Asianet Suvarna News Asianet Suvarna News

ಪುಟ್ಟ ಕಂದನ ಜೀವ ಉಳಿಸಲು ತನ್ನದೇ ಬೋನ್‌ಮ್ಯಾರೋ ನೀಡಿದ ವೈದ್ಯ

ವೈದ್ಯರೊಬ್ಬರು ತಮ್ಮದೇ ದೇಹದ ಅಂಶವನ್ನು ರೋಗಿಯೊಬ್ಬರಿಗೆ ನೀಡಿ ಮಹಾದಾನಿ (Great Donor) ಎನಿಸಿದ್ದಾರೆ. ವೈದ್ಯನ ಈ ಮಹಾತ್ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. 

US cardiologist inspired millions by his Holy work donates bone marrow to save patients life akb
Author
First Published Oct 7, 2023, 11:59 AM IST

ಫ್ಲೋರಿಡಾ: ಬದುಕಿರುವ ವೇಳೆಯೇ ತಮ್ಮ ಸಂಬಂಧಿಗಳಿಗೆ ಆತ್ಮೀಯರಿಗೆ ಕಿಡ್ನಿ ದಾನ, ರಕ್ತದಾನ ಮಾಡುವುದನ್ನು ನೀವು ಕೇಳಿದ್ದೀರಿ ನೋಡಿರುತ್ತೀರಿ. ಸತ್ತ ನಂತರ ಹೃದಯ ಕಣ್ಣುಗಳನ್ನು ದಾನ ಮಾಡಿ ಅನೇಕರ ಬದುಕಿಗೆ ಬೆಳಕಾಗಿ ಸಾವಿನಲ್ಲೂ ಸಾರ್ಥಕತೆ ಕಂಡ ಹಲವರ ಕಾರ್ಯಗಳನ್ನು ನೀವು ಗಮನಿಸಿರುತ್ತೀರಿ. ಆದರೆ ವೈದ್ಯರೇ ರೋಗಿಯೊಬ್ಬನಿಗೆ ತನ್ನ ದೇಹದ ಅಂಶವೊಂದನ್ನು ನೀಡಿದ ಘಟನೆ ಎಲ್ಲಾದರೂ ಕೇಳಿದ್ದೀರಾ? ಬಹುಶಃ ಅಂತಹ ಘಟನೆ ಇದುವರೆಗೆ ನಡೆದಿರಲಿಲ್ಲವೆನಿಸುತ್ತದೆ. ಆದರೀಗ ವೈದ್ಯರೊಬ್ಬರು ತಮ್ಮದೇ ದೇಹದ ಅಂಶವನ್ನು ರೋಗಿಯೊಬ್ಬರಿಗೆ ನೀಡಿ ಮಹಾದಾನಿ (Great Donor) ಎನಿಸಿದ್ದಾರೆ. ವೈದ್ಯನ ಈ ಮಹಾತ್ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. 

ಅಮೆರಿಕಾದ ಮೂಲದ ಯುವ ವೈದ್ಯ ಹೃದಯತಜ್ಞ, ಮಕ್ಕಳತಜ್ಞ ಡಾ. ಅಲ್‌ಸಮರ್ ಎಂಬುವವರೇ ಹೀಗೆ ಪುಟ್ಟ ವಯಸ್ಸಿನ ತಮ್ಮ ರೋಗಿಯೊಬ್ಬರಿಗೆ ತಮ್ಮದೇ ಬೋನ್‌ಮ್ಯಾರೋ(ಆಸ್ಥಿಮಜ್ಜೆ ಅಂದರೆ ಮೂಳೆಯೊಳಗಿರು ಗಮ್‌ನಂತಹ ಅಂಶ) ವನ್ನು ನೀಡಿ ಜೀವ ಉಳಿಸಿದ ವೈದ್ಯ. ವೈದ್ಯರು ಚಿಕಿತ್ಸೆ ನೀಡಿ ಜೀವ ಉಳಿಸಿದ ಹಲವು ಘಟನೆಗಳನ್ನು ನಾವು ನೋಡಿದ್ದೇವೆ. ಆದರೆ ವೈದ್ಯರೊಬ್ಬರು ಹೀಗೆ ತಮ್ಮದೇ ದೇಹದ ಅಮೂಲ್ಯವೆನಿಸಿದ ಅಂಶವೊಂದನ್ನು ನೀಡಿ ಜೀವ ಉಳಿಸಿದಂತಹ ವೈದ್ಯಕೀಯ ಪ್ರಕರಣ ಇದೇ ಮೊದಲು.

31 ವರ್ಷ ಶಿಕ್ಷೆಗೊಳಗಾಗಿ ಜೈಲಲ್ಲಿರುವ ಇರಾನ್‌ ಮಹಿಳಾ ಹಕ್ಕುಗಳ ಹೋರಾಟಗಾರ್ತಿಗೆ ನೊಬೆಲ್

ಈ ಮಹಾನ್ ವೈದ್ಯ ಡಾ. ಅಲ್‌ಸಮರ್‌ ಅವರ ಈ ತ್ಯಾಗವನ್ನು ಗುಡ್‌ನ್ಯೂಸ್ ಮೂವ್‌ಮೆಂಟ್ ಎಂಬ ಇನ್ಸ್ಟಾಗ್ರಾಮ್ ಪೇಜ್ ಹಂಚಿಕೊಂಡಿದ್ದು, ವೈದ್ಯನ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಅಡ್ವೆಂಟ್ ಹೆಲ್ತ್‌ ಆಸ್ಪತ್ರೆಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿ ಸ್ಪೆಷಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಡಾ. ಅಲಿ ಅಲ್ಸಮಾರಾ ಅವರಿಗೆ, ತಾವು ಬೋನ್‌ಮ್ಯಾರೋ ನೀಡಿದರೆ ಮಗುವೊಂದು ಬದುಕುಳಿಯಲು ಸಾಧ್ಯ ಎಂದು ಕರೆಯೊಂದು ಬಂದಾಗ ಅವರು ಒಂದು ಕ್ಷಣವೂ ಮರುಯೋಚನೆ ಮಾಡದೇ ಮಗುವೊಂದರ ಜೀವ ಉಳಿಸುವ ಮಹತ್ಕಾರ್ಯಕ್ಕೆ ಸಿದ್ಧರಾದರು. 

ಒಂದೇ ದಿನ ಆರು ಬಾರಿ ಹೃದಯಾಘಾತವಾದ ವಿದ್ಯಾರ್ಥಿಯ ಬದುಕಿಸಿದ ವೈದ್ಯರು

ಏಕೆ ಇಷ್ಟೊಂದು ಶ್ಲಾಘನೆ

ಬೋನ್‌ಮ್ಯಾರೋ ದಾನ ನೀಡುವುದು ಅಷ್ಟು ಸುಲಭವಲ್ಲ, ಏಕೆಂದರೆ ದಾನ ನೀಡುವವರಿಗೂ ಇದನ್ನು ತೆಗೆಯುವ ವೇಳೆ ತೀವ್ರವಾದ ನೋವಾಗುವುದು, ಮೂಳೆಯ ಒಳಗಿರುವ ಈ ಸ್ಪಂಜ್‌ನಂತಹ ಅಂಶವನ್ನು ಶಸ್ತ್ರಚಿಕಿತ್ಸಾ ವಿಧಾನದ ಮೂಲಕವೇ ಅಂದರೆ ಸೂಜಿಯನ್ನು ಬಳಸುವ ಮೂಲಕ ಪೆಲ್ವಿನ್‌ ಮೂಳೆಯಿಂದ ಈ ಅಂಶವನ್ನು ತೆಗೆಯುತ್ತಾರೆ.  ಹೀಗಾಗಿ ತನಗೆ ಸಂಬಂಧವೇ ಇಲ್ಲದ ಒಂದು ಮಗುವಿನ ಉಳಿವಿಗಾಗಿ ದಾನ ನೀಡಲು ಮುಂದಾದ ಈ ವೈದ್ಯನ ಕಾರ್ಯಕ್ಕೆ ಈಗ ಭಾರೀ ಶ್ಲಾಘನೆ ವ್ಯಕ್ತವಾಗ್ತಿದೆ. ಮಗುವಿನ ಉಳಿಸಲು ಬೋನ್‌ಮ್ಯಾರೋ ದಾನ ಮಾಡಿರುವುದರಿಂದ ತನಗೆ ಬಹಳ ಸಮಾಧಾನವಾಗಿದೆ ಎಂದು ವೈದ್ಯ ಡಾ ಅಲ್‌ಸಮರ್ ಹೇಳಿದ್ದಾರೆ.  ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಗೆಳೆಯನೋರ್ವನನ್ನು ವೈದ್ಯರು ರಕ್ಷಿಸಿದ ಘಟನೆಯೊಂದು ನಾನು ಈ ರೀತಿ ಅಸ್ಥಿಮಜ್ಜೆ ದಾನ ನೀಡಲು ಪ್ರೇರಣೆಯಾಯ್ತು ಎಂದು ಹೇಳಿಕೊಂಡಿದ್ದಾರೆ. 

ಮೂಳೆ ಮಜ್ಜೆ ಅಥವಾ ಅಸ್ಥಿಮಜ್ಜೆ ಮೂಳೆಗಳ ಮಧ್ಯದಲ್ಲಿ ಕಂಡುಬರುವ ಸ್ಪಂಜಿನಂಥ ವಸ್ತುವಾಗಿದೆ. ಇದು ಮೂಳೆ ಮಜ್ಜೆಯ ಕಾಂಡಕೋಶಗಳು ಮತ್ತು ಇತರ ವಸ್ತುಗಳನ್ನು ತಯಾರಿಸುತ್ತದೆ, ಇದು ರಕ್ತ ಕಣಗಳನ್ನು ಉತ್ಪಾದಿಸುತ್ತದೆ. ಮೂಳೆ ಮಜ್ಜೆಯಿಂದ ಮಾಡಲ್ಪಟ್ಟ ಪ್ರತಿಯೊಂದು ರೀತಿಯ ರಕ್ತ ಕಣವು ಒಂದು ಪ್ರಮುಖ ಕೆಲಸವನ್ನು ಹೊಂದಿದೆ. ಇದರಿಂದ ತಯಾರಾದ ಕೆಂಪು ರಕ್ತ ಕಣಗಳು ದೇಹದ ಅಂಗಾಂಶಗಳಿಗೆ ಆಮ್ಲಜನಕವನ್ನು ಸಾಗಿಸುತ್ತವೆ.
 

 

Follow Us:
Download App:
  • android
  • ios