡುತ್ತಿದ್ದಾಗ ಸುಮಾರು 3 ಸಾವಿರ ವರ್ಷಗಳಷ್ಟು ಹಳೆಯದಾದ ಮೂರು ಚಿನ್ನದ ಬೆಳೆಗಳು ಪತ್ತೆ ಆಗಿದ್ದವು. ಇದೀಗ ಅವುಗಳನ್ನ ಹತ್ತಿರದಿಂದ ನೋಡುವ ಭಾಗ್ಯ ಅಲ್ಲಿನ ಜನರಿಗೆ ಸಿಗುತ್ತಿದೆ.

ಇವುಗಳನ್ನು ಮೊದಲ ಬಾರಿಗೆ ಸಾರ್ವಜನಿಕ ವೀಕ್ಷಣೆಗೆ ಇಡಲಾಗುತ್ತದೆ. ಈ ಬಳೆಗಳು Bronze Age ಕೊನೆಯ ಹಂತದ್ದಾಗಿವೆ. ವಾಣಿಜ್ಯ ಲೋಹ ಪತ್ತೆ ರ್ಯಾಲಿಯ ಸಮಯದಲ್ಲಿ ಅವು ನೆಲದಡಿಯಲ್ಲಿ ಪತ್ತೆಯಾಗಿದ್ದವು. ಈಗ ಮಾಲ್ಮೆಸ್‌ಬರಿಯಲ್ಲಿರುವ ಅಥೆಲ್ಸ್ತಾನ್ ವಸ್ತುಸಂಗ್ರಹಾಲಯವು ತನ್ನ ಸುಪರ್ದಿಗೆ ತೆಗೆದುಕೊಡಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಫೆಬ್ರವರಿವರೆಗೆ ಈ ಬಳೆಗಳನ್ನ ನೋಡಲು ಸಾಧ್ಯವಾಗುತ್ತದೆ ಎಂದು ವರದಿಯಾಗಿದೆ.

ಹೇಗೆ ಪತ್ತೆ ಆದವು?

ಈ ಮೂರು ಬಳೆಗಳು ಇಂಗ್ಲೆಂಡ್‌ನ ವಿಲ್ಟ್‌ಶೈರ್‌ನಲ್ಲಿರುವ ಮಾಲ್ಮೆಸ್‌ಬರಿ ಬಳಿಯ ಹುಲ್ಲುಗಾವಲಿನಲ್ಲಿ ಪತ್ತೆ ಆಗಿವೆ. ಆ ದಿನ ಹಲವರು ಶೋಧಕಗಳೊಂದಿಗೆ ಹಳೆಯ ಲೋಹದ ವಸ್ತುಗಳಿಗಾಗಿ ಹೊಲದಲ್ಲಿ ಹುಡುಕುತ್ತಿದ್ದರು. ಒಬ್ಬ ಪತ್ತೇದಾರಿ ತನ್ನ ಯಂತ್ರದಿಂದ ನಿರಂತರ ಶಬ್ದವನ್ನು ಕೇಳಲು ಪ್ರಾರಂಭಿಸಿದ. ನಂತರ ಅಗೆದಾಗ ಮೂರು ಚಿನ್ನದ ಬಳೆಗಳು ಸುಮಾರು 18 ಇಂಚುಗಳಷ್ಟು (45 ಸೆಂಟಿಮೀಟರ್‌ಗಳು) ಆಳದಲ್ಲಿ ಒಟ್ಟಿಗೆ ಬಿದ್ದಿರೋದು ಪತ್ತೆ ಆಗಿದೆ. ಎರಡು ಬಳೆಗಳಿಗೆ ಹಾನಿ ಆಗಿತ್ತು. ಮೂರನೆಯ ಬಳೆ ತುಂಬಾ ಚೆನ್ನಾಗಿಯೇ ಇದೆ. ಇವು ಸಿಕ್ಕ ಬೆನ್ನಲ್ಲೇ, ಆ ಜಾಗದಲ್ಲಿ ಮತ್ತಷ್ಟು ನಿಧಿಗಾಗಿ ಶೋಧ ನಡೆಸಲಾಗಿದೆ. ಆದರೆ ಯಾವುದೇ ವಸ್ತುಗಳು ಸಿಕ್ಕಿಲ್ಲ.

ವಸ್ತುಸಂಗ್ರಹಾಲಯದ ಪ್ರಕಾರ.. ಈ ಬಳೆಗಳನ್ನು ಸುತ್ತಿಗೆಯಿಂದ ಮಾಡಿದ ಚಿನ್ನದ ಹಾಳೆಗಳಿಂದ ತಯಾರಿಸಲಾಗಿದೆ. ಅವುಗಳ ವಿನ್ಯಾಸ ನೋಡಿದರೆ ಕೈಯ ವಿವಿಧ ಭಾಗಗಳಲ್ಲಿ ಧರಿಸುವಂತೆ ಇದೆ. ಇನ್ನು ಎರಡು ಬಳೆಗಳನ್ನು ಮಡಚಿ ಚಪ್ಪಟೆಯಾಗಿಡಲು ಕಾರಣ ಸ್ಪಷ್ಟವಾಗಿಲ್ಲ. ಇನ್ನೊಂದು ಸಾಧ್ಯತೆ ಇದ್ದರೂ ಇರಬಹುದು. ಅವುಗಳನ್ನ ಧಾರ್ಮಿಕ ಆಚರಣೆಗೆ ಬಳಿಸಿಕೊಂಡಿರೋದ್ರಿಂದ ಎರಡು ಬಳೆಗಳು ಚಪ್ಪಟೆ ಆಗಿದ್ದಬರಬಹುದು ಎಂದು ಹೇಳಲಾಗುತ್ತಿದೆ. ಆದರೆ ಯಾವುದೇ ದೃಢೀಕರಣ ಇದಕ್ಕೆ ಇಲ್ಲ.

ಬಿಬಿಸಿ ಪ್ರಕಾರ.. ವಸ್ತು ಸಂಗ್ರಹಾಲಯದ ಟ್ರಸ್ಟಿ ಮತ್ತು ಸ್ಥಳೀಯ ಇತಿಹಾಸಕಾರ ಟೋನಿ ಮೆಕ್‌ಅಲೇವಿ, ಈ ಬಳೆಗಳು ನೋಡಲು ಸುಂದರವಾಗಿವೆ. ಸುಮಾರು 3,000 ವರ್ಷಗಳ ಹಿಂದೆ ಮಾಲ್ಮೆಸ್‌ಬರಿ ಮತ್ತು ಸುತ್ತಮುತ್ತ ವಾಸಿಸುತ್ತಿದ್ದ ಜನರ ಜೀವನದ ಬಗ್ಗೆ ಮಾಹಿತಿ ನೀಡುವಂತೆ ಕಾಣ್ತಿವೆ ಎಂದಿದ್ದಾರೆ.

ಇದರ ಆವಿಷ್ಕಾರವು 1150 ರಿಂದ 800 BC ವರೆಗಿನ ಪಟ್ಟಣದ ಇತಿಹಾಸವನ್ನು ವ್ಯಾಪಿಸಿದೆ. ವಸ್ತುಸಂಗ್ರಹಾಲಯದ ಟ್ರಸ್ಟಿ ಮಾರಿಯಾ ಮಾರ್ಷ್ ಈ ಆವಿಷ್ಕಾರದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಬಳೆಗಳನ್ನು ತಯಾರಿಸಿದ ಕುಶಲಕರ್ಮಿಯನ್ನೂ ಅವರು ಹೊಗಳಿದ್ದಾರೆ. ಅವುಗಳ ಸೌಂದರ್ಯವು ಚಿನ್ನದ ತೇಜಸ್ಸನ್ನೂ ಮೀರಿದೆ ಎಂದು ವಿವರಿಸಿದ್ದಾರೆ.