ಅಮೆರಿಕ ಕೋಸ್ಟಾರಿಕಾದಲ್ಲಿ ಮಂಗಳೂರಿನ ರೊಹಿನಾ ಭಂಡಾರಿ ಟೈಗರ್ ಶಾರ್ಕ್ ದಾಳಿಯಿಂದ ಮೃತಪಟ್ಟಿದ್ದಾರೆ.
ಮಂಗಳೂರು (ಡಿ.03): ಅಮೆರಿಕ ಕೋಸ್ಟಾರಿಕಾದಲ್ಲಿ ಮಂಗಳೂರಿನ ರೊಹಿನಾ ಭಂಡಾರಿ ಟೈಗರ್ ಶಾರ್ಕ್ ದಾಳಿಯಿಂದ ಮೃತಪಟ್ಟಿದ್ದಾರೆ.
ಮಂಗಳೂರಿನ ವೈದ್ಯ ನಿತಿನ್ ಭಂಡಾರಿ ಸಹೋದರಿ, ರೊಹಿನಾ ಅಮೆರಿಕಾ ಪ್ರವಾಸದಲ್ಲಿದ್ದು, ಕೋಸ್ಟಾರಿಕಾದಲ್ಲಿ ಸ್ಕೂಬಾ ಡೈವಿಂಗ್ ಮನರಂಜನೆ ವೇಳೆ ಈ ದುರಂತ ಸಂಭವಿಸಿದೆ. 49 ವರ್ಷದ ರೊಹಿನಾ ಭಂಡಾರಿ ಜಾರ್ಜ್ ವಾಷಿಂಗ್ಟನ್ ಯೂನಿವರ್ಸಿಟಿಯಲ್ಲಿ ಮಾಸ್ಟರ್ ಆಫ್ ಸೈನ್ಸ್ ಇನ್ ಫಿನಾನ್ಸ್ ಪದವಿ ಪಡೆದಿದ್ದರು. ಏಷಿಯನ್ ಇನ್ಸಿಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್‌ನಲ್ಲಿ ಮಾಸ್ಟರ್ ಆಫ್ ಬ್ಯುಸಿನೆಸ್ ಮ್ಯಾನೇಜ್ ಮೆಂಟ್ ಪದವಿ ಹೊಂದಿದ್ದು, ಸೇಲ್ಸ್ ಆ್ಯಂಡ್ ಮಾರ್ಕೆಟಿಂಗ್ ಪ್ರೊಫೆಷನಲ್ ಆಗಿದ್ದರು.
<!--[if !supportLineBreakNewLine]-->
<!--[endif]-->
