Man kills wife and girlfriend: ಹಣಕಾಸಿಗೆ ಸಂಬಂಧಿಸಿದಂತೆ ಜಗಳದ ನಂತರ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಂದು ಎಸೆದ ಜಾಗದಲ್ಲೇ ತನ್ನ ಗೆಳತಿಯನ್ನು ಕೂಡ ಸಾಯಿಸಿ ಎಸೆದಿರುವಂತಹ ಘಟನೆ ಗುಜರಾತ್‌ನಲ್ಲಿ ನಡೆದಿದೆ.
ಹೆಂಡ್ತಿಯನ್ನು ಸಾಯಿಸಿದ ಸ್ಥಳದಲ್ಲೇ ಗೆಳತಿಗೂ ಮುಹೂರ್ತ ಇಟ್ಟ
ಹಣಕಾಸಿಗೆ ಸಂಬಂಧಿಸಿದಂತೆ ಜಗಳದ ನಂತರ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಂದು ಎಸೆದ ಜಾಗದಲ್ಲೇ ತನ್ನ ಗೆಳತಿಯನ್ನು ಕೂಡ ಸಾಯಿಸಿ ಎಸೆದಿರುವಂತಹ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಯುವತಿ ಕೊಲೆ ಪ್ರಕರಣ ಬೇಧಿಸಿದ ಪೊಲೀಸರಿಗೆ ಆರೋಪಿ ತನ್ನ ಪತ್ನಿಯನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಕೊಲೆ ಮಾಡಿದ ಆರೋಪಿಯನ್ನು ಫೈಸಲ್ ಪಠಾಣ್ ಎಂದು ಗುರುತಿಸಲಾಗಿದೆ.
ಮೂರು ತಿಂಗಳ ಹಿಂದಷ್ಟೇ ಹೆಂಡ್ತಿ ಕೊಂದಿದ್ದ ಫೈಸಲ್
ಗೆಳತಿ ರಿಯಾಳನ್ನು ಕೊಲೆ ಮಾಡಿದ ಆರೋಪದ ಮೇಲೆ ಗುಜರಾತ್ ಪೊಲೀಸರು ಸೋಮವಾರ ಫೈಸಲ್ ಪಠಾಣ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದರು. ಈತನ ವಿಚಾರಣೆ ನಡೆಸಿದಾಗ ಈತ ಮೂರು ತಿಂಗಳ ಹಿಂದೆ ಪತ್ನಿ ಸುಹಾನಾಳನ್ನು ಹೀಗೆ ಕೊಲೆ ಮಾಡಿರುವುದನ್ನು ಬಾಯ್ಬಿಟ್ಟಿದ್ದಾನೆ. ಅಲ್ಲದೇ ಹೆಂಡ್ತಿ ಸುಹಾನಾಳ ಶವ ಎಸೆದ ಜಾಗದಲ್ಲೇ ಗೆಳತಿ ರಿಯಾ ಶವವನ್ನೂ ಎಸೆದಿದ್ದಾಗಿ ಹೇಳಿದ್ದಾನೆ. ಫೈಸಲ್ ಹಣಕಾಸಿನ ವಿಚಾರಕ್ಕೆ ಈ ಕೊಲೆ ನಡೆದಿದೆ.
ಗುಜರಾತ್‌ನ ನವಸಾರಿಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ನಿರ್ಜನ ಪ್ರದೇಶದಲ್ಲಿರುವ ಅಕ್ಕಿ ಗಿರಣಿಯಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ವ್ಯಕ್ತಿಯೊಬ್ಬರು ರಕ್ತಸಿಕ್ತವಾದ ಬೆತ್ತಲೆ ದೇಹವೊಂದು ಅಲ್ಲಿ ಪತ್ತೆಯಾದ ನಂತರ ಪೊಲೀಸರಿಗೆ ವಿಚಾರ ತಿಳಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ತನಿಖೆಗಿಳಿದ ಪೊಲೀಸರು ಫೈಸಲ್ ಪಠಾಣ್‌ನನ್ನು ಬಂಧಿಸಿದ್ದಾರೆ.
ಯುವತಿ ಶವ ಸಿಕ್ಕ ನಂತರ ತನಿಖೆಗಿಳಿದ ಪೊಲೀಸರಿಗೆ ಸತ್ಯ ಬಯಲು
ಆ ಪ್ರದೇಶದ ಹಾಗೂ ಸುತ್ತಮುತ್ತಲಿನ ಸುಮಾರು 100 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಪೊಲೀಸರು ಪಠಾಣ್‌ನನ್ನು ಗುರುತಿಸಿ ಶವ ಸಿಕ್ಕ ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಪಠಾಣ್ ತನ್ನ ಗೆಳತಿ ರಿಯಾಳನ್ನು ಕೊಂದು ಆಕೆಯ ಶವವನ್ನು ಅಕ್ಕಿ ಗಿರಣಿಯಲ್ಲಿ ಎಸೆದಿದ್ದಾಗಿ ಒಪ್ಪಿಕೊಂಡಿದ್ದಾನೆ.
ಒಂದು ವರ್ಷದ ಹಿಂದೆ ರಿಯಾಳ ಪರಿಚಯವಾಗಿ ಸ್ನೇಹ ಬೆಳೆಯಿತು. ಇಬ್ಬರೂ ಆಗಾಗ ಈ ನಿರ್ಜನ ಪ್ರದೇಶದಲ್ಲಿರುವ ಗಿರಣಿಯಲ್ಲಿ ಭೇಟಿಯಾಗುತ್ತಿದ್ದೆವು. ನಮ್ಮ ನಡುವೆ ಹಣದ ವಿಷಯಕ್ಕೆ ಜಗಳವಾದ ನಂತರ ರಿಯಾಳ ಕೊಲೆ ಮಾಡಿ ಶವವನ್ನು ಅಲ್ಲಿ ಎಸೆದಿದ್ದಾಗಿ ಆರೋಪಿ ಫೈಸಲ್ ಹೇಳಿದ್ದಾನೆ. ವಿಚಾರಣೆ ವೇಳೆ ಆರೋಪಿ ಮೂರು ತಿಂಗಳ ಹಿಂದೆ ಪತ್ನಿಯನ್ನು ಕೊಂದು ಇದೇ ಜಾಗದಲ್ಲಿ ಎಸೆದಿದ್ದಾಗಿ ಹೇಳಿದ್ದಾನೆ.
ಸುಹಾನಾಳ ಕುಟುಂಬದವರು ತಮ್ಮಸಂಬಂಧವನ್ನು ಒಪ್ಪದ ಕಾರಣ ತಾವಿಬ್ಬರು ದೂರಾಗಿದ್ದೆವು. ಪ್ರತ್ಯೇಕಗೊಂಡ ನಂತರವೂ ಸುಹಾನಾಳನ್ನು ಅದೇ ರೈಸ್ ಮಿಲ್ ಬಳಿ ಕರೆದಾಗ ಆಕೆ ಬಂದಿದ್ದಳು. ನಂತರ ಆಕೆಯನ್ನು ಕೊಂದು ರೈಸ್ ಮಿಲ್‌ನಲ್ಲಿ ದೇಹವನ್ನು ಬಿಟ್ಟು ಹೋಗಿದ್ದಾಗಿ ಹೇಳಿದ್ದಾನೆ. ಪಠಾಣ್ ತಪ್ಪೊಪಿಗೆಯ ನಂತರ ಪೊಲೀಸರು ಆತನನ್ನು ರೈಸ್ ಮಿಲ್ ಬಳಿ ಕರೆದುಕೊಂಡು ಬಂದು ಅಲ್ಲಿದ್ದ ಅಸ್ಥಿಪಂಜರವನ್ನು ವಶಕ್ಕೆ ಪಡೆದಿದ್ದಾರೆ. ಹಾಗೂ ಆತನ ವಿರುದ್ಧ ಗೆಳತಿ ಹಾಗೂ ಹೆಂಡತಿಯನ್ನು ಕೊಲೆ ಮಾಡಿದ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಬಿಹಾರ ಚುನಾವಣೆ: ಆರ್‌ಜೆಡಿ ಕಾರ್ಯಕರ್ತರ ಗೂಂಡಾಗಿರಿ: ಡಿಸಿಎಂ ಬೆಂಗಾವಲು ಪಡೆ ಮೇಲೆ ದಾಳಿ
ಇದನ್ನೂ ಓದಿ: ಟೆಸ್ಟ್ ರೈಡ್ ವೇಳೆ ಮೊನೊ ರೈಲು ಅಪಘಾತ : ರೈಲಿನಲ್ಲಿದ್ದ ಹಲವರಿಗೆ ಗಾಯ
