ಹೆಂಗಸರು ಮಕ್ಕಳ ಮೇಲೆ ಹಮಾಸ್ ಉಗ್ರರ ರಕ್ಕಸ ಕೃತ್ಯಗಳು: ಬಾಲಕಿಯ ಕೊಂದು ಸ್ವರ್ಗ ಸೇರಿತು ಎಂದರು
ಪ್ಯಾಲೆಸ್ತೀನಿನ ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಆರಂಭಿಸಿದ ನಂತರ ಕಂಡು ಕೇಳರಿಯದಂಥ ರಾಕ್ಷಸೀಯ ಕೃತ್ಯಗಳನ್ನು ಎಸಗಿದ್ದಾರೆ. ವಯಸ್ಕರು, ಮಕ್ಕಳು, ವೃದ್ಧರು, ಮಹಿಳೆಯರು ಹೀಗೆ ಯಾರನ್ನೂ ಬಿಡದೆ ಹಮಾಸ್ ಉಗ್ರರು, ತಮ್ಮ ಕೈಗೆ ಸಿಕ್ಕ ಎಲ್ಲ ಇಸ್ರೇಲಿಗಳನ್ನು ಭೀಕರವಾಗಿ ನಡೆಸಿಕೊಂಡಿದ್ದಾರೆ.
ಟೆಲ್‌ಅವೀವ್: ಪ್ಯಾಲೆಸ್ತೀನಿನ ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಆರಂಭಿಸಿದ ನಂತರ ಕಂಡು ಕೇಳರಿಯದಂಥ ರಾಕ್ಷಸೀಯ ಕೃತ್ಯಗಳನ್ನು ಎಸಗಿದ್ದಾರೆ. ವಯಸ್ಕರು, ಮಕ್ಕಳು, ವೃದ್ಧರು, ಮಹಿಳೆಯರು ಹೀಗೆ ಯಾರನ್ನೂ ಬಿಡದೆ ಹಮಾಸ್ ಉಗ್ರರು, ತಮ್ಮ ಕೈಗೆ ಸಿಕ್ಕ ಎಲ್ಲ ಇಸ್ರೇಲಿಗಳನ್ನು ಭೀಕರವಾಗಿ ನಡೆಸಿಕೊಂಡಿದ್ದಾರೆ. ಅನೇಕರನ್ನು ಅಪಹರಣ ಕೂಡ ಮಾಡಿದ್ದಾರೆ. ಈ ಕೃತ್ಯಗಳ ಅನೇಕ ವಿಡಿಯೋಗಳು ಬಿಡುಗಡೆಯಾಗಿದ್ದು, ಜಾಗತಿಕ ಆಕ್ರೋಶಕ್ಕೆ ಕಾರಣವಾಗಿದೆ.
ಬಾಲಕಿಯ ಕೊಂದು ಸ್ವರ್ಗ ಸೇರಿತು ಎಂದ ಹಮಾಸ್ ಉಗ್ರರು
ಇಸ್ರೇಲ್ ದೇಶದಲ್ಲಿ ಪ್ಯಾಲೆಸ್ತೀನ್ ಮೂಲದ ಹಮಾಸ್ ಬಂಡುಕೋರ (Hamas Terrorist) ಕ್ರೌರ್ಯ ಸಾಕ್ಷೀಕರಿಸುವಂತೆ, ಗಂಡ-ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ವಶಕ್ಕೆ ಪಡೆದು ಹಿಂಸಿಸುತ್ತಿರುವ ಹಾಗೂ ಇನ್ನೊಬ್ಬಳನ್ನು ಕೊಂದು 'ಸ್ವರ್ಗ ಸೇರಿದಳು' ಎನ್ನುವ ಹೃದಯವಿದ್ರಾವಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.
ಇಸ್ರೇಲಿ ಪತ್ರಕರ್ತೆ ಹನನ್ಯ ನಫ್ತಾಲಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಅದರಲ್ಲಿ ಮಕ್ಕಳು ತೀವ್ರವಾಗಿ ರೋದಿಸುತ್ತಿರುವುದನ್ನು ಕಾಣಬಹುದಾಗಿದೆ. ಅದರಲ್ಲಿ ಒಂದು ಮಗು ತಮ್ಮ ಸುತ್ತಮುತ್ತ ಬಾಂಬ್ ಸ್ಫೋಟವಾಗುತ್ತಿರುವುದನ್ನು ಕೇಳಿಸಿಕೊಂಡು ಕಾಣೆಯಾಗಿರುವ ತನ್ನ ಸಹೋದರಿ ಎಲ್ಲಿ ಎಂದು ಉಗ್ರಗಾಮಿಗಳನ್ನು ಕೇಳಿದಾಗ ಆತ 'ಚಿಂತಿಸಬೇಡ, ನಿಮ್ಮ ಸಹೋದರಿ ಸ್ವರ್ಗ ಸೇರಿದಳು' ಎಂದು ಹೇಳುತ್ತಾನೆ. ಆಗ ತನ್ನ ತಾಯಿ ಅಲ್ಲೇ ಇರುವ ತನ್ನ ಇಬ್ಬರು ಮಕ್ಕಳನ್ನು ಬಿಗಿಯಾಗಿ ಅಪ್ಪಿಕೊಂಡು 'ನನಗೆ ಇನ್ನೊಂದು ಜೀವವನ್ನು ಕಳೆದುಕೊಳ್ಳಲು ಇಷ್ಟವಿಲ್ಲ' ಎಂದು ಹೇಳುತ್ತಾ ರೋದಿಸುವ ದೃಶ್ಯ ಮನಕಲುಕುವಂತಿದೆ.
ಇಸ್ರೇಲ್ ಯುದ್ಧ ತೀವ್ರಗೊಂಡರೆ ತೈಲ ಬೆಲೆ ಇನ್ನಷ್ಟು ಏರಿಕೆ?
ಈ ಕುರಿತು ಹನನ್ಯ ನಫ್ತಾಲಿ, ತಮ್ಮ ಟ್ವಿಟ್ ಖಾತೆಯಲ್ಲಿ ಬರೆದುಕೊಂಡಿದ್ದು'ಇದು ಮಾನವ ಹಕ್ಕುಗಳನ್ನು ಉಲ್ಲಂಘಿಸುವ ಪರಾಕಾಷ್ಠೆಯ ಸಂಕೇತವಾಗಿದೆ. ಈ ಬಿಕ್ಕಟ್ಟನ್ನು ಅಂತ್ಯಗೊಳಿಸಲು ವಿಶ್ವನಾಯಕರು ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ನಡೆದ ಘಟನೆಯ ಕುರಿತು ತೀವ್ರ ವಿಷಾದ ವ್ಯಕ್ತಪಡಿಸಿರುವ ಪೋಪ್ ಫ್ರಾನ್ಸಿಸ್ (Pope Francis) ಭಯೋತ್ಪಾದನೆ ಮತ್ತು ಯುದ್ಧಗಳು ಪರಿಹಾರದತ್ತ ಕೊಂಡೊಯ್ಯುವುದಿಲ್ಲ. ಈ ದಾಳಿಗಳು ಹಾಗೂ ಆಯುಧಗಳ ಬಳಕೆ ಅಂತ್ಯಗೊಳಿಸಿರಿ ಎಂದು ನಾನು ನಿಮ್ಮಲ್ಲಿ ಬೇಡಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಇಸ್ರೇಲ್‌ನಲ್ಲಿ ಸಿಲುಕಿದ್ದ ಏರ್ ಇಂಡಿಯಾ ಸಿಬ್ಬಂದಿ ರಕ್ಷಣೆ: ಅ.14ರವರೆಗೆ ವಿಮಾನ ಸಂಚಾರ ರದ್ದು
ಇಸ್ರೇಲ್ ಶಾಂತಿ ಉತ್ಸವದಲ್ಲಿ ಹಮಾಸ್ ರಕ್ತದೋಕುಳಿ
ಟೆಲ್ ಅವಿವ್: ಇಸ್ರೇಲ್ ಮೇಲೆ ಹಮಾಸ್ ಉಗ್ರರು ಏಕಾಏಕಿ ದಾಳಿ ನಡೆಸಿದ ಸಂದರ್ಭದಲ್ಲಿ ಗಾಜಾ ಪಟ್ಟಿಯಲ್ಲಿ 'ಫೆಸ್ಟಿವಲ್ ಆಫ್ ಪೀಸ್' (Festival Of Peace) ಎಂಬ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಈ ಶಾಂತಿ ಉತ್ಸವದ ವೇಳೆಯೇ ಹಮಾಸ್ ಉಗ್ರರು ರಕ್ತದೋಕುಳಿ ಹರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಲವಾರು ಇಸ್ರೇಲಿಗಳು ಸೇರಿದಂತೆ ಅನೇಕ ಪ್ರವಾಸಿಗರು ಭಾಗಿಯಾಗಿದ್ದರು. ಏಕಾಏಕಿ ಕಾರ್ಯಕ್ರಮದ ಮೇಲೆ ದಾಳಿ ಮಾಡಿದ ಹಮಾಸ್ ಉಗ್ರರು ಗುಂಡು ಹಾರಿಸಿದಾಗ ಜನರೆಲ್ಲ ದಿಕ್ಕಾಪಾಲಾಗಿ ಓಡಿ ಹೋಗತೊಡಗಿದ್ದಾರೆ. ಗುಂಡೇಟಿಗೆ ಬಲಿಯಾದವರ ಶವಗಳು ನೆಲದ ಮೇಲೆ ಬಿದ್ದಿದ್ದವು.
ನೋಡ ನೋಡುತ್ತಿದ್ದಂತೆ ಎಲ್ಲ ಮಣ್ಣಾದವು... ಅಫ್ಘಾನಿಸ್ತಾನ ಭೂಕಂಪ ಸಾವಿನ ಸಂಖ್ಯೆ 2000ಕ್ಕೇರಿಕೆ
ಈ ವೇಳೆ ಸೆರೆಸಿಕ್ಕ ಹಲವು ಯುವಕ ಯುವತಿಯರನ್ನು ವಶಕ್ಕೆ ಪಡೆದ ಹಮಾಸ್ ಉಗ್ರರು ಅವರ ಕೈಗಳನ್ನು ಕಟ್ಟಿ ಹಾಕಿ, ಕಣ್ಣುಗಳನ್ನು ಮುಚ್ಚಿ ತಮ್ಮ ವಾಹನಗಳಲ್ಲಿ ತುಂಬಿಕೊಂಡು ಘೋಷಣೆ ಕೂಗುತ್ತ ಸಾಗಿದ್ದಾರೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 30 ವರ್ಷದ ಜರ್ಮನ್‌ನ ಟ್ಯಾಟೊ ಕಲಾವಿದೆಯೋರ್ವಳನ್ನು ಕೊಂದ ಉಗ್ರರು ಆಕೆಯ ದೇಹವನ್ನು ನಗ್ನಗೊಳಿಸಿ, ಮೆರವಣಿಗೆ ಮಾಡಿದ್ದಲ್ಲದೇ ಆಕೆಯ ಶವದ ಮೇಲೆ ಉಗುಳಿ ವಿಕೃತಿ ಮೆರೆದಿದ್ದಾರೆ. ಇನ್ನೊಬ್ಬ ಯುವತಿ ಹಾಗೂ ಆಕೆಯ ಪ್ರಿಯಕರನನ್ನೂ ಒತ್ತೆಯಾಳಾಗಿಟ್ಟುಕೊಂಡಿದ್ದಾರೆ.
ವಿದೇಶದ ಅತಿ ದೊಡ್ಡ ಹಿಂದೂ ದೇಗುಲ ಅಮೆರಿಕದಲ್ಲಿ ಉದ್ಘಾಟನೆ: ಆ.18ರಿಂದ ಭಕ್ತರಿಗೆ ಮುಕ್ತ ಪ್ರವೇಶ