ಈ ಆ್ಯಪ್ ಇದ್ರೆ ಕಡಿಮೆ ಖರ್ಚಿನಲ್ಲಿ ಏರ್ ಪೋರ್ಟ್ ತಲುಪಬಹುದು;ಬೆಂಗಳೂರಿನಲ್ಲಿ ಈ ಸ್ಟಾರ್ಟ್ ಅಪ್ ಈಗ ಫೇಮಸ್
ಬಹುತೇಕ ನಗರಗಳಲ್ಲಿ ಏರ್ ಪೋರ್ಟ್ ಹೊರವಲಯದಲ್ಲಿರುವ ಕಾರಣ ಅಲ್ಲಿಗೆ ಪ್ರಯಾಣಿಸೋದು ಪ್ರಯಾಣಿಕರ ಪಾಲಿಗೆ ದುಬಾರಿ ವೆಚ್ಚ. ಆದರೆ, ಗೋಪೂಲ್ ಎಂಬ ಆ್ಯಪ್ ಕಾರ್ ಪೂಲಿಂಗ್ ಮೂಲಕ ಈ ವೆಚ್ಚವನ್ನು ತಗ್ಗಿಸಿದೆ.
Business Desk:ಇದು ಸ್ಟಾರ್ಟ್ಅಪ್ ಯುಗ. ಸ್ವಂತ ಉದ್ಯಮ ಪ್ರಾರಂಭಿಸಬೇಕು ಎಂದು ಯೋಚಿಸೋರ ಸಂಖ್ಯೆ ಹೆಚ್ಚುತ್ತಿದೆ. ವೃತ್ತಿಯಲ್ಲಿ ಟೆಕ್ಕಿ ಆಗಿರುವ ಆಕಾಶ್ ಜಾಧವ್ ಕೂಡ ಸ್ಟಾರ್ಟ್ ಅಪ್ ಪ್ರಾರಂಭಿಸಬೇಕೆಂಬ ಕನಸು ಹೊಂದಿದ್ದರು. ಒಮ್ಮೆ ಬೆಂಗಳೂರು ಏರ್ ಪೋರ್ಟ್ ನಲ್ಲಿ ಇಳಿದ ಅವರಿಗೆ ಮಹಿಳಾ ಸಹಪ್ರಯಾಣಿಕರೊಬ್ಬರು ಮಾತಿಗೆ ಸಿಗುತ್ತಾರೆ. ಆಕೆ ಏರ್ ಪೋರ್ಟ್ ನಿಂದ 50 ಕಿ.ಮೀ. ದೂರದ ಎಲೆಕ್ಟ್ರಾನಿಕ್ ಸಿಟಿಗೆ ಹೋಗಬೇಕಾಗಿತ್ತು.ಆಕಾಶ್ ಕೂಡ ಅಲ್ಲಿಗೇ ಹೋಗಬೇಕಾಗಿತ್ತು. ಈ ಸಮಯದಲ್ಲಿ ಊಬರ್ ರೈಡ್ ಅನ್ನು ಶೇರ್ ಮಾಡಿಕೊಳ್ಳುವ ಬಗ್ಗೆ ಮಹಿಳೆಯನ್ನು ಕೇಳುತ್ತಾರೆ. ಆಕೆ ಕೂಡ ಒಪ್ಪಿಗೆ ನೀಡುತ್ತಾರೆ. ಇದರಿಂದ ಸುಮಾರು 1,500 ರೂ. ಕಾರು ಬಾಡಿಗೆಯನ್ನು ಇಬ್ಬರೂ ಹಂಚಿಕೊಂಡರು. ಅಂದ್ರೆ ಇಬ್ಬರಿಗೂ ಅರ್ಧದಷ್ಟು ಹಣ ಉಳಿತಾಯವಾಯಿತು. ಈ ಘಟನೆಯಿಂದ ಆಕಾಶ್ ಗೆ ಕಾರ್ ಪೂಲ್ಸ್ ಸ್ಟಾರ್ಟ್ ಅಪ್ ಪ್ರಾರಂಭಿಸುವ ಯೋಚನೆ ಹುಟ್ಟಿಕೊಂಡಿತು. ಪರಿಣಾಮ ಆಕಾಶ 'ಗೋಪೂಲ್' ಎಂಬ ಸ್ಟಾರ್ಟ್ ಅಪ್ ಪ್ರಾರಂಭಿಸಿದರು. ಇದು ಏರ್ ಪೋರ್ಟ್ ಗೆ ಅಥವಾ ಅಲ್ಲಿಂದ ಪ್ರಯಾಣಿಸುವ ಪ್ರಯಾಣಿಕರ ಜೇಬಿನ ಹೊರೆಯನ್ನು ತಗ್ಗಿಸುತ್ತದೆ.
ಆಕಾಶ್ ಜಾಧವ್ ಅಪರಿಚಿತ ಮಹಿಳೆ ಜೊತೆಗೆ ಏರ್ ಪೋರ್ಟ್ ನಿಂದ ಟ್ಯಾಕ್ಸಿ ಹಂಚಿಕೊಂಡು ಬರುವಾಗ ಆಕೆಗೆ ಇಂಥ ಪ್ರಯಾಣ ಕಂಫರ್ಟ್ ನೀಡುತ್ತದಾ ಎಂಬ ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ಮಹಿಳೆ, ಏರ್ ಪೋರ್ಟ್ ಹೊರಗೆ ಇದು ಸಾಮಾನ್ಯ ಎಂದಿದ್ದರು. ಆ ಬಳಿಕ ಈ ಬಗ್ಗೆ ಆಕಾಶ್ ಒಂದು ಚಿಕ್ಕ ಸಮೀಕ್ಷೆ ನಡೆಸಿದ್ದರು. ಆಗ ಅವರಿಗೆ ತಿಳಿದು ಬಂದ ವಿಚಾರವೇನೆಂದ್ರೆ ಭಾರತ ಹಾಗೂ ಇತರ ರಾಷ್ಟ್ರಗಳ ಅನೇಕ ನಗರಗಳಲ್ಲಿ ಏರ್ ಪೋರ್ಟ್ ನಗರದ ಕೇಂದ್ರ ಭಾಗದಿಂದ ಸಾಕಷ್ಟು ದೂರದಲ್ಲಿರುತ್ತವೆ. ಇದರಿಂದ ಕ್ಯಾಬ್ ವೆಚ್ಚ ದುಬಾರಿಯಾಗುತ್ತದೆ. ಹೀಗಾಗಿ ಜನರು ಏರ್ ಪೋರ್ಟ್ ಪ್ರಯಾಣದ ವೆಚ್ಚವನ್ನು ತಗ್ಗಿಸಲು ಬಯಸುತ್ತಾರೆ. ಇಂಥವರಿಗೆ ಕಾರ್ ಪೂಲ್ ಹಣ ಉಳಿತಾಯ ಮಾಡಲು ನೆರವು ನೀಡುತ್ತದೆ ಎಂಬುದು ಆಕಾಶ್ ಅವರ ಗಮನಕ್ಕೆ ಬಂತು.
ಕರ್ಮ ಬೆನ್ನು ಬಿಡಲ್ಲ; ಜೆರೋಧ ಸಹಸಂಸ್ಥಾಪಕ ನಿತಿನ್ ಕಾಮತ್ ಹೀಗ್ಯಾಕೆ ಹೇಳಿದ್ರು?
ಏನಿದು'ಗೋ ಪೂಲ್'?
2023ರ ಫೆಬ್ರವರಿಯಲ್ಲಿ ಆಕಾಶ್ ಜಾಧವ್ 'ಗೋಪೂಲ್' (GoPool) ಪ್ರಾರಂಭಿಸುತ್ತಾರೆ. ಈ ಆ್ಯಪ್ ನಲ್ಲಿ ಏರ್ ಪೋರ್ಟ್ ನಿಂದ ಅಥವಾ ಏರ್ ಪೋರ್ಟ್ ಗೆ ಟ್ಯಾಕ್ಸಿ ಶೇರ್ ಮಾಡಿಕೊಳ್ಳಲು ಲಭ್ಯವಿರುವ ಸಹಪ್ರಯಾಣಿಕರ ಮಾಹಿತಿಯನ್ನು ಪ್ರಯಾಣಿಕರು ಪಡೆದುಕೊಳ್ಳಬಹುದು. ಅಂದ ಹಾಗೇ ಇಲ್ಲಿ ಇಬ್ಬರು ಪ್ರಯಾಣಿಕರ ನಡುವೆ ಶೇರಿಂಗ್ ನಡೆಯುತ್ತದೆಯೇ ವಿನಾಃ ಸಂಸ್ಥೆ ಮಧ್ಯದಲ್ಲಿ ತಲೆ ಹಾಕೋದಿಲ್ಲ. ಗೋಪೂಲ್ ಪ್ರಾರಂಭಿಸುವ ಸಮಯದಲ್ಲಿ ಆಕಾಶ್ ಜಾಧವ್ ಇನ್ನೊಂದು ಸ್ಟಾರ್ಟ್ ಅಪ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಒಂದು ವರ್ಷದ ಬಳಿಕ ಅಂದ್ರೆ ಈ ವರ್ಷದ ಫೆಬ್ರವರಿಯಲ್ಲಿ ಆಕಾಶ್ ಆ ಕೆಲಸ ಬಿಟ್ಟು ಗೋಪೂಲ್ ಮೇಲೆಯೇ ಪೂರ್ಣ ಗಮನ ಕೇಂದ್ರೀಕರಿಸಿದ್ದಾರೆ.
4 ವರ್ಷದ ಹಿಂದೆ 2.5 ಕೋಟಿಗೆ ವಿರುಷ್ಕಾ ಖರೀದಿಸಿದ ಷೇರು ಬೆಲೆ ಈಗ 9 ಕೋಟಿ!
ಅಂದಾಜು 25 ಸಾವಿರ ಬಳಕೆದಾರರು
ಗೋಪೂಲ್ ಈಗ ಜನಪ್ರಿಯತೆ ಗಳಿಸಲು ಪ್ರಾರಂಭಿಸಿದೆ. ಪ್ರಸ್ತುತ ಬೆಂಗಳೂರು, ಹೈದರಾಬಾದ್, ಗೋವಾ ಹಾಗೂ ಪುಣೆಯಲ್ಲಿ ಗೋಪೂಲ್ ಕಾರ್ಯನಿರ್ವಹಿಸುತ್ತಿದೆ.'ನಾವೀಗ ಸುಮಾರು 25ಸಾವಿರ ಬಳಕೆದಾರರನ್ನು ಹೊಂದಿದ್ದೇವೆ. ಕಳೆದ ಕೆಲವು ವಾರಗಳಿಂದ ಆ್ಯಪ್ ಗೆ ಪ್ರತಿದಿನ 50ರಿಂದ 125 ಬಳಕೆದಾರರು ಸಿಗುತ್ತಿದ್ದಾರೆ. ಪ್ರಾರಂಭದಲ್ಲಿ ಇದೊಂದು ಕಾನ್ಸೆಪ್ಟ್ ಅಷ್ಟೇ ಆಗಿತ್ತು. ಆದರೆ, ಈಗ ಸುಮಾರು 4-5 ತಿಂಗಳಿಂದ ಜನರನ್ನು ಸೆಳೆಯಲು ಆರಂಭಿಸಿದೆ' ಎಂದು ಆಕಾಶ್ ಜಾಧವ್ ತಿಳಿಸಿದ್ದಾರೆ. ಇನ್ನು ಈ ಸೇವೆ ಬೆಂಗಳೂರಿನಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದೆ ಎಂಬ ಮಾಹಿತಿಯನ್ನು ಕೂಡ ಅವರು ನೀಡಿದ್ದಾರೆ.
36 ವರ್ಷದ ಆಕಾಶ್ ಜಾಧವ್ ಪುಣೆ ಎಂಐಟಿಯಿಂದ ಮಾಹಿತಿ ತಂತ್ರಜ್ಞಾನದಲ್ಲಿಪದವಿ ಪಡೆದಿದ್ದಾರೆ. ಇನ್ನು ಸಾಫ್ಟ್ ವೇರ್ ಇಂಡಸ್ಟ್ರಿಯಲ್ಲಿ 13 ವರ್ಷಗಳ ಅನುಭವ ಹೊಂದಿದ್ದಾರೆ.