ಭಾರತದ ಉದ್ಯೋಗಿಗಳಷ್ಟು ಕಷ್ಟಪಟ್ಟು ಪಾಕಿಸ್ತಾನಿಯರು ದುಡಿಯೋದಿಲ್ಲ ಎಂದ ಪಾಕ್‌ ಪತ್ರಕರ್ತ!


ಪಾಕಿಸ್ತಾನದ ಹಿರಿಯ ಪತ್ರಕರ್ತ ನಜಮ್ ಸೇಥಿ ಇತ್ತೀಚೆಗೆ, ಅರಬ್‌ ದೇಶಗಳು ಪಾಕಿಸ್ತಾನದ ವರ್ಕರ್‌ಗಿಂತ ಭಾರತದ ವರ್ಕರ್‌ಗಳಿಗೆ ಹೆಚ್ಚಿನ ಆದ್ಯತೆ ನೀಡೋದು ಯಾಕೆ ಅನ್ನೋದನ್ನ ಬಹಿರಂಗಪಡಿಸಿದ್ದಾರೆ.

Pakistan journalist Najam Sethi reveals why Arabs prefer Indian workers san

ನವದೆಹಲಿ (ಮೇ.6): ಪಾಕಿಸ್ತಾನದ ಪ್ರಮುಖ ಸಮಾ ಟಿವಿಯಲ್ಲಿ ಇತ್ತೀಚೆಗೆ ನಡೆದ ಚರ್ಚೆಯ ವೇಳೆ ಪಾಕಿಸ್ತಾನದ ಹಿರಿಯ ಪತ್ರಕರ್ತ ನಜಮ್ ಸೇಥಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಕೆಲಸ ಮಾಡುವ ಪಾಕಿಸ್ತಾನಿಗಳ ವಿಚಾರವಾಗಿ ಪ್ರಮುಖ ಮಾಹಿತಿ ನೀಡಿದರು. ಯುಎಇ ಉದ್ಯೋಗ ಮಾರುಕಟ್ಟೆಯಲ್ಲಿ ಪಾಕಿಸ್ತಾನಿಗಳು ಎದುರಿಸುತ್ತಿರುವ ಸವಾಲುಗಳು ಅರಬ್‌ ದೇಶಗಳ ಉದ್ಯೋಗದಾತರು ಭಾರತೀಯ ಉದ್ಯೋಗಿಗಳಿಗೆ ಯಾಕೆ ಆದ್ಯತೆ ನೀಡುತ್ತಾರೆ ಎನ್ನುವ ವಿಚಾರವನ್ನು ಬಹಳ ಮುಕ್ತವಾಗ ಹಂಚಿಕೊಂಡಿದ್ದಾರೆ. ನಜಮ್‌ ಸೇಥಿ ಅವರ ಮಾತಿನಲ್ಲಿ ಪಾಕಿಸ್ತಾನದ ಉದ್ಯೋಗಿಗಳ ಬಹುಮುಖ ಸಮಸ್ಯೆಗಳನ್ನು ಬಿಚ್ಚಿಟ್ಟಿವೆ. ದುಬೈನಲ್ಲಿ ಪಾಕಿಸ್ತಾನಿ ಕಾರ್ಮಿಕರ ಕೆಲಸದ ನೀತಿ, ಧಾರ್ಮಿಕ ಆಚರಣೆಗಳು ಮತ್ತು ಒಟ್ಟಾರೆ ನಡವಳಿಕೆಯ ಬಗ್ಗೆ ಅವರು ಮಾತನಾಡಿದ್ದಾರೆ. ಸೇಥಿ ಸೇ ಸವಾಲ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರಿಗೆ ಇತ್ತೀಚಿಗೆ ಯುಎಇ, ಪಾಕಿಸ್ತಾನದ ಪ್ರಜೆಗಳಿಗೆ ಉದ್ಯೋಗ ವೀಸಾ ಹಾಗೂ ಟ್ರಾವೆಲ್‌ ವೀಸಾಗಳನ್ನು ನೀಡುವ ನಿರ್ಬಂಧದ ಬಗ್ಗೆ ಪ್ರಶ್ನೆ ಕೇಳಲಾಯಿತು. ಭಾರತಕ್ಕೆ ಇಂಥ ಯಾವುದೇ ನಿರ್ಬಂಧಗಳಿಲ್ಲ. ಇದಕ್ಕೆ ಏನು ಕಾರಣವಿರಬಹುದು ಎಂದು ಪ್ರಶ್ನಿಸಲಾಗಿತ್ತು.

ಇದಕ್ಕೆ ಪ್ರತಿಕ್ರಿಯೆಯಾಗಿ ನಜಮ್‌ ಸೇಥಿ, ರಾಜಕೀಯ ವಿಚಾರಗಳ ವಿರುದ್ಧ ಯುಎಇಯ ಕಟ್ಟುನಿಟ್ಟಿನ ನಿಲುವು ಹಾಗೂ ಕೆಲವು ಪಾಕಿಸ್ತಾನಿಗಳು ಬೀದಿ ಬೀದಿಗಳಲ್ಲಿ ಪ್ರತಿಟಬೆ ಮಾಡುವ ವಿಚಾರಗಳನ್ನು ಪ್ರಸ್ತಾಪ ಮಾಡಿದರು. ಇತ್ತೀಚೆಗೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ಗೆ ಬೆಂಬಲವಾಗಿ ಯುಎಇಯಲ್ಲಿ ಪಾಕಿಸ್ತಾನದ ಪ್ರಜರಗಳು ಪ್ರತಿಭಟನೆ ಮಾಡಿದ್ದರು.

ನಾನು ಫೇಸ್‌ಬುಕ್‌ ನೋಡುತ್ತಿದ್ದೆ. ದುಬೈನಲ್ಲಿ ಕೆಲಸ ಮಾಡುತ್ತಿರುವ ಪಾಕಿಸ್ತಾನಿಗಳಿಗೆ ಯುಎಇ ಅಧಿಕಾರಿಯೊಬ್ಬರು ಸಣ್ಣ ಮಾರ್ಗದರ್ಶನ ನೀಡುತ್ತಿದ್ದರು. ದುಬೈನಲ್ಲಿ ಪಾಕಿಸ್ತಾನಿಗಳ ಸಮಸ್ಯೆ ಏನು ಎಂದು ಅಧಿಕಾರಿ ಕೇಳಿದರು. ನಮ್ಮ ದೇಶವು ರಾಜಕೀಯ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಮತ್ತು ಇದರಿಂದ ಆಗುವ ಯಾವುದೇ ಅಡ್ಡಿಯನ್ನೂ ಬಯಸೋದಿಲ್ಲ ಎಂದು ಹೇಳಿದ್ದರು. ಯುಎಇಯಲ್ಲಿ ಈ ರಾಜಕೀಯಕ್ಕೆ ಅವಕಾಶವಿಲ್ಲ. ಹೀಗೇ ಮುಂದುವರಿದಲ್ಲಿ ಪಾಕಿಸ್ತಾನಿಯರಿಗೆ ವೀಸಾ ನಿಯಮಗಳನ್ನು ಇನ್ನಷ್ಟು ಬಿಗಿ ಮಾಡಲಿದ್ದೇವೆ. ಪಾಕಿಸ್ತಾನಿಗಳು ದುಬೈಅನ್ನು ಲಂಡನ್‌ ಎಂದುಕೊಂಡಿದ್ದಾರೆ. ಬೇಕೆಂದಾಗಲೆಲ್ಲಾ ಬೀದಿಯಲ್ಲಿ ಪ್ರತಿಭಟನೆ ಮಾಡೋದು ನಮ್ಮಲ್ಲಿ ನಡೆಯೋದಿಲ್ಲ. ಇಂಥ ವರ್ತನೆಗಳನ್ನು ದುಬೈ ಸಹಿಸೋದೂ ಇಲ್ಲ ಎಂದಿದ್ದರು. ದುಬೈನಲ್ಲಿ ಯಾವುದೇ ಪ್ರಜಾಪ್ರಭುತ್ವವಾಗಲಿ, ವಾಕ್‌ ಸ್ವಾತಂತ್ರ್ಯವಾಗಲಿ ಇಲ್ಲ. ಬಿಗಿ ನಿಯಮಗಳ ಮೂಲಕವೇ ಆ ದೇಶ ನಡೆಯುತ್ತದೆ. ಭಾರತ ಹಾಗೂ ಪಾಕಿಸ್ತಾನಿಗಳ ಫೈಟ್‌ ನಮ್ಮ ದೇಶದಲ್ಲಿ ನಡೆಯಬಾರದು ಎಂದೇ ದುಬೈ ಬಯಸುತ್ತದೆ ಎಂದು ಸೇಥಿ ತಿಳಿಸಿದ್ದಾರೆ.

ಇದಲ್ಲದೆ, ಪಾಕಿಸ್ತಾನಿ ಹಾಗೂ ಭಾರತದ ಉದ್ಯೋಗಿಗಳ ನಡುವೆ ಇರುವ ವ್ಯತಿರಿಕ್ತ ಕೆಲಸದ ನೀತಿಯನ್ನೂ ಅವರು ಎತ್ತಿ ತೋರಿಸಿದ್ದಾರೆ. ಪಾಕಿಸ್ತಾನಿಗರು ಶ್ರಮ ವಹಿಸಿ ಕೆಲಸ ಮಾಡುವ ವ್ಯಕ್ತಿಗಳಲ್ಲ. ಕೆಲಸದ ಸಮಯದಲ್ಲಿ ಧಾರ್ಮುಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹೆಚ್ಚು ಒಲವು ತೋರುತ್ತಾರೆ.  ಈ ಗ್ರಹಿಕೆಯು ಹೆಚ್ಚು ಸಮರ್ಪಿತ ಮತ್ತು ದಕ್ಷ ಎಂದು ಗ್ರಹಿಸಲ್ಪಟ್ಟಿರುವ ಭಾರತೀಯ ಮತ್ತು ಶ್ರೀಲಂಕಾದ ಕಾರ್ಮಿಕರಿಗೆ ಆದ್ಯತೆ ನೀಡಲು ಸಹಾಯ ಮಾಡಿದೆ ಎಂದಿದ್ದಾರೆ.

ಭಾರತೀಯರು ಹಾಗೂ ಪಾಕಿಸ್ತಾನಿಯರ ನಡುವಿನ ವ್ಯತ್ಯಾಸವನ್ನು ನಾನು ತಿಳಿಸ್ತೇನೆ. ಇದು ನಾನು ಹೇಳುತ್ತಿರೋದಲ್ಲ. ದುಬೈನ ಆಡಳಿತಗಾರರೇ ಹೇಳುವ ಮಾತುಗಳು. ಭಾರತೀಯರಂತೆ ಕಷ್ಟಪಟ್ಟು ಪಾಕಿಸ್ತಾನಿಯರು ಕೆಲಸ ಮಾಡೋದಿಲ್ಲ. ಪಾಕಿಸ್ತಾನಿಯರು ಧಾರ್ಮಿಕರು. ಕೆಲಸದ ಸ್ಥಳದಲ್ಲೂ ಧಾರ್ಮಿಕತೆಯನ್ನು ಮುಂದೆ ತರುತ್ತಾರೆ. ಭಾರತೀಯರಿಗೆ ಧರ್ಮ ಎಂದಿಗೂ ಮುಂದೆ ಬಂದಿಲ್ಲ.  ಭಾರತೀಯರು ಮತ್ತು ಶ್ರೀಲಂಕಾದ ಕಾರ್ಮಿಕರ ತರಬೇತಿಯು ಪಾಕಿಸ್ತಾನಿಗಳಿಗಿಂತ ಉತ್ತಮವಾಗಿದೆ ಮತ್ತು ಅವರು ಎಂದಿಗೂ ಜಗಳವಾಡೋದಿಲ್ಲ. ಉತ್ತಮವಾಗಿ ಕೆಲಸ ಮಾಡುತ್ತಾರೆ. ಪಾಕಿಸ್ತಾನಿಗಳು ಇದರಲ್ಲಿಯೇ ಹಿನ್ನಡೆ ಕಾಣುತ್ತಾರೆ. ಇದೇ ಪಾಕಿಸ್ತಾನದ ಸಮಸ್ಯೆ ಆಗಿದೆ. ದುಬೈನಲ್ಲಿ ನಮ್ಮ ವರ್ಕರ್ಸ್‌ಗಳು ಹೆಚ್ಚಿರಬೇಕು ಎಂದು ಬಯಸುತ್ತೇವೆ. ಆದರೆ, ಅಲ್ಲಿ ಹೋದ ಬಳಿಕ ಇವರು ಜಗಳವಾಡುತತಾರೆ. ತಮಗೆ ಕೊಟ್ಟಿರುವ ಕೆಲಸವನ್ನೂ ಮುಗಿಸೋದಿಲ್ಲ ಎಂದು ಹೇಳಿದ್ದಾರೆ.

ಪಾಕಿಸ್ತಾನಿ ಸೆಕ್ಯುರಿಟಿ ಗಾರ್ಡ್ ತನ್ನ ಕೆಲಸದ ಕರ್ತವ್ಯಗಳ ಮೇಲೆ ಧಾರ್ಮಿಕ ಕಟ್ಟುಪಾಡುಗಳಿಗೆ ಆದ್ಯತೆ ನೀಡುವುದರ ಕುರಿತು ಸೇಥಿ ಹಂಚಿಕೊಂಡ ಉಪಾಖ್ಯಾನವು ದುಬೈನಲ್ಲಿ ಪಾಕಿಸ್ತಾನಿ ಕಾರ್ಮಿಕರಲ್ಲಿ ವೃತ್ತಿಪರತೆ ಮತ್ತು ಬದ್ಧತೆಯ ವಿಶಾಲ ಸಮಸ್ಯೆಯನ್ನು ಒತ್ತಿಹೇಳುತ್ತದೆ.

ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ನಿಜ: ಸಚಿವ ಪರಮೇಶ್ವರ್‌

ಒಂದು ಕಂಪನಿಯ ಎಂಡಿ ನನಗೆ ಈ ವಿಚಾರ ತಿಳಿಸಿದ್ದ. ಆತನ ಸೆಕ್ಯುರಿಟಿ ಗಾರ್ಡ್‌ ಪಾಕಿಸ್ತಾನಿ. ನಾನು ಕೂಡ ಮುಸ್ಲಿಂ. ಆದರೆ, ನಾನು ಬಂದಾಗಲೆಲ್ಲಾ ಗೇಟ್ ಯಾವಾಗಲೂ ಮುಚ್ಚಿರುತ್ತದೆ ಮತ್ತು ನಾನು ಗೇಟ್‌ಗೆ ಬಂದಾಗ ಹಾರ್ನ್‌ ಮಾಡಬೇಕಾಗುತ್ತದೆ. ಆಮೇಲೆ ಗೊತ್ತಾಗಿದ್ದು ಏನೆಂದರೆ, ಆತ ದಿನಕ್ಕೆ ಐದು ಬಾರಿ ನಮಾಜ್‌ ಮಾಡುತ್ತಿದ್ದ. ರಾತ್ರಿಯ ವೇಳೆ ಕೆಲಸದಲ್ಲಿಯೇ ಇರುತ್ತಿರಲಿಲ್ಲ. ಹಾಗಾಗಿ ಪಾಕಿಸ್ತಾನದ ಸೆಕ್ಯುರಿಟಿ ಗಾರ್ಡ್‌ ತನ್ನ ಕೆಲಸ ಸರಿಯಾಗಿ ಮಾಡುತ್ತಿಲ್ಲ ಎಂದಾದಲ್ಲಿ ಭಾರತ ಹಾಗೂ ಶ್ರೀಲಂಕಾದ ಸೆಕ್ಯುರಿಟಿ ಗಾರ್ಡ್‌ಗಳನ್ನು ನಿಯೋಜನೆ ಮಾಡಲು ತೀರ್ಮಾನ ಮಾಡಿದ್ದ ಎಂದಿದ್ದಾರೆ.

Siddaramaiah: ಪಾಕಿಸ್ತಾನ್‌ ಜಿಂದಾಬಾದ್ ಎನ್ನುವವರನ್ನು ಬಿಡುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ

 

Latest Videos
Follow Us:
Download App:
  • android
  • ios