EPFO alert: ನಿಮ್ಮ ಸಂಬಳದಿಂದ ಕಡಿತಗೊಂಡ ಪಿಎಫ್ ಹಣ ಇಪಿಎಫ್‌ಓ ಖಾತೆಗೆ ಜಮಾವಾಗಿದೆಯೇ? ಕಂಪನಿಗಳು ಅಕ್ಟೋಬರ್ ತಿಂಗಳ ಇಸಿಆರ್ ಮತ್ತು ಪಿಎಫ್ ಹಣವನ್ನು ನವೆಂಬರ್ 15 ರೊಳಗೆ ಸಲ್ಲಿಸಬೇಕು ಎಂದು ಇಪಿಎಫ್‌ಓ ಎಚ್ಚರಿಕೆ ನೀಡಿದೆ. ವಿಳಂಬವಾದರೆ ಬಡ್ಡಿ ಮತ್ತು ದಂಡ ಕಟ್ಟಬೇಕಾಗುತ್ತದೆ.

EPFO alert: ನೌಕರರ ಪಿಎಫ್(PF) ಹಣವನ್ನು ಪ್ರತಿ ತಿಂಗಳು ಅವರ ಸಂಬಳ(Salary)ಯಿಂದ ಕಟ್ ಮಾಡಲಾಗುತ್ತೆ. ಈ ಹಣವನ್ನ ನೌಕರರ ಇಪಿಎಫ್(EPF) ಖಾತೆಗೆ ಜಮಾ ಮಾಡಲಾಗುತ್ತೆ. ಆದ್ರೆ ಸ್ಯಾಲರಿಯಲ್ಲಿ ಕಡಿತಗೊಳಿಸಿದರೆ ಸಾಲದು. ಸರಿಯಾದ ಸಮಯಕ್ಕೆ ಕಂಪನಿಯು ಈ ಹಣವನ್ನು ಇಪಿಎಫ್‌(EPF) ಜಮಾ ಮಾಡುವುದು ತುಂಬಾ ಮುಖ್ಯ. ಈ ವಿಚಾರವಾಗಿ ಈಗಾಗಲೇ ಇಪಿಎಫ್‌ಓ(EPFO) ಕಂಪನಿಗಳಿಗೆ ಮತ್ತು ಉದ್ಯೋಗದಾತರಿಗೆ ಎಚ್ಚರಿಕೆ ನೀಡಿದೆ.

ಅಕ್ಟೋಬರ್ 2026ರ ವೇತನ ತಿಂಗಳಿಗೆ ECR()

ಅಕ್ಟೋಬರ್ 2026 ರ ವೇತನ ತಿಂಗಳಿಗೆ Electronic Challan-cum-Return(ECR) ಸಲ್ಲಿಸಲು ಮತ್ತು PF ಹಣ ಪಾವತಿಸಲು EPFO ​​ನವೆಂಬರ್ 15 ರವರೆಗೆ ಗಡುವು ನೀಡಿದೆ. ಅಂದರೆ ನಿಮ್ಮ ಕಂಪನಿಗೆ ನಾಳೆಯವರೆಗೆ ಮಾತ್ರ ಸಮಯವಿದೆ. ಈ ಸಮಯದೊಳಗೆ ಹಣ ಜಮಾ ಮಾಡದಿದ್ದಲ್ಲಿ ಅಥವಾ ವಿಫಲವಾದಲ್ಲಿ ಬಡ್ಡಿ ಜೊತೆಗೆ ದಂಡವನ್ನೂ ಕಟ್ಟಬೇಕಾಗಬಹುದು.

EPFO ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದೇಕೆ?

ನವೆಂಬರ್ 12 ರಂದು EPFO ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಂಚಿಕೊಂಡಿತು. ಅದರಲ್ಲಿ ಕಂಪನಿಗಳು ಮತ್ತು ಉದ್ಯೋಗದಾತರು ಅಕ್ಟೋಬರ್ 2026 ರ ವೇತನ ತಿಂಗಳ ಇಸಿಆರ್ ಮತ್ತು ಪಿಎಫ್ ಹಣ ನವೆಂಬರ್ 15 ರೊಳಗೆ ಸಲ್ಲಿಸಬೇಕು ಎಂದು ನೆನಪಿಸಿದೆ. ಸಮಯಕ್ಕೆ ಸರಿಯಾಗಿ ರಿಟರ್ನ್ಸ್ ಸಲ್ಲಿಸುವುದು ಮತ್ತು ಪಾವತಿಸುವಂತೆ ತಿಳಿಸಿದೆ. ಒಂದು ವೇಳೆ ಕಂಪನಿಗಳು ವಿಳಂಬ ಮಾಡಿದರೆ ದಂಡ ಮತ್ತು ಬಡ್ಡಿ ಕಟ್ಟಬೇಕಾಗಬಹುದು ಎಂದು ಎಚ್ಚರಿಕೆ ನೀಡಿದೆ.

ಯಾರಿಗೆ ಈ ನಿಯಮ ಅನ್ವಯ?

ಈ ನಿಯಮವು ಎಲ್ಲಾ ಕಂಪನಿಗಳಿಗೆ ಅಲ್ಲ, ಬದಲಾಗಿ EPF ವ್ಯಾಪ್ತಿಗೆ ಬರುವ ಎಲ್ಲಾ ಕಂಪನಿಗಳು ಮತ್ತು ಸಂಸ್ಥೆಗಳಿಗೆ ಅನ್ವಯಿಸುತ್ತದೆ. ಆದ್ದರಿಂದ, ಕಂಪನಿಗಳು ಸಕಾಲಕ್ಕೆ ಹಣ ಪಾವತಿ ಅಥವಾ ಜಮಾ ಮಾಡುಬೇಕು ಅದಕ್ಕೂ ಮೊದಲು ತಮ್ಮ ಉದ್ಯೋಗಿಗಳ ಸಂಬಳ, UAN ಮತ್ತು PF ಮಾಹಿತಿಯನ್ನು ಪರಿಶೀಲಿಸಬೇಕು ಎಂದಿದೆ.

ಇಸಿಆರ್(ECR) ಎಂದರೇನು?

ಇಸಿಆರ್ ಅಥವಾ ಎಲೆಕ್ಟ್ರಾನಿಕ್ ಚಲನ್-ಕಮ್-ರಿಟರ್ನ್ ಇದು ಕಂಪನಿ ಅಥವಾ ಉದ್ಯೋಗದಾತರು ಇಪಿಎಫ್‌ಒ ಪೋರ್ಟಲ್‌ಗೆ ಸಲ್ಲಿಸುವ ಮಾಸಿಕ ವರದಿ. ಇದು ನೌಕರರ ಸಂಬಳ, ಪಿಎಫ್ ಮತ್ತು ಇತರ ಪ್ರಮುಖ ಮಾಹಿತಿ ಹೊಂದಿರುತ್ತದೆ. ಇನ್ನು ಸರಳವಾಗಿ ಹೇಳುವುದಾದರೆ ಈ ವರದಿಯ ಮೂಲಕ ಕಂಪನಿಯು ಪ್ರತಿ ಉದ್ಯೋಗಿಯ ಸಂಬಳದಿಂದ ಎಷ್ಟು ಪಿಎಫ್ ಕಡಿತಗೊಳಿಸಲಾಗಿದೆ. ಕಂಪನಿಯ ಕೊಡುಗೆ ಎಷ್ಟು ಅಗತ್ಯವಿದೆ ಎಂಬುದನ್ನು ಇಪಿಎಫ್‌ಒಗೆ ತಿಳಿಸುತ್ತದೆ. ಇಸಿಆರ್ ಸಲ್ಲಿಸಿದ ನಂತರ ಮತ್ತು ಚಲನ್ ಪಾವತಿ ಪೂರ್ಣಗೊಂಡ ನಂತರ ಕಡಿತಗೊಳಿಸಲಾದ ಹಣವನ್ನು ಆಯಾ ಉದ್ಯೋಗಿಯ ಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ.

ಒಂದು ವೇಳೆ ವಿಳಂಬವಾದರೆ ದಂಡ, ಬಡ್ಡಿ ಎಷ್ಟು ವಿಧಿಸಲಾಗುತ್ತೆ?

ನವೆಂಬರ್ 15 ರ ಗಡುವಿನೊಳಗೆ ಕಂಪನಿಯು ಪಿಎಫ್ ಮೊತ್ತವನ್ನು ಠೇವಣಿ ಮಾಡಲು ವಿಫಲವಾದರೆ ಅದು ನಷ್ಟವನ್ನು ಅನುಭವಿಸಬಹುದು. ಇಪಿಎಫ್ ಕಾಯ್ದೆಯ ಸೆಕ್ಷನ್ 7Q ಅಡಿಯಲ್ಲಿ, ಬಾಕಿ ಮೊತ್ತದ ಮೇಲೆ ವಾರ್ಷಿಕ 12% ದರದಲ್ಲಿ ಬಡ್ಡಿಯನ್ನು ವಿಧಿಸಲಾಗುತ್ತದೆ. ಇದಲ್ಲದೆ, ಸೆಕ್ಷನ್ 14B ಅಡಿಯಲ್ಲಿ, ವಿಳಂಬದ ಸಮಯದ ಪ್ರಕಾರ ದಂಡವನ್ನು ಸಹ ವಿಧಿಸಬಹುದು.

ಪಿಎಫ್ ಠೇವಣಿ ಇಡಲಾಗಿದೆಯೇ ಅಥವಾ ಇಲ್ಲವೇ ಎಂದು ತಿಳಿಯುವುದು ಹೇಗೆ?

ಹೌದು ಪಿಎಫ್ ಠೇವಣಿ ಇಡಲಾಗಿದೆಯೇ ಅಥವಾ ಇಲ್ಲವೇ ಎಂದು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಏಕೆಂದರೆ ಹಲವು ಸಲ ಸಂಬಳ ಚೀಟಿಗಳು ಪಿಎಫ್ ಕಡಿತಗಳ ಬಗ್ಗೆ ಮಾಹಿತಿ ತೋರಿಸುತ್ತವೆ, ಆದರೆ ಇದರರ್ಥ ಕಂಪನಿಯು ನಿಮ್ಮ ಇಪಿಎಫ್‌ಒ ಖಾತೆಗೆ ಹಣವನ್ನು ಜಮಾ ಮಾಡಿದೆ ಎಂದಲ್ಲ. ಇಪಿಎಫ್‌ಒ ಸದಸ್ಯರ ಇ-ಪಾಸ್‌ಬುಕ್ ಸೌಲಭ್ಯದ ಮೂಲಕ ನಿಮ್ಮ ಪಿಎಫ್ ಬ್ಯಾಲೆನ್ಸ್ ಮತ್ತು ಮಾಸಿಕ ಕೊಡುಗೆಗಳನ್ನು ನೀವು ಪರಿಶೀಲಿಸಬಹುದು.