Asianet Suvarna News Asianet Suvarna News

ಅಮೆರಿಕ ಅಧ್ಯಕ್ಷರಿರೋದು ವೈಟ್‌ಹೌಸ್‌ನಲ್ಲಿ, ಉಪಾಧ್ಯಕ್ಷರೆಲ್ಲಿರ್ತಾರೆ..?

ಅಧ್ಯಕ್ಷೀಯ ಚುನಾವಣೆ ಗೆದ್ದರೆ ಜಾಯ್‌ ಬೈಡನ್ ವೈಟ್‌ ಹೌಸ್‌ಗೆ ಶಿಫ್ಟ್ ಆಗುತ್ತಾರೆ. ಆದರೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಎಲ್ಲಿರುತ್ತಾರೆ..?

The real Kamala Vilas: Where Harris will stay if she becomes US Vice President dpl
Author
Bangalore, First Published Nov 7, 2020, 6:16 PM IST

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಈಗಾಗಲೇ ಮುನ್ನೆಲೆಯಲ್ಲಿರುವ ಜಾಯ್ ಬೈಡನ್ ಜೊತೆ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಕಮಲಾ ಹ್ಯಾರಿಸ್ ಕೂಡಾ ಗೆಲುವಿನ ಹಾದಿಯಲ್ಲಿದ್ದಾರೆ. ಈ ನಡುವೆ ನೆಟ್ಟಿಗರು ಅಮೆರಿಕದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ನಂತರ ಡೆಮೋಕ್ರಾಟ್ ವಸತಿಗೃಹಗಳ ಬಗ್ಗೆ ಈಗಲೇ ಚಿಂತಿಸುತ್ತಿದ್ದಾರೆ.

ಟ್ವಿಟ್ಟರ್‌ನಲ್ಲಿ ಬಹಳಷ್ಟು ಜನ ತಮಾಷೆಯಾಗಿ ಶ್ವೇತಭವನವನ್ನು "ಕಮಲಾ ವಿಲಾಸ್" ಎಂದು ಮರುನಾಮಕರಣ ಮಾಡಬೇಕೆಂದು ಕೇಳುತ್ತಿದ್ದಾರೆ. ಇದು ಕಮಲ್ಆ ಹ್ಯಾರಿಸ್ ಭಾರತೀಯರೆಂಬುದರ ಅಂಗೀಕಾರವಾಗಿದೆ ಎಂದೂ ಹೇಳುತ್ತಿದ್ದಾರೆ.

ಅಮೆರಿಕದಲ್ಲಿ ಮತ ಎಣಿಕೆ, ದಂಪತಿಗೆ 15ನೇ ಮಗು ಹೆಣ್ಣಾಯ್ತು, ಟ್ರಕ್ಕಲ್ಲಿ ಸಿವಿ ಇಟ್ಕೊಂಡವನಿಗೆ ಕೆಲಸ

ಚುನಾವಣೆ ಗೆದ್ದರೆ ಜಾಯ್‌ ಬೈಡನ್ ವೈಟ್‌ ಹೌಸ್‌ಗೆ ಶಿಫ್ಟ್ ಆಗುತ್ತಾರೆ. ಆದರೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಎಲ್ಲಿರುತ್ತಾರೆ..? ನಿಜವಾದ ಕಮಲಾ ವಿಲಾಸ್ ಅನ್ನು ಅದರ ವಿಳಾಸದಿಂದಲೇ ಕರೆಯಲಾಗುತ್ತದೆ. ನಂಬರ್ ಒನ್ ಅಬ್ಸರ್ವೇಟರಿ ಸರ್ಕಲ್ - ಇದು ಅಮೆರಿಕದ ನೇವಲ್ ಅಬ್ಸರ್ವೇಟರಿಯ ಮೈದಾನದಲ್ಲಿದೆ. ವಾಷಿಂಗ್ಟನ್ ಶ್ವೇತಭವನದಿಂದ ಕೆಲವೇ ಮೈಲಿ ದೂರದಲ್ಲಿದೆ.

ವಿಸ್ತಾರವಾದ 12 ಎಕರೆ ಜಾಗದ ಹೃದಯಭಾಗದಲ್ಲಿರುವ ಅರಮನೆ 19 ನೇ ಶತಮಾನದ ಬಿಳಿ ಇಟ್ಟಿಗೆ ಬಂಗಲೆ 1893 ರಲ್ಲಿ ವೀಕ್ಷಣಾಲಯದ ಅಧೀಕ್ಷಕರಿಗಾಗಿ ನಿರ್ಮಿಸಲ್ಪಟ್ಟಿತ್ತು. 1924 ರಲ್ಲಿ ನೌಕಾ ಕಾರ್ಯಾಚರಣೆಯ ಮುಖ್ಯಸ್ಥರ ನಿವಾಸವಾಯಿತು.

ಅಮೆರಿಕಾ ಅಧ್ಯಕ್ಷರ ಮಾಸಿಕ ವೇತನವೆಷ್ಟು ಗೊತ್ತಾ? ಬರೋಬ್ಬರಿ...... !

ಸುಮಾರು 50 ವರ್ಷಗಳ ನಂತರ, ವಾಲ್ಟರ್ ಮೊಂಡೇಲ್ ಮತ್ತು ಅವರ ಕುಟುಂಬವು ಮೊದಲ ಬಾರಿಗೆ ಸ್ಥಳಾಂತರಗೊಂಡಾಗ ಇದು ಅಮೆರಿಕದ ಉಪಾಧ್ಯಕ್ಷರ ಅಧಿಕೃತ ವಸತಿಯಾಯಿತು.

ಹಿಂದೆ ಉಪಾಧ್ಯಕ್ಷರು ಮತ್ತು ಅವರ ಕುಟುಂಬಗಳು ತಮ್ಮ ಸ್ವಂತ ಮನೆಗಳಲ್ಲಿ ವಾಸಿಸುತ್ತಿದ್ದರು. ಆದರೆ ನಂತರದ ವರ್ಷಗಳಲ್ಲಿ ನಂಬರ್ ಒನ್ ಅಬ್ಸರ್ವೇಟರಿ ಸರ್ಕಲ್ ಉಪಾಧ್ಯಕ್ಷರು ಮತ್ತು ಅವರ ಕುಟುಂಬದ ವಾಸಕ್ಕಾಗಿ ಬಿಟ್ಟುಕೊಟ್ಟಿತು.

ಅಮೆರಿಕದಲ್ಲಿ ಮುಗಿದಿಲ್ಲ ಮತ ಎಣಿಕೆ, ಉತ್ತರ ಕೊರಿಯಾದಲ್ಲಿ ಧೂಮಪಾನ ಬ್ಯಾನ್!

ಡೆಮಾಕ್ರಟಿಕ್ ಅಧ್ಯಕ್ಷೀಯ ನಾಮಿನಿ ಜೋ ಬಿಡನ್ ಅವರು ಬರಾಕ್ ಒಬಾಮಾ ಆಡಳಿತದಲ್ಲಿ ಅಮೆರಿಕದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವಾಗ 2008 ರಿಂದ 2016 ಇದೇ ಬಂಗಲೆಯಲ್ಲಿ ವಾಸಿಸುತ್ತಿದ್ದರು

Follow Us:
Download App:
  • android
  • ios