ಹಿಂದೂಗಳ ತಿರುಪ್ಪರಂಕುಂಡ್ರಂ ಬೆಟ್ಟದಲ್ಲಿ ಕಾರ್ತಿಕ ದೀಪ ಬೆಳಗಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಈ ಅನುಮತಿಯಿಂದ ಜೊಸೆಫ್ ಸರ್ಕಾರ ಕೆರಳಿದೆ. ಸುಪ್ರೀಂ ಕೋರ್ಟ್‌ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಕೆ ಮಾಡಿದೆ.

ನವದೆಹಲಿ (ನ.22) ತಮಿಳುನಾಡಿನ ತಿರುಪ್ಪರಂಕುಂಡ್ರಂ ಬೆಟ್ಟದ ಮೇಲಿನ ವಿವಾದಿತ ದೀಪಸ್ತಂಭದಲ್ಲಿ ದೀಪ ಬೆಳಗಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಆದರೆ ಸುಪ್ರೀಂ ಕೋರ್ಟ್ ಮಧ್ಯಂತರ ಅನುಮತಿಯಿಂದ ತಮಿಳುನಾಡು ಸಿಎಂ ವಿಜಯ್ ಜೊಸೆಫ್ ನೇತೃತ್ವದ ಸರ್ಕಾರ ಕೆರಳಿದೆ. ಸುಪ್ರೀಂ ಆದೇಶವನ್ನು ಮರುಪರಿಶೀಲಿಸಲು ಅರ್ಜಿ ಸಲ್ಲಿಸಿದೆ. ತಮಿಳುಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ (HR&CE) ಮೂಲಕ ಮರುಪರಿಶೀಲನಾ ಅರ್ಜಿ ಸಲ್ಲಿಸಿದೆ ಎಂದು ವರದಿಯಾಗಿದೆ.

ಸುಪ್ರೀಂ ಕೋರ್ಟ್ ಆದೇಶವೇನು

ಕಾರ್ತಿಕ ದಿಪೋತ್ಸವದ ದಿನ ಅಂದರೆ ನವೆಂಬರ್ 24ರಂದು ದೀಪ ಬೆಳಗಳು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಹಿಂದಿನ ಎಂಕೆ ಸ್ಟಾಲಿನ್ ಸರ್ಕಾರ ದೀಪ ಬೆಳಗಳು ನಿರ್ಬಂಧಿಸಿದ ಕಾರಣ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಈ ಕುರಿತು ಮಧ್ಯಂತರ ಆದೇಶ ನೀಡಿದ ಸುಪ್ರೀಂ ಕೋರ್ಟ್ ಕೆಲ ಖಡಕ್ ಸೂಚನೆ ನೀಡಿದೆ. ಒಂದು ಬಾರಿ ಮಾತ್ರ ದೀಪ ಬೆಳಗಳು ಅನುಮತಿ ನೀಡಲಾಗಿದೆ. ಇದು ಈ ವಿವಾದಿತ ಸ್ಥಳದ ಹಕ್ಕು ಅಥವಾ ಒಡೆತನವನ್ನು ಸೂಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ದೀಪ ಬೆಳಗಲು ದೇವಸ್ಥಾನದ ಆಡಳಿತ ಮಂಡಳಿ, ನಿಯೋಜಿತ ಸರ್ಕಾರಿ ಅಧಿಕಾರಿಗಳು ಮಾತ್ರ ಪ್ರವೇಶಕ್ಕೆ ಅವಕಾಶವಿದೆ. ಸಾರ್ವಜನಿಕ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಮೆರವಣಿಗೆ, ಜನಸಂದಣಿ ಸೇರುವುದು, ಘೋಷಣೆ ಕೂಗಲು ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ತಮಿಳುನಾಡು ಸರ್ಕಾರಕ್ಕೆ ಸೂಚನೆ

ಭದ್ರತೆ ಕುರಿತು ತಮಿಳುನಾಡು ಸರ್ಕಾರಕ್ಕೆ ಸ್ಪಷ್ಟ ಸೂಚನೆ ನೀಡಿದೆ. ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲು ಸೂಚಿಸಿದೆ. ಇದೇ ವೇಳೆ ಅಗತ್ಯವಿದ್ದರೆ CISF ಭದ್ರತಾ ಪಡೆ ನಿಯೋಜಿಸಲು ಸೂಚಿಸಿದೆ. ಮಧುರೈ ಜಿಲ್ಲಾಧಿಕಾರಿಯನ್ನು ನೊಡೆಲ್ ಅಧಿಕಾರಿಯಾಗಿ ನೇಮಿಸಿ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ತಮಿಳುನಾಡು ಸರ್ಕಾರಕ್ಕೆ ಸೂಚಿಸಿದೆ.

ಏನಿದು ವಿವಾದ

ತಿರುಪ್ಪರಂಕುಂಡ್ರಂ ಬೆಟ್ಟ ಹಾಗೂ ಕೆಳಭಾಗದಲ್ಲಿರುವ ಉಚ್ಚಿಪಿಳ್ಳೈಯಾರ್ ದೇವಸ್ಥಾನ ಹಿಂದೂಗಳ ಅಂತ್ಯ ಪವಿತ್ರ ಕ್ಷೇತ್ರ. ಆದರೆ ಇಸ್ಲಾಂ ಆಕ್ರಮಣದ ಬಳಿಕ ಬೆಟ್ಟದ ಮೇಲೆ ಹಜರತ್ ಸುಲ್ತಾನ್ ಸಿಕಂದರ್ ಬಾದುಷಾ ಔಲಿಯಾ ದರ್ಗಾ ನಿರ್ಮಾಣ ಮಾಡಲಾಗಿದೆ. ಈ ದರ್ಗಾದಿಂದ 50 ಮೀಟರ್ ದೂರದಲ್ಲಿ ಕಾರ್ತಿಕ ದೀಪ ಬೆಳಗುವ ದೀಪಸ್ಥಂಬವಿದೆ. ದರ್ಗಾ ಸುತ್ತ ಮತ್ತಲಿನ ಪ್ರದೇಶ ತಮಗೆ ಸೇರಿದ್ದ ಎಂದು ಮುಸ್ಲಿಂ ಸಮುದಾಯ ಪಟ್ಟು ಹಿಡಿದರೆ, ತಿರುಪ್ಪರಂಕುಂಡ್ರಂ ಬೆಟ್ಟದಲ್ಲಿ ಶತ ಶತಮಾನಗಳಿಂದ ಬಂದಿರುವ ಸಂಪ್ರದಾಯ ಆಚರಿಸಲು ಅವಕಾಶ ನೀಡಬೇಕು ಎಂದು ಭಕ್ತರು ಮನವಿ ಮಾಡಿದ್ದರು.