ಪಾಕ್‌ನಲ್ಲಿ 1 ಕೆಜಿಗೆ ಗೋಧಿಹಿಟ್ಟಿಗೆ 1500 ರುಪಾಯಿ: ಅಗ್ಗದ ಗೋಧಿಹಿಟ್ಟು ವಿತರಣೆ ವೇಳೆ ಕಾಲ್ತುಳಿತಕ್ಕೆ ನಾಲ್ವರ ಬಲಿ
ಕೇವಲ ಗೋಧಿಹಿಟ್ಟು ಮಾತ್ರವಲ್ಲ, ಆಲೂಗಡ್ಡೆ ದರ 90 ರೂ., ಈರುಳ್ಳಿ ದರ 220 ರೂ., ಹಾಲಿನ ಬೆಲೆ ಲೀಟರ್‌ಗೆ 200 ರೂ., ಹೆಸರು ಬೇಳೆ ಕೆಜಿಗೆ 310 ರೂ., ಪೆಟ್ರೋಲ್ ದರ ಲೀ.ಗೆ 225 ರೂ., ಮಟನ್ ಬೆಲೆ ಕೆಜಿಗೆ 1800 ರೂ., ಬ್ರಾಯ್ಲರ್ ಚಿಕನ್ ಕೆಜಿಗೆ 460 ರೂ., ಒಂದು ಮೊಟ್ಟೆಗೆ 25 ರೂ.ಗೆ ತಲುಪಿದೆ.
ಇಸ್ಲಾಮಾಬಾದ್: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳು ಬೆಲೆ ಕೈಸುಡುವ ಮಟ್ಟಕ್ಕೆ ಹೋಗಿದೆ. ಅದರಲ್ಲೂ ಪಾಕಿಸ್ತಾನದ ಬಹುತೇಕ ಜನರ ನಿತ್ಯ ಆಹಾರದ ಮೂಲ ವಸ್ತುವಾದ ಗೋಧಿಹಿಟ್ಟಿನ ಬೆಲೆ 1 ಕೆಜಿಗೆ ಕನಿಷ್ಠ 150 ರೂ. ನಿಂದ ಗರಿಷ್ಠ 1500 ರೂ. ವರೆಗೂ ತಲುಪಿದೆ. ವಿದೇಶಿ ವಿನಿಯಯ ಕೊರತೆಯಿಂದಾಗಿ ಪಾಕಿಸ್ತಾನ ವಿದೇಶಗಳಿಂದ ಯಾವುದೇ ಅಗತ್ಯ ವಸ್ತು ಖರೀದಿಸುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಆಹಾರ ವಸ್ತುಗಳ ಕೊರತೆ ಎದುರಾಗಿದೆ. 45 ಲಕ್ಷ ಟನ್‌ಗಳಷ್ಟು ಗೋಧಿ ಕೊರತೆ ಕಾಣಿಸಿಕೊಂಡಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಗೋಧಿ ಹಿಟ್ಟಿನ ಬೆಲೆ 150 ರೂ, 500 ರೂ. ವರೆಗೂ ತಲುಪಿದೆ. ಅದರಲ್ಲೂ ಸಿಂಧ್ ಪ್ರಾಂತ್ಯದಲ್ಲಿ (Sindh Province) ಗೋಧಿ ಹಿಟ್ಟಿನ (Wheat Flour) ಭಾರೀ ಕೊರತೆ ಉಂಟಾಗಿದ್ದು ಕಾಳಸಂತೆಯಲ್ಲಿ (Black Market) 1 ಕೆಜಿ ಗೋಧಿಹಿಟ್ಟು 1500 ರೂ .ವರೆಗೂ ಮಾರಾಟವಾಗುತ್ತಿದೆ.
ಈ ನಡುವೆ ಅಗ್ಗದ ದರದಲ್ಲಿ ಗೋಧಿ ಹಿಟ್ಟು ಪೂರೈಸುವ ಆಹಾರ ಇಲಾಖೆ ಟ್ರಕ್ ಆಗಮಿಸಿದ ವೇಳೆ ಜನರ ನಡುವೆ ನೂಕುನುಗ್ಗಲು ಉಂಟಾಗಿ ನಾಲ್ವರು ಮೃತಪಟ್ಟ ಘಟನೆ ವರದಿಯಾಗಿದೆ. ಶನಿವಾರ, ಆಹಾರ ಇಲಾಖೆಯಿಂದ (Food Department) ಟ್ರಕ್‌ಗಳಲ್ಲಿ ತಂದ ಹಿಟ್ಟಿನ ಪ್ಯಾಕೆಟ್‌ಗಳನ್ನು ನೋಡಿದ ಜನರು ಜಮಾಯಿಸಿದ್ದರು. ಈ ವೇಳೆ ಗಲಾಟೆಯಾಗಿ ಹಲವರು ಗಾಯಗೊಂಡಿದ್ದಾರೆ. 35 ವರ್ಷದ ಕಾರ್ಮಿಕನೊಬ್ಬನನ್ನು ಜನರು ತುಳಿದಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.
ಇದನ್ನು ಓದಿ: ಸಿಲಿಂಡರ್ ಬದ್ಲು ಪ್ಲಾಸ್ಟಿಕ್ ಬ್ಯಾಗ್ ಅಲ್ಲಿ ದೊರೆಯುತ್ತೆ ಎಲ್‌ಪಿಜಿ
ಇನ್ನು, ಶಾಹೀದ್ ಬೆನಜಿರಾಬಾದ್ ಜಿಲ್ಲೆಯ ಸಕ್ರಂಡ್ ಪಟ್ಟಣದ ಹಿಟ್ಟಿನ ಗಿರಣಿಯ ಹೊರಗೆ ಅಗ್ಗದ ಗೋಧಿ ಹಿಟ್ಟು ಖರೀದಿಸುವಾಗ ಕಾಲ್ತುಳಿತ (Stampede) ಸಂಭವಿಸಿದ್ದು, ಮೂವರು ಮಹಿಳೆಯರ ಸಾವಿಗೆ ಕಾರಣವಾಗಿದೆ. 5 ಕೆ.ಜಿ ಚೀಲಕ್ಕೂ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಖೈಬರ್ ಪಖ್ತುಂಖ್ವಾದಲ್ಲಿ 1000 ರಿಂದ 1500 ಪಾಕಿಸ್ತಾನಿ ರೂಪಾಯಿ ಬೆಲೆಗೆ ಗೋಧಿಹಿಟ್ಟು ಮಾರಾಟವಾಗುತ್ತಿದೆ. ವಾಸ್ತವವಾಗಿ, ಮುಕ್ತ ಮಾರುಕಟ್ಟೆಯಲ್ಲಿ 20 ಕೆಜಿ ಹಿಟ್ಟಿನ ಪ್ಯಾಕೆಟ್ ಬೆಲೆ 3100 ರೂ.ವರೆಗೆ ತಲುಪಿದೆ. ಒಂದು ವರ್ಷದ ಹಿಂದೆ ಇದೇ ಬೆಲೆ 1100 ರೂ. ಇತ್ತು ಎಂಬುದು ಗಮನಾರ್ಹವಾಗಿದೆ.
ಕೇವಲ ಗೋಧಿಹಿಟ್ಟು ಮಾತ್ರವಲ್ಲ, ಆಲೂಗಡ್ಡೆ ದರ 90 ರೂ., ಈರುಳ್ಳಿ ದರ 220 ರೂ., ಹಾಲಿನ ಬೆಲೆ ಲೀಟರ್‌ಗೆ 200 ರೂ., ಹೆಸರು ಬೇಳೆ ಕೆಜಿಗೆ 310 ರೂ., ಪೆಟ್ರೋಲ್ ದರ ಲೀ.ಗೆ 225 ರೂ., ಮಟನ್ ಬೆಲೆ ಕೆಜಿಗೆ 1800 ರೂ., ಬ್ರಾಯ್ಲರ್ ಚಿಕನ್ ಕೆಜಿಗೆ 460 ರೂ., ಒಂದು ಮೊಟ್ಟೆಗೆ 25 ರೂ.ಗೆ ತಲುಪಿದೆ.
ಇದನ್ನೂ ಓದಿ: ವಿದ್ಯುತ್ ಸಮಸ್ಯೆ: ಪಾಕ್‌ನಲ್ಲಿ ರಾತ್ರಿ 8ಕ್ಕೆ ಅಂಗಡಿ ಬಂದ್
ಈ ಮಧ್ಯೆ, ಇಂಧನ ಉಳಿಸುವ ಸಲುವಾಗಿ ಮಾರುಕಟ್ಟೆಯನ್ನು ರಾತ್ರಿ 8 ಗಂಟೆಗೆ ಮುಗಿಸಬೇಕು, ಮದುವೆ ಸೇರಿದಂತೆ ಕಾರ್ಯಕ್ರಮಗಳನ್ನು ರಾತ್ರಿ 10 ಗಂಟೆಯ ಬಳಿಕ ನಡೆಸಬಾರದು ಎಂದು ಸರ್ಕಾರ ಸೂಚಿಸಿತ್ತು. ಜನರಿಗೆ ಮಾದರಿಯಾಗುವ ಸಲವಾಗಿ ಇತ್ತೀಚಿನ ಕೇಂದ್ರ ಸಚಿವ ಸಂಪುಟ ಸಭೆಯಲ್ಲೂ ಯಾವುದೇ ಲೈಟ್ ಹಾಕಿರಲಿಲ್ಲ.
ಇದನ್ನೂ ಓದಿ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಸೆಕ್ಸ್ ಆಡಿಯೋ ಕಾಲ್ ಲೀಕ್, ಜಗತ್ತಿನ ಮುಂದೆ ಬೆತ್ತಲಾದ ಪಾಕಿಸ್ತಾನ!