ರಷ್ಯಾ ಉಕ್ರೇನ್ ಯುದ್ಧದಲ್ಲಿ ತಾನು  ತಟಸ್ಥ ನೀತಿ ಹೊಂದಿದ್ದು, ತನಗೂ ಈ ಯುದ್ಧಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುತ್ತಲೇ ರಷ್ಯಾವನ್ನು ಬೆಂಬಲಿಸುತ್ತಾ ರಹಸ್ಯವಾಗಿ ತನ್ನ ಪ್ರಜೆಗಳನ್ನು ಉಕ್ರೇನ್ ವಿರುದ್ಧ ಹೋರಾಡಲು ಬಿಟ್ಟಿರುವ ಚೀನಾ ನಡೆಯನ್ನು ಉಕ್ರೇನ್ ಬಯಲು ಮಾಡಿದೆ.

ಬೀಜಿಂಗ್‌: ರಷ್ಯಾ ಉಕ್ರೇನ್ ಯುದ್ಧದಲ್ಲಿ ತಾನು ತಟಸ್ಥ ನೀತಿ ಹೊಂದಿದ್ದು, ತನಗೂ ಈ ಯುದ್ಧಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುತ್ತಲೇ ರಷ್ಯಾವನ್ನು ಬೆಂಬಲಿಸುತ್ತಾ ರಹಸ್ಯವಾಗಿ ತನ್ನ ಪ್ರಜೆಗಳನ್ನು ಉಕ್ರೇನ್ ವಿರುದ್ಧ ಹೋರಾಡಲು ಬಿಟ್ಟಿರುವ ಚೀನಾ ನಡೆಯನ್ನು ಉಕ್ರೇನ್ ಬಯಲು ಮಾಡಿದೆ. ತನ್ನಿಂದ ತಪ್ಪಾದರೂ ಪರವಾಗಿಲ್ಲ ಆದರೆ ಚೀನಾದ ನರಿ ಬುದ್ಧಿಯನ್ನು ಬಯಲು ಬಯಲು ಮಾಡಲೇಬೇಕು ಎಂದು ಹಠಕ್ಕೆ ಬಿದ್ದ ಉಕ್ರೇನ್ ಇದಕ್ಕಾಗಿ ರೆಡ್‌ಕ್ರಾಸ್‌ನ ಮಾನವೀಯ ಹಕ್ಕಿನ ನಿಯಮವನ್ನು ಕೂಡ ಉಲ್ಲಂಘಿಸಿ ರಷ್ಯಾ ಯುದ್ಧದಲ್ಲಿ ಭಾಗಿಯಾಗಿರುವ ಚೀನಾ ಪ್ರಜೆಗಳನ್ನು ಮಾಧ್ಯಮಗಳ ಮುಂದೆ ತಂದಿದೆ. ಉಕ್ರೇನ್‌ನ ಈ ನಡೆ ಈಗ ಚೀನಾದ ಮುಖ ಕೆಂಪಗಾಗಿಸಿದೆ. 

ರಷ್ಯಾ-ಉಕ್ರೇನ್ ಯುದ್ಧದಲ್ಲಿ ತಾನು ತಟಸ್ಥ ನೀತಿಯನ್ನು ಹೊಂದಿದ್ದೇನೆ ಎಂದು ಚೀನಾ ಹೇಳಿಕೊಂಡು ಬಂದಿದ್ದರೂ ಬೀಜಿಂಗ್ ಆರಂಭದಿಂದಲೂ ರಷ್ಯಾಗೆಗೆ ಆರ್ಥಿಕ ಮತ್ತು ರಾಜತಾಂತ್ರಿಕ ನೆರವು ನೀಡುತ್ತಲೇ ಬಂದಿದೆ. ಜೊತೆಗೆ ಚೀನಾದ ನಾಗರಿಕರು ಕೂಡ ರಷ್ಯಾ ಪರವಾಗಿ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಭಾಗವಹಿಸಿರುವುದ ಉಕ್ರೇನ್‌ನ ಗಮನಕ್ಕೆ ಬಂದಿದೆ. ಚೀನಾದ ಈ ನಡೆಯನ್ನು ಉಕ್ರೇನ್ ಸೂಕ್ಷ್ಮವಾಗಿ ಗಮನಿಸುತ್ತಲೇ ಬಂದಿತ್ತು. ಈಗ ಅಧ್ಯಕ್ಷ ಝೆಲೆನ್ಸ್ಕಿ ಒಪ್ಪಿಗೆಯ ಮೇರೆಗೆ ಉಕ್ರೇನಿಯನ್ ಮಿಲಿಟರಿಯು ಉಕ್ರೇನ್‌ನಲ್ಲಿ ವರ್ಷಗಳ ಕಾಲ ನಡೆದ ಸಂಘರ್ಷದಲ್ಲಿ ಯುದ್ಧ ಕೈದಿಗಳಾಗಿ ಸೆರೆಸಿಕ್ಕ ಚೀನಾ ಪ್ರಜೆಗಳ ಗುರುತು ಪತ್ತೆ ಮಾಡುವುದಲ್ಲದೇ ಮಾಧ್ಯಮಗಳ ಮುಂದೆ ಅವರನ್ನು ಪ್ರದರ್ಶಿಸಿದೆ. ಯುದ್ಧಕೈದಿಗಳನ್ನು ಮಾಧ್ಯಮಗಳ ಕ್ಯಾಮರಾ ಮುಂದೆ ತರುವುದು ಅವರ ಗುರುತು ಬಹಿರಂಗಪಡಿಸುವುದು ರೆಡ್‌ಕ್ರಾಸ್‌ನ ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಪ್ರಕಾರ ಯುದ್ಧ ನಿಯಮಗಳ ಉಲ್ಲಂಘನೆಯಾಗಿದೆ. ಆದರೆ ಈ ಯುದ್ಧದಲ್ಲಿ ಚೀನಾದ ಕೈವಾಡವೂ ಇದೆ ಎಂಬುದನ್ನು ಸಾಬೀತುಪಡಿಸುವುದಕ್ಕಾಗಿ ಉಕ್ರೇನ್ ಈ ನಿರ್ಧಾರ ತೆಗೆದುಕೊಂಡಿದೆ. 

ಟ್ರಂಪ್ ಬೆದರಿಕೆಯಿಂದ ಭಾರತದ ಸಖ್ಯ ಬಯಸಿದ ಚೀನಾ, 85,000 ಭಾರತೀಯರಿಗೆ ವೀಸಾ ಗ್ರ್ಯಾಂಟ್

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ರೇನ್‌ಗೆ ಬೆಂಬಲಿ ನಿರಾಕರಿಸಿದ ನಂತರ ಉಕ್ರೇನ್ ಮುಂದೆ ಇರುವ ಎಲ್ಲಾ ಅವಕಾಶಗಳು ಬಹಳಷ್ಟು ಕಡಿಮೆ ಆಗಿವೆ. ಇತ್ತ ಟ್ರಂಪ್ ಬೆಂಬಲ ಕಡಿಮೆ ಆಗುತ್ತಿದ್ದಂತೆ ರಷ್ಯಾವೂ ಚೀನಾ ನೆರವಿನೊಂದಿಗೆ ತನ್ನ ಆಕ್ರಮಣವನ್ನು ತೀವ್ರಗೊಳಿಸಿದೆ. ಆದರೆ ತನ್ನ ನಾಗರಿಕರು ಈ ಯುದ್ಧದಲ್ಲಿ ಭಾಗಿಯಾಗಿಲ್ಲ ಎಂದು ಚೀನಾ ಉಕ್ರೇನ್ ಆರೋಪವನ್ನು ಇದುವರೆಗೆ ನಿರಾಕರಿಸುತ್ತಲೇ ಬಂದಿತ್ತು. ಹೀಗಾಗಿ ಉಕ್ರೇನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾ ಬಣ್ಣ ಬಯಲು ಮಾಡಿದೆ. 

ಕಳೆದ ವಾರವಷ್ಟೇ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಉಕ್ರೇನ್ ಭೂಪ್ರದೇಶದಲ್ಲಿ ಉಕ್ರೇನಿಯನ್ನರ ವಿರುದ್ಧ ಹೋರಾಡುತ್ತಿರುವ 155 ಚೀನೀ ಪ್ರಜೆಗಳಿದ್ದಾರೆ ಎಂದು ಹೇಳಿದ್ದರು. ರಷ್ಯಾ ಚೀನಾವನ್ನು ಕೂಡ ಯುದ್ಧಕ್ಕೆ ಎಳೆಯುತ್ತಿದೆ ಎಂದು ಅವರು ಪ್ರತಿಪಾದಿಸಿದರು ಮತ್ತು ರಷ್ಯಾ ಸೈನ್ಯವು ತನ್ನ ಚೀನಾ ನಾಗರಿಕರನ್ನು ಯುದ್ಧಕ್ಕೆ ನೇಮಕ ಮಾಡಿಕೊಳ್ಳಲು ಮೌನವಾಗಿ ಅವಕಾಶ ನೀಡಿದ್ದಕ್ಕಾಗಿ ಬೀಜಿಂಗ್ ಅನ್ನು ಝೆಲೆನ್ಸ್ಕಿ ಟೀಕಿಸಿದ್ದರು. ರಷ್ಯಾ ಈ ಚೀನಾ ಪ್ರಜೆಗಳಿಗೆ ಯುದ್ಧ ತರಬೇತಿ ನೀಡಿತ್ತು. ಪ್ರಸ್ತುತ ಈ ಯುದ್ಧದಲ್ಲಿ ಹೋರಾಡುತ್ತಿರುವ ಕನಿಷ್ಠ 155 ಚೀನೀ ಪ್ರಜೆಗಳ ವಿವರಗಳನ್ನು ಉಕ್ರೇನ್‌ ಹೊಂದಿದೆ ಮತ್ತು ಅವರಲ್ಲಿ ಇಬ್ಬರನ್ನು ಪೂರ್ವ ಡೊನೆಟ್ಸ್ಕ್‌ನಲ್ಲಿ ಸೆರೆಹಿಡಿಯಲಾಗಿದೆ ಎಂದು ಉಕ್ರೇನ್ ಅಧ್ಯಕ್ಷ ಹೇಳಿದ್ದರೆ ಚೀನಾ ಈ ಹೇಳಿಕೆಯನ್ನು ತಳ್ಳಿಹಾಕಿತು.

ಶ್ರೀಮಂತಿಕೆ ತಂದ ಸಾವು: ಸ್ನೇಹಿತನಿಗೆ ವಿಷ ಉಣಿಸಿದ 19 ವರ್ಷದ ಯುವಕ

ಆದರೆ ಈಗ ಆ ಇಬ್ಬರು ಚೀನಾ ಮೂಲದ ಯುದ್ಧ ಕೈದಿಗಳನ್ನು ಮಾಧ್ಯಮಗಳ ಮುಂದೆ ಕರೆತರುತ್ತಿದ್ದಂತೆ ಚೀನಾದ ವಿದೇಶಾಮಗ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ. ಉಕ್ರೇನ್ ಬಿಕ್ಕಟ್ಟಿನ ಪ್ರಾರಂಭಕ್ಕೆ ಚೀನಾ ಕಾರಣ ಅಲ್ಲ, ಅಥವಾ ಚೀನಾ ಈ ಯುದ್ಧದಲ್ಲಿ ಭಾಗವಹಿಸುವ ಪಕ್ಷವೂ ಅಲ್ಲ ಎಂದು ನಾವು ಪುನರುಚ್ಚರಿಸಲು ಬಯಸುತ್ತೇವೆ. ಸಂಬಂಧಪಟ್ಟ ಸಂಬಂಧಿತ ಪಕ್ಷಗಳು ಚೀನಾದ ಪಾತ್ರವನ್ನು ಸರಿಯಾಗಿ ಮತ್ತು ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕು ಮತ್ತು ಬೇಜವಾಬ್ದಾರಿ ಹೇಳಿಕೆಗಳನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ಚೀನಾ ವಿದೇಶಾಂಗ ಸಚಿವಾಲಯ ಹೇಳಿದೆ. 

ಇತ್ತ ಅಮೆರಿಕಾದಿಂದಲೂ ಬೆಂಬಲ ಕಳೆದುಕೊಂಡಿರುವ ಉಕ್ರೇನ್‌ಗೆ ರಷ್ಯಾ ತನ್ನ ವಿರುದ್ಧ ನಡೆಸುತ್ತಿರುವ ಯುದ್ಧದಲ್ಲಿ ಚೀನಾದ ಪಾತ್ರವನ್ನು ಜಗತ್ತಿನ ಮುಂದೆ ಬಯಲು ಮಾಡಲು ಉಕ್ರೇನ್‌ಗೆ ಯುದ್ಧಕೈದಿಗಳನ್ನು ಮಾಧ್ಯಮಗಳ ಮುಂದೆ ತರದೇ ಬೇರೆ ಯಾವುದೇ ದಾರಿ ಇಲ್ಲವಾಗಿದೆ. ಹೀಗಾಗಿ ಉಕ್ರೇನ್‌ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಖ್ಯಾತಿಗೆ ಧಕ್ಕೆ ತರುವ ಅಪಾಯವಿದ್ದರೂ, ಕೈವ್ ವಶಪಡಿಸಿಕೊಂಡ ಚೀನೀ ಪ್ರಜೆಗಳನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದೆ. ಅಂತರರಾಷ್ಟ್ರೀಯ ರೆಡ್‌ಕ್ರಾಸ್ ಸಮಿತಿಯ ಪ್ರಕಾರ, ಯುದ್ಧ ಕೈದಿಗಳ ರಕ್ಷಣೆಯಲ್ಲಿ ಅವರನ್ನು ಮಾಧ್ಯಮಗಳಿಂದ ರಕ್ಷಿಸುವುದು ಕೂಡ ಸೇರಿದೆ. 

ಸಿಎನ್‌ಎನ್‌ ವರದಿ ಪ್ರಕಾರ ಬಂಧಿತ ಯುದ್ಧ ಕೈದಿಗಳನ್ನು ಯುದ್ಧ ಸಮವಸ್ತ್ರ ಹಾಕಿಸಿಯೇ ಉಕ್ರೇನ್‌ ಅಧಿಕಾರಿಗಳು ಪತ್ರಿಕಾಗೋಷ್ಠಿ ಕೋಣೆಗೆ ಕರೆತಂದಿದ್ದರು. ಅವರಿಗೆ ಪತ್ರಿಕೆಗಳೊಂದಿಗೆ ಸಂವಹನ ನಡೆಸಲು ಕೂಡ ಅವಕಾಶ ನೀಡಿದ್ದರು. ಇದು ಅವರಿಗೆ ತಮ್ಮ ಸ್ಥಿತಿಯ ಬಗ್ಗೆ ಮಾತನಾಡಲು ಒಂದು ವೇದಿಕೆಯನ್ನು ನೀಡಿತು. ಅವರಿಗಾಗಿ ಒಬ್ಬ ಭಾಷಾಂತರಕಾರನನ್ನು ಕೂಡ ನೇಮಿಸಲಾಗಿತ್ತು. ಆ ಭಾಷಾಂತರಕಾರ ಯುದ್ಧ ಕೈದಿಗಳಿಗೆ ಕೇಳಲಾಗುತ್ತಿದ್ದ ಪ್ರಶ್ನೆಗಳನ್ನು ಭಾಷಾಂತರಿಸಿದ್ರೆ ಯುದ್ಧ ಕೈದಿಗಳು ಚೀನಾದ ಮ್ಯಾಂಡರಿನ್ ಭಾಷೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಪತ್ರಿಕಾಗೋಷ್ಠಿಯ ಉದ್ದಕ್ಕೂ, ಯುದ್ಧ ಕೈದಿಗಳನ್ನು ಶಸ್ತ್ರಸಜ್ಜಿತ ಉಕ್ರೇನಿಯನ್ ಭದ್ರತಾ ಸಿಬ್ಬಂದಿ ಕಾವಲು ಕಾಯುತ್ತಿದ್ದರು.

ಅವರಲ್ಲೊಬ್ಬರು ಕೋವಿಡ್ ಸಮಯದಲ್ಲಿ ಕೆಲಸ ಕಳೆದುಕೊಂಡಿದ್ದರಿಂದ ಹಣ ಗಳಿಸಲು ಮಾರ್ಗ ಹುಡುಕುತ್ತಿದ್ದಾಗ ಈ ಅವಕಾಶ ಸಿಕ್ಕಿತ್ತು ಎಂದು ಹೇಳಿಕೊಂಡಿದ್ದಾರೆ. ರಷ್ಯಾದಲ್ಲಿ ತಿಂಗಳಿಗೆ ಸಿಗುವ 250,000 ರೂಬಲ್ಸ್‌ಗಳ (ಸುಮಾರು $3,000) ನಿರೀಕ್ಷೆಯು ಅವರು ಚೀನಾದಲ್ಲಿ ಗಳಿಸುವ ನಿರೀಕ್ಷೆಗಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದ್ದಾಗಿ ಸಿಎನ್ಎನ್ ವರದಿ ಮಾಡಿದೆ. ತಮಗೆ ವೈದ್ಯಕೀಯ ಪುನರ್ವಸತಿಯಲ್ಲಿ ಪೂರ್ವ ತರಬೇತಿ ಸಿಕ್ಕಿದೆ. ರಷ್ಯಾದ ಮಿಲಿಟರಿಯಲ್ಲಿ ಅದನ್ನು ಮಾಡಬೇಕೆಂದು ಅವರು ಅಂದುಕೊಂಡಿದ್ದರು. ಆದರೆ ಅವರು ಮಾಸ್ಕೋ ತಲುಪಿದಾಗ, ಅವರಿಗೆ ಕಡ್ಡಾಯ ಯುದ್ಧ ತರಬೇತಿ ನೀಡಲಾಯ್ತು ಹಾಗೂ ಯುದ್ದದಲ್ಲಿ ಹೋರಾಡುವ ಕೆಲಸ ನೀಡಲಾಯ್ತು ಎಂದು ಅವರು ಹೇಳಿಕೊಂಡಿದ್ದಾರೆ.