ಮಗು ಅಳ್ತಿದೆ ಅಂತ ಇಡೀ ಕುಟುಂಬವನ್ನೇ ಹೊಟೇಲ್‌ನಿಂದ ಹೊರ ಹಾಕಿದ ಮಾಲೀಕ: ಒಳ್ಳೆ ಕೆಲಸ ಅಂದ್ಬಿಡೋದ ಜನ

ಕೆಲವೊಮ್ಮೆ ಮಕ್ಕಳ ನಿರಂತರ ಅಳು ಪೋಷಕರಿಗೂ ತಲೆನೋವು ತರುತ್ತದೆ. ಹಾಗಂತ ಯಾರು ಮಕ್ಕಳನ್ನು ದೂರ ಎಸೆಯೋಲ್ಲ. ಆದರೆ ಇಲ್ಲೊಂದು ಕಡೆ ಹೊಟೇಲ್ ಮಾಲೀಕ, ಮಗುವೊಂದು ಅಳುತ್ತಿದೆ ಅಂತ ಇಡೀ ಕುಟುಂಬವನ್ನೇ ಹೊಟೇಲ್‌ನಿಂದ ಹೊರಗೆ ಕಳುಹಿಸಿದ್ದಾನೆ. 

The owner threw the whole family out of the hotel because the baby was crying people told Good job akb

ಮಗು ಅಳುತ್ತೆ ಅಂತ ಹೇಳಿದಾಗಲೆಲ್ಲಾ ಮಕ್ಕಳು ಅಳದೇ ದೊಡ್ಡವರು ಅಳೋಕಾಗುತ್ತಾ ಅಂತ ಹೇಳೋದನ್ನು ನೀವು ಕೇಳಿರಬಹುದು. ಮಕ್ಕಳೆಂದ ಮೇಲೆ ಅವರು ಅಳಲೇಬೇಕು ಎಂಬುದು ಬಹುತೇಕ ಅಲಿಖಿತ ನಿಯಮ. ಆದರೆ ಕೆಲವೊಮ್ಮೆ ಮಕ್ಕಳ ನಿರಂತರ ಅಳು ಪೋಷಕರಿಗೂ ತಲೆನೋವು ತರುತ್ತದೆ. ಹಾಗಂತ ಯಾರು ಮಕ್ಕಳನ್ನು ದೂರ ಎಸೆಯೋಲ್ಲ. ಆದರೆ ಇಲ್ಲೊಂದು ಕಡೆ ಹೊಟೇಲ್ ಮಾಲೀಕ, ಮಗುವೊಂದು ಅಳುತ್ತಿದೆ ಅಂತ ಇಡೀ ಕುಟುಂಬವನ್ನೇ ಹೊಟೇಲ್‌ನಿಂದ ಹೊರಗೆ ಕಳುಹಿಸಿದ್ದಾನೆ. ಆಸ್ಟ್ರೇಲಿಯಾದ ಕೆಫೆಯೊಂದರಲ್ಲಿ ಈ ಘಟನೆ ನಡೆದಿದ್ದು, ಈ ವಿಚಾರವೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

ಆಸ್ಟ್ರೇಲಿಯಾದ ಮ್ಯಾಗ್ನೆಟಿಕ್ ಐಲ್ಯಾಂಡ್‌ನಲ್ಲಿ ಅಡೆಲೆಸ್ ಕೆಫೆಯಲ್ಲಿ ಈ ಘಟನೆ ನಡೆದಿದೆ. ಮಗುವಿನ ಅಳುವನ್ನು ಕೇಳಿಸಿಕೊಳ್ಳಲಾಗದೇ ಹೊಟೇಲ್ ಮಾಲೀಕ ಅಡ್ರಿನ್ ಡಲ್ಲೊಸ್ಟೆ ಎಂಬಾತ ನಾಲ್ವರಿದ್ದ ಮಗುವಿನ ಇಡೀ ಕುಟುಂಬವನ್ನು ಹೊಟೇಲ್‌ನಿಂದ ಹೊರ ನಡೆಯುವಂತೆ ಹೇಳಿದ್ದಾನೆ. ಈ ಕೂಡಲೇ ನಿಮ್ಮ ಮಗುವನ್ನು ಹೊತ್ತೊಕೊಂಡು ಇಲ್ಲಿಂದ ನಡೆಯದಿದ್ದರೆ ಪೊಲೀಸರಿಗೆ ಕರೆ ಮಾಡುವುದಾಗಿ ಆತ ಹೇಳಿದಾಗ ಮಗುವಿನ ತಾಯಿ ಹಾಗೂ ಇಡೀ ಕುಟುಂಬ ಗಾಬರಿಯಿಂದ ಆತನನ್ನು ನೋಡಿದ್ದಾಗಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಘಟನೆಯ ನಂತರ ಈ ಕುಟುಂಬ ಈ ಕೆಫೆಯನ್ನು ಬಹಿಷ್ಕರಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಕರೆ ನೀಡಿದ್ದಾರೆ. ಎಡ್ವರ್ಡ್ ಇಲ್ಲಿನ ಈ ಕೆಫೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಇದೊಂದು ಸಂಪೂರ್ಣ ಅಸಹ್ಯಕರ ಈ ಕೆಫೆಯನ್ನು ಬಹಿಷ್ಕರಿಸುವಂತೆ ಕೇಳಿದ್ದಾರೆ. ಈ ವೀಡಿಯೋದಲ್ಲಿ ಮಗು ಅಳುತ್ತಿರುವುದು ಕೂಡ ಕೇಳಿಸುತ್ತಿದೆ. ಘಟನೆ ಎಂದಿದ್ದಾರೆ. ಆದರೆ ವಿಚಿತ್ರ ಎಂದರೆ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ಚರ್ಚೆಯಾಗುತ್ತಿದ್ದಂತೆ ಅನೇಕ ಬಳಕೆದಾರರು ಕೆಫೆ ಮಾಲೀಕರು ಒಳ್ಳೆ ಕೆಲಸ ಮಾಡಿದ್ದಾರೆ ಎಂದಿದ್ದಾರೆ.

ಲಕ್ಷದ್ವೀಪದಲ್ಲಿ ತಾಜ್‌ ಬ್ರ್ಯಾಂಡ್‌ನ ಎರಡು ಐಷಾರಾಮಿ ಹೋಟೆಲ್‌ ನಿರ್ಮಿಸಲು ಟಾಟಾ ನಿರ್ಧಾರ

ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತಃ ಹೊಟೇಲ್ ಮಾಲೀಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ತಾನು ಈ ಕೃತ್ಯವೆಸಗುವ ಮೊದಲು ಸುಮಾರು 15 ನಿಮಿಷಗಳ ಕಾಲ ಮಗು ನಿರಂತರವಾಗಿ ಅಳುತ್ತಿತ್ತು ಎಂದು ಹೇಳಿದ್ದಾನೆ.  ಸ್ಥಳೀಯವಾಗಿ ಜಿಲಾಟೊ ಎಂದು ಕರೆಯಲ್ಪಡುವ ಐಸ್‌ಕ್ರೀಂ ಅನ್ನು ಇಬ್ಬರು ಹಂಚಿಕೊಳ್ಳಿ ಎಂದು ಪೋಷಕರು ಹೇಳಿದಾಗ ಮಕ್ಕಳಿಬ್ಬರು  ಸಿಟ್ಟಿಗೆದ್ದಿದ್ದಾರೆ. ಅದರಲ್ಲಿ ಒಂದು ಮಗು ಹೊಟೇಲ್‌ನ ಡೆಕೋರೇಷನ್‌ನ್ನು ಕಿತ್ತೆಸೆದಿದೆ. ಅಲ್ಲದೇ ಟೈಲ್ಸ್‌ ನೆಲಹಾಸಿನ ಮೇಲೆ ಸ್ಟೀಲ್ ಪ್ಲಾಸ್ಕ್‌ನ್ನು ಎತ್ತಿ ಎಸೆದಿದೆ. ಇದರ ಜೊತೆಗೆ ಅವರ ಅಳು ಬಹಳ ಜೋರಾಗಿತ್ತು. ಇದು ಇತರ ಗ್ರಾಹಕರಿಗೂ ಕಿರಿಕಿರಿಯುಂಟು ಮಾಡುತ್ತಿತ್ತು.  ಅಂದಾಜು 15 ನಿಮಿಷಗಳ ಕಾಲ ಮಕ್ಕಳಿಬ್ಬರು ನಿರಂತರ ಜೋರಾಗಿ ಕಿರುಚುತ್ತಾ ಅಳುತ್ತಿದ್ದರು. ಇದರಿಂದ ಅಲ್ಲಿ ಊಟಕ್ಕೆಂದು ಬಂದ ಇತರರಿಗೂ ತಮ್ಮ ಊಟವನ್ನು ಖುಷಿಯಿಂದ ಮಾಡಲಾಗುತ್ತಿರಲಿಲ್ಲ ಎಂದು ಹೊಟೇಲ್ ಮಾಲೀಕ ಹೇಳಿದ್ದಾರೆ. 

ತಾನು ಮೊದಲಿಗೆ ಬಹಳ ಸೌಮ್ಯವಾಗಿಯೇ ಅವರಿಗೆ ಇಲ್ಲಿಂದ ಎದ್ದು ಹೋಗುವಂತೆ ಹೇಳಿದೆ. ಆದರೆ ಅವರು ವಿರೋಧ ವ್ಯಕ್ತಪಡಿಸಿದ್ದಲ್ಲದೇ ಪೊಲೀಸರಿಗೆ ಫೋನ್ ಮಾಡುವೇ ಎಂದು ಹೇಳುವವರೆಗೆ ಅಲ್ಲಿಂದ ಹೋಗಲು ಒಪ್ಪಲಿಲ್ಲಎಂದು ಹೊಟೇಲ್ ಮಾಲೀಕ ಹೇಳಿದ್ದಾರೆ. ಇನ್ನು ಈ ವೀಡಿಯೋ ನೋಡಿದ ಅನೇಕರು ಮಗುವಿನ ಪೋಷಕರ ಬದಲು ಹೊಟೇಲ್ ಮಾಲೀಕನಿಗೆ ಬೆಂಬಲಿಸಿದ್ದು ತಾವು ಒಳ್ಳೆ ಕೆಲಸ ಮಾಡಿದ್ದೀರಿ ಎಂದಿದ್ದಾರೆ.  ಒಂದು ವೇಳೆ ಹೊಟೇಲ್ ಮಾಲೀಕನ ಜಾಗದಲ್ಲಿ ನಾನಿದ್ದರೆ ನಾನು ಅದೇ ಕೆಲಸ ಮಾಡ್ತಿದ್ದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನನಗೂ ಮಕ್ಕಳಿದ್ದಾರೆ, ಅವರು ಚಿಕ್ಕವರಿದ್ದಾಗ ಮಕ್ಕಳ ಗಲಾಟೆ ಹೆಚ್ಚಾದರೆ ನಾನು ಅವರನ್ನೆತ್ತಿಕೊಂಡು ಆ ಸ್ಥಳದಿಂದ ಹೊರಟು ಬಿಡುತ್ತಿದ್ದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಬೆಂಗಳೂರು: ಸ್ಟಾರ್ ಹೋಟೆಲ್‌ ಊಟದಲ್ಲಿ ಜಿರಳೆ ಕಂಡು ಬೆಚ್ಚಿಬಿದ್ದ ಹೈಕೋರ್ಟ್ ವಕೀಲೆ!

ಗೌರವಾನ್ವಿತ ಪೋಷಕರು ಒಂದೋ ಮಕ್ಕಳಿಗೆ ಸಾರ್ವಜನಿಕ ಸ್ಥಳದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಮಕ್ಕಳು ಚಿಕ್ಕವರಿರುವಾಗಲೇ ಕಲಿಸಿಕೊಡಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

Latest Videos
Follow Us:
Download App:
  • android
  • ios