93ನೇ ವಯಸ್ಸಿನಲ್ಲಿ 4ನೇ ಮದುವೆಯಾದ ಅಮೆರಿಕಾದ ಚಂದ್ರಯಾನಿ... ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ
1969ರಲ್ಲಿ ಅಪೊಲೋ 11 ಮಿಷನ್ ನೌಕೆಯ ಮೂಲಕ ಚಂದ್ರಯಾನ ಮಾಡಿ ಚಂದ್ರನ ಮೇಲೆ ಕಾಲಿರಿಸಿದ ಅಮೆರಿಕಾದ ಮೂವರು ಗಗನಯಾತ್ರಿಗಳಲ್ಲಿ ಒಬ್ಬರಾದ ಬುಜ್ ಅಲ್ಡ್ರಿನ್(Buzz Aldrin) ತಮ್ಮ 93ನೇ ವಯಸ್ಸಿನಲ್ಲಿ ವಿವಾಹವಾಗಿದ್ದಾರೆ.
ನ್ಯೂಯಾರ್ಕ್: 1969ರಲ್ಲಿ ಅಪೊಲೋ 11 ಮಿಷನ್ ನೌಕೆಯ ಮೂಲಕ ಚಂದ್ರಯಾನ ಮಾಡಿ ಚಂದ್ರನ ಮೇಲೆ ಕಾಲಿರಿಸಿದ ಅಮೆರಿಕಾದ ಮೂವರು ಗಗನಯಾತ್ರಿಗಳಲ್ಲಿ ಒಬ್ಬರಾದ ಬುಜ್ ಅಲ್ಡ್ರಿನ್(Buzz Aldrin) ತಮ್ಮ 93ನೇ ವಯಸ್ಸಿನಲ್ಲಿ ತಮ್ಮ ಹುಟ್ಟುಹಬ್ಬದಂದೇ ತರುಣಿಯೋರ್ವಳನ್ನು ವಿವಾಹವಾಗುವ ಮೂಲಕ ಜಗತ್ತೇ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ. ಕ್ಯಾಲಿಫೋರ್ನಿಯಾದ ಲಾಸ್ ಎಂಜಲೀಸ್‌ನಲ್ಲಿ ನಡೆದ ಸಣ್ಣ ಸಮಾರಂಭದಲ್ಲಿ ತಮ್ಮ ಬಹುಕಾಲದ ಗೆಳತಿ ಡಾ. ಅನ್‌ಕ ಫೌರ್ (Dr Anca Faur) ಅವರೊಂದಿಗೆ ಬುಜ್ ಅಲ್ಡ್ರಿನ್ ಹೊಸ ಇನ್ಸಿಂಗ್ಸ್ ಶುರು ಮಾಡಿದ್ದಾರೆ. ಸ್ವತಃ ಬುಜ್ ಅಲ್ಡ್ರಿನ್ ಅವರೇ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ತಮ್ಮ ವಿವಾಹದ ಫೋಟೋ ಹಂಚಿಕೊಂಡಿದ್ದಾರೆ.
ನನ್ನ 93ನೇ ಹುಟ್ಟುಹಬ್ಬದಂದು ಹಾಗೂ ಲೀವಿಂಗ್ ಲೆಜೆಂಡ್ ಆಫ್ ಏವಿಯೇಷನ್ ಸಂಸ್ಥೆಯಿಂದ ಗೌರವಿಸಲ್ಪಡುವ ದಿನ ನಾನು ಈ ವಿಚಾರವನ್ನು ಹಂಚಿಕೊಳ್ಳಲು ಖುಷಿಯಾಗಿದ್ದೇನೆ. ನನ್ನ ದೀರ್ಘಕಾಲದ ಪ್ರೀತಿ ಡಾ. ಅನ್ಕಾ ಫೌರ್ ಹಾಗೂ ನಾನು ಮದುವೆಯಾಗುತ್ತಿದ್ದೇವೆ. ಲಾಸ್ ಏಂಜಲೀಸ್‌ನಲ್ಲಿ ನಡೆದ ಸಣ್ಣ ಸಮಾರಂಭದಲ್ಲಿ ನಾವು ಹಸೆಮಣೆ ಏರಿದ್ದೇವೆ. ಅಲ್ಲದೇ ಓಡಿ ಹೋಗಿ ಮದುವೆಯಾಗುವ ಯುವ ಪ್ರೇಮಿಗಳಷ್ಟು ನಾವು ಖುಷಿಯಾಗಿದ್ದೇವೆ ಎಂದು ಅವರು ಬರೆದುಕೊಂಡಿದ್ದಾರೆ.
ತಾಯಿಯನ್ನು ಮದುವೆಯಾಗಲು ಹೋಗಿ ಮಗಳನ್ನು ವರಿಸಿದ ರಾಹುಲ್ ಮಹಾಜನ್
ಇವರು ತಮ್ಮ ಇಳಿವಯಸ್ಸಿನಲ್ಲಿ ಮದುವೆಯಾಗುತ್ತಿರುವುದು ಅನೇಕರ ಹುಬ್ಬೇರುವಂತೆ ಮಾಡಿದೆ. ಟ್ವಿಟ್ಟರ್‌ನಲ್ಲಿ ಮದುವೆಯ ಕುರಿತಾಗಿ ಇವರು ಮಾಡಿದ ಪೋಸ್ಟ್‌ನ್ನು 1.8 ಮಿಲಿಯನ್‌ಗೂ ಅಧಿಕ ಜನ ವೀಕ್ಷಿಸಿದ್ದಾರೆ. ಹಾಗೆಯೇ ಕಾಮೆಂಟ್ ವಿಭಾಗದಲ್ಲಿ ಸಾವಿರಾರು ಜನ ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಅನೇಕರು ನೀವು ಈಗ ನಿಜವಾಗಿಯೂ ಚಂದ್ರನ ಮೇಲಿದ್ದೀರಿ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
ಹುಟ್ಟುಹಬ್ಬದ ಶುಭಾಶಯಗಳು ಬುಜ್ ಹಾಗೂ ವಿವಾಹ ಮಹೋತ್ಸವದ ಶುಭಾಶಯಗಳು. ನಿಮ್ಮ ಬಗ್ಗೆ ತಿಳಿದು ಥ್ರಿಲ್ ಎನಿಸುತ್ತಿದೆ. ಎಂದಿನಂತೆ ನೀವು ಅದನ್ನು ಸ್ಟೈಲ್ ಆಗಿ ನಿಭಾಯಿಸಿದ್ದೀರಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ವಾವ್ ಶುಭಾಶಯಗಳು ಕಲೋನಿಯಲ್ ಬುಜ್ ಅಲ್ಡ್ರಿನ್, ಜೀವನ 93ರಲ್ಲಿ ಆರಂಭವಾಗಿದೆ. ಒಳ್ಳೆಯದಾಗಲಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಲವ್ ಜಿಹಾದ್ಗೆ ಬಲಿಯಾದ್ರಾ ಖ್ಯಾತ ನಟಿ ರೀನಾ ರಾಯ್? ಕಣ್ಣೀರಿನ ದಿನಗಳನ್ನು ನೆನೆದ ಬಾಲಿವುಡ್ ತಾರೆ
ಮತ್ತೊಬ್ಬರು ಶುಭಾಶಯಗಳು ಯಂಗ್ ಮ್ಯಾನ್, ನೀವು ಮತ್ತೆ ಚಂದ್ರನ ಮೇಲೇರಿದಿರಿ ಎಂದು ಪ್ರತಿಕ್ರಿಯಿಸಿದ್ದಾರೆ. ಬುಜ್ ಅಲ್ಡ್ರಿನ್ ಅವರು ಈ ಹಿಂದೆ ಮೂರು ಬಾರಿ ಮದುವೆಯಾಗಿದ್ದು, ವಿಚ್ಛೇದನಗೊಂಡಿದ್ದಾರೆ. 1969ರಲ್ಲಿ ಚಂದ್ರಯಾನ ನಡೆಸಿದ ಅಪೊಲೋ 11 ಮಿಷನ್ (Apollo 11 mission) ಯಾನದಲ್ಲಿ ಭಾಗಿಯಾದ ಮೂವರು ಚಂದ್ರಯಾನಿಗಳಲ್ಲಿ ಪ್ರಸ್ತುತ ಬದುಕುಳಿದಿರುವ ಒಬ್ಬರೇ ಒಬ್ಬರು ಇವರಾಗಿದ್ದಾರೆ. ಚಂದ್ರನ ಮೇಲೆ ಕಾಲಿರಿಸಿದ ಮೊದಲ ವ್ಯಕ್ತಿ ನೀಲ್ ಆರ್ಮ್ ಸ್ಟ್ರಾಂಗ್ ಆಗಿದ್ದು, ಇವರು ಚಂದ್ರನ ತಲುಪಿದ 19 ನಿಮಿಷಗಳ ನಂತರ ಬುಜ್ ಅಲ್ಡ್ರಿನ್ ಅವರು ಚಂದ್ರನ ಮೇಲೆ ಕಾಲಿರಿಸಿದ್ದರು.
1971ರಲ್ಲಿ ಈ ಖಗೋಳ ವಿಜ್ಞಾನಿ ಬುಜ್ ಅಲ್ಡ್ರಿನ್ ಅವರು ಅಮೆರಿಕಾ ಬಾಹ್ಯಾಕಾಶ ಸಂಸ್ಥೆ ನಾಸಾದಿಂದ (NASA) ನಿವೃತ್ತಿ ಪಡೆದಿದ್ದರು. ನಂತರ 1988ರಲ್ಲಿ ಶೇರ್ ಸ್ಪೇಸ್ ಫೌಂಡೇಶನ್ (ShareSpace Foundation) ಅನ್ನು ಸ್ಥಾಪನೆ ಮಾಡಿದರು. ಇದೊಂದು ಲಾಭರಹಿತ ಸಂಸ್ಥೆಯಾಗಿದ್ದು, ಬಾಹ್ಯಾಕಾಶ ಪರಿಶೋಧನೆಯ ವಿಸ್ತರಣೆಯನ್ನು ಉತ್ತೇಜಿಸುತ್ತದೆ.