Asianet Suvarna News Asianet Suvarna News

ಅಯ್ಯೋ ದೇವ್ರೆ... ಸತ್ತವರ ಶವ ಹೂಳೋ ಬದ್ಲು ತಿನ್ತಿದ್ರಾ ಯುರೋಪಿಯನ್ನರು?

ಸತ್ತವರನ್ನು ಹೂಳುವುದು ಸುಡುವುದು ಹೀಗೆ ತಮ್ಮ ತಮ್ಮ ಸಮುದಾಯದ ಸಂಪ್ರದಾಯಕ್ಕೆ ತಕ್ಕಂತೆ ಸಂಸ್ಕಾರ ಮಾಡುವುದು ನಾಗರಿಕ ಸಮಾಜದ ಪದ್ಧತಿ,  ಆದರೆ ಇತ್ತೀಚಿನ ಅಧ್ಯಯನವೊಂದು ಮಾನವ ಸಮಾಜ ಶಾಕ್‌ಗೆ ಒಳಗಾಗುವಂತಹ ವರದಿ ನೀಡಿದೆ

Shocking study report 15000 year back Europeans were consuming the bodies of the dead instead of cremating them akb
Author
First Published Oct 8, 2023, 3:05 PM IST

ಸತ್ತವರನ್ನು ಹೂಳುವುದು ಸುಡುವುದು ಹೀಗೆ ತಮ್ಮ ತಮ್ಮ ಸಮುದಾಯದ ಸಂಪ್ರದಾಯಕ್ಕೆ ತಕ್ಕಂತೆ ಸಂಸ್ಕಾರ ಮಾಡುವುದು ನಮ್ಮ ಭಾರತೀಯ ಪದ್ಧತಿ,  ಆದರೆ ಇತ್ತೀಚಿನ ಅಧ್ಯಯನವೊಂದು ಮಾನವ ಸಮಾಜ ಶಾಕ್‌ಗೆ ಒಳಗಾಗುವಂತಹ ವರದಿ ನೀಡಿದೆ. ಸುಮಾರು 15 ಸಾವಿರ ವರ್ಷಗಳ ಹಿಂದೆ ಯುರೋಪಿಯನ್ನರು ಸಾವಿಗೀಡಾದ ವ್ಯಕ್ತಿಯನ್ನು ಸುಡುವ ಅಥವಾ ಹೂಳುವ ಬದಲು ಅವರ ದೇಹವನ್ನು ಸೇವನೆ ಮಾಡುತ್ತಿದ್ದಿರಬಹುದು ಎಂದು ಈ ಅಧ್ಯಯನ ಹೇಳಿದೆ. 

ಕ್ವಾಟರ್ನರಿ ಸೈನ್ಸ್ ರಿವ್ಯೂಸ್ ನಿಯತಕಾಲಿಕ ಪ್ರಕಟವಾದ  ಇತ್ತೀಚಿನ ಅಧ್ಯಯನ ವರದಿಯ ಪ್ರಕಾರ, 15 ಸಾವಿರ ವರ್ಷಗಳ ಹಿಂದೆ ಸತ್ತ ಮನುಷ್ಯನ ಅಂತ್ಯಕ್ರಿಯೆ ವೇಳೆ ನರಭಕ್ಷಣೆ (cannibalism) ಅಂತ್ಯಕ್ರಿಯೆಯ ವಿಲಕ್ಷಣ ಅಭ್ಯಾಸವಾಗಿತ್ತು.  ತಮ್ಮ ಆತ್ಮೀಯರು ಸತ್ತರೆ ಶವಗಳನ್ನು ಅವಶ್ಯಕತೆಯಿಂದ ಅಲ್ಲ ಅಂತ್ಯಕ್ರಿಯೆ ಸಂಪ್ರದಾಯದ ಭಾಗವಾಗಿ ತಿನ್ನುತ್ತಿದ್ದರು ಎಂಬುದನ್ನು  ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಇಂಗ್ಲೆಂಡಿನ ಗಾಫ್‌ನ ಗುಹೆಯಲ್ಲಿ ಕಚ್ಚಿದ ಮೂಳೆಗಳು ಮತ್ತು ಮಾನವನ ತಲೆಬುರುಡೆಗಳನ್ನು ಕಪ್‌ಗಳಂತೆ ಬಳಸಿರುವುದನ್ನು ಕಾಣಬಹುದು. ಹಾಗೂ ಇದೇನು ಪ್ರತ್ಯೇಕವಾದ ಘಟನೆಯಲ್ಲ ಇದು ಕೂಡ ಆ ಸಂಪ್ರದಾಯದ (burial practice) ಭಾಗವೇ ಎಂದು ಅಧ್ಯಯನ ಅಭಿಪ್ರಾಯ ವ್ಯಕ್ತಪಡಿಸಿದೆ.

ಪುಟ್ಟ ಕಂದನ ಜೀವ ಉಳಿಸಲು ತನ್ನದೇ ಬೋನ್‌ಮ್ಯಾರೋ ನೀಡಿದ ವೈದ್ಯ

ಮೂಲ ಶಿಲಾಯುಗದ ಕಾಲಘಟ್ಟದ (Upper Paleolithic era) ಅರ್ವಾಚೀನ ಶಿಲಾಯುಗದ ( Magdalenian period) ಅಂತ್ಯದ ಅವಧಿಯ ಮೇಲೆ ಈ ಅಧ್ಯಯನವು ಕೇಂದ್ರೀಕೃತವಾಗಿತ್ತು. ಮ್ಯಾಗ್ಡಲೇನಿಯನ್ನರು ಸುಮಾರು 11,000 ರಿಂದ 17,000 ವರ್ಷಗಳ ಹಿಂದೆ ವಾಸಿಸುತ್ತಿದ್ದರು.  ಲಂಡನ್‌ನ ರಾಷ್ಟ್ರೀಯ ಇತಿಹಾಸ ಮ್ಯೂಸಿಯಂನ ತಜ್ಞರು ಮಾನವ ಅವಶೇಷಗಳನ್ನು ಹೊಂದಿರುವ 59 ಮ್ಯಾಗ್ಡಲೇನಿಯನ್ ಸ್ಥಳಗಳನ್ನು ಗುರುತಿಸಲು ವ್ಯಾಪಕವಾದ ಸಾಹಿತ್ಯವನ್ನು ಪರಿಶೀಲಿಸಿದ್ದಾರೆ. ಅವುಗಳಲ್ಲಿ ಹೆಚ್ಚಿನವು ಫ್ರಾನ್ಸ್‌ನಲ್ಲಿವೆ, ಜರ್ಮನಿ, ಸ್ಪೇನ್, ರಷ್ಯಾ, ಯುನೈಟೆಡ್ ಕಿಂಗ್‌ಡಮ್, ಬೆಲ್ಜಿಯಂ, ಪೋಲೆಂಡ್, ಜೆಕ್ ರಿಪಬ್ಲಿಕ್ ಮತ್ತು ಪೋರ್ಚುಗಲ್‌ನಲ್ಲಿಯೂ ಆ ಯುಗಕ್ಕೆ ಸೇರಿದ ಅವಶೇಷಗಳಿರುವ ಪ್ರದೇಶಗಳಿವೆ ಎಂದು  ಅಧ್ಯಯನ ವರದಿಯಲ್ಲಿದೆ.  

ಗುರುತ್ವಾಕರ್ಷಣೆಯೇ ಇಲ್ಲದ ಬಾಹ್ಯಾಕಾಶದಲ್ಲಿ ಕಾಫಿ ಕುಡಿಯೋದು ಹೇಗೆ: ಗಗನಯಾತ್ರಿ ತೋರಿಸಿದ್ದಾರೆ ನೋಡಿ?

ಈ ವಿಲಕ್ಷಣವಾದ ಅಂತ್ಯಕ್ರಿಯೆಯ ಸಂಪ್ರದಾಯಗಳನ್ನು ಅರ್ಥ ಮಾಡಿಕೊಳ್ಳಲು ಅವರು 25 ಪ್ರದೇಶಗಳಲ್ಲಿ ಅಧ್ಯಯನ ಮಾಡಿದ್ದಾರೆ. ಇವುಗಳಲ್ಲಿ 15 ಸ್ಥಳಗಳಲ್ಲಿ ಮಾನವನ ಅವಶೇಷಗಳನ್ನು ಅಗೆದ, ಕತ್ತರಿಸಿದ ಗುರುತುಗಳಿದ್ದ ತಲೆಬುರುಡೆ ಮೂಳೆ, ಹಾಗೂ ಮೂಳೆಯೊಳಗಿನ ಅಸ್ಥಿಮಜ್ಜೆಯನ್ನು ಪೋಷಕಾಂಶಗಳಿಗಾಗಿ ಹೊರತೆಗೆದಂತಿರುವ ಲಕ್ಷಗಳನ್ನು ಹೊಂದಿರುವ ಪುರಾವೆಗಳು ಸಿಕ್ಕಿದವು.  ಹೀಗಾಗಿ ಆಗ ಸತ್ತವರನ್ನು ಸಂಸ್ಕಾರದ ಹೆಸರಿನಲ್ಲಿ ಸೇವನೆ ಮಾಡಲಾಗುತ್ತಿದ್ದ ವಿಲಕ್ಷಣವಾದ ಸಂಪ್ರದಾಯವಿತ್ತು ಎಂಬುದನ್ನು ಅಧ್ಯಯನಕಾರರು ಅಂದಾಜಿಸಿದ್ದಾರೆ.

ಹಮಾಸ್ ಉಗ್ರರಿಂದ ಯುವತಿಯ ಕಿಡ್ನಾಪ್ : ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

ಮಾನವನ ಅವಶೇಷಗಳ ಧಾರ್ಮಿಕ  ಸಂಸ್ಕಾರದ ಭಾಗವಾಗಿ ಉತ್ತರ ಮತ್ತು ಪಶ್ಚಿಮ ಯುರೋಪಿನಾದ್ಯಂತದ ಹಲವು ಸ್ಥಳಗಳಲ್ಲಿ ಈ ರೀತಿಯ ಪಳೆಯುಳಿಕೆ ಪತ್ತೆಯಾಗಿದ್ದು, ಹೀಗಾಗಿ  ಸಾವಿನ ನಂತರ ನರಭಕ್ಷಕತೆ ಜಾರಿಯಲ್ಲಿತ್ತು ಎಂಬುದಕ್ಕೆ ಇದು ಪೂರಕವಾಗಿದೆ.  ಮ್ಯಾಗ್ಡಲೇನಿಯನ್ ಕಾಲಘಟ್ಟದ ಸಂಸ್ಕೃತಿಯಲ್ಲಿ ಇದು ವ್ಯಾಪಕವಾಗಿತ್ತು ಎಂದು ಸಂಶೋಧಕರು ಹೇಳಿದ್ದಾರೆ.

ಇದು ಜನರು ಸಾವಿಗೀಡಾದ ತಮ್ಮ ಪ್ರೀತಿಪಾತ್ರರ ದೇಹವನ್ನು ವಿಲೇವಾರಿ ಮಾಡುವ ಒಂದು ವಿಲಕ್ಷಣ ವಿಧಾನವಾಗಿತ್ತು.  ಇಲ್ಲಿ ಜನರು ತಮ್ಮ ಸತ್ತವರ ಶವಗಳನ್ನು ಸುಡುವ ಅಥವಾ ಹೂಳುವ ಬದಲು ಅವುಗಳನ್ನು ತಿನ್ನುತ್ತಿದ್ದರು ಎಂದು ರಾಷ್ಟ್ರೀಯ ಇತಿಹಾಸ ವಸ್ತುಸಂಗ್ರಹಾಲಯದ ಪ್ರಾಚೀನ ಮಾನವಶಾಸ್ತ್ರಜ್ಞೆ ಮತ್ತು ಪ್ರಧಾನ ಸಂಶೋಧಕಿಸಹ ಲೇಖಕಿ ಸಿಲ್ವಿಯಾ ಬೆಲ್ಲೊ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆನ್ನುಮೂಳೆಯಿಂದ ಅಂತರಿಕವಾಗಿ ಬೇರ್ಪಟ್ಟಿದ್ದ ಬಾಲಕನ ತಲೆ ಬುರುಡೆ ಯಶಸ್ವಿ ಮರು ಜೋಡಣೆ

Follow Us:
Download App:
  • android
  • ios