Asianet Suvarna News Asianet Suvarna News

ಸಿಂಗಾಪುರ ಏರ್‌ಲೈನ್ಸ್‌ ಹಾರರ್‌, Turbulence ಕಾರಣಕ್ಕೆ ಸಾವು ಕಂಡ ಬ್ರಿಟಿಷ್‌ ಪ್ರಯಾಣಿಕ!

Singapore Airlines Flight Turbulence: ಅತ್ಯಂತ ಗಂಭೀರ ಪ್ರಮಾಣದ ಪ್ರಕ್ಷುಬ್ಧತೆ ಅಥವಾ Turbulence  ಇದ್ದ ಕಾರಣಕ್ಕೆ ಲಂಡನ್-ಸಿಂಗಪುರ ವಿಮಾನವು ಬ್ಯಾಂಕಾಕ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

Turbulence Kills British Passenger in Singapore Airlines Flight san
Author
First Published May 21, 2024, 8:22 PM IST

ನವದೆಹಲಿ (ಮೇ.21):  ಅಪರೂಪದ ಘಟನೆಯೊಂದರಲ್ಲಿ ಲಂಡನ್‌ನಿಂದ ಸಿಂಗಾಪುರಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ತೀವ್ರ ಪ್ರಕ್ಷುಬ್ಧತೆ (Turbulence ) ಉಂಟಾಗಿ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದು, 30 ಮಂದಿ ಗಾಯಗೊಂಡಿದ್ದಾರೆ. ಸಾವನ್ನು ಸಿಂಗಾಪುರ ಏರ್‌ಲೈನ್ಸ್ ದೃಢಪಡಿಸಿದೆ. ಸೋಮವಾರ ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಿಂದ ಹೊರಟು ಸಿಂಗಾಪುರಕ್ಕೆ ತೆರಳುತ್ತಿದ್ದ ವಿಮಾನ ಸಂಖ್ಯೆ SQ321 ಮಾರ್ಗಮಧ್ಯದಲ್ಲಿ "ತೀವ್ರ ಪ್ರಕ್ಷುಬ್ಧತೆಯನ್ನು ಎದುರಿಸಿತು" ಎಂದು ಸಿಂಗಾಪುರ್ ಏರ್‌ಲೈನ್ಸ್ ಹೇಳಿಕೆಯಲ್ಲಿ ತಿಳಿಸಿದೆ. ವಿಮಾನವನ್ನು ಬ್ಯಾಂಕಾಕ್‌ನ ಸುವರ್ಣಭೂಮಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸುವಂತೆ ಸೂಚಿಸಲಾಗಿತ್ತು. ಅಲ್ಲಿ ಮಂಗಳವಾರ ಮಧ್ಯಾಹ್ನ 3.45 ಕ್ಕೆ (ಸ್ಥಳೀಯ ಕಾಲಮಾನ) ತುರ್ತು ಭೂಸ್ಪರ್ಶ ಮಾಡಿದೆ ಎಂದು ತಿಳಿಸಿದೆ. ಬೋಯಿಂಗ್ 777-300 ಇಆರ್ - ವಿಮಾನದಲ್ಲಿ 211 ಪ್ರಯಾಣಿಕರು ಮತ್ತು 18 ಸಿಬ್ಬಂದಿ ಇದ್ದರು.

ವಿಮಾನವು ಪ್ರಕ್ಷುಬ್ಧತೆಯನ್ನು ಎದುರಿಸುವ ಮೊದಲು ಕ್ಯಾಬಿನ್ ಸಿಬ್ಬಂದಿ ಬೆಳಗಿನ ಉಪಾಹಾರವನ್ನು ನೀಡುತ್ತಿರುವಾಗ ವಿಮಾನವು ಏರ್ ಪಾಕೆಟ್‌ಗೆ ಬಿದ್ದಿತು, ಈ ವೇಳೆ ಪೈಲಟ್‌ಗಳು ತುರ್ತು ಲ್ಯಾಂಡಿಂಗ್‌ಗೆ ವಿನಂತಿ ಮಾಡಿದ್ದರು ಎಂದು ಸುವರ್ಣಭೂಮಿ ವಿಮಾನ ನಿಲ್ದಾಣದ ಜನರಲ್ ಮ್ಯಾನೇಜರ್ ಕಿಟ್ಟಿಪಾಂಗ್ ಕಿಟ್ಟಿಕಾಚೋರ್ನ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಘಟನೆಯ ಸಮಯದಲ್ಲಿ 73 ವರ್ಷದ ಬ್ರಿಟಿಷ್ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ, ಬಹುಶಃ ಹೃದಯಾಘಾತದಿಂದ ಅವರು ಸಾವು ಕಂಡಿರಬಹುದು ಎನ್ನಲಾಗಿದೆ. ಏಳು ಮಂದಿಗೆ ತಲೆಗೆ ಗಂಭೀರ ಗಾಯಗಳಾಗಿವೆ.

ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ ಸಂತಾಪ ಸೂಚಿಸಿದ ವಿಮಾನಯಾನ ಸಂಸ್ಥೆಯು, "ಬೋಯಿಂಗ್‌ನಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಒಂದು ಸಾವು ಸಂಭವಿಸಿದೆ ಎಂದು ನಾವು ದೃಢೀಕರಿಸುತ್ತಿದ್ದೇವೆ. ನಮ್ಮ ಆದ್ಯತೆಯು ಎಲ್ಲಾ ಪ್ರಯಾಣಿಕರಿಗೆ ಮತ್ತು ಸಿಬ್ಬಂದಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುವುದು. ಅಗತ್ಯ ವೈದ್ಯಕೀಯ ನೆರವು ಒದಗಿಸಲು ನಾವು ಥೈಲ್ಯಾಂಡ್‌ನ ಸ್ಥಳೀಯ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ ಮತ್ತು ಅಗತ್ಯವಿರುವ ಯಾವುದೇ ಹೆಚ್ಚುವರಿ ಸಹಾಯವನ್ನು ಒದಗಿಸಲು ಬ್ಯಾಂಕಾಕ್‌ಗೆ ತಂಡವನ್ನು ಕಳುಹಿಸುತ್ತಿದ್ದೇವೆ' ಎಂದು ಹೇಳಿದೆ.

ಏರ್‌ ಇಂಡಿಯಾ ವಿಮಾನ ರದ್ದು, ಸಾಯುವ ಕೊನೆ ಕ್ಷಣದಲ್ಲಿ ಪತಿ ಜೊತೆಗಿರುವ ಭಾಗ್ಯ ತಪ್ಪಿಸಿಕೊಂಡ ಪತ್ನಿ!

ಪ್ರಯಾಣಿಕರು ಸೀಟ್‌ಬೆಲ್ಟ್ ಧರಿಸದೇ ಇರುವಾಗ ಇಂತಹ ಗಾಯಗಳು ಸಾಮಾನ್ಯವಾಗಿ ಸಂಭವಿಸುತ್ತವೆ ಮತ್ತು ಪೈಲಟ್‌ಗೆ ಸುಧಾರಿತ ಎಚ್ಚರಿಕೆ ನೀಡಲು ಸಾಧ್ಯವಾಗಲಿಲ್ಲ ಏಕೆಂದರೆ ಹವಾಮಾನ ರಾಡಾರ್‌ನ ಮಾಹಿತಿಯು ಯಾವುದೇ ಪ್ರಕ್ಷುಬ್ಧತೆಯನ್ನು ಸೂಚಿಸೋದಿಲ್ಲ  ಎಂದು ತಜ್ಞರು ಹೇಳಿದ್ದಾರೆ. ಅಂತಹ ಸಂದರ್ಭಗಳಲ್ಲಿ, ಪ್ರಯಾಣಿಕರನ್ನು ಕಾಕ್‌ಪಿಟ್‌ವರೆಗೆ ಹೋಗಿ ಬೀಳಬಹುಸು. ಇದು ಗಾಯಗಳಿಗೆ ಕಾರಣವಾಗಬಹುದು ಎಂದು ತಿಳಿಸಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ದೆಹಲಿ-ಸಿಡ್ನಿ ಏರ್ ಇಂಡಿಯಾ ವಿಮಾನದಲ್ಲಿ ಪ್ರಕ್ಷುಬ್ಧತೆಯಿಂದಾಗಿ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದರು.

ಈ ಆ್ಯಪ್ ಇದ್ರೆ ಕಡಿಮೆ ಖರ್ಚಿನಲ್ಲಿ ಏರ್ ಪೋರ್ಟ್ ತಲುಪಬಹುದು;ಬೆಂಗಳೂರಿನಲ್ಲಿ ಈ ಸ್ಟಾರ್ಟ್ ಅಪ್ ಈಗ ಫೇಮಸ್

Latest Videos
Follow Us:
Download App:
  • android
  • ios