ಶರಣಾದ 22 ಆಫ್ಘಾನಿಸ್ತಾನ ಯೋಧರ ಮೇಲೆ ಗುಂಡಿನ ಸುರಿಮಳೆಗೈದ ತಾಲಿಬಾನ್ ಉಗ್ರರು!
- ಆಫ್ಘಾನಿಸ್ತಾನದಲ್ಲಿ ತಾಲಿಬಾನ ಉಗ್ರರ ಅಟ್ಟಹಾಸ
- ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ ಆಫ್ಘಾನ್ ಸೈನಿಕರ ಮೇಲೆ ಗುಂಡು
- 22 ಆಫ್ಘಾನ್ ಯೋಧರ ನರಮೇಧ ನಡೆಸಿದ ಉಗ್ರರು
ಕಾಬೂಲ್(ಜು.13): ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಮೆರಿಕ ಸೇನೆ ಆಫ್ಘಾನ್‌ಗೆ ವಿದಾಯ ಹೇಳಿದ ಬೆನ್ನಲ್ಲೇ ತಾಲಿಬಾನ್ ಉಗ್ರರು ಆಫ್ಘಾನಿಸ್ತಾನದ ಒಂದೊಂದೆ ಪ್ರಾಂತ್ಯಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಯೋಧರು, ಅಮಾಯಕರ ಮೇಲೆ ಗುಂಡಿನ ಸುರಿಮಳೆಗೈಯುತ್ತಿದ್ದಾರೆ. ಇದೀಗ ಉಗ್ರರ ಅಟ್ಟಹಾಸಕ್ಕೆ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ ಯೋಧರ ಮೇಲೆ ಉಗ್ರರು ಗುಂಡಿನ ಸುರಿಮಳೆಗೈದಿದ್ದಾರೆ.
ಸ್ಮಶಾನಗಳ ಸಾಮ್ರಾಜ್ಯವಾದ ಅಪ್ಘಾನಿಸ್ತಾನ: ಅಮೆರಿಕ ಪಡೆ ನಿರ್ಗಮನ, ತಾಲೀಬಾನಿಯರ ಅಟ್ಟಹಾಸ!
ಅಫ್ಘಾನಿಸ್ತಾನದ ಫರಿಯಾಬ್ ಪ್ರಾಂತ್ಯದಲ್ಲಿ 22 ಅಫ್ಘಾನಿಸ್ತಾನ ಕಮಾಂಡೋಗಳನ್ನು ತಾಲಿಬಾನ್ ಹೋರಾಟಗಾರರು ಹತ್ಯೆ ಮಾಡಿದ್ದಾರೆ. ಉಗ್ರರ ಜೊತೆ ಮುಖಾಮುಖಿಯಾದ ಯೋಧರು ಬಳಿ ಶಸ್ತ್ರಾಸ್ತವೇ ಇರಲಿಲ್ಲ. ಕಮಾಂಡೋಗಳನ್ನು ಶರಣಾಗುವಂತೆ ಉಗ್ರರ ಸೂಚಿಸಿದ್ದಾರೆ.
ಶಾಂತಿಯುತವಾಗಿ ಶರಣಾದ ಯೋಧರು ಹತ್ತಿರ ಬಂದ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಒಂದು ಕ್ಷಣದಲ್ಲೇ 22 ಕಮಾಂಡೋಗಳನ ನೆಲಕ್ಕುರಳಿದ್ದಾರೆ. ಒಬ್ಬೊಬ್ಬರ ದೇಹದಲ್ಲಿ ಸುಮಾರು 50ಕ್ಕೂ ಹೆಚ್ಚಿನ ಗುಂಡುಗಳು ಹೊಕ್ಕಿವೆ.
ಮತ್ತೆ ಭಯೋತ್ಪಾದಕರ ತೆಕ್ಕೆಗೆ ಜಾರಿದ ಆಷ್ಘಾನಿಸ್ತಾನ: ಕಂದಹಾರ್ ತಾಲಿಬಾನ್ ವಶ!
ಅಫ್ಘಾನ್ ಸ್ಪೆಷಲ್ ಫೋರ್ಸ್ ಕಮಾಂಡೋಗಳು ಬಿಲ್ಡಿಂಗ್‌ನಿಂಗ ಯಾವುದೇ ಶಸ್ತ್ರಾಸ್ತ್ರ ಇಲ್ಲದೆ ಹೊರಬಂದಿದ್ದರು. ಇದೇ ವೇಳೆ ಬಿಲ್ಡಿಂಗ್ ಹೊರಭಾಗದಲ್ಲಿದ್ದ ಉಗ್ರರು ಶರಣವಾಗುವಂತೆ ಸೂಚಿಸಿ, ಈ ಹತ್ಯೆ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದ್ದು, ಎದೆ ಝಲ್ ಎನಿಸುವಂತಿದೆ.