Asianet Suvarna News Asianet Suvarna News

ಲವ್​ ಜಿಹಾದ್​ಗೆ ಬಲಿಯಾದ್ರಾ ಖ್ಯಾತ ನಟಿ ರೀನಾ ರಾಯ್​? ಕಣ್ಣೀರಿನ ದಿನಗಳನ್ನು ನೆನೆದ ಬಾಲಿವುಡ್​ ತಾರೆ

80ರ ದಶಕದಲ್ಲಿ ಬಾಲಿವುಡ್​ ಆಳಿದ ನಟಿ ರೀನಾ ರಾಯ್​ ಲವ್​ ಜಿಹಾದ್​ಗೆ ಬಲಿಯಾದ್ರಾ? ನಟಿ ಹೇಳಿದ್ದೇನು?
 

Reena Roy and Love Jihad Actress talks about the struggles in life
Author
First Published Jan 19, 2023, 6:14 PM IST

ರೀನಾ ರಾಯ್ 70 ಮತ್ತು 80 ರ ದಶಕದ ಜನಪ್ರಿಯ ನಟಿ. ‘ಝರೂಟ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ನಟಿ  'ಜೈಸೆ ಕೋ ತೈಸಾ', 'ಜಖ್ಮಿ', 'ಸನಮ್ ತೇರಿ ಕಸಮ್', 'ಕಾಳಿ ಚರಣ್' ಮತ್ತು 'ವಿಶ್ವನಾಥ್' ಮುಂತಾದ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡು ಬಾಲಿವುಡ್​ ಅನ್ನು ಒಮ್ಮೆ  ಆಳಿದವರು.  ಅತ್ಯಂತ ಕಡಿಮೆ ಸಮಯದಲ್ಲಿ,  ಬಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರಾದ ರೀನಾ ಅವರು ಬಹಳ ಪ್ರಸಿದ್ಧರಾದದ್ದು  ಆ ಕಾಲದ ಖ್ಯಾತ ನಾಯಕ ನಟ, ಶತ್ರುಘ್ನ ಸಿನ್ಹಾ ಅವರ ಜೊತೆ ಲವ್‌ ಸ್ಟೋರಿಯಿಂದಲೇ.  ಶತ್ರುಘ್ನ ಸಿನ್ಹಾ (Shatrughna Sinha) ಮತ್ತು ರೀನಾ (Reena Roy) ಹನ್ನೆರಡು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಕುತೂಹಲದ ಸಂಗತಿ ಎಂದರೆ ಅವುಗಳಲ್ಲಿ ಬಹುತೇಕ ಎಲ್ಲವೂ  ಬಾಕ್ಸ್ ಆಫೀಸ್ ಹಿಟ್ ಚಿತ್ರಗಳೇ.

ಇವರಿಬ್ಬರೂ ಮದುವೆಯಾಗುತ್ತಾರೆ ಎಂದು ಭಾರಿ ಸುದ್ದಿ ಚಿತ್ರವಲಯದಲ್ಲಿ ಹರಡಿತ್ತು. ಶತ್ರುಘ್ನ ಸಿನ್ಹಾ ಅವರ ಆಪ್ತರಲ್ಲಿ ಒಬ್ಬರಾದ ಪಹ್ಲಾಜ್ ಅವರು 1982 ರಲ್ಲಿ ಅವರು ಇವರಿಬ್ಬರ ಜೋಡಿಯಲ್ಲಿ  'ಹತ್​ಕಡಿ' (Hatkadi) ಚಿತ್ರವನ್ನು ನಿರ್ಮಿಸುತ್ತಿದ್ದರು. ಈ ಸಿನಿಮಾಕ್ಕೂ ಮುಂಚೆಯೇ ಇಬ್ಬರ ನಡುವಿನ ಪ್ರೀತಿ ಬೆಳಕಿಗೆ ಬಂದಿತ್ತು. ಆದರೆ ವಿಧಿಯಾಟವೇ ಬೇರೆಯಾಗಿ ಹೋಯಿತು. 1980 ರಲ್ಲಿ  ಪೂನಂ ಸಿನ್ಹಾ ಅವರನ್ನು ಶತ್ರುಘ್ನ ಸಿನ್ಹಾ  ವಿವಾಹವಾದರು. ಶತ್ರುಘ್ನ ಸಿನ್ಹಾ ಮತ್ತು ರೀನಾ ರಾಯ್​ ಅವರ ರೋಚಕ ಪ್ರೇಮ್​ ಕಹಾನಿ ಕುರಿತು 2016 ರಲ್ಲಿ ಪ್ರಕಟವಾದ ಶತ್ರುಘ್ನ ಸಿನ್ಹಾ ಅವರ ಜೀವನಚರಿತ್ರೆ 'ಎನಿಥಿಂಗ್ ಬಟ್ ಖಾಮೋಶ್' ಪುಸ್ತಕದಲ್ಲಿ ಲೇಖಕಿ ಭಾರತಿ ಎಸ್ ಪ್ರಧಾನ್ ಬರೆದಿದ್ದಾರೆ. ಶತ್ರುಘ್ನ ಸಿನ್ಹಾ ಅವರ ಮದುವೆಯ ಬಳಿಕ ಇಬ್ಬರು ಕೆಲ ಕಾಲ ಒಟ್ಟಿಗೆ ಇದ್ದರು ಎಂದು ಹೇಳಲಾಗುತ್ತಿದ್ದರೂ ನಂತರ ಸಂಬಂಧ ದೂರವಾಯಿತು.

ಸ್ಯಾಂಡಲ್​ವುಡ್​ಗೆ ಶಾಕ್​: 'ಲೀಡರ್'​ ಚಿತ್ರ ಖ್ಯಾತಿಯ ಯುವ ನಟ ಧನುಷ್​ ಇನ್ನಿಲ್ಲ!

ಶತ್ರುಘ್ನ ಸಿನ್ಹಾ  ಅವರ ಜೊತೆಯ ಸಂಬಂಧ ಕಡಿದ ನಂತರ ರೀನಾ ರಾಯ್ ಅವರು ಪಾಕಿಸ್ತಾನಿ ಕ್ರಿಕೆಟಿಗ ಮೊಹ್ಸಿನ್ ಖಾನ್ (Monsin Khan) ಅವರನ್ನು ವಿವಾಹವಾದರು. ಈ ಮದುವೆ ಹೇಗೆ ಆಯಿತು ಎಂದು ಸ್ಪಷ್ಟವಾಗಿ ಉಲ್ಲೇಖವಾಗದಿದ್ದರೂ ಸುಂದರಿ ರೀನಾ ರಾಯ್​ ಲವ್​ ಜಿಹಾದ್ (Love jihad) ಬಲೆಗೆ ಬಿದ್ದರೇ ಎನ್ನುವ ಅನುಮಾನವೂ ಒಂದು ವರ್ಗದ್ದು.  ಮೊಹ್ಸಿನ್ ಖಾನ್ ಅವರನ್ನು ವಿವಾಹವಾದ ನಂತರ  ನಟನೆಯಿಂದ ನಿವೃತ್ತಿ ಘೋಷಿಸಿದರು ರೀನಾ ರಾಯ್​. ಆದರೆ ನಟಿಯ ಬಾಳಲ್ಲಿ ಮುಂದೆ ಆದದ್ದೆಲ್ಲವೂ ದುರಂತವೇ. ಈ ಬಗ್ಗೆ ಖುದ್ದು ರೀನಾ ಇ ಟೈಮ್ಸ್​ ಜೊತೆಗಿನ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. 

1983 ರಲ್ಲಿ ಮೊಯ್ಸನ್​ ಅವರನ್ನು ಮದುವೆಯಾದ ಮೇಲೆ ಅನಿವಾರ್ಯವಾಗಿ ಪಾಕಿಸ್ತಾನಕ್ಕೆ ಹೋಗಬೇಕಾಯಿತು. ಆದರೆ ಗಂಡನ ಮನೆಯ  ಜೀವನ ಶೈಲಿ ಹೊಂದಿಕೊಳ್ಳಲು ಆಗಲೇ ಇಲ್ಲ. ಆದ್ದರಿಂದ  1992 ರಲ್ಲಿ ಅವರು ಭಾರತಕ್ಕೆ ಮರಳಿದರು. ಸಾಲದು ಎಂಬುದಕ್ಕೆ ಮೊಹ್ಸಿನ್ ಲಂಡನ್‌ಗೆ (London) ತೆರಳಲು ಮತ್ತು ಬ್ರಿಟಿಷ್ ಪೌರತ್ವವನ್ನು ತೆಗೆದುಕೊಳ್ಳಲು ಬಯಸಿದ್ದರು. ಇದಕ್ಕೆ ಕೂಡ ರೀನಾ ಅವರ ಒಪ್ಪಿಗೆ ಇರಲಿಲ್ಲ. ಹೀಗೆ ಒಂದೆಡೆ ಮುಸ್ಲಿಂ ಸಂಪ್ರದಾಯಕ್ಕೆ ಹೊಂದಿಕೊಳ್ಳಲು ಆಗದೇ, ಬ್ರಿಟಿಷ್​ ಪೌರತ್ವಕ್ಕೆ (British citizenship) ಒಗ್ಗಿಕೊಳ್ಳಲು ಆಗದೇ ದಂಪತಿ ನಡುವೆ ಬಿರುಕು ಮೂಡಿತು. ಇದು ದೊಡ್ಡದಾಗುತ್ತಾ ಸಾಗಿತು. ಈ ನಡುವೆಯೆ ಅವರಿಗೆ ಹೆಣ್ಣು ಮಗು ಹುಟ್ಟಿತು. ದಂಪತಿಯ ನಡುವೆ ಬಿರುಕು ಹೆಚ್ಚಿದಂತೆ ಮೊಹ್ಸಿನ್ ಮಗಳನ್ನು ಕರೆದುಕೊಂಡು ಲಂಡನ್​ಗೆ ಹೋಗಿಯೇ ಬಿಟ್ಟರು.   ಮಗಳನ್ನು ಬಿಡಲು ಸಾಧ್ಯವಾಗದ ರೀನಾ, ಅನ್ಯ ಮಾರ್ಗ ಕಾಣದೇ ಲಂಡನ್​ಗೆ ಹೋದರು.

ವೇಶ್ಯೆಯರಿಗಾಗಿ ಬಣ್ಣ ಹಚ್ಚಿದ ಖ್ಯಾತ ಬಾಲಿವುಡ್​ ನಟಿಮಣಿಗಳಿವರು...

ಆದರೆ ಅಲ್ಲಿಯೂ ಎಲ್ಲ ಸುಲಭವಾಗಲಿಲ್ಲ. ಮಗಳ ಹೆಸರನ್ನು ಜನ್ನತ್​ನಿಂದ ಸನಮ್​ (Sanam) ಎಂದು ಬದಲಾಯಿಸಲಾಯಿತು. ತಮ್ಮ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಒತ್ತಾಯಿಸುತ್ತಿದ್ದ ಗಂಡನಿಂದ ಮಾನಸಿಕ ಹಿಂಸೆ ಅನುಭವಿಸಬೇಕಾಯಿತು ಎಂದು ಹೇಳಿಕೊಂಡಿರುವ ರೀನಾ ರಾಯ್​, ಭಾರತಕ್ಕೆ ವಾಪಸಾಗಿಬಿಟ್ಟರು. ಆದರೆ ಗಂಡ ಮಗಳನ್ನು ಬಿಟ್ಟುಕೊಡಲಿಲ್ಲ. ನಂತರ ತಾವು  ಮಗಳ ಕಸ್ಟಡಿ (Custody) ಪಡೆಯಲು ಹೋರಾಟ ಹೈರಾಣಾಗಿ ಹೋದರು. ಕೊನೆಗೂ ಅವರಿಗೆ ಮಗಳ ಕಸ್ಟಡಿ ಸಿಕ್ಕಿತು ಎಂದು ರೀನಾ ಹೇಳಿಕೊಂಡಿದ್ದಾರೆ.

ತಮ್ಮ ವೈವಾಹಿಕ ಬದುಕು ನರಕವಾದರೂ ತಮ್ಮ ಮಾಜಿ ಪತಿ, ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅವರಿಬ್ಬರೂ ಸಂಪರ್ಕದಲ್ಲಿ ಇದ್ದಾರೆ, ಮಗಳನ್ನು ಕಂಡರೆ ತುಂಬಾ ಇಷ್ಟ. ಅವರು ಎಲ್ಲಿಯೇ ಇದ್ದರೂ ಚೆನ್ನಾಗಿ ಇರಲಿ ಎಂದು ಮಾತು ಮುಗಿಸಿದ್ದಾರೆ ರೀನಾ. 

Follow Us:
Download App:
  • android
  • ios