ತಾಲಿಬಾನಿಯರ ಅಟ್ಟಹಾಸ: ಭಾರತೀಯ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಬಲಿ!

* ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಹಾಗೂ ಸೈನಿಕರ ಕಾಳಗ

* ಉಗ್ರರ ಅಟ್ಟಹಾಸಕ್ಕೆ ಪುಲಿಟ್ಜರ್ ವಿಜೇತ, ಭಾರತೀಯ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಬಲಿ!

* ಮೂರು ದಿನಗಳ ಹಿಂದೆ ನಡೆದ ದಾಳಿಯಿಂದ ಬದುಕುಳಿದಿದ್ದ ಡ್ಯಾನಿಶ್

Indian photojournalist Danish Siddiqui killed in Afghanistan clashes pod

ಕಂದಹಾರ(ಜು.16): ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಹಾಗೂ ಅಫ್ಘಾನ್ ಸೈನಿಕರ ನಡುವಿನ ಸಂಘರ್ಷದ ಮಧ್ಯೆ ಭಾರತೀಯ ಪ್ರಖ್ಯಾತ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಮೃತಪಟ್ಟಿದ್ದಾರೆ. ಇಲ್ಲಿನ ಯುದ್ಧ ಪರಿಸ್ಥಿತಿಯ ವರದಿಗಾಗಿ ಅವರು ಅಲ್ಲಿಗೆ ತೆರಳಿದ್ದರು. ಸಿದ್ಧಿಕಿ ಪುಲಿಟ್ಜೆರ್ ಪ್ರಶಸ್ತಿಯನ್ನು ಪಡೆದಿದ್ದಾರೆ ಎಂಬುವುದೂ ಉಲ್ಲೇಖನೀಯ. 

ಕಂದಹಾರ್‌ನ ಯುದ್ಧ ಪರಿಸ್ಥಿತಿ ಕವರೇಜ್‌ಗೆ ತೆರಳಿದ್ದರು

ಭಾರತೀಯ ಫೋಟೊ ಜರ್ನಲಿಸ್ಟ್ ಡ್ಯಾನಿಶ್ ಕಂದಹಾರ್‌ನ ಯುದ್ಧ ಪರಿಸ್ಥಿತಿ ಕವರೇಜ್‌ಗೆ ತೆರಳಿದ್ದರು. ಅವರಿಗೆ ಅಫ್ಘಾನ್ ಸೈನಿಕರೊಂದಿಗೆ ಒಡನಾಟವಿತ್ತು. ಹೀಗಾಗಿ ತಂತ್ರ ಹೂಡಿ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ದಾಳಿ ನಡೆಸಿ ಕೊಲ್ಲಲಾಗಿದೆ. ಮೂರು ದಿನಗಳ ಹಿಂದೆ, ಅವರು ಅಫ್ಘಾನ್ ವಿಶೇಷ ಪಡೆಯೊಂದಿಗೆ ಪ್ರಯಾಣಿಸುತ್ತಿದ್ದಾಗ, ತಾಲಿಬಾನ್ ಉಗ್ರರು ದಾಳಿ ನಡೆಸಿದ್ದರು. ಅದೃಷ್ಟವಶಾತ್ ಈ ದಾಳಿಯಿಂದ ಅವರು ಸುರಕ್ಷಿತವಾಗಿದ್ದರು. ಈ ದಾಳಿ ಬಳಿಕ ಅವರು ಸುರಕ್ಷಿತವಾಗಿ ಬದುಕುಳಿದವರು ಅದೃಷ್ಟಶಾಲಿಗಳು ಎಂದು ಟ್ವೀಟ್ ಮಾಡಿದ್ದರು. 

ಆಫ್ಘಾನಿಸ್ತಾನದ ಶೇ.85 ಭಾಗ ತಾಲಿಬಾನ್‌ ವಶಕ್ಕೆ: ಅಮೆರಿಕ ಪಡೆ ವಾಪಾಸ್‌, ಉಗ್ರರ ಅಟ್ಟಹಾಸ!

ಶರಣಾದ 22 ಆಫ್ಘಾನಿಸ್ತಾನ ಯೋಧರ ಮೇಲೆ ಗುಂಡಿನ ಸುರಿಮಳೆ

ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಮೆರಿಕ ಸೇನೆ ಆಫ್ಘಾನ್‌ಗೆ ವಿದಾಯ ಹೇಳಿದ ಬೆನ್ನಲ್ಲೇ ತಾಲಿಬಾನ್ ಉಗ್ರರು ಆಫ್ಘಾನಿಸ್ತಾನದ ಒಂದೊಂದೆ ಪ್ರಾಂತ್ಯಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಯೋಧರು, ಅಮಾಯಕರ ಮೇಲೆ ಗುಂಡಿನ ಸುರಿಮಳೆಗೈಯುತ್ತಿದ್ದಾರೆ. ಇದೀಗ ಉಗ್ರರ ಅಟ್ಟಹಾಸಕ್ಕೆ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ ಯೋಧರ ಮೇಲೆ ಉಗ್ರರು ಗುಂಡಿನ ಸುರಿಮಳೆಗೈದಿದ್ದಾರೆ.

Indian photojournalist Danish Siddiqui killed in Afghanistan clashes pod

ಕಂದಹಾರ್‌ನಿಂದ ಭಾರತದ ಸಿಬ್ಬಂದಿ ಸಿಬ್ಬಂದಿ ವಾಪಸ್‌!

ಶೇ.85ರಷ್ಟು ಭಾಗ ತಾಲಿಬಾನಿಯರ ವಶದಲ್ಲಿ

ದಿನೇ ದಿನೇ ಆಷ್ಘಾನಿಸ್ತಾನದ ಒಂದೊಂದೇ ಪ್ರದೇಶಗಳನ್ನು ವಶಪಡಿಸಿಕೊಳ್ಳುತ್ತಿರುವ ತಾಲಿಬಾನ್‌ ಉಗ್ರರು, ಇದೀಗ ದೇಶದ 2ನೇ ಅತಿದೊಡ್ಡ ನಗರವಾಗಿರುವ 6 ಲಕ್ಷ ಜನಸಂಖ್ಯೆಯುಳ್ಳ ಕಂದಹಾರ್‌ ನಗರವನ್ನು ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಇರಾನ್‌ ಜೊತೆಗಿನ ವ್ಯಾಪಾರ ನಡೆಸುವ ಗಡಿ ಚೆಕ್‌ಪೋಸ್ಟ್‌ ಅನ್ನೂ ವಶಕ್ಕೆ ಪಡೆಯುವ ಮೂಲಕ ಸರ್ಕಾರಕ್ಕೆ ದೊಡ್ಡ ಸವಾಲು ಹಾಕಿದ್ದಾರೆ.

ವಿಶೇಷವೆಂದರೆ, 1990ರಲ್ಲಿ ಆಂತರಿಕ ಸಂಘರ್ಷ ತೀವ್ರವಾದ ಹೊತ್ತಿನಲ್ಲಿ ಕಂದಹಾರ್‌ನಲ್ಲೇ ತಾಲಿಬಾನ್‌ ಸಂಘಟನೆ ಜನ್ಮತಾಳಿತ್ತು. ಈಗ ಮೇ 1ರಿಂದ ಅಮೆರಿಕ ಸೇನೆ ಆಫ್ಘಾನಿಸ್ತಾನದಿಂದ ಹಿಂದೆ ಸರಿಯುವ ಪ್ರಕ್ರಿಯೆ ಆರಂಭಿಸಿದ ಬಳಿಕ, ತಾಲಿಬಾನ್‌ ಉಗ್ರರು ಒಂದೊಂದೇ ಪ್ರಾಂತ್ಯಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಾ ಬರುತ್ತಿದ್ದಾರೆ. ಈಗಾಗಲೇ ದೇಶದ ಶೇ.85ರಷ್ಟುಭಾಗವನ್ನು ವಶಪಡಿಸಿಕೊಂಡಿರುವುದಾಗಿ ಘೋಷಿಸಿಕೊಂಡಿದ್ದಾರೆ. ಅದರ ಬೆನ್ನಲ್ಲೇ ದೇಶದ ಎರಡನೇ ಅತಿದೊಡ್ಡ ನಗರ ಕಂದಹಾರ್‌ ಅನ್ನು ಕಳೆದ ಶುಕ್ರವಾರ ಉಗ್ರರು ಪ್ರವೇಶಿಸಿದ್ದಾರೆ ಎಂದು ಸ್ವತಃ ಕಂದಹಾರ್‌ನ ಗವರ್ನರ್‌ರ ವಕ್ತಾರರಾದ ಬಹಿರ್‌ ಅಹಮದಿ ಹೇಳಿದ್ದಾರೆ.

ಕಳೆದ ಒಂದೂವರೆ ತಿಂಗಳಿನಿಂದ ನಗರದ ಸುತ್ತಮುತ್ತಲಿನ ಪ್ರದೇಶಗಳನ್ನು ವಶಪಡಿಸಿಕೊಂಡು ಬರುತ್ತಿದ್ದ ಶಸ್ತ್ರಸಜ್ಜಿತ ಉಗ್ರರು, ಇದೀಗ ಕಂದಹಾರ್‌ನ 7 ಪೊಲೀಸ್‌ ಜಿಲ್ಲಾ ಪ್ರದೇಶದ ಮೂಲಕ ನಗರವನ್ನು ಮೊದಲ ಬಾರಿಗೆ ಪ್ರವೇಶಿಸಿದ್ದಾರೆ. ಉಗ್ರರನ್ನು ಹಿಮ್ಮೆಟ್ಟಿಸಲು ಆಫ್ಘನ್‌ ಸೇನೆ ಕೂಡ ಯತ್ನಿಸುತ್ತಿದೆಯಾದರೂ, ನಗರ ಜನನಿಬಿಡ ಪ್ರದೇಶವಾದ ಕಾರಣ, ಜನರಿಗೆ ಯಾವುದೇ ತೊಂದರೆ ಆಗದಂತೆ ಕಾರ್ಯಾಚರಣೆ ನಡೆಸುತ್ತಿವೆ. ಹೀಗಾಗಿ ಎರಡೂ ಬಣಗಳ ನಡುವೆ ಸಂಘರ್ಷ ಮುಂದುವರೆದಿದೆ.

ಸ್ಮಶಾನಗಳ ಸಾಮ್ರಾಜ್ಯವಾದ ಅಪ್ಘಾನಿಸ್ತಾನ: ಅಮೆರಿಕ ಪಡೆ ನಿರ್ಗಮನ, ತಾಲೀಬಾನಿಯರ ಅಟ್ಟಹಾಸ!

ಚೆಕ್‌ಪೋಸ್ಟ್‌ ವಶ:

ಈ ನಡುವೆ ಇರಾನ್‌ ಜೊತೆಗಿನ ವ್ಯಾಪಾರ ನಡೆಸುವ ಪ್ರಮುಖ ರಸ್ತೆ ಮಾರ್ಗವಾದ ಇಸ್ಲಾಂ ಖಲಾ ಕೂಡಾ ಉಗ್ರರ ವಶಕ್ಕೆ ಹೋಗಿದೆ. ಹೀಗಾಗಿ ಅಲ್ಲಿಗೆ ಹೆಚ್ಚಿನ ಯೋಧರನ್ನು ನಿಯೋಜಿಸುವ ಮೂಲಕ ಮತ್ತೆ ಅದನ್ನು ಕೈವಶ ಮಾಡಿಕೊಳ್ಳಲು ಸರ್ಕಾರ ಯತ್ನ ನಡೆಸುತ್ತಿದೆ.

ಅಮೆರಿಕ ತೆರವು:

2001ರಲ್ಲಿ ವಿಶ್ವ ವಾಣಿಜ್ಯ ಕಟ್ಟಡದ ಮೇಲೆ ಉಗ್ರರ ದಾಳಿಯಿಂದ ಆಕ್ರೋಶಗೊಂಡ ಅಮೆರಿಕ, ಉಗ್ರರನ್ನು ಮಟ್ಟಹಾಕುವ ಸಲುವಾಗಿ ಆಫ್ಘಾನಿಸ್ತಾನದಲ್ಲಿ ದೊಡ್ಡ ಪ್ರಮಾಣದಲ್ಲಿ ತನ್ನ ಸೇನೆಯನ್ನು ನಿಯೋಜಿಸಿತ್ತು. ಸುಮಾರು 20 ವರ್ಷಗಳ ಅಲ್ಲಿಂದ ಪೂರ್ಣ ಪ್ರಮಾಣದಲ್ಲಿ ಹಿಂದೆ ಸರಿಯುವ ನಿರ್ಧಾರವನ್ನು ಅಮೆರಿಕ ಕೈಗೊಂಡಿದ್ದು, ಮೇ 1ರಿಂದ ಆ ಪ್ರಕ್ರಿಯೆ ಆರಂಭಿಸಿದೆ.

ಏನಾಗ್ತಿದೆ?

- 9/11 ದಾಳಿ ಬಳಿಕ ತಾಲಿಬಾನ್‌ ಉಗ್ರರ ಮೇಲೆ ಅಮೆರಿಕ ಮುಗಿಬಿದ್ದಿತ್ತು

- 20 ವರ್ಷದ ಹೋರಾಟ ಬಳಿಕ ಅಮೆರಿಕ ಯೋಧರು ವಾಪಸಾಗುತ್ತಿದ್ದಾರೆ

- ಮೇ 1ರಿಂದ ಸೇನಾ ಹಿಂತೆಗೆತ ಪ್ರಕ್ರಿಯೆಯನ್ನು ಅಮೆರಿಕ ಆರಂಭಿಸಿದೆ

- ಇದರ ಬೆನ್ನಲ್ಲೇ ತಾಲಿಬಾನಿಗಳು ಪ್ರಭಾವಶಾಲಿಗಳಾಗಿ ಪುಟಿದೆದ್ದಿದ್ದಾರೆ

- ದೇಶದ ಬಹುಭಾಗವನ್ನು ಭಯೋತ್ಪಾದಕರು ವಶಕ್ಕೆ ತೆಗೆದುಕೊಂಡಿದ್ದಾರೆ

- ಇದೀಗ 6 ಲಕ್ಷದಷ್ಟುಜನಸಂಖ್ಯೆ ಇರುವ ಕಂದಹಾರ್‌ಗೂ ಪ್ರವೇಶ ಪಡೆದಿದ್ದಾರೆ

- ಆಷ್ಘಾನಿಸ್ತಾನ ಪೂರ್ಣ ಪ್ರಮಾಣದಲ್ಲಿ ತಾಲಿಬಾನ್‌ ಕೈವಶವಾಗುವ ಅಪಾಯವಿದೆ

Latest Videos
Follow Us:
Download App:
  • android
  • ios