ಸಂಗೀತ ಕಾರ್ಯಕ್ರಮದ ವೇಳೆ ಮಹಿಳಾ ಅಭಿಮಾನಿ ಗಾಯಕ ಅರಿಜಿತ್ ಸಿಂಗ್ ಕೈಹಿಡಿದು ಎಳೆದ ಪರಿಣಾಮ ಕೈಗೆ ಗಾಯವಾಗಿದೆ. ವಿಡಿಯೋ ವೈರಲ್ ಆಗಿದೆ. 

ಖ್ಯಾತ ಗಾಯಕ ಅರಿಜಿತ್ ಸಿಂಗ್ ಗಾಯನದ ಬಗ್ಗೆ ಹೇಳಬೇಕಾಗಿಲ್ಲ. ಅದ್ಭುತ ಧ್ವನಿಯ ಮೂಲಕವೇ ಗಾಯಕ ಅರಿಜಿತ್ ಸಿಂಗ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಅನೇಕ ಸೂಪರ್ ಹಿಟ್ ಗೀತೆಗಳನ್ನು ನೀಡಿರುವ ಅರಿಜಿತ್ ಸಿಂಗ್ ಅನೇಕ ಕಡೆ ಸಂಗೀತ ಕಾರ್ಯಕ್ರಮಗಳನ್ನು ನೀಡುತಿರುತ್ತಾರೆ. ದೇಶದ ಅನೇಕ ಕಡೆ ಮತ್ತು ವಿದೇಶಗಳಲ್ಲೂ ಅರಿಜಿತ್ ಸಿಂಗ್ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. ಲೈವ್ ಶೋಗಳಲ್ಲಿ ಸಿಕ್ಕಾಪಟ್ಟೆ ಅಭಿಮಾನಿಗಳು ಸೇರುತ್ತಾರೆ. ಅರಿಜಿತ್ ಸಿಂಗ್ ನೋಡಲು ಅವರ ಹಾಡು ಕೇಳಲು ಅಭಿಮಾನಿಗಳು ಮುಗಿಬಿದ್ದಿರುತ್ತಾರೆ. ಇತ್ತೀಚೆಗೆ ಕಾರ್ಯಕ್ರಮದಲ್ಲಿ ಮಹಿಳಾ ಅಭಿಮಾನಿಯೊಬ್ಬರು ಅರಿಜಿತ್ ಸಿಂಗ್ ಅವರ ಕೈ ಹಿಡಿದು ಎಳೆದು ಗಾಯಮಾಡಿದ್ದಾರೆ.

ಔರಂಗಬಾದ್​ನಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿದ್ದ ವೇಳೆ ಮಹಿಳಾ ಅಭಿಮಾನಿಯೊಬ್ಬರು ಅರಿಜಿತ್​ ಸಿಂಗ್​ ಅವರ ಕೈ ಹಿಡಿದು ಎಳೆದಿದ್ದಾರೆ. ಎಳೆದ ರಭಸಕ್ಕೆ ಅವರ ಕೈಗೆ ಗಾಯ ಆಗಿದೆ. ಈ ಸಂದರ್ಭದ ವಿಡಿಯೋ ವೈರಲ್​ ಆಗಿದ್ದು, ಫ್ಯಾನ್ಸ್​ ಅನೇಕ ಕಾಮೆಂಟ್​ ಮಾಡುತ್ತಿದ್ದಾರೆ. ಗಾಯವಾದರೂ ಅರಿಜಿತ್ ಸಿಂಗ್ ಶಾಂತಿಯಿಂದ ನಡೆದುಕೊಂಡ ರೀತಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

ಗಾಯಕ ಅರಿಜಿತ್​ ಸಿಂಗ್​ ಅವರು ತುಂಬಾ ಸರಳ ವ್ಯಕ್ತಿ. ಪ್ರತಿ ಬಾರಿ ಸಂಗೀತ ಕಾರ್ಯಕ್ರಮ ನೀಡಿದಾಗಲೂ ಅಭಿಮಾನಿಗಳ ಬಳಿ ತೆರಳಿ ಮಾತನಾಡಿಸುತ್ತಾರೆ. ಔರಂಗಬಾದ್​ನಲ್ಲಿ ನಡೆದ ಕಾರ್ಯಕ್ರಮದಲ್ಲೂ ಹಾಗೆಯೇ ಆಗಿದೆ. ಆ ಸಮಯದಲ್ಲಿ ಅಲ್ಲಿದ್ದ ಮಹಿಳಾ ಅಭಿಮಾನಿಯೊಬ್ಬರು ಜೋರಾಗಿ ಅವರ ಕೈ ಹಿಡಿದು ಎಳೆದರು. ಬಳಿಕ ಮಾತನಾಡಿದ ಅರಿಜಿತ್ ಸಿಂಗ್ ವಿಡಿಯೋ ವೈರಲ್ ಆಗಿದೆ. 

ಭೀಕರ ರಸ್ತೆ ಅಪಘಾತ, ಡಿವೈಡರ್‌ಗೆ ಕಾರು ಡಿಕ್ಕಿ; 'ಪೊನ್ನಿಯಿನ್ ಸೆಲ್ವನ್' ಗಾಯಕಿ ರಕ್ಷಿತಾ ಅದೃಷ್ಟವಶಾತ್ ಪಾರು

'ನೀವು ಇದನ್ನು ಅರ್ಥ ಮಾಡಿಕೊಳ್ಳಬೇಕು. ನನ್ನ ಮಾತು ಕೇಳಿ. ನೀವು ಫನ್ ಮಾಡುತ್ತೀರಿ ಸರಿ, ಆದರೆ ನನಗೆ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೆ, ನೀವು ಹೇಗೆ ಆನಂದಿಸುತ್ತೀರಿ? ನೀವು ಪ್ರಬುದ್ಧ ವ್ಯಕ್ತಿಗಳಲ್ಲವೇ? ನನ್ನ ಕೈಯನ್ನು ಏಕೆ ಎಳೆಯುತ್ತೀರಿ? ನನ್ನ ಕೈ ಈಗ ನಡುಗುತ್ತಿದೆ. ನಾನು ಹೊರಡಲೇ? ಎಂದು ಹೇಳಿದರು. ಆಘ ಅಭಿಮಾನಿಗಳು ಬೇಡ ಎಂದು ಜೋರಾಗಿ ಕಾಗಿದರು. ಆಕಸ್ಮಿಕವಾಗಿ ಅರಿಜಿತ್‌ಗೆ ನೋವುಂಟು ಮಾಡಿದ ಮಹಿಳೆ ಹಲವು ಬಾರಿ ಕ್ಷಮೆಯಾಚಿಸಿದರು.

Scroll to load tweet…

ಪ್ರಿಯಾಂಕಾ ಚೋಪ್ರಾ ಲ್ಯಾಪ್​ಟಾಪ್​ನಲ್ಲಿ ಭದ್ರವಾಗಿದ್ದ ಗುಟ್ಟೊಂದು ರಟ್ಟು!

ಈ ವಿಡಿಯೋ ವೈರಲ್ ಆದ ಬಳಿಕ ಅಭಿಮಾನಿಗಳು ಅರಿಜಿತ್ ಸಿಂಗ್ ಅವರು ವರ್ತಿಸಿದ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪರಿಸ್ಥಿತಿ ಹೇಗೆ ನಿಭಾಯಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಾದರೂ ತನ್ನ ಶಾಂತತೆಯನ್ನು ಕಳೆದುಕೊಂಡಿಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಇದು ನಿಜಕ್ಕೂ ಬೇಸರದ ಸಂಗತಿಯಾಗಿದೆ ಎಂದು ಹೇಳಿದ್ದಾರೆ.