what is STD test: 2024ರಲ್ಲಿ ನಡೆದ ಗೆಳತಿಯ ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ವಿದ್ಯಾರ್ಥಿ ದೋಷಿ ಎಂದು ಸಾಬೀತಾಗಿದೆ. ಎಸ್‌ಟಿಡಿ ಪರೀಕ್ಷೆ ಮಾಡಿಕೊಳ್ಳುವಂತೆ ಪದೇ ಪದೇ ಪೀಡಿಸುತ್ತಿದ್ದ ಗೆಳತಿಯ ಕಾಟ ತಾಳಲಾಗದೇ ಆಕೆಯನ್ನು ಕೊಲೆ ಮಾಡಿದ್ದಾಗಿ ಆರೋಪಿ ತನಿಖೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.

ದೈಹಿಕ ಸಂಬಂಧದ ನಂತರ ಎಸ್‌ಟಿಡಿ ಟೆಸ್ಟ್ ಮಾಡುವಂತೆ ಪೀಡಿಸಿದ ಗೆಳತಿ

2024ರ ಮಾರ್ಚ್‌ನಲ್ಲಿ ನಡೆದ ಗೆಳತಿಯ ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ವಿದ್ಯಾರ್ಥಿ ದೋಷಿ ಎಂದು ಸಾಬೀತಾಗಿದೆ. ಎಸ್‌ಟಿಡಿ ಪರೀಕ್ಷೆ ಮಾಡಿಕೊಳ್ಳುವಂತೆ ಪದೇ ಪದೇ ಪೀಡಿಸುತ್ತಿದ್ದ ಗೆಳತಿಯ ಕಾಟ ತಾಳಲಾಗದೇ ಆಕೆಯನ್ನು ಕೊಲೆ ಮಾಡಿದ್ದಾಗಿ ಆರೋಪಿ ಪೊಲೀಸ್ ತನಿಖೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.

ಏನಿದು ಪ್ರಕರಣ?

31 ವರ್ಷದ ಝೆ ವಾಂಗ್ ಎಂಬ 31 ವರ್ಷದ ಮಹಿಳೆಯನ್ನು 2024ರ ಮಾರ್ಚ್‌ನಲ್ಲಿ ಆಕೆ ವಾಸವಿದ್ದ ಲಂಡನ್‌ನ ಫ್ಲಾಟ್‌ನಲ್ಲೇ ಕೊಲೆ ಮಾಡಲಾಗಿತ್ತು. ಆಕೆಯೂ ವಿದ್ಯಾರ್ಥಿನಿಯೇ ಆಗಿದ್ದು, ಗೋಲ್ಡ್‌ಸ್ಮಿತ್ ಯುನಿವರ್ಸಿಟಿಯ ವಿದ್ಯಾರ್ಥಿಯಾಗಿದ್ದಳು. ಈಕೆಯ ಗೆಳೆಯ 26 ವರ್ಷದ ಜೋಶುವಾ ಮಿಚೆಲ್ ಈ ಕೊಲೆ ಮಾಡಿದ. ಕೊಲೆಯ ನಂತರ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಮುಖದ ಮೇಲೆ ಇರಿದ ಗಾಯದ ಗುರುತುಗಳಿದ್ದವು. ಜೊತೆಗೆ ಆಕೆಯ ಕತ್ತು ಹಿಸುಕಿ ಉಸಿರು ಗಟ್ಟಿಸಿ ಕೊಲೆ ಮಾಡಿದ್ದು ಸಾಬೀತಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಈಗ ಆರೋಪಿ ಅಮೆರಿಕಾ ಮೂಲದ ಜೋಶುವಾ ಮಿಚೆಲ್ ತಪಿತಸ್ಥ ಎಂದು ತೀರ್ಪು ನೀಡಿದೆ.

ಕೊಲೆಗೂ ಮೊದಲು ಲೈಂಗಿಕ ಕ್ರಿಯೆಯ ನಂತರ ಹರಡುವ ರೋಗಗಳ ಬಗ್ಗೆ (sexually transmitted diseases)ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ತನಿಖೆಯ ವೇಳೆ ಆರೋಪಿ ಮಿಚೆಲ್ಸ್, ತಾನು ಉದ್ದೇಶಪೂರ್ವಕವಾಗಿ ಕೊಲೆ ಮಾಡಿಲ್ಲ, ತನ್ನನ್ನು ತಾನು ರಕ್ಷಿಸಿಕೊಳ್ಳುವ ವೇಳೆ ಅಚಾನಕ್ ಆಗಿ ಆಕೆ ಸಾವನ್ನಪ್ಪಿದ್ದಾಳೆ ಎಂದಿದ್ದ. ನಾನು ಅವಳನ್ನು ನನ್ನಿಂದ ದೂರ ಮಾಡಲು ಬಯಸಿದ್ದೆ ಮತ್ತು ಅವಳಿಗೆ ಹಾನಿ ಮಾಡದಿರಲು ಅವಳನ್ನು ತಡೆಯಲು ಅವಳ ಕುತ್ತಿಗೆಯ ಮೇಲೆ ಒತ್ತಡ ಹೇರಿದ್ದೆ ಎಂದು ಹೇಳಿದ್ದಾನೆ ಎಂದು ಬಿಬಿಸಿ ವರದಿ ಮಾಡಿದೆ.

2023ರಲ್ಲಿ ಇಬ್ಬರೂ ಗೋಲ್ಡ್ ಸ್ಮಿತ್ಸ್ ಕ್ಯಾಂಪಸ್‌ನಲ್ಲಿ ಭೇಟಿಯಾದ ನಂತರ ಇಬ್ಬರಿಗೂ ಪರಿಚಯವಾಗಿತ್ತು. ಇಬ್ಬರೂ ಆಗಾಗ ಸಾಂದರ್ಭಿಕ ದೈಹಿಕ ಸಂಬಂಧವನ್ನು ಆರಂಭಿಸಿದರು. ಆದರೆ ಝೆ ವಾಂಗ್‌ಗೆ ಸೂಕ್ಷ್ಮಜೀವಿಗಳ ಭಯವಿತ್ತು.(phobia of germs)ಇದೇ ಕಾರಣದಿಂದ ಆ ಸಂಬಂಧವನ್ನು ಮುಂದುವರಿಸಲು ನಾನು ಹಿಂಜರಿಯುತ್ತಿದ್ದೆ ಎಂದು ಮಿಚಲ್ಸ್ ಹೇಳಿದ್ದಾನೆ. ಇಬ್ಬರ ನಡುವೆ ದೈಹಿಕ ಸಂಬಂಧದ ನಂತರ ವಾಂಗ್ ಆಕೆಯ ಚರ್ಮದ ಮೇಲೆ ಕೆಂಪು ಚುಕ್ಕೆ ಆಗಿರುವುದನ್ನು ಗಮನಿಸಿ ಮಿಚಲ್ಸ್‌ಗೆ ಎಸ್‌ಟಿಡಿ ಪರೀಕ್ಷೆಗೆ ಒಳಗಾಗುವಂತೆ ಹೇಳಿದ್ದಾಳೆ. ಮಿಚಲ್ಸ್‌ಗೆ ಎಸ್‌ಟಿಡಿ ಪರೀಕ್ಷೆಗೆ ಒಳಗಾಗುವಂತೆ ಪದೇ ಪದೇ ಆಕೆ ಪೀಡಿಸುತ್ತಿದ್ದಳು. ಇದು ಇಬ್ಬರ ನಡುವೆ ಗಲಾಟೆಗೆ ಕಾರಣವಾಗಿತ್ತು. ಒಂದು ಹಂತದಲ್ಲಿ ಆಕೆ ಆತನನ್ನು ವೈದ್ಯರ ಬಳಿ ಕರೆದೊಯ್ಯುವುದಕ್ಕಾಗಿ ಕಾಲೇಜು ಕ್ಯಾಂಪಸ್‌ಗೂ ಬರುವುದಾಗಿ ಬೆದರಿಕೆ ಹಾಕಿದಳು. ಇದು ಮಿಚೆಲ್ಸ್‌ನನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸಿತ್ತು.

ಇದನ್ನೂ ಓದಿ: ಗೆಳೆಯನ ಗರ್ಲ್‌ಫ್ರೆಂಡ್‌ಗೆ ತನ್ನೊಂದಿಗೂ ಸಂಬಂಧ ಹೊಂದುವಂತೆ ಒತ್ತಡ: ಪ್ರಶ್ನಿಸಿದ್ದಕ್ಕೆ ಸ್ನೇಹಿತನನ್ನೇ ಕೊಂದು ಪೀಸ್ ಪೀಸ್ ಮಾಡಿದ

ಈ ನಡುವೆ ಇಬ್ಬರ ನಡುವಿನ ಜಗಳದ ನಂತರ ಮಾರ್ಚ್ 20 ರಂದು, ಮಿಚಲ್ಸ್ , ಝೆ ವಾಂಗ್ ವಾಸವಿದ್ದ ಫ್ಲಾಟ್‌ಗೆ ಸಂಧಾನ ಬಯಸಿ ಚಾರ್ಕುಟೇರಿಯನ್ನು ತೆಗೆದುಕೊಂಡು ಹೋಗಿದ್ದರು. ಈ ವೇಳೆ ಆಕೆ ತನಗೆ ಶೀತ ಆಗಿದೆ ಎಂದು ಹೇಳಿಕೊಂಡಳು. ಇದಾದ ನಂತರ ಅವನು ಅಲ್ಲಿ ಬಾತ್‌ರೂಮ್‌ನಿಂದ ಹೊರಗೆ ಬರುತ್ತಿದ್ದಂತೆ ಆತನ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಳು. ಈ ವೇಳೆ ಮಿಚೆಲ್ಸ್ ಕೋಪದಿಂದ ಆಕೆಯ ಮೇಲೆ ತಿರುಗಿ ಹಲ್ಲೆ ಮಾಡಿದ್ದು ಝೇ ವಾಂಗ್‌ನನ್ನು ಕೊಲೆ ಮಾಡಿದ್ದಾರೆ ಎಂದು ಪ್ರಾಸಿಕ್ಯೂಟರ್ ಹೆನ್ರಿಯೆಟ್ಟಾ ಪ್ಯಾಗೆಟ್ ಕೆಸಿ ಹೇಳಿದ್ದಾರೆ. ಘಟನೆಯ ನಂತರ ಮಿಚೆಲ್ಸ್‌ನ ಫೋನ್‌ನಿಂದ ಡಿಲೀಟ್ ಮಾಡಿದ್ದ ಸಂದೇಶಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ, ಈ ಜೋಡಿ ತಿಂಗಳುಗಳಿಂದ ಜಗಳವಾಡುತ್ತಿದ್ದರು, ಇದಕ್ಕೆ ಝೇ ವಾಂಗ್ ಮಿಚೆಲ್‌ನನ್ನು ಎಸ್‌ಟಿಡಿ ಪರೀಕ್ಷೆಗೆ ಒಳಗಾಗುವಂತೆ ಹೇಳುತ್ತಿದ್ದಿದ್ದೇ ಕಾರಣ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಭಾರತೀಯ ಸೇನೆಯ ಹೀರೋ ಮೇಜರ್ ಮೋಹಿತ್ ಶರ್ಮಾ ಮುನ್ನೆಲೆಗೆ ತಂದ ಧುರಂಧರ್ ಸಿನಿಮಾ: ಯಾರಿವರು?

ಕೊಲೆಯ ನಂತರ ಆಕೆಯ ಫೋನ್ ಅನ್ನು ಕಸದ ಡಬ್ಬಿಯೊಂದರಿಂದ ವಶಕ್ಕೆ ಪಡೆಯಲಾಗಿತ್ತು. ಹಾಗೆಯೇ ರಕಸ್ತಿಕ್ತವಾದ ಆತನ ಬಟ್ಟೆಗಳನ್ನು ಮಿಚೆಲ್‌ನ ಮನೆಯಿಂದ ವಶಕ್ಕೆ ಪಡೆಯಲಾಗಿತ್ತು. ಅದರಲ್ಲಿದ್ದ ಡಿಎನ್‌ಎ ಆಕೆಗೆ ಮ್ಯಾಚ್‌ ಆಗಿತ್ತು. ಕೊಲೆಯ ನಂತರ ಮಿಚೆಲ್ ಆತನ ತಂದೆಗೆ ಕರೆ ಮಾಡಿ ಕಾನೂನು ಸಲಹೆ ಪಡೆದು ನಂತರವೇ ಪೊಲೀಸರಿಗೆ ವಿಚಾರ ತಿಳಿಸಿದ್ದ. ಅಮೆರಿಕಾದ ಇಲಿನಾಯ್ಸ್‌ನ ಚಿಕಾಗೋದಲ್ಲಿ ಹುಟ್ಟಿ ಬೆಳೆದ ಮಿಚಲ್ಸ್, ಗೋಲ್ಡ್‌ಸ್ಮಿತ್ಸ್‌ ವಿಶ್ವವಿದ್ಯಾಲಯದಲ್ಲಿ ಚಲನಚಿತ್ರ ನಿರ್ಮಾಣದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಲಂಡನ್‌ಗೆ ಬಂದಿದ್ದ ಆದರೆ ಈಗ ಗೆಳತಿಯ ಕೊಲೆಯಲ್ಲಿ ಜೈಲುಪಾಲಾಗಿರುವ ಮಿಚೆಲ್‌ಗೆ ನಂತರದ ದಿನಗಳಲ್ಲಿ ನ್ಯಾಯಾಲಯ ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ.

ಏನಿದು ಎಸ್‌ಟಿಡಿ ಟೆಸ್ಟ್‌?

ಗರ್ಲ್‌ಫ್ರೆಂಡ್‌ನ ಕೊಲೆಗೆ ಕಾರಣವಾದ ಎಸ್‌ಟಿಡಿ ಟೆಸ್ಟ್ ಏನು ಎಂಬ ಬಗ್ಗೆ ಅನೇಕರಿಗೆ ಕುತೂಹಲವಿರಬಹುದು. ಎಸ್‌ಟಿಡಿ ಎಂದರೆ sexually transmitted diseases ಎಂದರೆ ಲೈಂಗಿಕ ಕ್ರಿಯೆಯ ನಂತರ ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿದೆ. ಲೈಂಗಿಕವಾಗಿ ಹರಡುವ ಸೋಂಕುಗಳಾದ, ಕ್ಲಮೈಡಿಯ, ಗೊನೊರಿಯಾ, ಎಚ್ಐವಿ, ಸಿಫಿಲಿಸ್, ಹರ್ಪಿಸ್ ಮತ್ತು ಎಚ್ಪಿವಿ ಮುಂತಾದ ಸೋಂಕುಗಳನ್ನು ಎಸ್‌ಟಿಡಿ ಪರೀಕ್ಷೆಯಿಂದ ಪತ್ತೆ ಮಾಡಬಹುದಾಗಿದೆ. ರಕ್ತ, ಮೂತ್ರ ಅಥವಾ ಜನನಾಂಗ/ಬಾಯಿಯಿಂದ ಸ್ವ್ಯಾಬ್‌ಗಳಂತಹ ಮಾದರಿಗಳನ್ನು ಪಡೆದು ಈ ಪರೀಕ್ಷೆ ಮಾಡಲಾಗುತ್ತದೆ. ಇದು ರೋಗಲಕ್ಷಣಗಳಿಲ್ಲದೆಯೂ ಸಹ ಸೋಂಕುಗಳನ್ನು ಮೊದಲೇ ಪತ್ತೆಹಚ್ಚಲು ಸಹಾಯ ಮಾಡುತ್ತದೆ ಹಾಗೂ ಇದು ಗಂಭೀರ ತೊಡಕುಗಳನ್ನು ತಡೆಯುತ್ತದೆ.