Asianet Suvarna News Asianet Suvarna News

ಬ್ರಿಟಿಷ್‌ ಆಳ್ವಿಕೆಯ 40 ವರ್ಷದಲ್ಲಿ 16.5 ಕೋಟಿಗೂ ಹೆಚ್ಚು ಭಾರತೀಯರ ಸಾವು, 3600 ಲಕ್ಷ ಕೋಟಿ ರು. ಲೂಟಿ!

89 ವರ್ಷಗಳ ಕಾಲ ಭಾರತದ ಮೇಲೆ ನೇರ ಆಳ್ವಿಕೆ ನಡೆಸಿದ ಬ್ರಿಟಿಷರ ಅವಧಿಯ ಪೈಕಿ ಕೇವಲ 40 ವರ್ಷಗಳ ಅವಧಿಯಲ್ಲೇ 16.5 ಕೋಟಿ ಮಂದಿ ಭಾರತೀಯರು ಹೆಚ್ಚುವರಿಯಾಗಿ ಮೃತಪಟ್ಟಿದ್ದಾರೆ ಎಂದು ಅಧ್ಯಯನ ವರದಿಯೊಂದು ಆಘಾತಕಾರಿ ಮಾಹಿತಿ ನೀಡಿದೆ.

In the 40 years of British rule, more than 16.5 crore Indians died, 3600 lakh crores Looted A study report was released by the British about how India suffered under British slavery akb
Author
First Published Oct 3, 2023, 7:01 AM IST

ವರದಿಯಲ್ಲಿ ಏನಿದೆ?

  • ಬ್ರಿಟಿಷ್‌ ಆಳ್ವಿಕೆಯ 40 ವರ್ಷದಲ್ಲಿ 16.5 ಕೋಟಿಗೂ ಹೆಚ್ಚು ಭಾರತೀಯರ ಸಾವು, 3600 ಲಕ್ಷ ಕೋಟಿ ರು. ಲೂಟಿ!
  • ಇದು 2 ವಿಶ್ವ ಮಹಾಯುದ್ಧ, ಹಿಟ್ಲರ್‌ ನಡೆಸಿದ ಮಾರಣಹೋಮದಲ್ಲಿ ಸಂಭವಿಸಿದ ಸಾವಿಗಿಂತ ಅಧಿಕ
  • ಬ್ರಿಟಿಷರ ಆಡಳಿತಾವಧಿಯಲ್ಲಿ ಭಾರತದಲ್ಲಿ ಬಡತನ ಹೆಚ್ಚಳ, ದುಡಿಯುವ ಅವಕಾಶಗಳು ಇಳಿಕೆ
  • ಆಹಾರದ ಕೊರತೆ, ಅಪೌಷ್ಟಿಕತೆ, ಆರೋಗ್ಯ ಸೇವೆಗಳ ಕೊರತೆಯಿಂದ ಜೀವಿತಾವಧಿ ಭಾರಿ ಇಳಿಕೆ
  • ಇದಕ್ಕೆ ಕಾರಣ ಬ್ರಿಟಿಷರು ಭಾರತದಲ್ಲಿ ರೂಪಿಸಿದ ಕಾನೂನುಗಳು, ಜಾರಿಗೆ ತಂದ ನಿಯಮಗಳು
  • ಬೇರೆ ಬೇರೆ ಕಡೆ ಬ್ರಿಟಿಷರು ನಡೆಸಿದ ಈ ದೌರ್ಜನ್ಯದಿಂದಲೇ ಹಿಟ್ಲರ್‌, ಮುಸಲೋನಿಗಳ ಉದಯ
  • ಬ್ರಿಟನ್‌ನ ಅರ್ಥಶಾಸ್ತ್ರಜ್ಞ ಜೇಸನ್‌ ಹಿಕೆಲ್‌ ತಂಡ ಪ್ರಕಟಿಸಿದ ‘ಕ್ಯಾಪಿಟಲಿಸಂ ಅಂಡ್‌ ಎಕ್ಸ್‌ಟ್ರೀಮ್ ಪಾವರ್ಟಿ: ಅ ಗ್ಲೋಬಲ್‌ ಅನಾಲಿಸಿಸ್‌’ ಸಂಶೋಧನಾ ವರದಿಯಲ್ಲಿ ಉಲ್ಲೇಖ

ಲಂಡನ್‌: 89 ವರ್ಷಗಳ ಕಾಲ ಭಾರತದ ಮೇಲೆ ನೇರ ಆಳ್ವಿಕೆ ನಡೆಸಿದ ಬ್ರಿಟಿಷರ ಅವಧಿಯ ಪೈಕಿ ಕೇವಲ 40 ವರ್ಷಗಳ ಅವಧಿಯಲ್ಲೇ 16.5 ಕೋಟಿ ಮಂದಿ ಭಾರತೀಯರು ಹೆಚ್ಚುವರಿಯಾಗಿ ಮೃತಪಟ್ಟಿದ್ದಾರೆ ಎಂದು ಅಧ್ಯಯನ ವರದಿಯೊಂದು ಆಘಾತಕಾರಿ ಮಾಹಿತಿ ನೀಡಿದೆ. ಜೊತೆಗೆ ಈ ಅವಧಿಯಲ್ಲಿ ಲಕ್ಷಾಂತರ ಕೋಟಿ ರು. ಮೌಲ್ಯದ ಭಾರತೀಯ ಸಂಪತ್ತನ್ನು ಬ್ರಿಟಿಷರ ಲೂಟಿ ಹೊಡೆದಿದ್ದಾರೆ ಎಂದು ವರದಿ ಹೇಳಿದೆ. ವಿಶೇಷವೆಂದರೆ ಈ ವರದಿಯನ್ನು ಬ್ರಿಟಿಷ್‌ ಸಂಶೋಧಕರೇ ಪ್ರಕಟಿಸಿದ್ದಾರೆ.

ಬ್ರಿಟನ್‌ನ ಅರ್ಥಶಾಸ್ತ್ರಜ್ಞ (British economist) ಮತ್ತು ಮಾನವಶಾಸ್ತ್ರಜ್ಞ ಜೇಸನ್‌ ಹಿಕೆಲ್‌ (Jason Hickel) ಮತ್ತು ಅವರ ಸಹ ಸಂಶೋಧಕ ಡೈಲಾನ್‌ ಸಲ್ಲಿವನ್‌ (Dylan Sullivan), ‘ಕ್ಯಾಪಿಟಲಿಸಂ ಅಂಡ್‌ ಎಕ್ಸ್‌ಟ್ರೀಮ್ ಪಾವರ್ಟಿ: ಅ ಗ್ಲೋಬಲ್‌ ಅನಾಲಿಸಿಸ್‌’ ಎಂಬ ಸಂಶೋಧನಾ ವರದಿಯನ್ನು ಪ್ರಕಟಿಸಿದ್ದು, ಇದರಲ್ಲಿ ಬ್ರಿಟಿಷರ ವಸಾಹಾತುಶಾಹಿ ಆಡಳಿತ ಕ್ರಮದಿಂದಾಗಿ 1880ರಿಂದ 1920ರವರೆಗೆ ಭಾರತದಲ್ಲಿ ಸುಮಾರು 16.5 ಕೋಟಿ ಮಂದಿ ಹೆಚ್ಚುವರಿಯಾಗಿ ಮೃತಪಟ್ಟಿದ್ದಾರೆ. ಅಲ್ಲದೇ 200 ವರ್ಷಗಳಲ್ಲಿ ಬ್ರಿಟಿಷರು ಭಾರತದಿಂದ ಸುಮಾರು 3600 ಲಕ್ಷ ಕೋಟಿ ರು. ಮೌಲ್ಯದ ಸಂಪತ್ತನ್ನು ಲೂಟಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಜಾತ್ರೆಯಲ್ಲಿ ಜಾಯಿಂಟ್ ವ್ಹೀಲ್‌ಗೆ ಸಿಲುಕಿಕೊಂಡ ಬಾಲಕಿಯ ಕೂದಲು: ಆಘಾತಕಾರಿ ವೀಡಿಯೋ ವೈರಲ್

ಈ ಅವಧಿಯಲ್ಲಿ ಭಾರತದಲ್ಲಿ ಮೃತಪಟ್ಟ ಜನರ ಸಂಖ್ಯೆ, ಎರಡು ಮಹಾಯುದ್ಧಗಳು ( world wars) ಹಾಗೂ ಹಿಟ್ಲರ್‌ ನಡೆಸಿದ ಮಾರಣಹೋಮಕ್ಕಿಂತಲೂ ಅಧಿಕವಾಗಿದೆ. ಬ್ರಿಟಿಷರ ವಸಾಹಾತುಶಾಹಿ ಅವಧಿಯಲ್ಲಿ ಭಾರತೀಯರ ಜೀವಿತಾವಧಿ ಈ ಮೊದಲು ಇದ್ದುದ್ದಕ್ಕಿಂತ ಕಡಿಮೆಗೆ ಕುಸಿದಿತ್ತು. ಬ್ರಿಟಿಷ್‌ ಆಳ್ವಿಕೆಗೂ ಮೊದಲು ಸಾವಿರ ಭಾರತೀಯರಲ್ಲಿ 37.2 ಮಂದಿ ಸಾವಿಗೀಡಾಗುತ್ತಿದ್ದರೆ, ಬ್ರಿಟಿಷರ ಆಡಳಿತದಲ್ಲಿ ಇದು 44.2ಕ್ಕೆ ಏರಿಕೆಯಾಗಿತ್ತು. ಇದಕ್ಕೆ ಪ್ರಮುಖ ಕಾರಣ ಬ್ರಿಟಿಷ್‌ ಅಧಿಕಾರಿಗಳು ಜಾರಿಗೆ ತಂದಿದ್ದ ಕಾನೂನುಗಳಾಗಿದ್ದವು ಎಂದು ಅವರು ಹೇಳಿದ್ದಾರೆ.

ರೀಲ್ಸ್ ಮಾಡುವ ವೇಳೆ ಚಲಿಸುವ ರೈಲಿಗೆ ಸಿಲುಕಿ 14 ವರ್ಷದ ಬಾಲಕ ಸಾವು: ಭಯಾನಕ ವೀಡಿಯೋ ವೈರಲ್

ಬ್ರಿಟಿಷರು ಜಾರಿ ಮಾಡಿದ ಕಾನೂನುಗಳಿಂದಾಗಿ ಭಾರತೀಯರ ದೈನಂದಿನ ಕೂಲಿ ಪ್ರಮಾಣ ಕನಿಷ್ಠಕ್ಕೆ ಕುಸಿಯಿತು. ಇದರಿಂದಾಗಿ ದೈನಂದಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲಾಗದೇ ಭಾರತೀಯರು ಬಡತನಕ್ಕೆ ದೂಡಲ್ಪಟ್ಟರು. ಇದರಿಂದಾಗಿ ಭಾರತೀಯ ಕುಟುಂಬಗಳಲ್ಲಿ ಹಸಿವಿನ ಪ್ರಮಾಣ ಹೆಚ್ಚಾಗಿ, ಸರಿಯಾದ ಪೌಷ್ಟಿಕಾಂಶಯುಕ್ತ ಆಹಾರ ಸಿಗದೇ ಹೆಚ್ಚಿನ ಪ್ರಮಾಣದಲ್ಲಿ ಭಾರತೀಯರು ಸಾವಿಗೀಡಾದರು.  ಉದಾಹರಣೆಗೆ ಬಂಗಾಳ ಪ್ರಾಂತ್ಯದಲ್ಲಿ ಬ್ರಿಟಿಷರು, ಅಲ್ಲಿ ಬೆಳೆಯುತ್ತಿದ್ದ ಆಹಾರವನ್ನು ರಫ್ತು ಮಾಡಲು ಹೆಚ್ಚಿನ ಆಸಕ್ತಿ ತೋರಿದರು ಹಾಗೂ ಆಮದಿನ ಮೇಲೆ ನಿರ್ಬಂಧ ಹೇರಿದರು. ಇದರಿಂದಾಗಿ ಬಂಗಾಳ ಪ್ರಾಂತ್ಯವೊಂದರಲ್ಲೇ 30 ಲಕ್ಷ ಮಂದಿ ಹಸಿವಿನಿಂದ ಸಾವಿಗೀಡಾದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರೀತಿ ತಿರಸ್ಕರಿಸಿದ ಸಹೋದ್ಯೋಗಿಯ ಕೊಂದು 2 ವರ್ಷ ಕತೆ ಕಟ್ಟಿದ ವಿವಾಹಿತ ಪೊಲೀಸ್‌

ಭಾರತದಲ್ಲಿ ಸಂಭವಿಸಿದ ಇಷ್ಟು ಪ್ರಮಾಣದ ಸಾವನ್ನು ಅಂದಿನ ಜೀವಿತಾವಧಿಗೆ ಹೋಲಿಕೆ ಮಾಡಿ ಸಾಮಾನ್ಯ ಎಂದು ಪರಿಗಣಿಸಲು ಸಾಧ್ಯವಾಗುವುದಿಲ್ಲ. ಇದೆಲ್ಲವೂ ಬ್ರಿಟಿಷ್‌ ಆಡಳಿತ ರಚನೆ ಮಾಡಿದ ಕಾನೂನುಗಳ ಪರಿಣಾಮವೇ ಆಗಿದೆ ಎಂದು ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ. ಅಲ್ಲದೇ ಬ್ರಿಟಿಷರು ಭಾರತ ಸೇರಿದಂತೆ ಇತರ ದೇಶಗಳಲ್ಲಿ ಕೈಗೊಂಡ ಈ ವಸಹಾತುಶಾಹಿ ಆಡಳಿತದಿಂದಲೇ ಅಡಾಲ್ಫ್‌ ಹಿಟ್ಲರ್‌ ಮತ್ತು ಬೆನಿಟೋ ಮುಸೋಲಿನಿಯವರಂತಹ ಸರ್ವಾಧಿಕಾರಿಗಳ ಹುಟ್ಟಿಗೆ ಕಾರಣವಾಯಿತು ಎಂದು ಸಹ ವರದಿ ಹೇಳಿದೆ.

Follow Us:
Download App:
  • android
  • ios