ನಾವು ಪಾಠ ಕಲಿತಿದ್ದೇವೆ: ಪ್ರಧಾನಿ ಮೋದಿ ಜತೆ ಪ್ರಾಮಾಣಿಕ ಮಾತುಕತೆ ನಡೆಸಬೇಕು ಎಂದ ಪಾಕ್‌ ಪಿಎಂ ಶೆಹಬಾಜ್‌..!

ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ನಮ್ಮ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ "ವಿಮರ್ಶಾತ್ಮಕ ಮತ್ತು ಪ್ರಾಮಾಣಿಕ ಮಾತುಕತೆಗೆ" ಕರೆ ನೀಡಿದ್ದಾರೆ. 

we have learnt our lessons shehbaz sharif wants honest talks with pm modi ash

ಪಾಕಿಸ್ತಾನದಲ್ಲಿ ಆಹಾರಕ್ಕಾಗಿ ಹಾಹಾಕಾರ ಎಂಬ ವರದಿಗಳನ್ನು ಇತ್ತೀಚೆಗಷ್ಟೇ ನಾವು ಓದಿದ್ದೇವೆ. ಗೋಧಿ ಹಿಟ್ಟು, ಹಾಲು, ಈರುಳ್ಳಿಯಂತಹ ಅಗತ್ಯ ವಸ್ತುಗಳ ಬೆಲೆ ಅಲ್ಲಿ ಗಗನಕ್ಕೇರಿದ್ದು, ಇದನ್ನು ಕೊಂಡುಕೊಳ್ಳಲು ಕಾಲ್ತುಳಿತದಂತಹ ಘಟನೆಗಳೂ ನಡೆಯುತ್ತಿವೆ. ಅಲ್ಲದೆ,  ನವೆಂಬರ್ ಅಂತ್ಯದಲ್ಲಿ ಭದ್ರತಾ ಪಡೆಗಳೊಂದಿಗಿನ ಕದನ ವಿರಾಮವನ್ನು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಅಂತ್ಯಗೊಳಿಸಿದ ನಂತರ ಪಾಕಿಸ್ತಾನವು ಭಯೋತ್ಪಾದನೆ-ಸಂಬಂಧಿತ ಹಿಂಸಾಚಾರದಲ್ಲಿ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಈ ಹಿನ್ನೆಲೆ ಈಗಲಾದರೂ ಪಾಪಿ ಪಾಕಿಸ್ತಾನ ಬುದ್ಧಿ ಕಲಿಯಿತಾ ಎಂಬ ಮಾತುಗಳು ಕೇಳಿ ಬರುತ್ತಿದೆ. ಯಾಕೆ ಅಂತೀರಾ..? ಪಾಕಿಸ್ತಾನ  ಪ್ರಧಾನಿ ಶೆಹಬಾಜ್ ಷರೀಫ್ ಅವರು ನಮ್ಮ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ "ವಿಮರ್ಶಾತ್ಮಕ ಮತ್ತು ಪ್ರಾಮಾಣಿಕ ಮಾತುಕತೆಗೆ" ಕರೆ ನೀಡಿದ್ದಾರೆ. 

ಕಾಶ್ಮೀರದಂತಹ (Kashmir) ಪ್ರಮುಖ ವಿಚಾರಗಳ ಬಗ್ಗೆಯೂ ಮಾತುಕತೆ (Talk) ನಡೆಸಬೇಕು ಎಂದೂ ಪಾಕ್‌ ಪ್ರಧಾನಿ (Pakistan Prime mInister) ಇಂಗಿತ ವ್ಯಕ್ತಪಡಿಸಿದ್ದಾರೆ. ದುಬೈ (Dubai) ಮೂಲದ ಅರೇಬಿಕ್ ನ್ಯೂಸ್ ಟೆಲಿವಿಷನ್ ಚಾನೆಲ್ ಅಲ್ ಅರೇಬಿಯಾಗೆ (Al Arabia) ನೀಡಿದ ಸಂದರ್ಶನದಲ್ಲಿ (Interview) ಶೆಹಬಾಜ್‌ ಷರೀಫ್ (Shehbaz Sharif) ಈ ಮಾತುಗಳನ್ನಾಡಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ, ಭಾರತದೊಂದಿಗಿನ ಮೂರು ಯುದ್ಧಗಳು ಪಾಕಿಸ್ತಾನ ಜನತೆಗೆ ಹೆಚ್ಚುವರಿ ಸಂಕಷ್ಟ, ಬಡತನ ಮತ್ತು ನಿರುದ್ಯೋಗವನ್ನು ಮಾತ್ರ ಪರಿಚಯಿಸಿದೆ. ಈ ಯುದ್ಧಗಳಿಂದ ಪಾಕ್‌ಗೆ ಪ್ರಯೋಜನವೇನೂ ಆಗಿಲ್ಲ ಎಂಬುದನ್ನೂ ಪಾಕ್‌ ಪ್ರಧಾನಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೆ ಭಾರತ ಯಾವ ರೀತಿ ಪ್ರತಿಕ್ರಿಯೆ ನೀಡುತ್ತೋ ಕಾದುನೋಡಬೇಕಿದೆ. 

ಇದನ್ನು ಓದಿ: ಪಾಕ್‌ನಲ್ಲಿ ಆಹಾರಕ್ಕೆ ತೀವ್ರ ಹಾಹಾಕಾರ: ಗನ್‌ ಹಿಡಿದು ಸರ್ಕಾರದಿಂದ ಆಹಾರ ವಿತರಣೆ

ಭಾರತೀಯ ಆಡಳಿತ ಮಂಡಳಿ ಮತ್ತು ಪ್ರಧಾನಿ ಮೋದಿಯವರಿಗೆ ನನ್ನ ಸಂದೇಶವೆಂದರೆ ಕಾಶ್ಮಿರದಂತಹ ನಮ್ಮ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಮೇಜಿನ ಮೇಲೆ ಕುಳಿತು ವಿಮರ್ಶಾತ್ಮಕ ಮತ್ತು ಪ್ರಾಮಾಣಿಕ ಮಾತುಕತೆಗಳನ್ನು ನಡೆಸಲು ನಮಗೆ ಅವಕಾಶ ಮಾಡಿಕೊಡಿ. ಶಾಂತಿಯುತವಾಗಿ ಇರಲು ಮತ್ತು ಪ್ರಗತಿ ಸಾಧಿಸಲು ಮಾತುಕತೆಗೆ ಅವಕಾಶ ಮಾಡಿಕೊಡಿ. ಇಲ್ಲದಿದ್ದರೆ, ಪರಸ್ಪರ ಜಗಳವಾಡಲು ನಾವು ಎಷ್ಟು ಸಾಧ್ಯವೋ ಅಷ್ಟು ಮತ್ತು ಸಮಯ ಹಾಗೂ ಆಸ್ತಿಯನ್ನು ವ್ಯರ್ಥ ಮಾಡಿದಂತಾಗುತ್ತದೆ ಎಂದೂ ಪಾಕಿಸ್ತಾನದ ಪ್ರಧಾನಿ ಸಂದರ್ಶನದಲ್ಲಿ ಹೇಳಿದ್ದಾರೆ.

ನಾವು ಈಗ ಭಾರತದೊಂದಿಗೆ ಮೂರು ಯುದ್ಧಗಳನ್ನು ಮಾಡಿದ್ದೇವೆ ಮತ್ತು ಇದು ಜನತೆಗೆ ಹೆಚ್ಚುವರಿ ಸಂಕಷ್ಟ, ಬಡತನ ಮತ್ತು ನಿರುದ್ಯೋಗವನ್ನು ಮಾತ್ರ ಪರಿಚಯಿಸಿದೆ. ಈ ಹಿನ್ನೆಲೆ ನಾವು ಈಗ ಪಾಠವನ್ನು ಕಲಿತಿದ್ದೇವೆ ಮತ್ತು ನಾವು ಶಾಂತಿಯಿಂದ ಇರಲು ಬಯಸುತ್ತೇವೆ. ಆದರೆ ಅದಕ್ಕಾಗಿ ನಮ್ಮ ನೈಜ ಸಮಸ್ಯೆಗಳನ್ನು ಪರಿಹರಿಸಲು ನಾವು ಸಮರ್ಥರಾಗಿರಬೇಕು ಎಂದೂ ಅವರು ಹೇಳಿದ್ದಾರೆಂದು ತಿಳಿದುಬಂದಿದೆ.

ಇದನ್ನೂ ಓದಿ: ಪಾಕ್‌ನಲ್ಲಿ 1 ಕೆಜಿಗೆ ಗೋಧಿಹಿಟ್ಟಿಗೆ 1500 ರುಪಾಯಿ: ಅಗ್ಗದ ಗೋಧಿಹಿಟ್ಟು ವಿತರಣೆ ವೇಳೆ ಕಾಲ್ತುಳಿತಕ್ಕೆ ನಾಲ್ವರ ಬಲಿ

ಅಲ್ಲದೆ, ಎರಡೂ ದೇಶಗಳು ಪರಮಾಣು ಶಕ್ತಿಗಳಾಗಿದ್ದು ಮತ್ತು ಸುಸಜ್ಜಿತವಾದ ಶಸ್ತ್ರಗಳನ್ನು ಹೊಂದಿವೆ ಎಂದೂ ಪಾಕಿಸ್ತಾನ್ ಮುಸ್ಲಿಂ ಲೀಗ್ (ಎನ್) ಪಕ್ಷದ ನಾಯಕ ಹೇಳಿದರು. ಈ ಹಿನ್ನೆಲೆ ಮತ್ತೆ ಯುದ್ಧ ಪ್ರಾರಂಭವಾದರೆ, ಏನಾಯಿತು ಎಂದು ಹೇಳಲು ಯಾರು ಉಳಿಯುತ್ತಾರೋ ಗೊತ್ತಿಲ್ಲ ಎಂದೂ ಹೇಳಿದ್ದಾರೆ.

ಹೆಚ್ಚಿದ ಭಯೋತ್ಪಾದನೆ ಸಂಬಂಧಿತ ಘಟನೆಗಳು, ತಳಮಟ್ಟಕ್ಕೆ ಕುಸಿದ ಆರ್ಥಿಕತೆ ಮತ್ತು ಆಳವಾದ ರಾಜಕೀಯ ಅಸ್ಥಿರತೆಯಿಂದ ಪಾಕಿಸ್ತಾನವು ತೀವ್ರ ನಲುಗಿದ ಸಮಯದಲ್ಲಿ ಶೆಹಬಾಜ್‌ ಷರೀಫ್ ಇ ಹೇಳಿಕೆ ನೀಡಿದ್ದಾರೆ. ಪಾಕ್‌ ವಿದೇಶಿ ನೇರ ಹೂಡಿಕೆಯ ಒಳಹರಿವು ಸಹ ಶೇಕಡಾ 50 ಕ್ಕಿಂತ ಹೆಚ್ಚು ಕುಸಿದಿದೆ.  2021 ರಲ್ಲಿ ಜುಲೈ-ನವೆಂಬರ್ ಅವಧಿಗೆ ಅಮೆರಿಕ ಡಾಲರ್‌ 885 ಮಿಲಿಯನ್‌ ನಷ್ಟು ದಾಖಲಾಗಿದ್ದ ವಿದೇಶಿ ಒಳಹರಿವು  2022 ರ ಜುಲೈ-ನವೆಂಬರ್ ಅವಧಿಗೆ 430 ಮಿಲಿಯನ್ ಅಮೆರಿಕ ಡಾಲರ್‌ಗೆ ಕುಸಿತ ಕಂಡಿದೆ. 

ಇದನ್ನೂ ಓದಿ: ಪಾಕ್‌ ಉಗ್ರರ ಸುರಂಗ ಪತ್ತೆಗೆ ಡ್ರೋನ್‌ ರಾಡಾರ್‌ ನಿಯೋಜಿಸಿದ ಬಿಎಸ್‌ಎಫ್‌

Latest Videos
Follow Us:
Download App:
  • android
  • ios