Asianet Suvarna News Asianet Suvarna News

ಬೇಟೆಯಾಡುವ ವೇಳೆ ಸಿಂಹಗಳ ನಡುವೆಯೇ ಕಿತ್ತಾಟ: ಪಾರಾದ ಕಾಡೆಮ್ಮೆ... ಹಳೆ ವಿಡಿಯೋ ವೈರಲ್

ಇಲ್ಲೊಂದು ಕಡೆ ಐದಾರು ಸಿಂಹಗಳ ಹಿಂಡು  ಬೇಟೆಯಾಡುವ ವೇಳೆ ಪರಸ್ಪರ ತಮ್ಮ ನಡುವೆ ಕಿತ್ತಾಡಲು ಶುರು ಮಾಡಿದ್ದು, ಇವುಗಳ ಕಿತ್ತಾಟದಿಂದಾಗಿ  ಕಾಡೆಮ್ಮೆಗೆ ಜೀವದಾನವಾಗಿದೆ.

wild bison escapes from the scene after lion pride starting Fighting between them akb
Author
First Published Jan 24, 2023, 5:46 PM IST

ನಮ್ಮಳೊಗಿನ ಜಗಳ ಯಾವಾಗಲೂ ಮೂರನೇಯವರ ಗೆಲುವಿಗೆ ದಾರಿ ಮಾಡಿಕೊಡುತ್ತದೆ ಎಂಬ ಮಾತನ್ನು ನೀವು ಆಗಾಗ ಕೇಳಿರುತ್ತೀರಿ.  ಅದೇ ರಿತಿ ಇಲ್ಲೊಂದು ಕಡೆ ಸಿಂಹಗಳ ನಡುವಿನ ಜಗಳದಿಂದಾಗಿ ಅವರ ಬೇಟೆ ತಪ್ಪಿ ಹೋಗಿ ಜೀವ ಉಳಿಸಿಕೊಂಡಿದೆ. ಕಾಡು ಪ್ರಾಣಿಗಳ ಅಪರೂಪದ  ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಿರುತ್ತದೆ.  ಅದೇ ರೀತಿ  ಇಲ್ಲೊಂದು ಕಡೆ ಐದಾರು ಸಿಂಹಗಳ ಹಿಂಡು  ಬೇಟೆಯಾಡುವ ವೇಳೆ ಪರಸ್ಪರ ತಮ್ಮ ನಡುವೆ ಕಿತ್ತಾಡಲು ಶುರು ಮಾಡಿದ್ದು, ಇವುಗಳ ಕಿತ್ತಾಟದಿಂದಾಗಿ  ಕಾಡೆಮ್ಮೆಗೆ ಜೀವದಾನವಾಗಿದೆ.  ಹಳೆ ವಿಡಿಯೋ ಇದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದ್ದು,  7 ಮಿಲಿಯನ್‌ಗೂ ಅಧಿಕ ಜನ ವೀಕ್ಷಿಸಿದ್ದಾರೆ. 

ಒಟ್ಟು ಐದು ಸಿಂಹಗಳು ದೊಡ್ಡದಾದ ಕಾಡೆಮ್ಮೆಯೊಂದನ್ನು ಬೇಟೆಯಾಡಿ ನೆಲಕ್ಕುರುಳಿಸಿವೆ. ಈ ವೇಳೆ  ಸಿಂಹಗಳ ಗುಂಪಿನ (Lion Pride) ನಡುವೆಯೇ ಕಿತ್ತಾಟ ಶುರುವಾಗಿದೆ. ಎಮ್ಮೆಯನ್ನು  ಪಕ್ಕಕ್ಕೆ ಬಿಟ್ಟು ಸಿಂಹಗಳು ತಮ್ಮ ಮಧ್ಯೆಯೇ ಕಿತ್ತಾಡಲು ಶುರು ಮಾಡಿವೆ. ಇದೇ ಸಂದರ್ಭವನ್ನು ಬಳಸಿಕೊಂಡ ಎಮ್ಮೆ ಆ ಸ್ಥಳದಿಂದ ಮೆಲ್ಲನೇ ಮೇಲೆದ್ದು, ಅಲ್ಲಿಂದ ಕಾಲ್ಕಿತ್ತು ಜೀವ ಉಳಿಸಿಕೊಂಡಿದೆ. ಸಿಂಹಗಳ ದಾಳಿಯಿಂದ ಕಾಡೆಮ್ಮೆ ಗಾಯಗೊಂಡಿದ್ದು, ನಿಧಾನವಾಗಿ ಸಾಗಿ ತನ್ನ ಗುಂಪನ್ನು ಸೇರಿಕೊಳ್ಳುತ್ತದೆ. ಇತ್ತ ಸಿಂಹಗಳು ಕಿತ್ತಾಡಿಕೊಂಡೇ ದೂರ ಸಾಗಿವೆ.  Weird and Terrifying ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು,  ಈ ವಿಡಿಯೋವನ್ನು 7 ಮಿಲಿಯನ್‌ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಹಳೆಯ ವಿಡಿಯೋ ಇದು ಎನ್ನಲಾಗಿತ್ತು. ಎಲ್ಲಿ ಈ ದೃಶ್ಯ ಸೆರೆ ಆಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. 

ಸಿಂಹವನ್ನು ತಿವಿದೆಬ್ಬಿಸಿದ ಕಾಡುಕೋಣಗಳು

ಸಿಂಹಗಳು ಹಾಗೂ ಕಾಡುಕೋಣ/ಕಾಡೆಮ್ಮೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ (Social Media) ಆಗಾಗ ವೈರಲ್ ಆಗುತ್ತಲೇ ಇರುತ್ತದೆ.  ಸಾಮಾನ್ಯವಾಗಿ ಕಾಡುಪ್ರಾಣಿಗಳ (Wild Life) ಪರಸ್ಪರ ಒಡನಾಟ ನೋಡಲು ಸಿಗುವುದು ಬಲು ಅಪರೂಪ. ಆದಾಗ್ಯೂ ಕೆಲ ರಾಷ್ಟ್ರೀಯ ಉದ್ಯಾನವನಗಳಲ್ಲಿ ಸಫಾರಿ ಸಮಯದಲ್ಲಿ ಕೆಲವು ಜಿಯೋಗ್ರಾಫಿಕ್ ಚಾನೆಲ್‌ಗಳು ಸೆರೆ ಹಿಡಿದ ವಿಡಿಯೋಗಳು ಸಾಕಷ್ಟು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ಕಡೆ ಕಾಡುಕೋಣ/ಕಾಡೆಮ್ಮೆಗಳ ಗುಂಪೊಂದು ಮಲಗಿದ್ದ ವಯಸ್ಸಾದ ಅಸಹಾಯಕ ಸಿಂಹವನ್ನು ಕೊಂಬಿನಲ್ಲಿ ತಿವಿದು ಬಡಿದೆಬ್ಬಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ತನ್ನ ಕರುವನ್ನು ಬೇಟೆಯಾಡಲು ಬಂದ ಸಿಂಹಗಳ ಹಿಮ್ಮಟ್ಟಿಸಿದ ಕಾಡೆಮ್ಮೆಗಳು

ಸಾಮಾನ್ಯವಾಗಿ ಸಿಂಹಗಳ ಸುದ್ದಿಗೆ ಬೇರಾವ ಪ್ರಾಣಿಗಳು ಹೋಗುವುದಿಲ್ಲ. ಸಿಂಹಗಳು ಅಷ್ಟೇ ಹಸಿದಿದ್ದರಷ್ಟೇ ಬೇರೆ ಪ್ರಾಣಿಗಳ ಮೇಲೆ ಬೇಟೆಯಾಡಿ ತಮ್ಮ ಹೊಟ್ಟೆ ತುಂಬಿಸುತ್ತವೆ. ಆದರೆ ಇಲ್ಲಿ ಈ ಕಾಡುಕೋಣಗಳಿಗೆ ಸಿಂಹವೇನು ಆಹಾರವಲ್ಲ. ಕಾಡುಕೋಣಗಳು ಸಸ್ಯಹಾರಿ ಪ್ರಾಣಿಗಳಾಗಿದ್ದು, ಸಿಂಹದ ಸುದ್ದಿಗೆ ಹೋಗುವುದಿಲ್ಲ. ಆದರೂ ಇಲ್ಲಿ ವಿಚಿತ್ರವೆಂಬಂತೆ ಮಲಗಿದ್ದ ಅಸಹಾಯಕ ಸಿಂಹದ ಮೇಲೆ ಕಾಡುಕೋಣಗಳ ಹಿಂಡು ತಮ್ಮ ದರ್ಪ ತೋರಿದ್ದು, ಅದನ್ನು ಕೊಂಬಿನಲ್ಲಿ ತಿವಿದಿದ್ದಲ್ಲದೇ, ಮೇಲೆತ್ತಿ ಕೆಳಗೆಸೆದು ಅದರ ಮೇಲೆ ಹಲ್ಲೆ ನಡೆಸಿವೆ. ಕಾಡುಕೋಣಗಳ ಉಪದ್ರ ತಡೆಯಲಾಗದೇ ಸಿಂಹ ಪೊದೆಯೊಂದನ್ನು ಸೇರಲು ನೋಡುತ್ತದೆ. ಆದರೂ ಬಿಡದೇ ಕಾಡುಕೋಣಗಳು ಅಲ್ಲಿಗೂ ದಾಳಿ ಇಟ್ಟು ಸಿಂಹವನ್ನು ಮೇಲೆ ಕೆಳಗೆ ಮಾಡುತ್ತವೆ. ಆದರೆ ಅಷ್ಟರಲ್ಲಿ ಸಿಂಹದ ಪರಿವಾರ ಅಲ್ಲಿಗೆ ಬಂದಿದ್ದು, ಅವುಗಳನ್ನು ನೋಡಿ ಕಾಡುಕೋಣಗಳು ಸುಮ್ಮನಾಗಿವೆ. ಕಳೆದ ವರ್ಷ ವೈರಲ್ ಆದ ವಿಡಿಯೋ ಇದಾಗಿದೆ. 

ಮಂಗಳೂರು: ಮೇವು ಅರಸಿ ಬಂದ ಕಾಡೆಮ್ಮೆಗಳು ಸಾವು

Follow Us:
Download App:
  • android
  • ios