Asianet Suvarna News Asianet Suvarna News

ಅಪ್ಘಾನಿಸ್ತಾನದಲ್ಲಿ ತಾಲಿಬಾನಿಯರ ಅಟ್ಟಹಾಸ, ಅಮೆರಿಕದ ಸೇನೆ ಸೋತಿದ್ದೇಕೆ?

* ಅಫ್ಘಾನಿಸ್ತಾನದಲ್ಲಿ ತಾಲೀಬಾನಿಯರ ಅಟ್ಟಹಾಸ

* ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಸಂಪೂರ್ಣ ಸರಿಪಡಿಸಲು ಅಮೆರಿಕ ವಿಫಲ

* ಅಮೆರಿಕದ ವೈಫಲ್ಯಕ್ಕೆ ಕಾರಣವೇನು?

Why US Military Failed in Afghanistan and What it Means for World Order by Lt Gen Syed Ata Hasnain Retd pod
Author
Bangalore, First Published Jul 16, 2021, 5:04 PM IST
  • Facebook
  • Twitter
  • Whatsapp

ಲೇಖಕರು: ಲೆಫ್ಟಿನೆಂಟ್ ಜನರಲ್ ಸೈಯದ್ ಅಟಾ ಹಸ್ನೈನ್ (ನಿವೃತ್ತ)
ಶ್ರೀನಗರ: 15 ಕಾರ್ಪ್ಸ್ ಮಾಜಿ ಕಮಾಂಡರ್ ಮತ್ತು ಕಾಶ್ಮೀರದ ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ.

ಅಫ್ಘಾನಿಸ್ತಾನದಿಂದ ಅಮೆರಿಕ ಮಿಲಿಟರಿ ಪಡೆ ಸಂಪೂರ್ಣವಾಗಿ ತೆರವಾಗಿದೆ. ಅಮೆರಿಕ ಪಡೆ ಅಫ್ಘಾನಿಸ್ತಾನದಿಂದ ಮರಳುತ್ತಿದ್ದಂತೆಯೇ, ಕಳೆದ ಕೆಲ ವರ್ಷಗಳಿಂದ ಅದು ಕೈಗೊಂಡ ದಂಡಯಾತ್ರೆಗಳನ್ನು ಜನರು ನೆನಪಿಸಿಕೊಳ್ಳಲಾರಂಭಿಸಿದ್ದಾರೆ.

ತಾಲಿಬಾನಿಯರ ಅಟ್ಟಹಾಸ: ಭಾರತೀಯ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಬಲಿ!

ಅಮೆರಿಕ ವಿಯೆಟ್ನಾಂನಿಂದ ತನ್ನ ಸೇನೆ ಹಿಂದೆ ಕರೆಸಿಕೊಂಡ ಪ್ರಸಂಗ ಅತ್ಯಂತ ಪ್ರಸಿದ್ಧವಾಗಿದೆ. ಇದನ್ನು ಇಂದಿಗೂ 'ಲಾಸ್ಟ್‌ ಹೆಲಿಕಾಪ್ಟರ್' ಎಂದೇ ಕರೆಯಲಾಗುತ್ತದೆ. ಯಾಕೆಂದರೆ ಅಂದು ಅಮೆರಿಕ ಪಡೆ ಹಿಂದಿರುಗುವ ಸಮಯದಲ್ಲಿ ಅಮೆರಿಕದ ಹೆಲಿಕಾಪ್ಟರ್‌ಗಳು ಸೈಗಾನ್‌ನಿಂದ ಹೊರಟಿದ್ದವು. ಆದರೆ ಅವುಗಳನ್ನು ಹಡಗಿನಲ್ಲಿ ತರಲು ಸಾಧ್ಯವಾಗಲಿಲ್ಲ. ಬಹುತೇಕ ಹೆಲಿಕಾಪ್ಟರ್‌ಗಳನ್ನು ಸಮುದ್ರದಲ್ಲಿ ಮುಳುಗಿಸಲಾಯ್ತು. ಕೇವಲ ಇದರ ಸಂಕೇತವಾಗಿ, ಸೈಗಾನ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿಯ ಮೇಲ್ ಛಾವಣಿಯಿಂದ ಹೆಲಿಕಾಪ್ಟರ್ ಅನ್ನು ಕೆಳಕ್ಕೆ ಹಾರಿಸಲಾಯಿತು, ಇದನ್ನು 'ಲಾಸ್ಟ್ ಹೆಲಿಕಾಪ್ಟರ್' ಎಬನ್ನಲಾಯ್ತು.

ಈಗ ಅಫ್ಘಾನಿಸ್ತಾನದಿಂದ ಅಮೆರಿಕ ತನ್ನ ಸೇನೆ ಹಿಂತೆಗೆದುಕೊಳ್ಳುವ ಸಮಯದಲ್ಲಿ 'ಲಾಸ್ಟ್ ಹೆಲಿಕಾಪ್ಟರ್' ನಂತಹ ಯಾವುದೇ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿದೆ. ಬಹುಶಃ ಇದೇ ಕಾರಣದಿಂದ ಅಪ್ಘಾನಿಸ್ತಾನದಿಂದ ಮರಳುವ ಮರಳಲು ನಿಗಧಿಯಾದ ಕೊನೇ ದಿನಾಂಕ 2021 ರ ಆಗಸ್ಟ್ 31ಕ್ಕೂ ಮೊದಲೇ ಬಾಗ್ರಾಮ್ ವಾಯುನೆಲೆಯನ್ನು ಸಂಪೂರ್ಣವಾಗಿ ಖಾಲಿ ಮಾಡಿರುವುದಕ್ಕೆ ಇದೇ ಕಾರಣವಿರಬಹುದು.

ಸ್ಮಶಾನಗಳ ಸಾಮ್ರಾಜ್ಯವಾದ ಅಪ್ಘಾನಿಸ್ತಾನ: ಅಮೆರಿಕ ಪಡೆ ನಿರ್ಗಮನ, ತಾಲೀಬಾನಿಯರ ಅಟ್ಟಹಾಸ!

ವಾಸ್ತವವಾಗಿ, ಹೆಲಿಕಾಪ್ಟರ್‌ಗಳು ಅಮೆರಿಕದ ಮಿಲಿಟರಿ ಇತಿಹಾಸದ ಕೆಲವು ನಕಾರಾತ್ಮಕ ಘಟನೆಗಳನ್ನು ಸಂಕೇತಿಸುತ್ತವೆ. ಅಮೆರಿಕದ ಒತ್ತೆಯಾಳುಗಳನ್ನು ಟೆಹ್ರಾನ್‌ನಿಂದ ರಕ್ಷಿಸಲು ವಿಫಲವಾದ 1980 ರ ಡೆಲ್ಟಾ ಫೋರ್ಸ್ ಕಾರ್ಯಾಚರಣೆಯಲ್ಲಿ (ಆಪರೇಷನ್ ಈಗಲ್ ಕ್ಲಾ) ಹೆಲಿಕಾಪ್ಟರ್‌ಗಳು ಭಾಗಿಯಾಗಿದ್ದವು ಮತ್ತು ಸೊಮಾಲಿಯಾದ ಮೊಗಾಡಿಶುನಲ್ಲಿ 1993 ರ ಕಾರ್ಯಾಚರಣೆ (ಆಪರೇಷನ್ ಗೋಥಿಕ್ ಸರ್ಪ) - ಇದನ್ನು ಸಾಮಾನ್ಯವಾಗಿ 'ಬ್ಲ್ಯಾಕ್ ಹಾಕ್ ಡೌನ್' ಎಂದು ಕರೆಯಲಾಗುತ್ತದೆ.

ಯಾವುದೇ ರೀತಿ ಪೂರ್ವಾಗ್ರಹಪೀಡಿತರಾಗದಿರಲು, 1989 ರ ಸೋವಿಯತ್ ಸೋಲು ಮತ್ತು ಅಫ್ಘಾನಿಸ್ತಾನದಿಂದ ಹಿಂದೆ ಸರಿದಿದ್ದನ್ನು ನೆನಪಿಸಿಕೊಳ್ಳುವುದು ಅತೀ ಅಗತ್ಯ. ಇದು ಶೀತಲ ಸಮರವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 1980 ರ ದಶಕದ ವಿಯೆಟ್ನಾಂ ಮತ್ತು ಸೋವಿಯತ್ ಅಫ್ಘಾನಿಸ್ತಾನ ಅಭಿಯಾನಗಳು ಶೀತಲ ಸಮರದ ಸಮಯದಲ್ಲಿ, ಎರಡು ಪ್ರತಿಸ್ಪರ್ಧಿಗಳಾಗಿದ್ದವು ಎಂಬುದು ವಿಶ್ಲೇಷಕರ ದೃಷ್ಟಿಯಲ್ಲಿ ಮಹತ್ವ ಪಡೆದುಕೊಳ್ಳುತ್ತದೆ.

ಶರಣಾದ 22 ಆಫ್ಘಾನಿಸ್ತಾನ ಯೋಧರ ಮೇಲೆ ಗುಂಡಿನ ಸುರಿಮಳೆಗೈದ ತಾಲಿಬಾನ್ ಉಗ್ರರು!

2001 ರಿಂದ, ಪ್ರಸ್ತುತ ಪೀಳಿಗೆಯ ಯುಎಸ್ ಪಡೆಗಳು ಮತ್ತು ಅವರ ಮಿತ್ರರಾಷ್ಟ್ರಗಳು ಅಫ್ಘಾನಿಸ್ತಾನದಲ್ಲಿ ಅತ್ಯಂತ ಕಠಿಣ ಯುದ್ಧಗಳನ್ನು ನಡೆಸಿದ್ದಾರೆ, ಆದರೆ ಈ ಎಲ್ಲದರ ಹೊರತಾಗಿಯೂ, ಅಫ್ಘಾನಿಸ್ತಾನವು 'ಸ್ಮಶಾನಗಳ ಸಾಮ್ರಾಜ್ಯ'ವಾಗಿ ಉಳಿದಿದೆ.

ಅಮೆರಿಕದ ಪಡೆ ಮರಳಿರುವುದು ಸೋಲಿನ ಸಂಕೇತವೋ ಅಥವಾ ತನ್ನ ಉದ್ದೇಶಗಳನ್ನು ಸಾಧಿಸಿದೆ ಎಂದು ಹೇಳಿಕೊಳ್ಳಲು ಇಟ್ಟ ಹೆಜ್ಜೆಯೋ ಎಂದು ಭವಿಷ್ಯದಲ್ಲಿ ವಿಶ್ಲೇಷಿಸಲಾಗುತ್ತದೆ ಎಂಬುವುದರಲ್ಲಿ ಅನುಮಾನವಿಲ್ಲ. ಒಂದು ಸ್ಥಿರವಾದ, ಶಕ್ತಿಶಾಲಿ, ಪರಿಣಾಮಕಾರಿ ಆಡಳಿತ ಹೊಂದಿರುವ ಅಪ್ಘಾನಿಸ್ತಾನ ನಿರ್ಮಿಸುವುದು ಅಧ್ಯಕ್ಷ ಬುಷ್ ಅವರ ಉದ್ದೇಶವಾಗಿತ್ತು. ಇದನ್ನು ಅಂದಿನ ಪ್ರಧಾನಿ ಬರಾಕ್ ಒಬಾಮಾ ಕಾರ್ಯಾಚರಣೆ ಮೂಲಕ 'ಅಫ್ಘಾನಿಸ್ತಾನವು ಜಾಗತಿಕ ಭಯೋತ್ಪಾದನೆಗೆ ಸುರಕ್ಷಿತ ತಾಣವಾಗುವುದನ್ನು ತಡೆಯಲು' ಕ್ರಮ ವಹಿಸಿದರು.

ತಾಲಿಬಾನ್‌ಗೆ ಹೆದರಿ ಆಫ್ಘನ್‌ ಯೋಧರು ನೆರೆ ದೇಶಕ್ಕೆ ಪರಾರಿ!

ಈ ಹೇಳಿಕೆಗಳನ್ನು ವ್ಯಾಖ್ಯಾನಿಸಿದರೆ, ಇವರಿಬ್ಬರೂ ಅಫ್ಘಾನಿಸ್ತಾನದಲ್ಲಿ ಯಾವುದೇ ರೀತಿಯ ಉಗ್ರವಾದದ ಸ್ಥಿರೀಕರಣ ಮತ್ತು ಉಗ್ರವಾದ ತಡೆಗಟ್ಟುವ ಉದ್ದೇಶ ಹೊಂದಿದ್ದರೆಂಬುವುದು ಸ್ಪಷ್ಟ. ಯಾಕೆಂದರೆ ಉಗ್ರವಾದ ಅಥವಾ ಅಸ್ಥಿರತೆಯು ಜಗತ್ತಿಗೆ ಮತ್ತು ವಿಶೇಷವಾಗಿ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳಿಗೆ ಅಪಾಯವನ್ನುಂಟು ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಹೀಗಾಗಿ 9/11 ರ ದುಷ್ಕರ್ಮಿಗಳನ್ನು ಸೋಲಿಸಿ, ಉಗ್ರಗಾಮಿ ಸಿದ್ಧಾಂತಗಳ ಮೇಲೆ ನಿಯಂತ್ರಣ ಹೇರುವುದು, ಮತ್ತು ಭಯೋತ್ಪಾದನೆ ತಲೆ ಎತ್ತುವುದನ್ನು ತಡೆಯಲು ಸಹಾಯಕವಾಗುತ್ತದೆ ಮತ್ತು ಇದು ವಿರೋಧಿಗಳ ಮೇಲೆ ಮಿಲಿಟರಿ ಶ್ರೇಷ್ಠತೆಯ ಪರಿಣಾಮವನ್ನು ಸಹ ಸೃಷ್ಟಿಸಿ, ಅವರು ಬಲಶಾಲಿಗಳಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ ಎಂಬುವುದು ಅವರ ಉದ್ದೆಶವಾಗಿತ್ತು.

ತೊಡಕಾದ ಪಾಕಿಸ್ತಾನ

ಅಮೆರಿಕದ ಯಶಸ್ಸಿಗೆ ಕಂಟಕವಾದ ರಾಷ್ಟ್ರಗಳಲ್ಲಿ ಪಾಕಿಸ್ತಾನವೂ ಒಂದು. ಇದು ಸೋವಿಯತ್ ಒಕ್ಕೂಟದ ವಿರುದ್ಧದ ಯುದ್ಧದಲ್ಲಿ ದೀರ್ಘಕಾಲ ಭಾಗವಹಿಸಿದ ಮತ್ತು ಮುಂಚೂಣಿಯ ರಾಜ್ಯವಾಗಿತ್ತು. ಉಗ್ರಗಾಮಿ ಇಸ್ಲಾಂ ಧರ್ಮದ ಪೂರ್ಣ ಚಕ್ರವು ಮುಖ್ಯವಾಗಿ 1980 ರ ದಶಕದಲ್ಲಿ ಅಫ್ಘಾನ್ ನಿರಾಶ್ರಿತರ ಶಿಬಿರಗಳಲ್ಲಿ ಅವರ ಆಜ್ಞೆಯ ಮೇರೆಗೆ ಪ್ರಾರಂಭವಾಯಿತು, ಅಲ್ಲಿಂದ ತಾಲಿಬಾನ್ ಹೊರಹೊಮ್ಮಿತು. ಇದು ಸೋವಿಯತ್ ಒಕ್ಕೂಟದ ವಿರುದ್ಧ ವಿಶ್ವದಾದ್ಯಂತ ಇಸ್ಲಾಮಿಕ್ ಭಯೋತ್ಪಾದನೆಗೆ ಕಾರಣವಾಯಿತು. ಸೌದಿ ಅರೇಬಿಯಾದ ಆರ್ಥಿಕ ಶಕ್ತಿ ಮತ್ತು ಅಮೆರಿಕದಿಂದ ಬಂದ ಭೌತಿಕ ಸಂಪನ್ಮೂಲಗಳ ಸಹಾಯದಿಂದ ಇದೆಲ್ಲವೂ ನಡೆಯುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.

ಆಫ್ಘಾನಿಸ್ತಾನದ ಶೇ.85 ಭಾಗ ತಾಲಿಬಾನ್‌ ವಶಕ್ಕೆ: ಅಮೆರಿಕ ಪಡೆ ವಾಪಾಸ್‌, ಉಗ್ರರ ಅಟ್ಟಹಾಸ!

ವಾಸ್ತವವಾಗಿ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ಗೆ ಸಹಾಯ ಮಾಡುವ ಮೂಲಕ ಅಲ್ಲಿನ ಭಾರತೀಯ ಪ್ರಭಾವವನ್ನು ತಟಸ್ಥಗೊಳಿಸಿ, ಜಮ್ಮು ಮತ್ತು ಕಾಶ್ಮೀರದಲ್ಲೂ ತನ್ನ ಛಾಪನ್ನು ಬಿಡಲು ಸಾಧ್ಯವಾಗುತ್ತದೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮ ಕಾರ್ಯತಂತ್ರದಿಂದ ಯಶಸ್ವಿಯಾಗಲು ಸಹ ಸಾಧ್ಯವಾಗುತ್ತದೆ ಎಂದು ಪಾಕಿಸ್ತಾನ ಭಾವಿಸಿತ್ತು. 

ಪಾಕಿಸ್ತಾನದ ಕಾರ್ಯತಂತ್ರದ ಭಾಗವೆಂಬಂತೆ, ಇಡೀ ತಾಲಿಬಾನ್ ನಾಯಕತ್ವ ಪಾಕಿಸ್ತಾನದಲ್ಲಿ ಮತ್ತೆ ಬಲಶಾಲಿಯಾಯ್ತು ಹಾಗೂ ಅಲ್-ಖೈದಾದಂತೆ ವರ್ಷಗಳ ಕಾಲ ಇಲ್ಲಿಯೇ ಇದ್ದರು. ಈ ನಡುವೆ ಸ್ವತಃ ಅಮೆರಿಕ ಇದಕ್ಕೆ ಬಲಿಪಶುವಾಗಿದ್ದರೂ, ಪಾಕಿಸ್ತಾನವನ್ನು ಟೀಕಿಸುವಲ್ಲಿ ಅಸಮರ್ಥವಾಯ್ತು. ಕರಾಚಿಗೆ ಮತ್ತು ನಂತರ ರಸ್ತೆಯ ಮೂಲಕ ತನ್ನ ಸರಬರಾಜುಗಳನ್ನು ಸಾಗಿಸಲು ಸಮುದ್ರ ಮಾರ್ಗಗಳನ್ನು ಅವಲಂಬಿಸಿರುವುದೇ ಇದಕ್ಕೆ ಕಾರಣವಾಗಿತ್ತು. ಏಕೆಂದರೆ ಸಿಎಆರ್‌ನಲ್ಲಿ ಏರ್‌ಹೆಡ್‌ಗಳ ಮೂಲಕ ಯುದ್ಧ ಮಾಡುವುದು ಅತ್ಯಂತ ದುಬಾರಿಯಾಗಿದೆ. ಇದು ಬಹುಶಃ ತಾಲಿಬಾನ್ ದೀರ್ಘಾಯುಷ್ಯವನ್ನು ನೀಡಿದ ಏಕೈಕ ಪ್ರಮುಖ ಅಂಶವಾಗಿದೆ, ಇದು ಅವರಿಗೆ ಇನ್ನೊಂದು ದಿನ ಆಳ್ವಿಕೆ ನಡೆಸಲು ಅನುವು ಮಾಡಿಕೊಡುತ್ತದೆ.

ಅಮೆರಿಕ ಅಫ್ಘಾನ್ ನ್ಯಾಷನಲ್ ಆರ್ಮಿ (ಎಎನ್ಎ) ಗೆ ತರಬೇತಿ ನೀಡಿತು ಮತ್ತು ಭಾರತವೂ ಸಹಾಯ ಮಾಡಿತು. ಹೀಗಿದ್ದರೂ ಇದು ಕೆಲವು ವರ್ಷಗಳಲ್ಲಿ ಹೆಚ್ಚು ನುರಿತ ವೃತ್ತಿಪರ ಶಕ್ತಿಯಾಗಿ ಹೊರಹೊಮ್ಮುತ್ತದೆ ಎಂದು ನಿರೀಕ್ಷಿಸುವುದು ಸರಿಯಲ್ಲ. ಎಎನ್‌ಎ ಯೋಧರಲ್ಲಿ ಧೈರ್ಯಕ್ಕೆ ಕೊರತೆ ಇರಲಿಲ್ಲ, ಆದರೆ ಮಧ್ಯಮದಿಂದ ಉನ್ನತ ಮಟ್ಟದ ನಾಯಕತ್ವದ ಅನುಭವವಿಲ್ಲದೆ ಒಬ್ಬರು ವೃತ್ತಿಪರವಾಗಿ ಬಲಶಾಲಿಯಾಗಲು ಸಾಧ್ಯವಿಲ್ಲ. ಜೊತೆಗೆ ಇವರ ಮೇಲಿನ ನಂಬಿಕೆಯೂ ಕಡಿಮೆ ಇತ್ತು (ನಿಷ್ಠೆಯಲ್ಲಿ ಅಲ್ಲ, ಆದರೆ ಸಾಮರ್ಥ್ಯದಲ್ಲಿ). ಹೀಗಾಗಿ ನಿರಂತರ ಭಯದಿಂದಾಗಿ, ಅವರು ಉತ್ತಮ ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳನ್ನು ಹೊಂದದಂತೆ ತಡೆಯಲಾಯಿತು. ಮತ್ತೊಂದೆಡೆ, ತಾಲಿಬಾನ್ ಈ ಎಲ್ಲಾ ಸಾಧನಗಳನ್ನು ವಿದೇಶಿ ಶಕ್ತಿಗಳ ವಿರುದ್ಧ ಭವಿಷ್ಯದಲ್ಲಿ ಪ್ರಯೋಗಿಸುವ ಅಪಾಯವೂ ಇತ್ತು.

ಮತ್ತೆ ಭಯೋತ್ಪಾದಕರ ತೆಕ್ಕೆಗೆ ಜಾರಿದ ಆಷ್ಘಾನಿಸ್ತಾನ: ಕಂದಹಾರ್‌ ತಾಲಿಬಾನ್‌ ವಶ!

ಮರಳುವ ವೇಳೆ, ಎಎನ್‌ಎಗೆ ಸಹಾಯ ಮಾಡಲು ಸಶಸ್ತ್ರ ಡ್ರೋನ್‌ಗಳು ಮತ್ತು ಕೆಲವು ವಿಂಗ್ ಸ್ವತ್ತುಗಳನ್ನು ಉಡಾಯಿಸಲು ಅಮೆರಿಕ ಪಾಕಿಸ್ತಾನದಿಂದ ವಾಯುನೆಲೆ ಸೌಲಭ್ಯಗಳನ್ನು ಕೋರಿತು, ಆದರೆ ಒಪ್ಪಂದಕ್ಕೆ ಬರಲು ಸಾಧ್ಯವಾಗಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಅಧ್ಯಕ್ಷ ಜಾರ್ಜ್ ಬುಷ್ ಜೂನಿಯರ್ ಅವರ ಅವಧಿಯಲ್ಲಿ, ಪಾಕಿಸ್ತಾನದ ನಾಯಕತ್ವವನ್ನು ಬಹಳ ಬಹಳ ಎಚ್ಚರಹಿಸಿ ಮುನ್ನಡೆಸಲಾಯ್ತು. ಸಹಕಾರ ನಿಡದಿದ್ದರೆ ಪಾಕಿಸ್ತಾನವನ್ನು ಶಿಲಾಯುಗಕ್ಕೆ ಕಳುಹಿಸುವುದಾಗಿ ಬೆದರಿಕೆ ಹಾಕಲಾಯ್ತು. ಅದೇನಿದ್ದರೂ ಅಫ್ಘಾನಿಸ್ತಾನ ಸೈನ್ಯವನ್ನು ಸಾಕಷ್ಟು ವಾಯು ಬೆಂಬಲದೊಂದಿಗೆ ಬಿಟ್ಟು ಹಿಂದಿರುಗುವುದು ಸಹ ಅಮೆರಿಕದ ಖ್ಯಾತಿಗೆ ಪ್ರಶ್ನಾರ್ಥಕ ಚಿಹ್ನೆಯಾಗಿ ಉಳಿಯುತ್ತದೆ.

ಅಮೆರಿಕ ತನ್ನ ಸಿದ್ಧಾಂತವನ್ನು ಪ್ರಶ್ನಿಸುವುದಿಲ್ಲ: ತಾಲಿಬಾನ್ ನಂಬಿಕೆ

ಯುದ್ಧವನ್ನು ಗೆಲ್ಲಲು, ಮಿಲಿಟರಿ ಶ್ರೇಷ್ಠತೆಗಿಂತ ಹೆಚ್ಚಿನದು ಸಾಂಪ್ರದಾಯಿಕ ಸ್ವರೂಪ ಮತ್ತು ನೈಸರ್ಗಿಕ ಬೆಂಬಲ ಶ್ರೇಷ್ಠವಾಗಿರಬೇಕು. ಪ್ರತೀಕಾರಕ್ಕಾಗಿ ಅಮೆರಿಕ ಅಫ್ಘಾನಿಸ್ತಾನದಲ್ಲಿದೆ ಮತ್ತು ತನ್ನ ಇತರ ಗುರಿ ಸಾಧಿಸಲು ಹೆಚ್ಚು ಬದ್ಧವಾಗಿರುವುದಿಲ್ಲ ಎಂದು ತಾಲಿಬಾನ್ ಬಹಳ ಹಿಂದೆಯೇ ಅರ್ಥಮಾಡಿಕೊಂಡಿದೆ. ಸಿದ್ಧಾಂತಕ್ಕೆ ಸಂಬಂಧಿಸಿದಂತೆ ಅದು ತನ್ನ ಷಡ್ಯಂತ್ರಗಳನ್ನು ಬದಲಾಯಿಸಿಲ್ಲ. ಉದಾಹರಣೆಗೆ, ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಸ್ಥಾನಮಾನವು ಅಂತಾರಾಷ್ಟ್ರೀಯ ಸಮುದಾಯಕ್ಕೆ ಕಳವಳಕಾರಿಯಾಗಿದೆ. ಹೀಗಿದ್ದರೂ, ವಿಶೇಷವಾಗಿ ಪಾಶ್ಚಿಮಾತ್ಯ ಪ್ರಪಂಚದ ವಿರುದ್ಧ ಭಯೋತ್ಪಾದನೆಯನ್ನು ಉತ್ತೇಜಿಸಲು ಅಪ್ಘಾನ್‌ನ್ನು ಬಳಸುವುದು ಅಸಾಧ್ಯ. ಆದರೂ, ಪ್ರಾದೇಶಿಕವಾಗಿ ಈ ವಿಷಯದ ಬಗ್ಗೆ ಮನವರಿಕೆ ಮಾಡಲು ಸಾಧ್ಯವಿಲ್ಲ.

ಕಂದಹಾರ್‌ನಿಂದ ಭಾರತದ ಸಿಬ್ಬಂದಿ ಸಿಬ್ಬಂದಿ ವಾಪಸ್‌!

ತಾಲಿಬಾನ್‌ನ ತರ್ಕವಿಲ್ಲದ ಉದಾಹರಣೆಯೆಂದರೆ ಶರಣಾಗಲು ಪ್ರಯತ್ನಿಸುತ್ತಿದ್ದ 22 ಎಎನ್‌ಎ ವಿಶೇಷ ಪಡೆಗಳ ಸಿಬ್ಬಂದಿಯನ್ನು ಕೊಂದಿರುವುದು. ಇದು ಅವರ ಕ್ರೌರ್ಯವನ್ನು ತೋರಿಸಿಕೊಡುತ್ತದೆ. ಹೀಗಾಗಿ ಸರ್ಕಾರ ಮತ್ತು ತಾಲಿಬಾನ್ ನಡುವೆ ನಡೆಯುತ್ತಿರುವ ಎಲ್ಲಾ ಮಾತುಕತೆಗಳನ್ನು ವಿಫಲವೆಂದು ಪರಿಗಣಿಸಬೇಕು. ಇನ್ನು ಪ್ರಸ್ತುತ ಪರಿಸ್ಥಿತಿಯಲ್ಲಿ ನಿಜಕ್ಕೂ ಆಸಕ್ತಿದಾಯಕ ಅಂಶವೆಂದರೆ ತಾಲಿಬಾನ್ ನಿಯಂತ್ರಣವನ್ನು ಪಡೆಯಲು ಪ್ರಯತ್ನಿಸುತ್ತಿದ್ದು, ಅತ್ತ ಎಎನ್ಎ ಯುದ್ಧ ಮುಂದುವರೆಸಿರುವುದು. ಇದರಲ್ಲಿ ವಿದೇಶಿ ಹಸ್ತಕ್ಷೇಪವೂ ಇದೆ. ಯಾವಾಗಲೂ ಗ್ರೇಟ್ ಗೇಮ್ ಸಿಂಡ್ರೋಮ್‌ನ ಭಾಗವಾಗಿರುವ ಅಫ್ಘಾನಿಸ್ತಾನವು ಚೀನಾ ಮತ್ತು ರಷ್ಯಾದ ಹಸ್ತಕ್ಷೇಪ ಕಾಣುವ ಸಾಧ್ಯತೆಯಿದೆ. ಆದರೆ ಅಮೆರಿಕ ಮತ್ತು ಪಶ್ಚಿಮಾತ್ಯ ದೇಶಗಳು ಇಲ್ಲಿ ಭಾಗಿಯಾಗುವ ತೀವ್ರ ಆಸಕ್ತಿ ಇದ್ದರೂ ಕೊಂಚ ದೂರ ಉಳಿಯಲಿವೆ. ಹೀಗಾಗಿ ಎಲ್ಲರೂ ಸದ್ಯ ಅಅವಕಾಶಕ್ಕಾಗಿ ಕಾಯುತ್ತಿದ್ದಾರೆ. 

Follow Us:
Download App:
  • android
  • ios