ಚಲಿಸುತ್ತಿರುವ ರೈಲಿನ ಬಾಗಿಲ ಬಳಿ ರೀಲ್ಸ್ ಮಾಡುತ್ತಿದ್ದ ಯುವತಿಯೊಬ್ಬಳು ಕೈ ಜಾರಿ ಕೆಳಗೆ ಬಿದ್ದಿದ್ದಾಳೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.   

Girl Train Stunt Viral Video: ಹಲವು ಬಾರಿ ಇಂತಹ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಕೆಲವು ಮನರಂಜನೆ ನೀಡಿದರೆ, ಮತ್ತೆ ಕೆಲವು ನಮಗೆ ಆಶ್ಚರ್ಯವನ್ನುಂಟು ಮಾಡಬಹುದು. ಒಟ್ಟಾರೆ ಜನರು ವೈರಲ್ ಆಗಲು ಯಾವುದೇ ಹಂತಕ್ಕೂ ಹೋಗಬಹುದು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ಶಾಕಿಂಗ್ ವಿಡಿಯೋ ಸುದ್ದಿಯಾಗುತ್ತಿದೆ. ಅದರಲ್ಲಿ ಚಲಿಸುವ ರೈಲಿನ ಬಾಗಿಲಲ್ಲಿ ನಿಂತಿದ್ದ ಯುವತಿ ರೀಲ್ಸ್ ಮಾಡುವಾಗ ಜಾರಿ ಬಿದ್ದಿದ್ದಾಳೆ. ಈ ಅಪಾಯಕಾರಿ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಈಗ ಈ ವಿಡಿಯೋ ಅಂತರ್ಜಾಲದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ.

ಈ ಅಪಾಯಕಾರಿ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈಗ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ, ರೈಲಿನ ಬಾಗಿಲಲ್ಲಿ ನಿಂತು ರೀಲ್ಸ್ ಮಾಡುವುದು ಜೀವಕ್ಕೆ ಎಷ್ಟು ಅಪಾಯಕಾರಿಯಾಗಿರುತ್ತೆ ಎಂಬುದನ್ನು ಸ್ಪಷ್ಟವಾಗಿ ಕಾಣಬಹುದು. ಏಕೆಂದರೆ ಹೀಗೆ ಮಾಡುವುದರಿಂದ ಲೆಕ್ಕಕ್ಕೆ ಸಿಗದಷ್ಟು ವೀವ್ಸ್ ಮತ್ತು ಲೈಕ್ಸ್ ಸಿಗಬಹುದು. ಆದರೆ ಜೀವಕ್ಕಂತೂ ಕುತ್ತಿದೆ. ಅಂತರ್ಜಾಲದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ, ಶ್ರೀಲಂಕಾಕ್ಕೆ ಹೋಗಿರುವ ವಿದೇಶಿ ಯುವತಿಯೊಬ್ಬಳು ಓಡುತ್ತಿರುವ ರೈಲಿನೊಂದಿಗೆ ಈ ರೀತಿಯ ಸಾಹಸ ಮಾಡಿರುವುದು ಎಂಥವರನ್ನು ದಂಗುಬಡಿಸುತ್ತದೆ.

ರೀಲ್ಸ್ ಮಾಡಲು ಹೋಗಿ ರೈಲಿನಿಂದ ಬಿದ್ದ ಯುವತಿ
ಯುವತಿ ಚಲಿಸುವ ರೈಲಿನ ಬಾಗಿಲಲ್ಲಿ ನಿಂತು ರೀಲ್ಸ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದ್ದಕ್ಕಿದ್ದಂತೆ ಅವಳ ಕೈ ಜಾರಿ ರೈಲಿನಿಂದ ಕೆಳಗೆ ಬೀಳುತ್ತಾಳೆ. ಅದೃಷ್ಟವಶಾತ್, ಅವಳು ಸಮಯಕ್ಕೆ ಸರಿಯಾಗಿ ರೈಲಿನ ಮೆಟಲ್ ಬಾರ್ ಅನ್ನು ಗಟ್ಟಿಯಾಗಿ ಹಿಡಿದು ಕೆಳಗೆ ಬೀಳುವುದನ್ನು ತಪ್ಪಿಸುತ್ತಾಳೆ. ವಿಡಿಯೋ ನೋಡುವಾಗ ಯುವತಿಗೆ ಮುಂದೇನಾಯ್ತು ಎಂಬ ಚಿಂತೆ ನಮ್ಮನ್ನು ಕಾಡುತ್ತದೆ. ಅಷ್ಟೇ ಅಲ್ಲ, ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯತೆ ಗಳಿಸಲು ಜನರು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ ಎಂಬುದರ ಕುರಿತು ಜನರು ಯೋಚಿಸುವಂತೆ ಮಾಡುತ್ತದೆ. ಈ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಜನರು ಇದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅನೇಕ ಬಳಕೆದಾರರು ಇದನ್ನು 'ಭಯಾನಕ' ಮತ್ತು 'ಅತ್ಯಂತ ಅಪಾಯಕಾರಿ' ಎಂದು ಬಣ್ಣಿಸಿದ್ದಾರೆ. ಒರ್ವ ಬಳಕೆದಾರರು, "ರೀಲ್ಸ್‌ಗಾಗಿ ಜೀವವನ್ನು ಪಣಕ್ಕಿಡುವುದು ಬುದ್ಧಿವಂತಿಕೆಯಲ್ಲ" ಎಂದು ಬರೆದಿದ್ದಾರೆ. ಮತ್ತೆ ಕೆಲವರು ಇಂತಹ ಘಟನೆಗಳ ಬಗ್ಗೆ ರೈಲ್ವೆ ಆಡಳಿತದಿಂದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಘಟನೆ ಕುರಿತು ರೈಲ್ವೆ ಅಧಿಕಾರಿಗಳಿಂದಲೂ ಬಂತು ಪ್ರತಿಕ್ರಿಯೆ
ಈ ಘಟನೆಗೆ ರೈಲ್ವೆ ಅಧಿಕಾರಿಗಳು ಕೂಡ ಪ್ರತಿಕ್ರಿಯಿಸಿದ್ದಾರೆ ಮತ್ತು ಪ್ರಯಾಣಿಕರಲ್ಲಿ ಮನವಿ ಮಾಡಿದ್ದಾರೆ. ಚಲಿಸುವ ರೈಲಿನ ಬಾಗಿಲಲ್ಲಿ ನಿಂತು ಇಂತಹ ಅಪಾಯಕಾರಿ ಸಾಹಸಗಳನ್ನು ಮಾಡಬೇಡಿ. ಇದು ಅವರ ಜೀವಕ್ಕೆ ಅಪಾಯವನ್ನುಂಟುಮಾಡುವುದಲ್ಲದೆ, ಇತರ ಪ್ರಯಾಣಿಕರಿಗೂ ತೊಂದರೆ ಉಂಟುಮಾಡಬಹುದು. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುವ ಬಯಕೆಯಿಂದ ಸುರಕ್ಷತೆಯನ್ನು ನಿರ್ಲಕ್ಷಿಸುವುದು ಎಷ್ಟು ಅಪಾಯಕಾರಿ ಎಂಬುದರ ಎಚ್ಚರಿಕೆ ಈ ಘಟನೆಯಾಗಿದೆ. ಜನರು ಇಂತಹ ಸಾಹಸಗಳನ್ನು ಮಾಡುವ ಮೊದಲು ಪರಿಣಾಮಗಳ ಬಗ್ಗೆ ಯೋಚಿಸಬೇಕು ಮತ್ತು ತಮ್ಮ ಜೀವವನ್ನು ಅಪಾಯಕ್ಕೆ ಸಿಲುಕಿಸಬಾರದು ಎಂದು ಆಗ್ರಹಿಸಿದ್ದಾರೆ.

View post on Instagram

ಈ ವಿಡಿಯೋ ನೋಡಿದ ನಂತರ, "ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಕ್ಷಣಿಕ ಖ್ಯಾತಿಯನ್ನು ಗಳಿಸುವ ಭರದಲ್ಲಿ ನಿರ್ಲಕ್ಷ್ಯ ವಹಿಸುವುದು ಮಾರಕವಾಗಬಹುದು" ಎಂಬ ಗಂಭೀರ ಪಾಠವನ್ನು ಕಲಿಸುತ್ತದೆ ಎಂದು ಜನರು ಹೇಳುತ್ತಾರೆ. ಜನರು ಇಂತಹ ಸಾಹಸಗಳನ್ನು ಮಾಡುವ ಮೊದಲು ಅವುಗಳ ಅಪಾಯಕಾರಿ ಪರಿಣಾಮಗಳ ಬಗ್ಗೆ ಯೋಚಿಸುವುದು ಮುಖ್ಯ ಮತ್ತು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಜನಪ್ರಿಯತೆಯನ್ನು ಗಳಿಸಲು ಪ್ರಯತ್ನಿಸಬಾರದು ಎಂದು ಬರೆದು ಪೋಸ್ಟ್ ಮಾಡಿರುವುದು ಕಾಮೆಂಟ್ ಬಾಕ್ಸ್‌ಗಳಲ್ಲಿ ತುಂಬಿ ಹೋಗಿರುವುದನ್ನು ಕಾಣಬಹುದು.