ತನ್ನ ಮಾಲೀಕನ ಹಾವಭಾವದಲ್ಲಿ ಸ್ವಲ್ಪ ಬದಲಾವಣೆ ಆದರೂ  ಶ್ವಾನಕ್ಕೆ ಗೊತ್ತಾಗುತ್ತೆ ತನ್ನ ಮಾಲೀಕನಿಗೇನೋ ಆಗಿದೆ ಎಂಬುದು. ಅದೇ ರೀತಿ ಇಲ್ಲೊಂದು ಕಡೆ ಇಂತಹ ಬುದ್ಧಿವಂತ ಶ್ವಾನವೊಂದರ ವೀಡಿಯೋವೊಂದು ವೈರಲ್ ಆಗಿದೆ. 

ಸಾಕು ಪ್ರಾಣಿಗಳಿಗೆ ಬಾಯೊಂದು ಬರುವುದಿಲ್ಲ ಎಂಬುದು ಬಿಟ್ಟರೇ ಎಲ್ಲವೂ ಅರ್ಥವಾಗುತ್ತದೆ. ಅವುಗಳ ಕೆಲವೊಂದು ವರ್ತನೆಯೇ ಅದಕ್ಕೆ ಸಾಕ್ಷಿ, ಅದರಲ್ಲೂ ಶ್ವಾನಗಳು ಮನುಷ್ಯರನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಒಂದು ಕೈ ಮೇಲೆಯೇ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳ ಬುದ್ಧಿವಂತಿಕೆಗೆ ಸಂಬಂಧಿಸಿದ ಸಾಕಷ್ಟು ವೀಡಿಯೋಗಳು ವೈರಲ್ ಆಗಿವೆ. ನೀವು ಇದನ್ನು ಗಮನಿಸಿರಬಹುದು. ಇನ್ನು ಸಾಕುಪ್ರಾಣಿ ಎನಿಸಿದ ಶ್ವಾನದ ಬಗ್ಗೆ ಹೇಳೋದೇ ಬೇಡ ತನ್ನ ಮಾಲೀಕನ ಹಾವಭಾವದಲ್ಲಿ ಸ್ವಲ್ಪ ಬದಲಾವಣೆ ಆದರೂ ಈ ಶ್ವಾನಕ್ಕೆ ಆಗಲೇ ಗೊತ್ತಾಗುತ್ತೆ ತನ್ನ ಮಾಲೀಕನಿಗೇನೋ ಆಗಿದೆ ಎಂಬುದು. ಅದೇ ರೀತಿ ಇಲ್ಲೊಂದು ಕಡೆ ಇಂತಹ ಬುದ್ಧಿವಂತ ಶ್ವಾನವೊಂದರ ವೀಡಿಯೋವೊಂದು ವೈರಲ್ ಆಗಿದೆ. 

ವೀಡಿಯೋದಲ್ಲಿ ಕಾಣಿಸುವಂತೆ ಶಾಪ್‌ವೊಂದರಲ್ಲಿ ಈ ಶ್ವಾನ ಹಾಗೂ ಬೆಕ್ಕು ಇದ್ದು, ಬೆಕ್ಕು ಶಾಪ್‌ನ ಹೊರಗೆ ಪೋಷಕರೊಂದಿಗೆ ಇರುವ ಮಗುವಿನೊಂದಿಗೆ ಆಟವಾಡುತ್ತಿರುತ್ತದೆ. ಇದನ್ನು ಗಮನಿಸಿದ ಶ್ವಾನದ ಮಾಲೀಕ ಹೊರಗೆ ಹೋಗಿ ಬೆಕ್ಕನ್ನು ಕರೆದು ತರುವಂತೆ ಶ್ವಾನಕ್ಕೆ ಹೇಳುತ್ತಾರೆ. ಅದರಂತೆ ಶ್ವಾನ ಸೀದಾ ಹೊರಗೆ ಹೋಗಿ ಬೆಕ್ಕನ್ನು ನೋವಾಗದಂತೆ ಬಾಯಲ್ಲಿ ಕಚ್ಚಿ ಸೀದಾ ಎಳೆದುಕೊಂಡು ಅಂಗಡಿಯ ಒಳಗೆ ಕರೆದುಕೊಂಡು ಬರುತ್ತದೆ. ಈ ವಿಡಿಯೋ ಈಗ ಟ್ವಿಟ್ಟರ್‌ನಲ್ಲಿ ಫುಲ್ ವೈರಲ್ ಆಗಿದ್ದು, ಶ್ವಾನದ ಬುದ್ಧಿವಂತಿಕೆಗೆ ಜನ ತಲೆ ಬಾಗಿದ್ದಾರೆ

ಕುಡಿದು ಬಿದ್ದ ಮಾಲೀಕನ ಟಚ್ ಮಾಡೋಕು ಬಿಡದ ನಾಯಿ: ಫೋಟೋಸ್ ವೈರಲ್

@_B___S ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋ ಅಪ್‌ಲೋಡ್ ಆಗಿದ್ದು, ಮಾಲೀಕ ತನ್ನ ಶ್ವಾನಕ್ಕೆ ಹೊರಗೆ ಮಗುವಿನೊಂದಿಗೆ ಆಟವಾಡುತ್ತಿರುವ ಬೆಕ್ಕನ್ನು ಕರೆತರುವಂತೆ ಹೇಳಿದರು ಎಂದು ಬರೆದುಕೊಂಡು ಈ ವಿಡಿಯೋವನ್ನು ಪೋಸ್ಟ್ ಮಡಲಾಗಿದೆ. 36 ಸೆಕೆಂಡುಗಳ ಈ ವಿಡಿಯೋವನ್ನು 8 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಅನೇಕರು ಶ್ವಾನದ ಬುದ್ಧಿವಂತಿಕೆಯನ್ನು ಕೊಂಡಾಡಿದ್ದಾರೆ. 

Scroll to load tweet…

ಕನ್ನಡದಲ್ಲಿಯೇ ಕಮಾಂಡ್ ಪಡೆದು ಕೆಲಸ ಮಾಡುತ್ತಿದ್ದ ಗೌರಿ ಇನ್ನಿಲ್ಲ: ಕಣ್ಣೀರಲ್ಲಿ ಶಿವಮೊಗ್ಗ ಪೊಲೀಸರು

ಮೊದಲ ಮಳೆಗೆ ಕುಣಿದು ಕುಪ್ಪಳಿಸಿದ ನಾಯಿ... ವೈರಲ್ ವಿಡಿಯೋ

ಇಳೆಯ ಕೊಳೆ ತೊಳೆಯುವ ಮಳೆ ಎಲ್ಲರಲ್ಲಿ ಹೊಸ ಹುರುಪು ನೀಡುತ್ತದೆ. ಈ ವರ್ಷದ ಬೇಸಿಗೆಯ ಬಿರು ಬಿಸಿಲಿಗೆ ಮನುಷ್ಯರು ಮಾತ್ರವಲ್ಲದೇ ಪ್ರಾಣಿ ಪಕ್ಷಿಗಳು ಕೂಡ ದಣಿದು ಹೋಗಿವೆ. ಬಿಸಿಲಿನ ದಾಹ ತಡೆಯಲಾಗದೇ ಪ್ರಾಣಿ ಪಕ್ಷಿಗಳು ನೀರಿರುವ ಜಾಗ ಅರಸಿ ಸಾಗಿವೆ. ಹೀಗಿರುವಾಗ ರಾಜ್ಯಾದ್ಯಂತ ಅಲ್ಲಲ್ಲಿ ಮಳೆಯಾಗಿದ್ದು, ಮನುಷ್ಯರು ಮಾತ್ರವಲ್ಲದೇ ಪ್ರಾಣಿ ಪಕ್ಷಿಗಳಿಗೆ ವರ್ಷಧಾರೆ ತಂಪೆರೆದಿದೆ. ಮಳೆಯಿಂದಾಗಿ ವಾತಾವರಣವೂ ತಂಪಾಗಿದ್ದು, ಜನ ನಿಟ್ಟುಸಿರು ಬಿಟ್ಟಿದ್ದಾರೆ. 

ಇಳೆಗೆ ತಂಪೆರೆಯುವ ಮಳೆ ಎಂದರೆ ಎಲ್ಲರಿಗೂ ಏನೋ ಸಂತಸ. ಬಿಸಿಲಿನ ಧಗೆಗೆ ಕಾದ ಭೂಮಿತಾಯಿ ವರ್ಷದ ಮೊದಲ ಮಳೆ ಮೈಗೆ ಬೀಳುತ್ತಿದ್ದಂತೆ, ಖುಷಿಯಿಂದ ತಂಪಾಗುತ್ತಾಳೆ. ಹಾಗೆಯೇ ಮನುಷ್ಯರು ಕೂಡ ಮೊದಲ ಮಳೆ ಬರುತ್ತಿದ್ದಂತೆ ಅನೇಕರು ಮಳೆಯಲ್ಲಿ ನೆನದು ಡಾನ್ಸ್ ಮಾಡಿ ಕುಣಿದು ಕುಪ್ಪಳಿಸುವುದುಂಟು. ಇಳೆಯ ಕೊಳೆ ತೊಳೆಯುವ ಮಳೆ ಎಲ್ಲರಲ್ಲಿ ಹೊಸ ಹುರುಪು ನೀಡುತ್ತದೆ. ಆದರೆ ಮಳೆಗೆ ಶ್ವಾನ ಖುಷಿ ಪಡುವುದನ್ನು ಎಲ್ಲಾದರು ನೋಡಿದ್ದೀರಾ? ಇಲ್ಲ ಎಂದಾದಲ್ಲಿ ಇಲ್ಲಿದೆ ನೋಡಿ ವೈರಲ್ ವೀಡಿಯೋ (viral video) 

ಮೊದಲ ಮಳೆಗೆ ಕುಣಿದು ಕುಪ್ಪಳಿಸಿದ ನಾಯಿ... ವೈರಲ್ ವಿಡಿಯೋ