ಬಾಯೊಳಗೆ ಸೀಗಡಿಯ ಆಟ ಸ್ಕೂಬಾ ಡೈವರ್ ಪಾಲಿಗೆ ಡೆಂಟಿಸ್ಟ್ ಆದ ಸೀಗಡಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಸಮುದ್ರದಲ್ಲಿ ಈಜುತ್ತಿದ್ದ ಸ್ಕೂಬಾ ಡೈವರ್‌ (Scuba diver)ಒಬ್ಬರ ಬಾಯೊಳಗೆ ಸೀಗಡಿಯೊಂದು (Shrimp) ಓಡಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರಿಗೆ ಬೆರಗು ಮೂಡಿಸುತ್ತಿದೆ. ವ್ಯಕ್ತಿಯ ಬಾಯೊಳಗೆ ಹೋದ ಸೀಗಡಿ ಆತನ ಹಲ್ಲುಗಳ ಒಳಭಾಗವನ್ನು ಸ್ವಚ್ಛಗೊಳಿಸುತ್ತಿದೆ. 

ಫೈಂಡಿಂಗ್ ನೆಮೊ (Finding Nemo) ಎಂಬ ಅನಿಮೇಟೆಡ್ ಚಲನಚಿತ್ರವನ್ನು ನೀವು ನೋಡಿದ್ದರೆ, ನೆಮೊವನ್ನು ಸೆರೆ ಹಿಡಿದು ದಂತವೈದ್ಯರ ಕಚೇರಿಗೆ ತಂದಾಗ, ಆತನನ್ನು ಟ್ಯಾಂಕ್‌ನಲ್ಲಿ ವಿವಿಧ ರೀತಿಯ ಮೀನುಗಳು ಸ್ವಾಗತಿಸುತ್ತವೆ. ಆ ಮೀನುಗಳಲ್ಲಿ ಒಂದು 'ಕ್ಲೀನರ್ ಸೀಗಡಿ', ಅವನು ಸಾಗರದಿಂದ ಬಂದ ನಂತರ ಆತನನ್ನು ಸೋಂಕು ರಹಿತಗೊಳಿಸಲು ಮತ್ತೊಂದು ಮೀನಾದ ಕ್ಲೋನ್‌ಫಿಶ್‌ನ್ನು (clownfish) ಕೇಳುತ್ತದೆ. ಇಂತಹ ದೃಶ್ಯ ಫೈಂಡಿಂಗ್ ನೆಮೊ ಸಿನಿಮಾದಲ್ಲಿದೆ.

Scroll to load tweet…

ಈ ವೈರಲ್ ವೀಡಿಯೋದಲ್ಲೂ ಅದೇ ರೀತಿಯ ಮೀನೊಂದು ಮನುಷ್ಯನ(Human) ಹಲ್ಲುಗಳನ್ನು (tooth) ಸ್ವಚ್ಛಗೊಳಿಸುವುದನ್ನು ಕಾಣಬಹುದು. 'ಅಮೇಜಿಂಗ್ ನೇಚರ್' ಎಂಬ ಟ್ವಿಟರ್‌ ಖಾತೆಯಿಂದ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋವನ್ನು 27 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ವಿಡಿಯೋದಲ್ಲಿ ಸಮುದ್ರದಲ್ಲಿನ ಹವಳದ ಬಂಡೆಯ ಬಳಿ ಸ್ಕೂಬಾ ಡೈವರ್ ಕಾಣಿಸಿಕೊಳ್ಳುತ್ತಾನೆ. ಅವನು ತನ್ನ ಬಾಯಿ ತೆರೆದು ಕ್ಲೀನರ್ ಸೀಗಡಿಯನ್ನು ತನ್ನ ಬಾಯೊಳಗೆ ಹೋಗಲು ಬಿಡುತ್ತಾನೆ. ಇದನ್ನು ಆತನೇ ಸ್ವತಃ ಚಿತ್ರೀಕರಿಸಿಕೊಳ್ಳುತ್ತಾನೆ. ಸೀಗಡಿ ತನ್ನ ಪಾದಗಳಿಂದ ಮನುಷ್ಯನ ಹಲ್ಲುಗಳು ಮತ್ತು ವಸಡುಗಳಿಂದ ಆಹಾರ ಮತ್ತು ಸತ್ತ ಜೀವಕೋಶಗಳನ್ನು ಸ್ವಚ್ಛಗೊಳಿಸುವಂತೆ ಈತ ತನ್ನ ಬಾಯಿಯನ್ನು ತೆರೆದು ನಿಲ್ಲುತ್ತಾನೆ. 

ಸ್ಕೂಬಾ ಡೈವಿಂಗ್ ವೇಳೆ ದುರಂತ; ಟೈಗರ್ ಶಾರ್ಕ್ ದಾಳಿಗೆ ಮಂಗಳೂರು ಮಹಿಳೆ ಸಾವು

ಸೀಗಡಿ ಮನುಷ್ಯನ ಬಾಯಿಯೊಳಗೆ (Mouth) ಹೋಗಿ ಅವನ ಹಲ್ಲುಗಳ ಒಳಭಾಗವನ್ನು ಸ್ವಚ್ಛಗೊಳಿಸುತ್ತದೆ. ಸ್ಕೂಬಾ ಡೈವರ್ ಕೂಡ ಯಾವುದೇ ಹೆದರಿಕೆಗೆ ಒಳಗಾಗದೆ ಆ ಕ್ಷಣವನ್ನು ಆನಂದಿಸುತ್ತಾನೆ. ಇದು ನೋಡುಗರನ್ನು ಬೆರಗುಗೊಳಿಸಿದೆ. ಹಲ್ಲು ಶುಚಿಗೊಳಿಸಬೇಕಾದರೆ ನನ್ನನ್ನು ಸಂಪರ್ಕಿಸಿ ಎಂದು ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ನಿಜವಾಗಿಯೂ, ನೀವು ಸಮುದ್ರಕ್ಕೆ ಧುಮುಕುವವರಾದರೆ ಮತ್ತು ಸೀಗಡಿಯಿಂದ ಹಲ್ಲುಗಳನ್ನು ಸ್ವಚ್ಛಗೊಳಿಸಲು ಸಾಧ್ಯವಾದರೆ ಯಾರಿಗೂ ಹಲ್ಲುಜ್ಜುವ ಬ್ರಷ್ (Brush) ಅಥವಾ ದಂತವೈದ್ಯರೊಬ್ಬರ (Dentist) ಅಗತ್ಯವಿರದು ಅಲ್ಲವೇ.

ಜನವರಿ ತಿಂಗಳಲ್ಲಿ 73ನೇ ವರ್ಷದ ಗಣರಾಜ್ಯೋತ್ಸವ ಆಚರಣೆ ವೇಳೆ ಸ್ಕೂಬಾ ಡೈವರ್‌ಗಳು ಕೇಂದ್ರಾಡಳಿತ ಪ್ರದೇಶ (Union Territory) ಲಕ್ಷದ್ವೀಪದಲ್ಲಿ (Lakshadweep ) ಸರ್ಕಾರದ ಪ್ರಾಯೋಜಕತ್ವದಲ್ಲಿ ನೀರಿನ ಆಳದಲ್ಲಿ ಧ್ವಜಾರೋಹಣ (Underwater Flag hoisting) ಮಾಡಿ ಸಾಹಸ ಮೆರೆದಿದ್ದರು. ಈ ರೋಮಾಂಚಕ ದೃಶ್ಯಗಳನ್ನು ಅಟೊಲ್ ಸ್ಕೂಬಾ (Atoll Scuba Team) ಟೀಮ್ ಬಿಡುಗಡೆ ಮಾಡಿತ್ತು. ನೀರಿನ ಆಳದಲ್ಲಿ ಧ್ವಜಾರೋಹಣ ಮಾಡುವ ನಿಟ್ಟಿನಲ್ಲಿ ಸ್ಕೂಬಾ ಟೀಮ್ ಏಳು ದಿನಗಳ ಕಾಲ ಕಠಿಣ ಅಭ್ಯಾಸ ನಡೆಸಿತ್ತು.

Underwater Flag Hoisting : ಲಕ್ಷದ್ವೀಪದಲ್ಲಿ ನೀರೊಳಗೆ ಧ್ವಜಾರೋಹಣ ಮಾಡಿದ ಸ್ಕೂಬಾ ಟೀಮ್!

ಗಣರಾಜ್ಯೋತ್ಸವ ಸಂಭ್ರಮದಲ್ಲಿ ಈ ಬಾರಿ ಸಾಕಷ್ಟು ಹೊಸ ಅಂಶಗಳು ಕಾಣಸಿಗುವುದರೊಂದಿಗೆ ದಕ್ಷಿಣ ಲಕ್ಷದ್ವೀಪದ ಸಮುದ್ರದಲ್ಲಿ ಅಟೊಲ್ ಸ್ಕೂಬಾ ಟೀಮ್ ನೀರೊಳಗೆ ಧ್ವಜಾರೋಹಣ ಮಾಡುವ ಮೂಲಕ ಗಮನಸೆಳೆಯಿತು. ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡಲಾಗಿದ್ದು ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿವೆ. 

Scroll to load tweet…