ನಮ್ಮ ಯುದ್ಧ ನಾವೇ ಮಾಡುತ್ತೇವೆ: ಸುತ್ತಲೂ ಶತ್ರುಗಳನ್ನೇ ಹೊಂದಿರುವ ಪುಟ್ಟದೇಶ ಇಸ್ರೇಲ್‌ನ ಆತ್ಮವಿಶ್ವಾಸದ ನುಡಿ
ಇಸ್ರೇಲ್ ಹಾಗೂ ಪ್ಯಾಲೇಸ್ತೀನ್ ಬೆಂಬಲಿತ ಹಮಾಸ್ ಉಗ್ರರ ನಡುವಣ ಯುದ್ಧ ಜಗತ್ತನ್ನು ಎರಡು ಬಣಗಳಾಗಿ ವಿಭಾಜಿಸುತ್ತಿದೆ . ಭಾರತ ಇಸ್ರೇಲ್ ಅನ್ನು ಬೆಂಬಲಿಸಿದ್ದು ಈ ಬಗ್ಗೆ ಇಸ್ರೇಲ್‌ನ ಭಾರತದ ರಾಯಭಾರಿ ನಾರ್ ಗಿಲೋನ್ ಏನು ಹೇಳಿದ್ದಾರೆ ನೋಡಿ.
ನವದೆಹಲಿ: ಇಸ್ರೇಲ್ ಹಾಗೂ ಪ್ಯಾಲೇಸ್ತೀನ್ ಬೆಂಬಲಿತ ಹಮಾಸ್ ಉಗ್ರರ ನಡುವಣ ಯುದ್ಧ ಜಗತ್ತನ್ನು ಎರಡು ಬಣಗಳಾಗಿ ವಿಭಾಜಿಸುತ್ತಿದೆ. ಅಮೆರಿಕಾ ಬ್ರಿಟನ್ ಭಾರತ ರಷ್ಯಾ ಇಸ್ರೇಲ್‌ನ್ನು ಬೆಂಬಲಿಸುತ್ತಿದ್ದರೆ. ಚೀನಾ, ಪಾಕಿಸ್ತಾನ, ಇರಾನ್ ಹಾಗೂ ಕೆಲ ಮುಸ್ಲಿಂ ರಾಷ್ಟ್ರಗಳು ಹಮಾಸ್ ಉಗ್ರರನ್ನು ಬೆಂಬಲಿಸುತ್ತಿವೆ. ಈ ಮಧ್ಯೆ ಈ ಯುದ್ಧದ ಬಗ್ಗೆ ಇಸ್ರೇಲ್‌ನ ಭಾರತದ ರಾಯಭಾರಿ ನಾರ್ ಗಿಲೋನ್, ಮಾಧ್ಯಮಗಳೊಂದಿಗೆ ಮಾತನಾಡಿದ್ದು, ದೇಶದ ಜನರ ಬೆಂಬಲಕ್ಕೆ ಧನ್ಯವಾದ, ಆದರೆ ನಮ್ಮ ಯುದ್ಧವನ್ನು ನಾವು ಮಾಡುತ್ತೇವೆ ನಮಗೆ ಯಾರ ಸಹಾಯದ ಅಗತ್ಯವಿಲ್ಲ, ಇಸ್ರೇಲ್ ತನ್ನನ್ನು ತಾನು ರಕ್ಷಿಸಿಕೊಳ್ಳಬಲ್ಲ ಸಧೃಢವಾದ ಸ್ವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದ್ದಾರೆ.
ಇಸ್ರೇಲ್ ಯಾರನ್ನು ನಮ್ಮ ಪರ ಬಂದು ಹೋರಾಡಿ ಎಂದು ಯಾವತ್ತೂ ಕೇಳಿಲ್ಲ, ಕೇಳುವುದು ಇಲ್ಲ, ಕೆಲವು ಭಾರತೀಯರು ಸ್ವಯಂಪ್ರೇರಿತರಾಗಿ ಇಸ್ರೇಲ್‌ಗೆ ಬೆಂಬಲಿಸುವುದಾಗಿ ಹೇಳುತ್ತಿದ್ದಾರೆ ಅವರಿಗೆ ನಾವು ಧನ್ಯವಾದ ಹೇಳಲು ಬಯಸುವೆ. ನಮಗಾಗಿ ಬೇರೆಯವರು ಹೋರಾಡುವುದನ್ನು ನಾವು ಬಯಸುವುದಿಲ್ಲ, ನಮ್ಮ ಯುದ್ಧವನ್ನು ನಾವೇ ಮಾಡುತ್ತೇವೆ. ಭಾರತಕ್ಕೆ ಭಯೋತ್ಪಾದನೆ ಏನು ಎಂಬುದು ಚೆನ್ನಾಗಿ ಗೊತ್ತಿದೆ. ಉಗ್ರವಾದದ ಪೀಡನೆಯಿಂದ ಬಳಲಿ ಮೇಲೆದ್ದು ಬಂದಿರುವ ದೇಶ ಭಾರತ, ಭಾರತದ ಕೆಲವರು ಸ್ವಯಂಪ್ರೇರಿತರಾಗಿ ಇಸ್ರೇಲ್ ಯುದ್ಧದಲ್ಲಿ ಭಾಗಿಯಾಗುವುದಾಗಿ ಹೇಳುತ್ತಿದ್ದಾರೆ. ಆದರೆ ನಮಗೆ ನೈತಿಕ ಹಾಗೂ ರಾಜಕೀಯ ಬೆಂಬಲವಷ್ಟೇ ಬೇಕು. ನಮ್ಮ ಯುದ್ಧವನ್ನು ನಾವೇ ಮಾಡುವಷ್ಟು ಇಸ್ರೇಲ್ ಸಮರ್ಥವಾಗಿದೆ ಎಂದು ಅವರು ಹೇಳಿದರು.
ಹೆಂಗಸರು ಮಕ್ಕಳ ಮೇಲೆ ಹಮಾಸ್ ಉಗ್ರರ ರಕ್ಕಸ ಕೃತ್ಯಗಳು: ಬಾಲಕಿಯ ಕೊಂದು ಸ್ವರ್ಗ ಸೇರಿತು ಎಂದರು
ನಾವು ಪುಟ್ಟ ದೇಶವಾಗಿದ್ದರೂ ತುಂಬಾ ಸಧೃಡವಾಗಿದ್ದೇವೆ, ನಾವು ಈ ಯುದ್ಧದಲ್ಲಿ ಬೇರೆಯವರು ಭಾಗಿಯಾಗುವುದನ್ನು ಬಯಸುವುದಿಲ್ಲ, ನಮ್ಮ ಸಹಾಯಕ್ಕೇ ಯಾರು ಬರಬೇಕಾದ ಅಗತ್ಯವಿಲ್ಲ, ನಾವು ಪರಿಣಿತ ಸಾಮರ್ಥ್ಯವನ್ನು ಹೊಂದಿದ್ದೇವೆ. ಭಾರತದ ಸಹಾಯದ ಅಗತ್ಯವಿದೇಯೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಇದು ಇಲ್ಲಿರುವುದು ಯುದ್ಧೋಪಕರಣಗಳ ಸಮಸ್ಯೆ ಅಲ್ಲ, ನಾವು ಹೋರಾಡುತ್ತಿರುವುದು ಅಮಾನವೀಯತೆಯ ಕೃತ್ಯದ ನಾಶಕ್ಕೆ,ಇಲ್ಲಿ ಯುದ್ದೋಪಕರಣಗಳಾಗಿ ಅವರು ಮಕ್ಕಳು ಮಹಿಳೆಯರನ್ನು ಎದುರು ಬಿಡುತ್ತಿದ್ದಾರೆ. ಅವರ ಜಗತ್ತಿನಲ್ಲಿ ಪುಟ್ಟ ಮಕ್ಕಳು, ಮಹಿಳೆಯರೇ ಯುದ್ಧೋಪಕರಣಗಳು, ಇದೇ ದೊಡ್ಡ ಸಮಸ್ಯೆ, ಅವರ ಮಕ್ಕಳು ಮಹಿಳೆಯರ ಬಗ್ಗೆಯೂ ಅವರಿಗೆ ಕರುಣೆ ಇಲ್ಲ, ನಾವು ನಮ್ಮ ಮಕ್ಕಳು ಮಹಿಳೆಯರ ರಕ್ಷಣೆಗೆ ಶ್ರಮ ಪಡುತ್ತೇವೆ. ಯಾವ ಮಕ್ಕಳು ಮಹಿಳೆಯರು ಕೂಡ ಯುದ್ಧದಲ್ಲಿ ಗುರಾಣಿಯಾಗಿ ಬಳಕೆಯಾಗುವುದನ್ನು ನಾವು ಬಯಸುವುದಿಲ್ಲ ಎಂದು ನಾರ್ ಗಿಲೋನ್ ಹೇಳಿದರು.
ಇಸ್ರೇಲ್ ಯುದ್ಧ ತೀವ್ರಗೊಂಡರೆ ತೈಲ ಬೆಲೆ ಇನ್ನಷ್ಟು ಏರಿಕೆ?
ಭಾರತದ ಪ್ರಧಾನಿ ನರೇಂದ್ರ ಮೋದಿ, ಭಾರತದ ಅನೇಕ ಸಚಿವರು, ಹಲವು ಉದ್ಯಮಿಗಳು ನನಗೆ ಕರೆ ಮಾಡಿ ಬೆಂಬಲ ವ್ಯಕ್ತಪಡಿಸಿದರು, ಅವರೆಲ್ಲರ ಬೆಂಬಲಕ್ಕೆ ನನ್ನ ಇಸ್ರೇಲಿಗರ ಹೃದಯ ತುಂಬಿ ಬಂದಿದೆ. ಇದಲ್ಲದೇ ಭಾರತದ ಸೋಶೀಯಲ್ ಮೀಡಿಯಾಗಳಲ್ಲಿ ಬೆಂಬಲದ ಸುರಿಮಳೆಯೇ ಹರಿದು ಬಂದಿದೆ. ಇದೆಲ್ಲದಕ್ಕೂ ನನ್ನ ಧನ್ಯವಾದಗಳು, ತಳಮಟ್ಟದಲ್ಲಿ ಇದಕ್ಕೆ ಹೇಗೆ ಸಹಾಯ ಮಾಡಬೇಕು ಎಂಬುದು ನಮಗೆ ಚೆನ್ನಾಗಿ ತಿಳಿದಿದೆ. ಭಾರತ ಇಂದು ವಿಶ್ವದಲ್ಲಿ ಅತ್ಯಂತ ಪ್ರಭಾವಿ ದೇಶವೆನಿಸಿದೆ. ಅದಕ್ಕಿಂತಲೂ ಹೆಚ್ಚಾಗಿ ಭಾರತ ಭಯೋತ್ಪಾದನೆ ಎಂದರೆ ಎಂಬುದರ ಬಗ್ಗೆ ಚೆನ್ನಾಗಿ ಅರಿತಿದೆ. ಭಯೋತ್ಪಾದನೆಯ ವಿರುದ್ಧ ನಿರಂತರ ಹೋರಾಡುತ್ತಲೇ ಭಾರತ ಇಂದು ಈ ಹಂತಕ್ಕೆ ಬಂದಿದೆ. ಹೀಗಾಗಿ ಇದಕ್ಕೆ ಭಯೋತ್ಪಾದನೆಯ ಅನಾಹುತದ ಬಗ್ಗೆ ಚೆನ್ನಾಗಿ ಅರಿವಿದೆ. ಇದೇ ಕಾರಣಕ್ಕೆ ನಾವು ಭಾರತಕ್ಕೆ ತುಂಬಾ ಅಭಾರಿಯಾಗಿರುತ್ತೇವೆ. ಆದರೆ ಈ ಸಮಯದಲ್ಲಿ ನಮಗೆ ನೈತಿಕ ಹಾಗೂ ರಾಜಕೀಯ ಬೆಂಬಲವನ್ನಷ್ಟೇ ನಾವು ಬಯಸುತ್ತೇವೆ ಎಂದು ಅವರು ಹೇಳಿದರು.
ಇಸ್ರೇಲ್‌ನಲ್ಲಿ ಸಿಲುಕಿದ್ದ ಏರ್ ಇಂಡಿಯಾ ಸಿಬ್ಬಂದಿ ರಕ್ಷಣೆ: ಅ.14ರವರೆಗೆ ವಿಮಾನ ಸಂಚಾರ ರದ್ದು