Asianet Suvarna News Asianet Suvarna News

ಬೆನ್ನುಮೂಳೆಯಿಂದ ಅಂತರಿಕವಾಗಿ ಬೇರ್ಪಟ್ಟಿದ್ದ ಬಾಲಕನ ತಲೆ ಬುರುಡೆ ಯಶಸ್ವಿ ಮರು ಜೋಡಣೆ

ಅಪಘಾತದಲ್ಲಿ ‘ಆಂತರಿಕ ಶಿರಚ್ಛೇದ’ (ತಲೆ ಮತ್ತು ಕುತ್ತಿಗೆಯ ಸಂಪರ್ಕ ಕಡಿತಗೊಂಡಿದ್ದ ಅಥವಾ ಬೆನ್ನುಮೂಳೆಯಿಂದ ತಲೆ ಬುರುಡೆ ಬೇರ್ಪಟ್ಟ)ಕ್ಕೆ ತುತ್ತಾಗಿದ್ದ 12 ವರ್ಷದ ಬಾಲಕನ ತಲೆಯನ್ನು ಇಸ್ರೇಲ್‌ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಮತ್ತೆ ಕುತ್ತಿಗೆಗೆ ಜೋಡಿಸಿದ್ದಾರೆ.

Israeli doctors have successfully surgically reattached the head of a 12 year old boy who's skull separated from the spine in an accident akb
Author
First Published Oct 8, 2023, 11:02 AM IST

ಜೆರುಸಲೇಂ: ಅಪಘಾತದಲ್ಲಿ ‘ಆಂತರಿಕ ಶಿರಚ್ಛೇದ’ (ತಲೆ ಮತ್ತು ಕುತ್ತಿಗೆಯ ಸಂಪರ್ಕ ಕಡಿತಗೊಂಡಿದ್ದ ಅಥವಾ ಬೆನ್ನುಮೂಳೆಯಿಂದ ತಲೆ ಬುರುಡೆ ಬೇರ್ಪಟ್ಟ)ಕ್ಕೆ ತುತ್ತಾಗಿದ್ದ 12 ವರ್ಷದ ಬಾಲಕನ ತಲೆಯನ್ನು ಇಸ್ರೇಲ್‌ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಮತ್ತೆ ಕುತ್ತಿಗೆಗೆ ಜೋಡಿಸಿದ್ದಾರೆ.

ಇದು ಅಪರೂಪದ ಶಸ್ತ್ರಚಿಕಿತ್ಸೆಯಾಗಿದ್ದು ಕೇವಲ ಶೇ.50 ರಷ್ಟು ಮಾತ್ರ ಬದುಕುಳಿಯುವ ಸಾಧ್ಯತೆ ಹೊಂದಿದ್ದ ಬಾಲಕನನ್ನು ವೈದ್ಯರು ಪವಾಡ ಸದೃಶ್ಯವೆಂಬಂತೆ ಬದುಕಿಸಿಕೊಂಡಿದ್ದಾರೆ. ಸುಲೆಮಾನ್‌ ಹಸನ್‌ (Suleman Hasan) ಎಂಬ ಬಾಲಕ ಕಾರು ಅಪಘಾತಕ್ಕೀಡಾಗಿದ್ದ(car accident)  ವೇಳೆ ಆತನ ಬೆನ್ನುಮೂಳೆಯ ಮೇಲಿನ ಕಶೇರುಖಂಡದಿಂದ ತಲೆ ಬುರುಡೆ ಬೇರ್ಪಟ್ಟಿತ್ತು. ಈ ಸ್ಥಿತಿಯನ್ನು ವೈದ್ಯಕೀಯ ಭಾಷೆಯಲ್ಲಿ ‘ಬಿಲಾಟರಲ್‌ ಅಡ್ಲಾಂಟೊ ಆಕ್ಸಿಪಿಟಲ್‌ ಜಾಯಿಂಟ್‌ ಡಿಸ್‌ಲೊಕೇಶನ್‌’(Bilateral Adlanto-Occipital Joint Dislocation) ಎನ್ನಲಾಗುತ್ತದೆ.

ಪುಟ್ಟ ಕಂದನ ಜೀವ ಉಳಿಸಲು ತನ್ನದೇ ಬೋನ್‌ಮ್ಯಾರೋ ನೀಡಿದ ವೈದ್ಯ

ವೈದ್ಯರಾದ ಡಾ. ಓಹದ್‌ ಐನಾವ್‌ (Dr. Ohad Ainaw) ತಂಡ ಕಳೆದ ತಿಂಗಳು ಶಸ್ತ್ರಚಿಕಿತ್ಸೆ ನಡೆಸಿದ್ದು ಇತ್ತೀಚೆಗೆ ಬಾಲಕನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಇದೊಂದು ಸಾಮಾನ್ಯವಲ್ಲದ ಮತ್ತು ಅತಿ ಹೆಚ್ಚು ಅನುಭವ, ಜ್ಞಾನವುಳ್ಳ ವೈದ್ಯರಿಂದ ನಡೆಸಬಹುದಾದ ಶಸ್ತ್ರಚಿಕಿತ್ಸೆಯಾಗಿದೆ.

ಇಸ್ರೇಲ್‌ನಲ್ಲಿ 18 ಸಾವಿರ ಭಾರತೀಯರ ವಾಸ, ಇವರಲ್ಲಿ 6 ಸಾವಿರಕ್ಕೂ ಹೆಚ್ಚು ಕೇರಳಿಗರು

ಮುಂಬೈ ಮಾದರಿಯಲ್ಲಿ ಇಸ್ರೇಲ್ ಮೇಲೆ ದಾಳಿ

ಇಸ್ಲಾಮಿಕ್‌ ಜಿಹಾದ್ ಸಂಘಟನೆಯ ಜತೆಗೂಡಿ ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರರು ಇಸ್ರೇಲ್‌ ಮೇಲೆ ನಡೆಸಿರುವ ದಾಳಿ 2008ರ ನ.26ರಂದು ಭಾರತದ ವಾಣಿಜ್ಯ ರಾಜಧಾನಿ ಮುಂಬೈ ಮೇಲೆ ಪಾಕಿಸ್ತಾನದ ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆ ನಡೆಸಿದ್ದ ದಾಳಿಯನ್ನು ಹೋಲುತ್ತಿದೆ.

ಎರಡೂ ಸಂಘಟನೆಗಳು ಇಸ್ರೇಲ್‌ ಮೇಲೆ ದಾಳಿ ನಡೆಸುವ ಜತೆಗೆ ಸಶಸ್ತ್ರಧಾರಿ ಉಗ್ರರನ್ನು ಇಸ್ರೇಲ್‌ಗೆ ನುಗ್ಗಿಸಿವೆ. ಆ ಉಗ್ರರು ಇಸ್ರೇಲ್‌ನ ಹಲವಾರು ನಾಗರಿಕರನ್ನು ಒತ್ತೆಯಾಳಾಗಿರಿಸಿಕೊಂಡಿದ್ದಾರೆ. ಹಲವು ಪ್ರದೇಶಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಅಲ್ಲದೆ ಇಸ್ರೇಲ್‌ನ 22 ಜನರನ್ನು ಹತ್ಯೆ ಮಾಡಿದ್ದಾರೆ. ಈ ದಾಳಿಯಲ್ಲಿ 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮುಂಬೈನಲ್ಲೂ ಇದೇ ರೀತಿ ಲಷ್ಕರ್ ಉಗ್ರರು ದಾಳಿ ನಡೆಸಿ 166 ಜನರನ್ನು ಕೊಂದಿದ್ದರು. ಹಲವಾರು ಮಂದಿಯನ್ನು ಹೋಟೆಲ್‌ಗಳಲ್ಲಿ ಒತ್ತೆಯಾಳಾಗಿರಿಸಿಕೊಂಡಿದ್ದರು. 60 ತಾಸುಗಳ ಕಾಲ ದೇಶವನ್ನು ನಡುಗಿಸಿದ್ದರು.

ಭಾರಿ ಪೂರ್ವ ತಯಾರಿಯೊಂದಿಗೆ ಇಸ್ರೇಲ್ ಮೇಲೆ ಮುಗಿಬಿದ್ದಿದ್ದ ಹಮಾಸ್ ಉಗ್ರರು

ಸಂಘರ್ಷ ದಿಢೀರ್ ಭುಗಿಲೆದ್ದಿದ್ದೇಕೆ?

ಜೆರುಸಲೇಂನಲ್ಲಿರುವ ಅಲ್‌-ಅಕ್ಸಾ ಮಸೀದಿ ಹಾಗೂ ಇಸ್ರೇಲ್‌-ಗಾಜಾ ಪಟ್ಟಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ಯಾಲೆಸ್ತೀನಿಗಳನ್ನು ವರ್ಷಾರಂಭದಲ್ಲಿ ಇಸ್ರೇಲ್‌ ಬಂಧಿಸಿತ್ತು. ಹೀಗಾಗಿ ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಪ್ಯಾಲೆಸ್ತೀನ್‌ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ.

ಇಸ್ರೇಲ್‌- ಪ್ಯಾಲೆಸ್ತೀನ್‌ ಸಂಘರ್ಷ : ಅಮೆರಿಕ ಮಧ್ಯಪ್ರವೇಶಕ್ಕೂ ಬಗೆಹರಿಯದ ಯಹೂದಿ ಅರಬ್ಬರ ಬಿಕ್ಕಟ್ಟು

 

Follow Us:
Download App:
  • android
  • ios