ಪಾಕಿಸ್ಥಾನ ಪ್ರಧಾನಿ ಹುದ್ದೆಯಿಂದ ಇಮ್ರಾನ್‌ ಔಟ್ ಇಮ್ರಾನ್ ಸರ್ಕಾರ ಉರುಳಿಸಲು ಕಾರಣರಾದ ನಾಯಕರಿವರು  

ಇಸ್ಲಾಮಾಬಾದ್‌: ಪಾಕಿಸ್ತಾನದ ಸಂಸತ್ತಿನಲ್ಲಿ ಅವಿಶ್ವಾಸ ಮತ ನಿರ್ಣಯದಲ್ಲಿ ಸೋತ ಬಳಿಕ ಇಮ್ರಾನ್‌ ಖಾನ್‌ ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಇಮ್ರಾನ್‌ ಸರ್ಕಾರ ಉರುಳಿಸುವಲ್ಲಿ ಈ ನಾಲ್ಕು ಜನರು ಪ್ರಮುಖ ಪಾತ್ರ ವಹಿಸಿದ್ದಾರೆ. ಶೆಹಬಾಜ್‌ ಶರೀಫ್‌, ಆಸಿಫ್‌ ಅಲಿ ಜರ್ದಾರಿ, ಬಿಲಾವಲ್‌ ಭುಟ್ಟೊಜರ್ದಾರಿ, ಮೌಲಾನಾ ಫಜ್ಲುರ್‌ ರೆಹಮಾನ್‌ ಈ ನಾಲ್ಕು ನಾಯಕರು ಇಮ್ರಾನ್‌ ಸರ್ಕಾರ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

1. ಶೆಹಬಾಜ್‌ ಶರೀಫ್‌

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಶರೀಫ್‌ ಸಹೋದರನಾದ 70 ವರ್ಷದ ಶೆಹಬಾಜ್‌ ಶರೀಫ್‌ (Shehbaz Sharif) ಪಾಕಿಸ್ತಾನದ ಮುಂದಿನ ಪ್ರಧಾನಿಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತದೆ. ಇವರು ಪ್ರಸ್ತುತ ಪಾಕಿಸ್ತಾನ್‌ ಮುಸ್ಲಿಂ ಲೀಗ್‌-ಎನ್‌ (Pakistan Muslim League-N.) ಪಕ್ಷದ ಅಧ್ಯಕ್ಷರಾಗಿದ್ದಾರೆ. ಈ ಮೊದಲು ಇವರು ಪಂಜಾಬಿನ ಮುಖ್ಯಮಂತ್ರಿಯಾಗಿಯೂ ಕಾರ್ಯನಿರ್ವಹಿಸಿದ್ದರು.

Breaking News : ವಿಶ್ವಾಸ ಮತ ಯಾಚನೆಯಲ್ಲಿ ಸೋಲು, ಮುಗಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಧ್ಯಾಯ

2. ಆಸಿಫ್‌ ಅಲಿ ಜರ್ದಾರಿ

ಮಾಜಿ ಪ್ರಧಾನಿ ಬೆನಝೀರ್‌ ಬುಟ್ಟೋ ಅವರನ್ನು ವಿವಾಹವಾದ ಆಸಿಫ್‌ ಅಲಿ ಜರ್ದಾರಿ (Asif Ali Zardari) ಇವರು ಪಾಕಿಸ್ತಾನ ರಾಜಕಾರಣದಲ್ಲಿ ಪ್ರಮುಖರು. 2007ರಲ್ಲಿ ಬುಟ್ಟೊ ಹತ್ಯೆಯ ನಂತರ ಇವರು ಪಾಕಿಸ್ತಾನ ಪೀಪಲ್ಸ್‌ ಪಕ್ಷದ ಸಹ ಮುಖ್ಯಸ್ಥರಾಗಿದ್ದಾರೆ. ಪಿಎಂಎಲ್‌-ಎನ್‌ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು 2008ರಲ್ಲಿ ಇವರು ರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸಿದ್ದರು.

3. ಬಿಲಾವಲ್‌ ಭುಟ್ಟೊಜರ್ದಾರಿ

ಬೆನಜೀರ್‌ ಭುಟ್ಟೊ (Benazir Bhutto) ಹಾಗೂ ಆಸಿಫ್‌ ಅಲಿ ಜರ್ದಾರಿಯ (Asif ali Zardari) ಪುತ್ರ ಬಿಲಾವಲ್‌ ಭುಟ್ಟೊ ಜರ್ದಾರಿ (Bilawal Bhuttojardari) ತಮ್ಮ 19 ನೇ ವರ್ಷ ವಯಸ್ಸಿನಲ್ಲಿಯೇ ಪಾಕಿಸ್ತಾನ ಪೀಪಲ್ಸ್‌ ಪಕ್ಷದ (Pakistan People's Party) ಮುಖ್ಯಸ್ಥರಾಗಿದ್ದರು. 33 ವರ್ಷದ ಯುವ ನಾಯಕರಾದ ಇವರು ಮಹಿಳೆ ಹಾಗೂ ಅಲ್ಪಸಂಖ್ಯಾಂತರ ಹಕ್ಕಿನ ಬಗ್ಗೆ ಬಹಳಷ್ಟು ಮಾತನಾಡುವ ಮೂಲಕ ಜನಪ್ರಿಯರಾಗಿದ್ದಾರೆ.

ಸರ್ಕಾರ ಕೆಡವಲು ಅಮೆರಿಕ ಸಂಚು: ಪಾಕ್‌ ವಿದೇಶಾಂಗ ಸಚಿವ!

4. ಮೌಲಾನಾ ಫಜ್ಲುರ್‌ ರೆಹಮಾನ್‌

ಮುಸ್ಲಿಂ ಧರ್ಮಗುರುವಾದ ಮೌಲಾನಾ ಫಜ್ಲುರ್‌ ರೆಹಮಾನ್‌ (Maulana Fazlur Rahman) ಇವರು ಜಾಮಿಯಾತ್‌-ಉಲ್‌-ಇ-ಇಸ್ಲಾಂ ಪಕ್ಷ (Jamiat-ul-e-Islam Party) ಸ್ಥಾಪಿಸುವ ಮೂಲಕ ರಾಜಕೀಯ ಪ್ರವೇಶಿಸಿದರು. ಸ್ವತಂತ್ರವಾಗಿ ಅಧಿಕಾರ ಸ್ಥಾಪನೆ ಮಾಡುವಷ್ಟು ಪಕ್ಷವು ಸೀಟುಗಳನ್ನು ಗಳಿಸಿದ್ದದರೂ ಪಕ್ಷದ ಬೆಂಬಲವು ಸರ್ಕಾರದ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಇವರು ಇಮ್ರಾನ್‌ ಖಾನ್‌ ಕಟ್ಟಾವಿರೋಧಿಯಾಗಿದ್ದು, ಬ್ರಿಟನ್ನಿನ ಜೆಮಿಮಾ ಗೋಲ್ಡ್‌ಸ್ಮಿತ್‌ (Jemima Goldsmith) ಅವರನ್ನು ವಿವಾಹವಾಗಿದ್ದಕ್ಕೆ ಇಮ್ರಾನ್‌ನನ್ನು 'ಒಬ್ಬ ಯಹೂದಿ' ಎಂದು ಕರೆದಿದ್ದರು.

ನಿಜವಾದ ಸ್ವಾತಂತ್ರ್ಯಹೋರಾಟ ಇನ್ನು ಆರಂಭ: ಖಾನ್‌

ಇಸ್ಲಾಮಾಬಾದ್‌: ಪಾಕಿಸ್ತಾನಕ್ಕೆ 1947ರಲ್ಲಿ ಸ್ವಾತಂತ್ರ್ಯ ದೊರೆತಿದ್ದರೂ, ವಾಸ್ತವದಲ್ಲಿ ಸ್ವಾತಂತ್ರ್ಯ ಹೋರಾಟ ದೇಶಾದ್ಯಂತ ಇನ್ನು ಮುಂದೆ ಪ್ರಾರಂಭವಾಗಲಿದೆ ಎಂದು ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್‌ ಖಾನ್‌ (Imran Khan) ಹೇಳಿದ್ದಾರೆ. ಅವಿಶ್ವಾಸ ಮತದಲ್ಲಿ ಸೋಲುಂಡ ಬಳಿಕ ಇದೇ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಖಾನ್‌, ‘ಪಾಕ್‌ನ ಸಾರ್ವಭೌಮತೆ ಅದರ ಜನತೆಯದ್ದಾಗಿದ್ದು, ಇದರ ರಕ್ಷಣೆಗಾಗಿ ಹಾಗೂ ವಿದೇಶಿ ಸಂಚಿನ ವಿರುದ್ಧ ವಾಸ್ತವದ ಹೋರಾಟ ಇನ್ನಷ್ಟೇ ಆರಂಭವಾಗಲಿದೆ ಎಂದು ಹೇಳಿದ್ದಾರೆ. ಶನಿವಾರವಷ್ಟೇ ಅವಿಶ್ವಾಸ ಮತದಾನದಲ್ಲಿ ಸೋಲುಂಡ ಖಾನ್‌ ಪಾಕ್‌ ಇತಿಹಾಸದಲ್ಲಿ ಅವಿಶ್ವಾಸದಲ್ಲಿ ಪದಚ್ಯುತರಾದ ದೇಶದ ಮೊದಲ ಪ್ರಧಾನಿ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ.