Asianet Suvarna News Asianet Suvarna News

ರಾಣಿ ಅಗಲಿಕೆಯಿಂದ ಅನಾಥವಾದ ಕೊರ್ಗಿ ಶ್ವಾನಗಳು...

ಬ್ರಿಟನ್ ಸಾಮ್ರಾಜ್ಯವನ್ನು ಧೀರ್ಘಕಾಲ ಆಳಿದ ರಾಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ರಾಣಿ ಎಲಿಜಬೆತ್ 96 ವರ್ಷಗಳ ತುಂಬು ಜೀವನವನ್ನು ನಡೆಸಿ ಕೆಲ ದಿನಗಳ ಹಿಂದಷ್ಟೇ ಇಹಲೋಕ ತ್ಯಜಿಸಿದ್ದರು. ಶ್ವಾನಪ್ರಿಯರಾಗಿದ್ದ ಎಲಿಜಬೆತ್ ತಮ್ಮ ಜೀವನದುದ್ದಕ್ಕೂ ಕೊರ್ಗಿ ತಳಿಯ ಶ್ವಾನಗಳನ್ನು ಸಾಕುತ್ತಿದ್ದರು. ಆದರೆ ಈಗ ರಾಣಿಯ ಅಗಲಿಕೆಯಿಂದ ಅವರ ಪ್ರೀತಿಯ ಎರಡು ಶ್ವಾನಗಳು ಅನಾಥವಾಗಿವೆ.

who will see Queen Elizabeth's beloved corgis after her death, what royal family says akb
Author
First Published Sep 12, 2022, 8:16 AM IST

ಲಂಡನ್‌: ಬ್ರಿಟನ್ ಸಾಮ್ರಾಜ್ಯವನ್ನು ಧೀರ್ಘಕಾಲ ಆಳಿದ ರಾಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ರಾಣಿ ಎಲಿಜಬೆತ್ 96 ವರ್ಷಗಳ ತುಂಬು ಜೀವನವನ್ನು ನಡೆಸಿ ಕೆಲ ದಿನಗಳ ಹಿಂದಷ್ಟೇ ಇಹಲೋಕ ತ್ಯಜಿಸಿದ್ದರು. ಶ್ವಾನಪ್ರಿಯರಾಗಿದ್ದ ಎಲಿಜಬೆತ್ ತಮ್ಮ ಜೀವನದುದ್ದಕ್ಕೂ ಕೊರ್ಗಿ ತಳಿಯ ಶ್ವಾನಗಳನ್ನು ಸಾಕುತ್ತಿದ್ದರು. ಆದರೆ ಈಗ ರಾಣಿಯ ಅಗಲಿಕೆಯಿಂದ ಅವರ ಪ್ರೀತಿಯ ಎರಡು ಶ್ವಾನಗಳು ಅನಾಥವಾಗಿವೆ. ಇವುಗಳನ್ನು ಇನ್ಮುಂದೆ ಯಾರು ನೋಡಿಕೊಳ್ಳುತ್ತಾರೆ ಎಂಬುದು ಬ್ರಿಟನ್ ಜನರಿಗೆ ಇನ್ನು ಸ್ಪಷ್ಟವಾಗಿಲ್ಲ. ಆದರೂ ರಾಜಮನೆತನದ ವಕ್ತಾರರಾದ ವಿಕ್ಟೋರಿಯಾ ಆರ್ಬಿಟರ್ ಅವರು, ದಿ ಇಂಡಿಪೆಂಡೆಂಟ್‌ ಪತ್ರಿಕೆಗೆ ಹೇಳಿರುವ ಪ್ರಕಾರ, ಅವುಗಳ ಜೀವನಕ್ಕೆ ಸಾಧ್ಯವಾದ ಎಲ್ಲವನ್ನು ಮಾಡಲಾಗುವುದು ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ. 

ಬ್ರಿಟನ್ ಸಾಮ್ರಾಜ್ಯವನ್ನು ಆಳಿದ ಧೀರ್ಘಕಾಲ ಆಳಿದ ರಾಣಿ ಎಲಿಜಬೆತ್ II (Queen Elizabeth), ಕಳೆದ ಗುರುವಾರ ಸ್ಕಾಟ್ಲೆಂಡ್‌ನ ಬಾಲ್ಮೊರಲ್‌ ಕಾಸ್ಟಲ್‌ನಲ್ಲಿ ಮೃತಪಟ್ಟಿದ್ದರು. ರಾಣಿ ಎಲಿಜಬೆತ್‌ ನಾಲ್ವರು ಮಕ್ಕಳು, 8 ಮೊಮ್ಮಕ್ಕಳನ್ನು 12 ಮರಿ ಮೊಮ್ಮಕ್ಕಳ ಜೊತೆಗೆ ಎಲ್ಲಾ ಕಾಲದಲ್ಲೂ ತನ್ನ ಒಡನಾಡಿಗಳಾದ ಕೊರ್ಗಿಸ್‌ ತಳಿಯ ಶ್ವಾನಗಳನ್ನು ಅಗಲಿದ್ದರು. 

Britain Queen: ಚಾರ್ಲ್ಸ್ ಎರಡನೇ ಪತ್ನಿ ಕ್ಯಾಮಿಲ್ಲಾ ಮುಂದಿನ ರಾಣಿ: 2ನೇ ಎಲಿಜಬೆತ್‌ ಘೋಷಣೆ

ಎರಡು ಕೊರ್ಗಿಸ್ ತಳಿಯ ಶ್ವಾನಗಳಾದ ಮುಯಿಕ್ (Muick) ಮತ್ತು ಸ್ಯಾಂಡಿ ಹಾಗೂ ಡೊರ್ಗಿ (Dorgi) ತಳಿಯ ಶ್ವಾನ ಕ್ಯಾಂಡಿ ಜೊತೆಗೆ ಕಾಕರ್ ಸ್ಪೇನಿಯಲ್‌ (Cocker Spaniel) ತಳಿಯ ಶ್ವಾನವನ್ನು ಹೊಂದಿದ್ದರು. ಈ ಡೊರ್ಗಿ ತಳಿಯ ಶ್ವಾನವೂ ಕೊರ್ಗಿ ಹಾಗೂ ಡ್ಯಾಶ್ಹುಂಡ್ ತಳಿಯ ಶ್ವಾನಗಳ ಮಿಶ್ರಣವಾಗಿದೆ. ಇವುಗಳಲ್ಲಿ ಕಾಕರ್ ಸ್ಪೇನಿಯಲ್‌ ಮರಿಯನ್ನು(Spaniel puppy) ರಾಣಿ ಎಲಿಜಬೆತ್‌ ಅವರ ಪತಿ ಫಿಲಿಪ್‌ ಅವರ 100ನೇ ಹುಟ್ಟುಹಬ್ಬದಂದು ಪುತ್ರ ಪ್ರಿನ್ಸ್‌ ಆಂಡ್ರ್ಯೂ (Prince Andrew)ಅವರು ಕೊಡುಗೆಯಾಗಿ ನೀಡಿದ್ದರು.

ಈ ಶ್ವಾನಗಳನ್ನು ಮುಂದೆ ಯಾರು ಸಲಹುತ್ತಾರೆ ಎಂಬುದು ಸಾರ್ವಜನಿಕರಿಗೆ ಗೊತ್ತಿಲ್ಲ. ಆದರೆ ರಾಜ ಮನೆತನದ ವಕ್ತಾರರಾದ ವಿಕ್ಟೋರಿಯಾ ಆರ್ಬಿಟರ್ ಅವರು ಹೇಳಿರುವ ಪ್ರಕಾರ ಈ ಶ್ವಾನಗಳಿಗೆ ಉತ್ತಮವಾದ ವ್ಯವಸ್ಥೆಯೇ ಮಾಡಲಾಗಿದೆ. ಕೊರ್ಗಿಸ್‌ಗಳ ಮುಂದಿನ ವಾಸದ ಬಗ್ಗೆ ವ್ಯವಸ್ಥೆಯ ಬಗ್ಗೆ ಯೋಚಿಸಲಾಗುತ್ತಿದೆ. ರಾಜಮನೆತನದವರ (royal family) ಜೊತೆಯೇ ಉಳಿಯುವ ಅವಕಾಶವಿಲ್ಲ ಎಂದು ಅವರು ಹೇಳಿದ್ದಾರೆ.

ರಾಜಮನೆತನವು ಶ್ವಾನಪ್ರೇಮಿಗಳ ಕುಟುಂಬವಾಗಿದ್ದು, ಆದಾಗ್ಯೂ ಎಲ್ಲರೂ ನಿರ್ದಿಷ್ಟವಾಗಿ ಕೊರ್ಗಿಸ್‌ (corgis) ಅನ್ನು ಇಷ್ಟಪಡುವುದಿಲ್ಲ. ಆದರೆ ರಾಣಿ ಎಲಿಜಬೆತ್ ಮಾತ್ರ ಈ ಶ್ವಾನಗಳನ್ನು ಸಾಕುವ ವಿಚಾರದಲ್ಲಿ ಮಾಸ್ಟರ್‌ ಆಗಿದ್ದರು. ಅವುಗಳೊಂದಿಗೆ ಅದ್ಭುತವಾದ ಒಡನಾಟ ಹೊಂದಿದ್ದರು. ಆದರೆ ಮುಂದೆ ಅವು ಎಲ್ಲಿರುತ್ತವ ಎಂಬುದು ತಿಳಿದಿಲ್ಲ.

ರಾಣಿಯ ಎಲ್ಲಾ ಮಕ್ಕಳು ಕೂಡ ಈ ಶ್ವಾನಗಳನ್ನು ತೆರೆದ ಹೃದಯದಿಂದ ಸ್ವಾಗತಿಸಬಹುದು ಎಂದು ವಿಕ್ಟೋರಿಯಾ ಆರ್ಬಿಟರ್ ಹೇಳಿದ್ದಾರೆ. ಒಂದು ವೇಳೆ ರಾಣಿಯ ಕುಟುಂಬ ಸದಸ್ಯರು ಇವುಗಳನ್ನು ಸ್ವೀಕರಿಸದಿದ್ದರೆ, ಅವುಗಳು ವಿಶ್ವಾಸಾರ್ಹ ಸದಸ್ಯರೊಬ್ಬರ ಪಾಲಾಗಬಹುದು. ಅವರು ಶ್ವಾನಪ್ರೇಮಿಗಳಿಂದ ಸುತ್ತುವರೆದಿದ್ದರು ಎಂದು ಆರ್ಬಿಟರ್ ಹೇಳಿದ್ದಾರೆ.

14 ದೇಶ ಆಳಿದ ಬ್ರಿಟನ್ ರಾಣಿ ಎಲಿಜಬೆತ್ ಇನ್ನಿಲ್ಲ, ಮರಳಿ ಸಿಗುತ್ತಾ ಭಾರತದಿಂದ ದೋಚಿದ ಕೊಹಿನೂರ್ ವಜ್ರ?

ತಮ್ಮ ಅಧಿಕಾರವಧಿಯ ಉದ್ದಕ್ಕೂ ರಾಣಿ ವಿಕ್ಟೋರಿಯಾ ಸುಮಾರು 30 ಕೊರ್ಗಿಗಳನ್ನು ಸಾಕಿದ್ದರು. ಏಳು ವರ್ಷದಿಂದಲೇ ಅವರು ಕೊರ್ಗಿಸ್ ಶ್ವಾನಗಳೊಂದಿಗೆ ಒಡನಾಟ ಹೊಂದಿದ್ದರು. 18ನೇ ವಯಸ್ಸಿಗೆ ಅವರು ತಮ್ಮ ಮೊದಲ ಕೊರ್ಗಿ ಸುಸಾನ್(Susan) ಅನ್ನು ಸಾಕಲು ಆರಂಭಿಸಿದ್ದರು. ಇವುಗಳ ಮೇಲೆ ಅವರಿಗೆ ಎಷ್ಟು ಪ್ರೀತಿ ಇತ್ತೆಂದರೆ ಇವರು 1947ರಲ್ಲಿ ತಮ್ಮ ಮಧುಚಂದ್ರಕ್ಕೆ(honeymoon) ಹೋಗುವಾಗಲೂ ಇವರು ತಮ್ಮ ರಗ್‌ನ ಕೆಳಗಡೆ ಅಡಗಿಸಿಟ್ಟು ಈ ಶ್ವಾನವನ್ನು ಕರೆದೊಯ್ದಿದ್ದರಂತೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. 
 

Follow Us:
Download App:
  • android
  • ios