IPL ಪಂದ್ಯದಲ್ಲಿ ಆರ್‌ಸಿಬಿ ತಂಡಕ್ಕೆ ದೊಡ್ಡ ಪ್ರಮಾಣದ ಅಭಿಮಾನಿಗಳಿದ್ದಾರೆ. ಕಪ್‌ ಗೆಲ್ಲದೆ ಹದಿನೆಂಟು ವರ್ಷವಾದ್ರೂ ಕೂಡ ಫ್ಯಾನ್ಸ್‌ ಸಂಖ್ಯೆ ಕಮ್ಮಿ ಆಗಿಲ್ಲ. ಈ ನಡುವೆ ಆರ್‌ಸಿಬಿ ತಂಡವನ್ನು ಇದೇ ಕಾರಣಕ್ಕೆ ಇಷ್ಟಪಡೋದು ಎಂದು ಹೇಳುವ ವಿಡಿಯೋವೊಂದು ವೈರಲ್‌ ಆಗ್ತಿದೆ. 

ಇಡೀ ಐಪಿಎಲ್‌ನಲ್ಲಿ RCB ತಂಡಕ್ಕೆ ದೊಡ್ಡ ಮಟ್ಟದ ಅಭಿಮಾನಿ ಬಳಗ ಇದೆ ಎಂದು ಎಲ್ಲರೂ ಒಪ್ಪಿಕೊಳ್ತಾರೆ. ಹಾರ್ದಿಕ್‌ ಪಾಂಡ್ಯ ಅಂತೂ RCB ತಂಡದ ಬಗ್ಗೆ ಏನೂ ಮಾತಾಡಲ್ಲ, ಮಾತಾಡಿದ್ರೆ ನನ್ನ ಕರಿಯರ್‌ ಮುಗೀತು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಪ್ರತಿ ವರ್ಷ ಈ ಸಲ ಕಪ್‌ ನಮ್ದೇ ಎಂದು 18 ವರ್ಷಗಳಿಂದ ಹೇಳಿಕೊಂಡು ಬಂದಿದ್ದರೂ ಕೂಡ ಒಮ್ಮೆಯೂ ಕಪ್‌ಸಿಗದೆ ಹೋದ್ರೂ ಕೂಡ ಅಭಿಮಾನಿಗಳ ಅಭಿಮಾನ ಮಾತ್ರ ಕಮ್ಮಿ ಆಗಿಲ್ಲ. ಆರ್‌ಸಿಬಿಯನ್ನು ಇಷ್ಟಪಡಲು ಅನೇಕ ಕಾರಣಗಳಿವೆ. ಅದರಲ್ಲಿ ಮಾನವೀಯತೆ ಕೂಡ ಒಂದು ಎಂದು ಕೆಲವರು ಹೇಳುತ್ತಿದ್ದಾರೆ.

ವೈರಲ್ ವಿಡಿಯೋದಲ್ಲಿ ಏನಿದೆ?

ಹೌದು, ಮೇ 23ರಂದು ಇತ್ತೀಚೆಗೆ ಆರ್‌ಸಿಬಿ ಹಾಗೂ ಸನ್‌ರೈಸರ್ಸ್‌ ನಡುವೆ ಪಂದ್ಯ ನಡೆಯಿತು. ಆ ವೇಳೆ ಜಿತೇಶ್‌ ಶರ್ಮಾ ಅವರು ಹಂಗಾಮಿ ಕ್ಯಾಪ್ಟನ್‌ ಆಗಿದ್ದರು. ಬ್ಯಾಟಿಂಗ್‌ ಮಾಡುತ್ತಿದ್ದ ಇಶಾನ್‌ ಕಿಶನ್‌ ಅವರು ಬೆವರು ಒರೆಸಿಕೊಳ್ಳಲಾಗದೆ ಒದ್ದಾಡುತ್ತಿದ್ದರು. ಆಗ ಜಿತೇಶ್‌ ಶರ್ಮಾ ಅವರು ಜೇಬಿನಲ್ಲಿದ್ದ ಕರ್ಚೀಫ್‌ ನೀಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಲಕ್ನೋದ ಏಕನಾ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದ ಸುಂದರ ಕ್ಷಣವಿದೆ. ಇವರಿಬ್ಬರು ಪ್ರತಿಸ್ಪರ್ಧಿಗಳು. ಹೀಗಿದ್ದರೂ ಕೂಡ ಆರ್‌ಸಿಬಿ ತಂಡದ ಜಿತೇಶ್‌ ಶರ್ಮಾ ಅವರು ಕರ್ಚೀಫ್‌ ಕೊಟ್ಟಿದ್ದು ಎಲ್ಲರ ಹೃದಯ ಮುಟ್ಟಿತು.

ಪಂದ್ಯದ ಕಥೆ ಏನಾಯ್ತು?

2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ 65ನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಕ್ರಿಕೆಟರ್ ಇಶಾನ್‌ ಕಿಶನ್‌ ಅವರ ಸ್ಪೋಟಕ ಬ್ಯಾಟಿಂಗ್‌, ಬೌಲರ್‌ಗಳ ಶಿಸ್ತುಬದ್ದವಾದ ಬೌಲಿಂಗ್‌ ದಾಳಿಯಿಂದಾಗಿ , RCB ವಿರುದ್ದ 42 ರನ್‌ಗಳ ಭರ್ಜರಿ ಗೆಲುವು ಪಡೆದಿದೆ. ಪ್ಯಾಟ್‌ ಕಮಿನ್ಸ್‌ ಲೀಡರ್‌ಆಗಿದ್ದ ಹೈದರಾಬಾದ್‌ ತಂಡಕ್ಕೆ ಐದನೇ ಗೆಲುವು ಇದಾಗಿದೆ. ಆರ್‌ಸಿಬಿ ತಂಡವು ಈಗಾಗಲೇ ಪ್ಲೇಆಫ್ಸ್‌ಗೆ ಅರ್ಹತೆ ಪಡೆದಿದ್ದು, ಸರ್‌ರೈಸರ್ಸ್ ಎದುರು ಗೆಲ್ಲಿಲ್ಲ, ಹೀಗಾಗಿ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಲಾಗಲಿಲ್ಲ. ಈ ಸೋಲಿನಿಂದ RCBತಂಡವು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಈ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡಿ ಹೈದರಾವಾದ್ ಗೆಲುವಿಗೆ ನೆರವು ನೀಡಿದ್ದ ಇಶಾನ್‌ ಕಿಶನ್‌ ಪಂದ್ಯ ಶ್ರೇಷ್ಠ ಪ್ರಶಸ್ತಿ‌ ಪಡೆದರು.

ಹೈದರಾಬಾದ್‌ 232 ರನ್‌ಗಳ ಗುರಿ ಕೊಟ್ಟಿತ್ತು, ಫಿಲ್‌ ಸಾಲ್ಟ್‌, ವಿರಾಟ್‌ ಕೊಹ್ಲಿಯ ಸ್ಪೋಟಕ ಬ್ಯಾಟಿಂಗ್‌ ಮಾಡಿದರೂ ಕೂಡ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಚೆನ್ನಾಗಿ ಆಡಲಿಲ್ಲ. ಹೀಗಾಗಿ ಆರ್‌ಸಿಬಿ ಸೋಲು ಕಂಡಿತು. ಪ್ಯಾಟ್‌ ಕಮಿನ್ಸ್‌ ಹಾಗೂ ಇಶಾನ್‌ ಮಾಲಿಂಗ್‌ ಪರಿಣಾಮಕಾರಿ ಬೌಲಿಂಗ್‌ಗೆ ಅಕ್ಷರಶಃ ಆರ್‌ಸಿಬಿ ನಡುಗಿತ್ತು. ಹೀಗಾಗಿ ಅದು 19.5 ಓವರ್‌ಗಳಿಗೆ 189 ರನ್‌ಗಳಿಗೆ ಆಲ್‌ಔಟ್‌ ಆಯ್ತು.

ರಜತ್‌ ಪಾಟೀದಾರ್‌ ಅವರು ಆರ್‌ಸಿಬಿ ನಾಯಕರಾಗಿದ್ದರು. ಆದರೆ ಅವರ ಬೆರಳಿಗೆ ಗಾಯ ಆಗಿದ್ದರಿಂದ ಜಿತೇಶ್‌ ಶರ್ಮಾ ಅವರು ಹಂಗಾಮಿ ಕ್ಯಾಪ್ಟನ್ ಆಗಿದ್ದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಯಾರಿದ್ದಾರೆ?

ಜಿತೇಶ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಮಯಾಂಕ್ ಅಗರ್ವಾಲ್, ರೊಮಾರಿಯೋ ಶೆಫರ್ಡ್,ಟಿಮ್ ಡೇವಿಡ್,ಕೃನಾಲ್ ಪಾಂಡ್ಯ, ಯಶ್ ದಯಾಳ್, ಭುವನೇಶ್ವರ್ ಕುಮಾರ್, ಲುಂಗಿ ಶರ್ಮಾ ಎನ್ಗಿಡಿ

ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಯಾರಿದ್ದಾರೆ?

ಪ್ಯಾಟ್ ಕಮಿನ್ಸ್ (ನಾಯಕ), ಅಭಿಷೇಕ್ ಶರ್ಮಾ, ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್, ಇಶಾನ್ ಕಿಶನ್, ಅನಿಕೇತ್ ವರ್ಮಾ, ಹರ್ಷಲ್ ಪಟೇಲ್, ಅಭಿನವ್ ಮನೋಹರ್, ಇಶಾನ್ ಮಾಲಿಂಗ, ಟ್ರಾವಿಸ್ ಹೆಡ್, ಉನದ್ಕತ್

Scroll to load tweet…