ಮೊಮ್ಮಗಳ ಪ್ರಾಯದ ಬಾಲಕಿ ಜೊತೆ ಮದ್ವೆ: 70ರ ಅಜ್ಜನ ಆಸೆಗೆ ತಣ್ಣೀರೆರಚಿದ ಪೊಲೀಸರು
ಅಜ್ಜನ ಆಸೆ ನೋಡಿ... ತನ್ನ ಮೊಮ್ಮಗಳ ಪ್ರಾಯದ ಬಾಲಕಿಯನ್ನು ಮದ್ವೆಯಾಗಿ ಸುಖ ಜೀವನದ ಕನಸು ಕಾಣುತ್ತಿದ್ದ ಅಜ್ಜನೋರ್ವನ್ನು ಪಾಕಿಸ್ತಾನ ಪೊಲೀಸರು ಕಂಬಿ ಹಿಂದೆ ಕಳುಹಿಸಿದ್ದಾರೆ.
ಪಖ್ತುನ್ಖ್ವಾ: ಅಜ್ಜನ ಆಸೆ ನೋಡಿ... ತನ್ನ ಮೊಮ್ಮಗಳ ಪ್ರಾಯದ ಬಾಲಕಿಯನ್ನು ಮದ್ವೆಯಾಗಿ ಸುಖ ಜೀವನದ ಕನಸು ಕಾಣುತ್ತಿದ್ದ ಅಜ್ಜನೋರ್ವನ್ನು ಪಾಕಿಸ್ತಾನ ಪೊಲೀಸರು ಕಂಬಿ ಹಿಂದೆ ಕಳುಹಿಸಿದ್ದಾರೆ. ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ವರದಿಯ ಪ್ರಕಾರ ಅಪ್ರಾಪ್ತ ಬಾಲಕಿಯನ್ನು ಆಕೆಯ ತಂದೆ ವೃದ್ಧನೊಂದಿಗೆ ಮದುವೆ ಮಾಡಿಸಿದ್ದಾನೆ. ಈ ವಿಚಾರ ಪೊಲೀಸರಿಗೆ ತಿಳಿದಿದ್ದು, ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಆಕೆಯ ಅಪ್ಪ ಹಾಗೂ ಆಕೆಯನ್ನು ಮದುವೆಯಾದ ಅಜ್ಜನನ್ನು ಬಂಧಿಸಿದ್ದಾರೆ. ಇದರ ಜೊತೆಗೆ ಮದುವೆಗೆ ಹಾಜರಾಗಿದ್ದ ಕೆಲವರನ್ನು ಕೂಡ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇತ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪಾಕಿಸ್ತಾನದಲ್ಲಿ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಬಡತನ ತಾಂಡವವಾಡುತ್ತಿದೆ. ಹೀಗಾಗಿ ಬಡ ಜನರು ದುಡ್ಡಿನ ಆಸೆಗಾಗಿ ತಮ್ಮ ಎಳೆ ಪ್ರಾಯದ ಮಕ್ಕಳನ್ನು ಶ್ರೀಮಂತ ವೃದ್ಧರಿಗೆ ವಯಸ್ಕರಿಗೆ ಮದುವೆ ಮಾಡುತ್ತಿದ್ದಾರೆ. ಇದು ಅಲ್ಲಿನ ಎಳೆ ಪ್ರಾಯದ ಹೆಣ್ಣು ಮಕ್ಕಳನ್ನು ಅಪಾಯಕ್ಕೆ ದೂಡುತ್ತಿದೆ. ಇಂತಹ ಘಟನೆಗಳು ಕಳವಳಕಾರಿಯಾಗಿದ್ದು, ಬಾಲ್ಯ ವಿವಾಹದಂತಹ ಸರಣಿ ಸವಾಲುಗಳನ್ನು ಎತ್ತಿ ತೋರಿಸುತ್ತಿದೆ. ಬಡತನದ ಕಾರಣದಿಂದಾಗಿ ಈಗಾಗಲೇ ದೇಶದಲ್ಲಿ ಅಪೌಷ್ಠಿಕತೆ ಕಾಡುತ್ತಿದೆ. ಹೀಗಿರುವಾಗ ಇಂತಹ ಘಟನೆಗಳು ಆಗಷ್ಟೇ ತಾರುಣ್ಯ ಕಾಲಿರಿಸುತ್ತಿರುವ ಪುಟ್ಟ ಮಕ್ಕಳ ರಕ್ಷಣೆಯ ಬಗ್ಗೆ ಕಳವಳವುಂಟು ಮಾಡುತ್ತಿದೆ.
ಭಾರತದ ಉದ್ಯೋಗಿಗಳಷ್ಟು ಕಷ್ಟಪಟ್ಟು ಪಾಕಿಸ್ತಾನಿಯರು ದುಡಿಯೋದಿಲ್ಲ ಎಂದ ಪಾಕ್ ಪತ್ರಕರ್ತ!
ಇದರ ಜೊತೆಗೆ ಇದು ಪಾಕಿಸ್ತಾನದ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವುದಲ್ಲದೆ ದೇಶದ ಯುವತಿಯರ ಯೋಗಕ್ಷೇಮಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತಿದೆ. ಪಾಕಿಸ್ತಾನದಲ್ಲಿ 1929ರ ವಿವಾಹ ಕಾಯ್ದೆ ಪ್ರಕಾರ ಹೆಣ್ಣು ಮಕ್ಕಳ ವಿವಾಹಕ್ಕೆ ಕನಿಷ್ಠ ವಯಸ್ಸು 16 ಹಾಗೂ ಹುಡುಗರ ವಿವಾಹಕ್ಕೆ ಕನಿಷ್ಠ 19 ವರ್ಷ ತುಂಬಿರಬೇಕು. ಪಾಕಿಸ್ಥಾನದಲ್ಲಿ ಇಂತಹ ವಯಸ್ಸಿನ ಅಂತರದ ಮದ್ವೆ ಇದೇ ಮೊದಲಲ್ಲ, ಈ ಹಿಂದೆ ಹರೆಯಕ್ಕೆ ಕಾಲಿರಿಸಿದ ನವ ತರುಣಿಯರು ತಮ್ಮ ಅಪ್ಪನ ವಯಸ್ಸಿನವರನ್ನು ಮದ್ವೆಯಾದ ಉದಾಹರಣೆಗಳಿವೆ.
ಪಾಕಿಸ್ತಾನದಲ್ಲೂ ಯೋಗಕ್ಕೆ ಈಗ ಸಿಕ್ಕಿತು ಅಧಿಕೃತ ಮಾನ್ಯತೆ