ಗುರುತ್ವಾಕರ್ಷಣೆಯೇ ಇಲ್ಲದ ಬಾಹ್ಯಾಕಾಶದಲ್ಲಿ ಕಾಫಿ ಕುಡಿಯೋದು ಹೇಗೆ: ಗಗನಯಾತ್ರಿ ತೋರಿಸಿದ್ದಾರೆ ನೋಡಿ?

ಗಗನಯಾತ್ರೆಗೆ ತೆರಳಿದ ವಿಜ್ಞಾನಿಗಳು ಅಲ್ಲಿ ಹೇಗೆ ಟೀ ಕಾಫಿ ಕುಡಿತಾರೆ ಎನ್ನುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

European Astronaut shows How to drink coffee in zero gravity space center akb

ಗಗನಯಾತ್ರೆ ತೆರಳುವ ವಿಜ್ಞಾನಿಗಳು ಅಲ್ಲಿ ಹೇರ್‌ ಕಟ್ ಹೇಗೆ ಮಾಡುತ್ತಾರೆ ಎಂಬ ಬಗ್ಗೆ ವಿಜ್ಞಾನಿಯೊಬ್ಬರು ಪೋಸ್ಟ್ ಮಾಡಿದದ ವೀಡಿಯೋವೊಂದು  ವರ್ಷಗಳ ಹಿಂದೆ ವೈರಲ್ ಆಗಿತ್ತು. ಅದೇ ರೀತಿ ಈಗ ಗಗನಯಾತ್ರೆಗೆ ತೆರಳಿದ ವಿಜ್ಞಾನಿಗಳು ಅಲ್ಲಿ ಹೇಗೆ ಟೀ ಕಾಫಿ ಕುಡಿತಾರೆ ಎನ್ನುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಕೆಲಸ ಮಾಡುವ  ಗಗನಯಾತ್ರಿಗಳಿಗೆ ಅಲ್ಲಿ ಗುರುತ್ವಾಕರ್ಷಣೆ ಕಡಿಮೆ ಇರುವುದರಿಂದ ಕಾಫಿ ಕುಡಿಯುವಂತಹ ಸರಳ ವಿಚಾರಗಳು ಕಷ್ಟಕರವಾಗಿರುತ್ತವೆ. ದ್ರವ ರೂಪದ ಎಲ್ಲಾ ವಸ್ತುಗಳು ಅಲ್ಲಿ ಗಾಳಿಯಲ್ಲಿ ತೇಲುವುದರಿಂದ ಗಗನಯಾತ್ರಿಗಳು ಇದಕ್ಕಾಗಿ ಸ್ಟ್ರಾ ಅಥವಾ ಕಾಫಿ ಬ್ಯಾಗ್‌ಗಳನ್ನು ಬಳಸುತ್ತಾರೆ. ಆದರೆ ಇತ್ತೀಚೆಗೆ ಗಗನಯಾತ್ರಿಯೊಬ್ಬರು ವಿಶೇಷ ರೀತಿಯಲ್ಲಿ ಡಿಸೈನ್ ಮಾಡಿದ ಕಪ್ ಒಂದನ್ನು ಬಳಸಿದ್ದು, ಇದನ್ನು ಪೋರ್ಟ್‌ಲ್ಯಾಂಡ್ ಸ್ಟೇಟ್ ವಿವಿಯೂ ಸಿದ್ಧಪಡಿಸಿದೆ. ಈ ಕಪ್ ಡಿಸೈನ್ ಚೂಪಾದ ಕೊಕ್ಕಿನಂತಹ ಲೋಟದಂತಹ ತುದಿಯನ್ನು ಹೊಂದಿದೆ. ಹರಿಯುವ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ.  ಕ್ಯಾಪಿಲ್ಲರಿ ಕ್ರಿಯೆಯು ದ್ರವವು ಗುರುತ್ವಾಕರ್ಷಣೆಯಂತಹ ಬಾಹ್ಯ ಶಕ್ತಿಗಳಿಗೆ ಸ್ವಲ್ಪ ವಿರೋಧದೊಂದಿಗೆ ಕಿರಿದಾದ ಹಾದಿಯಲ್ಲಿ ವೇಗವಾಗಿ ಹರಿಯುವಂತೆ ಮಾಡುತ್ತದೆ.

ಆಗ ಕೆಮಿಸ್ಟ್ರಿಯಲ್ಲಿ ಫೇಲ್‌ : ಈಗ ರಸಾಯನಶಾಸ್ತ್ರದಲ್ಲಿ ನೊಬೆಲ್‌: ವಿಜ್ಞಾನಿ ಬವೆಂಡಿ ರೋಚಕ ಕಹಾನಿ

ಯುರೋಪಿಯನ್‌ ಸ್ಪೇಸ್ ಏಜೆನ್ಸಿಯ (European Space Agency) ಗಗನಯಾತ್ರಿ ಸಮಂತಾ ಕ್ರಿಸ್ಟೋಫರೆಟ್ಟಿ(Samantha Cristoforetti)  ಅವರು ಈ ಹೊಸ ಕಪ್‌ನ್ನು ಹೇಗೆ ಟೀ ಕಾಫಿ ಕುಡಿಯಲು ಬಳಸುತ್ತಾರೆ ಎಂಬುದನ್ನು ವೀಡಿಯೋ ಮೂಲಕ ಮಾಡಿ ತೋರಿಸಿದ್ದಾರೆ. ಯುರೋಪಿಯನ್‌ ಬಾಹ್ಯಾಕಾಶ ಸಂಸ್ಥೆ ಈ ವಿಡೀಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.  ವೀಡಿಯೋದಲ್ಲಿ ಕಾಣಿಸುವಂತೆ ಅವರು ಮೊದಲಿಗೆ ಸಹಜವಾದ ಗ್ಲಾಸ್‌ಗೆ ಪ್ಲಾಸ್ಟಿಕ್‌  ಬ್ಯಾಗೊಂದರಿಂದ ಕಾಫಿ ಹಾಕಿ ಕುಡಿಯಲು ನೋಡಿದ್ದಾರೆ. ಆದರೆ ಕಾಫಿ ಕೆಳಕ್ಕೆ ಹರಿಯದೇ ಗ್ಲಾಸ್‌ನ್ನು ಬಗ್ಗಿಸಿ ಬಾಯಿಗೆ ಹಿಡಿದಾಗ ಕೆಳಕ್ಕೆ ಇಳಿಯದೇ ಗ್ಲಾಸ್‌ನ ಮೇಲ್ಭಾಗದಲ್ಲೇ ನಿಂತುಕೊಂಡಿದ್ದೆ. ನಂತರ ಅವರ ಈ ವಿಶೇಷವಾಗಿ ಸಿದ್ಧಪಡಿಸಿದ ಕಪ್‌ಗೆ ಕಾಫಿ ಬಗ್ಗಿಸಿ ಕುಡಿಯುತ್ತಾರೆ. 

ಅಪ್ಪಟ ರೈತ ವಿಜ್ಞಾನಿ ಪ್ರೊ.ಸ್ವಾಮಿನಾಥನ್‌ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಲೇಖನ

ಈ ವೀಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದು, ವೈರಲ್ ಆಗಿದೆ. ಸ್ಪೇಸ್‌ನಲ್ಲಿ ಕಾಫಿ ಕುಡಿಯುತ್ತಿರುವ ಮೊದಲ ಮಹಿಳೆ ಇವಳಿರಬೇಕು ಎಂದು ವೀಡಿಯೋ ನೋಡಿದ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಸ್ಪೇಸ್‌ನಲ್ಲಿ ಕಾಫಿ ಕುಡಿಯುವುದು ಕೂಡ ಎಷ್ಟು ಕಷ್ಟ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಸೂರ್ಯಗ್ರಹಣದ ದಿನವೇ ಬಾಹ್ಯಾಕಾಶಕ್ಕೆ ಮೂರು ರಾಕೆಟ್‌ ಉಡ್ಡಯನ, ಭಾರತೀಯ ಮೂಲದ ವಿಜ್ಞಾನಿಯ ಸಾರಥ್ಯ!

 

 

 

Latest Videos
Follow Us:
Download App:
  • android
  • ios