ಎಮ್ಮೆಯ ಕರುವನ್ನು ಬೇಟೆಯಾಡಲು ಬಂದ ಸಿಂಹಗಳು ತನ್ನ ಮಗುವನ್ನು ರಕ್ಷಿಸಲು ಸಿಂಹವನ್ನು ಹಿಮ್ಮೆಟ್ಟಿಸಿದ ಎಮ್ಮೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಸಿಂಹಗಳು ಎಮ್ಮೆಯ ಕರುವಿನೊಂದರ ಮೇಲೆ ದಾಳಿ ಮಾಡುತ್ತಿದ್ದು, ಈ ವೇಳೆ ಎಮ್ಮೆಯೊಂದು ತನ್ನ ಕರುವನ್ನು ರಕ್ಷಿಸಲು ಹೋರಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ಎಮ್ಮೆಗಳನ್ನು ಸಿಂಹಗಳ ನೆಚ್ಚಿನ ಆಹಾರವೆಂದು ಕರೆಯಲಾಗುತ್ತದೆ. ಅವು ಬಹಳಷ್ಟು ಮಾಂಸವನ್ನು ಹೊಂದಿರುವ ದೊಡ್ಡ ಪ್ರಾಣಿಗಳಾಗಿವೆ. ಆದ್ದರಿಂದ ಸಿಂಹಗಳು ಎಮ್ಮೆಯನ್ನು ಬೇಟೆಯಾಡಿದರೆ ಅವುಗಳು ಸುಮಾರು ಐದು ದಿನಗಳವರೆಗೆ ಮತ್ತೆ ಬೇಟೆ ಆಡಬೇಕಾಗಿಲ್ಲ. ಆದಾಗ್ಯೂ, ತಮ್ಮ ಹೊಟ್ಟೆ ಪಾಡಿಗಾಗಿ ಬೇಟೆಯಾಡುವ ಸಿಂಹಗಳಿಗೆ ಎಮ್ಮೆ ಸುಲಭದ ತುತ್ತಾಗುವುದು ತುಂಬಾ ವಿರಳ. ಸಿಂಹಗಳು ಬೇಟೆಯಾಡಲು ಮುಂದಾದಾಗ ಎಮ್ಮೆಗಳ ಹಿಂಡು ಸಿಂಹವನ್ನು ತಮ್ಮ ಕೊಂಬಿನಲ್ಲಿ ಎತ್ತಿ ಗಾಳಿಯಲ್ಲಿ ದೂರಕ್ಕೆಸೆಯುವ ದೃಶ್ಯವನ್ನು ನಾವು ಮತ್ತೆ ಮತ್ತೆ ನೋಡಿದ್ದೇವೆ. ಎಮ್ಮೆಗಳನ್ನು ಬೇಟೆಯಾಡುವಾಗ ಕೆಲವು ಸಿಂಹಗಳಂತೂ ಭಾರಿ ಶ್ರಮ ಪಡುತ್ತವೆ.
ಹಾಗೆಯೇ ಇಲ್ಲೊಂದು ವಿಡಿಯೋದಲ್ಲಿ ಸಿಂಹಗಳು ಎಮ್ಮೆಯ ಕರುವೊಂದರ ಮೇಲೆ ದಾಳಿ ಮಾಡಲು ಮುಂದಾಗಿವೆ. ಈ ವೇಳೆ ತಾಯಿ ಎಮ್ಮೆ ತಮ್ಮ ಮರಿಯನ್ನು ರಕ್ಷಿಸಲು ಅವುಗಳ ವಿರುದ್ಧ ಪ್ರಬಲವಾಗಿ ಹೋರಾಡುತ್ತಿದೆ. ಎಮ್ಮೆಯೊಂದು ತನ್ನ ಕೊಂಬಿನಲ್ಲಿ ಸಿಂಹವನ್ನು ದೂರ ಸರಿಸಲು ಪ್ರಯತ್ನಿಸುತ್ತಿದೆ. ಈ ವೇಳೆ ಇನ್ನೆರಡು ಸಿಂಹಗಳು ಅಲ್ಲಿಗೆ ಬಂದು ಕರುವಿನ ಮೇಲೆ ದಾಳಿಗೆ ಮುಂದಾಗುತ್ತವೆ. ಇದನ್ನು ನೋಡಿದ ಇತರ ಎಮ್ಮೆಗಳು ತಾಯಿ ಎಮ್ಮೆಗೆ ಜೊತೆಯಾಗಿದ್ದು ಎಲ್ಲವೂ ಸೇರಿ ಆ ಮೂರು ಸಿಂಹಗಳನ್ನು ದೂರ ಅಟ್ಟುತ್ತವೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತಾಯಿ ಪ್ರೀತಿಯನ್ನು ಎತ್ತಿ ತೋರಿಸುತ್ತಿದೆ. ತನ್ನ ಮಗುವನ್ನು ರಕ್ಷಿಸಿಕೊಳ್ಳಲು ತಾಯಿ ಏನೂ ಬೇಕಾದರೂ ಮಾಡಲು ಸಿದ್ಧವಾಗಿರುತ್ತಾಳೆ. ಈ ಭಾತೃತ್ವ ಕೇವಲ ಮನುಷ್ಯರಲ್ಲಿ ಮಾತ್ರವಲ್ಲ ಪ್ರಾಣಿಗಳಲ್ಲೂ ಇದೆ ಎಂಬುದನ್ನು ಎಮ್ಮೆಗಳು ಸಾಬೀತು ಪಡಿಸಿವೆ.
ಇದೆಂಥಾ ಸಿಂಹ : ಎಮ್ಮೆಗಳ ಹಿಂಡು ನೋಡಿ ಮರ ಏರಿದ ಕಾಡಿನ ರಾಜ!
ತನ್ನ ಮಗುವಿನ ವಿಚಾರಕ್ಕೆ ಬಂದಾಗ ತಾಯಿ ಎಮ್ಮೆ ನೀಡಿದ ಪ್ರಬಲ ಹೋರಾಟದಿಂದ ಬೆಚ್ಚಿ ಬಿದ್ದ ಸಿಂಹಗಳು ದೂರ ಸರಿಯುವುದ್ನು ಈ ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ವೈಲ್ಡ್ ಅನಿಮಲ್ ಶಾರ್ಟ್ಸ್ ಎಂಬ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಹದಿನೈದು ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ವನ್ಯಜೀವಿಗಳ ಅಚ್ಚರಿಕರವಾದ ಇಂತಹ ಹಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ನೋಡಿರಬಹುದು. ಕೆಲ ದಿನಗಳ ಹಿಂದೆ ಸಿಂಹವೊಂದು ಎಮ್ಮೆಗಳ ಹಿಂಡು ಕಂಡು ಮರವೇರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಸಿಂಹಗಳು ಯಾವಾಗಲೂ ಧೈರ್ಯಕ್ಕೆ ಹೆಸರುವಾಸಿ, ಕಾಡಿನ ರಾಜ ಎಂದು ಕರೆಯಲ್ಪಡುವ ಸಿಂಹಗಳು ತನ್ನ ಬೇಟೆ ನೋಡಿದಾಗ ಮೇಲೆ ಎಗರಿ ಬೀಳುವುದೇ ಹೆಚ್ಚು. ಇತರ ಪ್ರಾಣಿಗಳು ಅಷ್ಟೇ ಸಿಂಹವನ್ನು ನೋಡಿದಾಗ ಜೀವ ಉಳಿಸಿಕೊಳ್ಳಲು ಸ್ಥಳದಿಂದ ಓಡಲು ಶುರು ಮಾಡುತ್ತವೆ. ಆದರೆ ಇಲ್ಲೊಂದು ಕಡೆ ವಿಡಿಯೋದಲ್ಲಿ ಎಮ್ಮೆಗಳ ಹಿಂಡು ನೋಡುತ್ತಿದ್ದಂತೆ ಸಿಂಹವೊಂದು ಮರವೇರಿದ್ದು ಕೆಳಗೆ ಎಮ್ಮೆಗಳ ದೊಡ್ಡ ಹಿಂಡಿದೆ.
Fact Check: ಬಿಸಿಲಿನಿಂದ ಸಿಂಹದ ಮರಿ ಕಾಪಾಡಿದ ಆನೆ ಫೋಟೋ ವೈರಲ್, ಅಷ್ಟಕ್ಕೂ ಸತ್ಯವೇನು?
ಎಮ್ಮೆಗಳ ಹಿಂಡಿನಿಂದ ತಪ್ಪಿಸಿಕೊಳ್ಳಲು ಸಿಂಹವೊಂದು ಮರವನ್ನು ಹತ್ತಲು ಪ್ರಯತ್ನಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಜನ ಅಚ್ಚರಿಗೊಳಗಾಗಿದ್ದಾರೆ. ದಣಿದಿದ್ದ ಸಿಂಹ ಮರದಲ್ಲಿ ಕ್ರಮೇಣ ತನ್ನ ಹಿಡಿತವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ ಮತ್ತು ವೀಡಿಯೊ ಥಟ್ಟನೆ ಕೊನೆಗೊಂಡಾಗ ತೊಗಟೆಯ ಕೆಳಗೆ ಜಾರಲು ಪ್ರಾರಂಭಿಸುತ್ತದೆ. ಆದರೆ ಈ ವೀಡಿಯೊವನ್ನು ಎಲ್ಲಿ ಸೆರೆ ಹಿಡಿಯಲಾಗಿದೆ ಎಂಬ ಬಗ್ಗೆ ಉಲ್ಲೇಖವಿಲ್ಲ. ಈ ವೀಡಿಯೊವನ್ನು 22,000 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಎಮ್ಮೆಗಳಿಗೆ ಹೆದರಿದ ಸಿಂಹ ಮರವೇರಿ ಅದರ ಜೀವ ಉಳಿಸಿಕೊಳ್ಳಲು ನೋಡುತ್ತಿರುವ ದೃಶ್ಯವನ್ನು ನೋಡಿದ ಜನ ಸಾಮಾಜಿಕ ಜಾಲತಾಣದಲ್ಲಿ ಹಾಸ್ಯ ಮಾಡುತ್ತಿದ್ದಾರೆ.