ಗಾಯಕಿಯೊಬ್ಬಳ ಮೇಲೆ ಕುಡುಕ ಅಭಿಮಾನಿಯೊಬ್ಬ ಕೈಯಲ್ಲಿದ್ದ ಶರಾಬು ಎರಚಿದ್ದು, ಇದರಿಂದ ಸಿಟ್ಟಿಗೆದ್ದ ನಟಿ ಆತನ ಮೇಲೆ ಕೈಯಲ್ಲಿದ್ದ ಮೈಕ್ ಕಿತ್ತೆಸೆದಿದ್ದಾಳೆ. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ಮ್ಯೂಸಿಕ್ ಕನ್ಸರ್ಟ್( ಸಂಗೀತಾ ರಸಮಂಜರಿ) ವೇಳೆ ತಮ್ಮ ನೆಚ್ಚಿನ ಗಾಯಕ ಗಾಯಕಿಯನ್ನು ನೋಡಿದ ಅಭಿಮಾನಿಗಳು ಅತಿರೇಕದಿಂದ ವರ್ತಿಸಿ ಅವರಿಗೆ ಇರಿಸುಮುರಿಸು ಉಂಟು ಮಾಡುವುದು ಸಾಮಾನ್ಯವಾಗಿದೆ. ಕೆಲವರು ತಮ್ಮ ನೆಚ್ಚಿನ ಗಾಯಕರ ಮೇಲೆ ಹಣದ ಸುರಿಮಳೆಗೈಯುತ್ತಾರೆ. ಇತ್ತೀಚೆಗೆ ಗಾಯಕನೋರ್ವನ ಮೇಲೆ ಮಹಿಳೆಯೊಬ್ಬಳು ತನ್ನ ಬ್ರಾ ಎಸೆದಿದ್ದಳು. ಅದೇ ರೀತಿ ಈಗ ಗಾಯಕಿಯೊಬ್ಬಳ ಮೇಲೆ ಕುಡುಕ ಅಭಿಮಾನಿಯೊಬ್ಬ ಕೈಯಲ್ಲಿದ್ದ ಶರಾಬು ಎರಚಿದ್ದು, ಇದರಿಂದ ಸಿಟ್ಟಿಗೆದ್ದ ನಟಿ ಆತನ ಮೇಲೆ ಕೈಯಲ್ಲಿದ್ದ ಮೈಕ್ ಕಿತ್ತೆಸೆದಿದ್ದಾಳೆ. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಪ್ ಸಿಂಗರ್ ಕಾರ್ಡಿ ಬಿ ಮೇಲೆ ಅಭಿಮಾನಿಯೊಬ್ಬ ಮದ್ಯ ಎಸೆದಿದ್ದಾನೆ. ತನ್ನ ಹಾಡು ಹಾಗೂ ಪ್ರದರ್ಶನದಿಂದ ವೇದಿಕೆಗೆ ರಾಪ್ ಸಿಂಗರ್ ಕಾರ್ಡಿ ಬಿ ಕಿಚ್ಚು ಹಚ್ಚುತ್ತಿದ್ದರೆ ಇದನ್ನು ನೋಡುತ್ತಿದ್ದ ಅಭಿಮಾನಿಗೆ ಏನಾಯ್ತೋ ಏನೋ? ಆಕೆಯ ಮೇಲೆ ಕೈಯ್ಯಲ್ಲಿದ್ದ ಎಣ್ಣೆ ಎರಚಿದ್ದಾನೆ. ಇದರಿಂದ ಒಮ್ಮೆಲೆ ಸಿಟ್ಟಿಗೆದ್ದ ಆಕೆ ತನ್ನ ಕೈಲ್ಲಿದ್ದ ಮೈಕ್‌ನ್ನು ಆತನತ್ತ ಎಸೆದಿದ್ದಾಳೆ.
ಅರಿಜಿತ್ ಸಿಂಗ್ ಹಾಡ್ತಿರುವಾಗ್ಲೇ ಯುವತಿ ಪ್ರಪೋಸ್! ವಿಡಿಯೋ ನೋಡಿ ಹೊಟ್ಟೆ ಉರ್ಕೊಳ್ತಿರೋ ಹೈಕ್ಳು
ಅಲ್ಲದೇ ಘಟನೆಯಿಂದ ಮುಜುಗರಕ್ಕೀಡಾಗಿ ಕೆಂಡಮಂಡಲವಾದ ಆಕೆ ಅಲ್ಲಿದ್ದವರ ಮೇಲೆ ಕಿಡಿಕಾರಿದ್ದಾಳೆ. ಕೂಡಲೇ ಎಚ್ಚೆತ್ತ ಆಕೆಯ ತಂಡದವರು ಅಲ್ಲಿದ್ದವರನ್ನೆಲ್ಲಾ ದೂರ ಚದುರಿಸಿ ಗಾಯಕಿಯನ್ನು ಶಾಂತಗೊಳಿಸಲು ಯತ್ನಿಸಿದ್ದಾರೆ. ಕಾರ್ಡಿ ಬಿಯ ವರ್ತನೆಯನ್ನು ಅನೇಕರು ಶ್ಲಾಘಿಸಿದ್ದಾರೆ. ಅವಳು ಸರಿಯಾಗೇ ಮಾಡಿದ್ದಾಳೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಜನರು ಗಾಯಕರ ಮೇಲೆ ವಸ್ತುಗಳನ್ನು ಎಸೆಯುವುದನ್ನು ನಿಲ್ಲಿಸಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಕಲಾವಿದರು ಕೂಡ ಮನುಷ್ಯರೇ , ಅವರ ಮೇಲೆ ವಸ್ತುಗಳನ್ನು ಎಸೆಯುವುದನ್ನು ನಿಲ್ಲಿಸಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಕಾರ್ಡಿ ಬಿಯನ್ನು ದೂರುವುದು ಸರಿಯಲ್ಲ, ಕನ್ಸರ್ಟ್‌ಗಳಿಗೆ ಹೋಗುವ ಗಾಯಕರಿಗೆ ಗಾಯಕರ ಮೇಲೆ ಕಲಾವಿದರ ಮೇಲೆ ಸ್ವಲ್ಪವೂ ಗೌರವವಿಲ್ಲ, ಗೌರವವಿದ್ದರೆ ಹೀಗೆಲ್ಲಾ ಮಾಡುವುದಿಲ್ಲ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಕರ್ಡಿ ಒಳ್ಳೆಯ ಕೆಲಸವನ್ನೇ ಮಾಡಿದ್ದಾಳೆ. ನನ್ನೊಂದಿಗೆ ಕೆಟ್ಟದಾಗಿ ವರ್ತಿಸಿದರೆ ನಾನು ಕೆಟ್ಟದಾಗಿ ವರ್ತಿಸುವೆ ಎಂದು ಆಕೆ ಸಂದೇಶ ನೀಡಿದ್ದಾಳೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಗಾಯಕ ಅರಿಜಿತ್ ಸಿಂಗ್ ಕೈಹಿಡಿದು ಎಳೆದ ಮಹಿಳಾ ಅಭಿಮಾನಿ; ಕೈಗೆ ಗಾಯ, ವಿಡಿಯೋ ವೈರಲ್
ಗಾಯಕರ ಮೇಲೆ ಹೀಗೆಲ್ಲಾ ಸಿಕ್ಕಿದ್ದನ್ನೆಲ್ಲಾ ಎಸೆಯುವುದು ಇದು ಮೊದಲೇನಲ್ಲ, ಕೆಲ ದಿನಗಳ ಹಿಂದೆ ವಿಯೆಟ್ನಾಂನಲ್ಲಿ ಕನ್ಸರ್ಟ್ ನಡೆಸುತ್ತಿದ್ದ ವೇಳೆ ವೇದಿಕೆಗೆ ತೂರಿ ಬಂದ ಗಟ್ಟಿಯಾದ ವಸ್ತುವೊಂದು ತಾಗಿ ಗಾಯಕ ಹ್ಯಾರಿ ಸ್ಟೈಲ್ ಕಣ್ಣಿಗೆ ಗಾಯವಾಗಿತ್ತು. ಇವರಷ್ಟೇ ಅಲ್ಲದೇ ಗಾಯರಾದ ಕಲಾವಿದರಾದ ಡರ್ಕೆ, ಬೆಬೆ ರೆಕ್ಸ್ಹಾ ಕೆಲ್ಸಿಯಾ ಬಲ್ಲೆರಿನಿ, ಅವ ಮ್ಯಾಕ್ಸ್ ಮುಂತಾದವರ ಮೇಲೆಯೂ ಹೀಗೆ ದಾಳಿಯಾಗಿತ್ತು.
